ಸ ಪಾಣ್ಡವೈಃ ಸಮರ್ಚ್ಚಿತೋ ಮಖಾಯ ಧರ್ಮ್ಮಜೇನ ಚ ।
ಪ್ರ ಪೃಷ್ಟ ಆಹ ಮಾಧವೋ ವಚೋ ಜಗತ್ಸುಖಾವಹಮ್ ॥೨೧.೮೧॥
ಶ್ರೀಕೃಷ್ಣಪರಮಾತ್ಮ
ಪೂಜಿತನಾದ ಪಾಂಡವರಿಂದ,
ರಾಜಸೂಯದ ಬಗ್ಗೆ
ಪ್ರಶ್ನಿಸಲ್ಪಟ್ಟ ಧರ್ಮಜನಿಂದ.
ಕೃಷ್ಣನಾಡಿದ ಮಾತದು ಜಗಕ್ಕೇ
ನೀಡಿತು ಆನಂದ.
ಕ್ರತುರ್ಯ್ಯಥಾ ವಿಧಾನತಃ ಕೃತೋ ಹಿ ಪಾರಮೇಷ್ಠ್ಯಕಮ್ ।
ಪದಂ ನಯೇತ ತತ್ಪದೇ ಸುಯೋಗ್ಯಮೇಷ ನಾನ್ಯಥಾ ॥೨೧.೮೨॥
ಶಾಸ್ತ್ರೋಕ್ತವಾಗಿ ಮಾಡಿದಂಥ
ರಾಜಸೂಯ ಯಾಗ,
ತಂದುಕೊಡುತ್ತದೆ ಖಚಿತ
ಬ್ರಹ್ಮಪದವಿಯ ಯೋಗ,
ಅಯೋಗ್ಯರಿಗಲ್ಲ, ಯೋಗ್ಯರಿಗೆ ಮಾತ್ರ
ಅಂಥಾ ಭಾಗ್ಯ.
ಬ್ರಹ್ಮಪದವಿಗೆ
ಅಯೋಗ್ಯರಾದವರು(ಉದಾಹರಣೆಗೆ- ಸೋಮ, ವರುಣ, ಇಂದ್ರ.. ) ಈ
ಯಾಗವನ್ನು ಮಾಡಿದರೆ ಅವರಿಗೆ ಏನು ಫಲ ಎನ್ನುವುದನ್ನು ವಿವರಿಸುತ್ತಾರೆ-
ಅಯೋಗ್ಯಕಾನ್ಮಹಾಪದೇ ವಿಧಾತುರೇಷ ಹಿ ಕ್ರತುಃ ।
ಸಮಾನಯೋಗ್ಯತಾಗಣಾತ್ ಕರೋತಿ ಮುಕ್ತಿಗಂ ವರಮ್ ॥೨೧.೮೩॥
ಪುರಾ ತು ಮುಕ್ತಿತೋsಧಿಕಂ ಸ್ವಜಾತಿತಃ ಕರೋತಿ ಚ ।
ಅತಸ್ತ್ರಿಶಙ್ಕುಪುತ್ರಕೋ ನೃಪಾನತೀತ್ಯ ವರ್ತ್ತತೇ ॥೨೧.೮೪॥
ಬ್ರಹ್ಮಪದವಿಗೆ
ಯೋಗ್ಯರಲ್ಲದವರು ಮಾಡಿದರೆ ಈ ಯಾಗ,
ಮುಕ್ತಲೋಕದಲ್ಲಿ ತನ್ನ
ಕಕ್ಷೆಯವರಿಗಿಂತ ಉತ್ತಮ ಜಾಗ,
ಮುಕ್ತಿ ಹೊಂದುವ ಮೊದಲು,ತನ್ನ ಸಮಾನ
ಯೋಗ್ಯತೆಯವರಿಗಿಂತ ಬೇಗ ಸಿಗುತ್ತದೆ ಉತ್ತಮ ಲೋಕದ ಪಾಲು,
ಆ ಕಾರಣದಿಂದಾಗಿಯೇ
ತ್ರಿಶಂಕುಪುತ್ರ ರಾಜಾ ಹರಿಶ್ಚಂದ್ರ ಆಗುತ್ತಾನೆ ತನ್ನ ಸಮಾನ ಕ್ಷತ್ರಿಯರಿಗಿಂತ ಮಿಗಿಲು.
ಸುರಾಂಶಕೋsಪಿ ತೇ ಪಿತಾ ವಿನಾ ಹಿ ರಾಜಸೂಯತಃ
।
ನ ಶಕ್ಷ್ಯತಿ ತ್ರಿಶಙ್ಕುಜಾದ್ ವರತ್ವಮಾಪ್ತುಮದ್ಯ ತು ॥೨೧.೮೫॥
ನಿನ್ನ ತಂದೆ ಪಾಂಡುರಾಜ
ದೇವತಾ ಅಂಶದಿಂದ ಕೂಡಿದ್ದರೂ ಕೂಡಾ,
ರಾಜಸೂಯ ಮಾಡದಿದ್ದರಿಂದ
ಹಿಡಿಯಲಾಗಲಿಲ್ಲ ಹರಿಶ್ಚಂದ್ರನ ಜಾಡ.
ಏಕೆ ಮರುದ್ಗಣೋತ್ತಮನಾದ
ಪಾಂಡುವಿಗೆ ಈ ಸಮಸ್ಯೆ ಎದುರಾಯಿತು ಎನ್ನುವುದರ ಹಿನ್ನೆಲೆಯನ್ನು ಹೇಳುತ್ತಾರೆ-
ತಪಶ್ಚರನ್ ಸಮಾಗತೇ ಶಚೀಪತೌ ಪಿತಾ ತವ ।
ಮರುದ್ಗಣೋತ್ತಮಃ ಪುರಾ ನತೂತ್ಥಿತಃ ಶಶಾಪ ಸಃ ॥೨೧.೮೬॥
ಮರುದ್ಗಣೋತ್ತಮನಾದ ನಿನ್ನ
ತಂದೆ ತಪಸ್ಸು ಮಾಡುತ್ತಿದ್ದ,
ಇಂದ್ರ ಬಂದಾಗ ಏಳದಿರಲು, ಇಂದ್ರ ಅವನನ್ನು
ಶಪಿಸಿದ.
ವ್ರಜಸ್ವ ಮಾನುಷೀಂ ತನುಂ ತತೋ ಮೃತಃ ಪುನರ್ದ್ಧಿವಮ್ ।
ಗತೋsಪಿ ನ ಸ್ವಕಾಂ ತನುಂ ಪ್ರವೇಷ್ಟುಮತ್ರ ನೇಶಸೇ ॥೨೧.೮೭॥
ತದಾsಧಿಕಸ್ತ್ರಿಶಙ್ಕುಜೋ ಭವಿಷ್ಯತು ತ್ವದಿತ್ಯಥ ।
ಕ್ಷಮಾಪಿತಶ್ಚ ವಾಸವೋ ಜಗಾದ ರಾಜಸೂಯತಃ ।
ತ್ರಿಶಙ್ಕುಜಾಧಿಕೋ ಭವಾನವಾಪ್ಸ್ಯತಿ ಸ್ವಕಾಂ ತನುಮ್ ॥೨೧.೮೮॥
ಮನುಷ್ಯದೇಹ ಹೊಂದಿ ಆನಂತರ ಆ ದೇಹ ತೊರೆಯುತ್ತೀಯ,
ಉನ್ನತಲೋಕ ಸೇರಿದರೂ
ಸೇರಲಾಗಲ್ಲ ನಿನ್ನ ಸ್ವರೂಪ ಕಾಯ.
ಆಗ ತ್ರಿಶಂಕುಪುತ್ರ ರಾಜ
ಹರಿಶ್ಚಂದ್ರ ನಿನಗಿಂತ ಮಿಗಿಲಾಗಿರುವ.
ಆಗ ಮರುದ್ಗಣೋತ್ತಮ
ಇಂದ್ರನಲ್ಲಿ ಕ್ಷಮೆಯನ್ನು ಯಾಚಿಸುತ್ತಾನೆ,
ಇಂದ್ರ- ರಾಜಸೂಯದಿಂದ ನೀನು
ಮೂಲರೂಪ ಹೊಂದುವೆ ಎನ್ನುತ್ತಾನೆ.
ಅತಃ ಸುಕಾರ್ಯ್ಯ ಏವ ತೇ ಯುಧಿಷ್ಠಿರ ಕ್ರತೂತ್ತಮಃ ।
ಭವದ್ಭಿರಪ್ಯವಾಪ್ಯತೇ ಸ್ವಯೋಗ್ಯತಾsಮುನಾsಖಿಲಾ
॥೨೧.೮೯॥
ಓ ಧರ್ಮರಾಯಾ, ಇಷ್ಟೆಲ್ಲಾ
ಕಾರಣಗಳಿಂದ ಶ್ರೇಷ್ಠ ರಾಜಸೂಯ ನಿನ್ನಿಂದ ಆಗಲೇಬೇಕಿದೆ,
ನಿನ್ನ ಅಪ್ಪನಷ್ಟೇ ಅಲ್ಲ,ನೀವೆಲ್ಲರೂ ಕೂಡಾ
ಯೋಗ್ಯತಾನುಸಾರವಾದ ಫಲವ ಹೊಂದಬೇಕಿದೆ.