Sunday 29 December 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 15: 26 - 30

ವಿಕ್ರೀಡತೋ ಧರ್ಮ್ಮಸೂನೋಸ್ತದೈವ ಸಹಾಙ್ಗುಲಿಯೇನ ಚ ಕನ್ದುಕೋsಪತತ್ ।
ಕೂಪೇ ನ ಶೇಕುಃ ಸಹಿತಾಃ ಕುಮಾರಾ ಉದ್ಧರ್ತ್ತುಮೇತಂ ಪವನಾತ್ಮಜೋsವದತ್ ॥೧೫.೨೬॥
ಆಡುತ್ತಿದ್ದ ಧರ್ಮರಾಜನ ಉಂಗುರದೊಂದಿಗೆ ಚೆಂಡೂ ಬಾವಿಗೆ ಬಿತ್ತು,
ಎಲ್ಲ ಕುಮಾರರೂ ಎತ್ತಲು ಅಸಮರ್ಥರಾದಾಗ ಭೀಮನಾಡಿದ ಮಾತು.

ನಿಷ್ಪತ್ಯ ಚೋದ್ಧೃತ್ಯ  ಸಮುತ್ಪತಿಷ್ಯೇ ಕೂಪಾದಮುಷ್ಮಾದ್ ಭೃಶನೀಚಾದಪಿ ಸ್ಮ ।
ಸಕನ್ದುಕಾಂ ಮುದ್ರಿಕಾಂ ಪಶ್ಯತಾದ್ಯ ಸರ್ವೇ ಕುಮಾರಾ ಇತಿ ವೀರ್ಯ್ಯಸಂಶ್ರಯಾತ್ ॥೧೫.೨೭॥
ನೋಡಿರೆಲ್ಲ -ಈ ಬಾವಿಯಿದೆ ಅತ್ಯಂತ ಆಳ,
ನನ್ನಲ್ಲಿದೆ ಚೆಂಡು ಉಂಗುರ ಎತ್ತಿ ತರುವ ಬಲ.

ತದಾ ಕುಮಾರಾನವದತ್ ಸ ವಿಪ್ರೋ ಧಿಗಸ್ತ್ರಬಾಹ್ಯಾಂ ಭವತಾಂ ಪ್ರವೃತ್ತಿಮ್ ।
ಜಾತಾಃ ಕುಲೇ ಭರತಾನಾಂ ನ ವಿತ್ಥ ದಿವ್ಯಾನಿ ಚಾಸ್ತ್ರಾಣಿ ಸುರಾರ್ಚ್ಚಿತಾನಿ ॥೧೫.೨೮॥
ಇದನ್ನು ನೋಡಿ ನುಡಿಯುತ್ತಾರೆ ದ್ರೋಣಾಚಾರ್ಯ,
ಅಸ್ತ್ರವ ಬಿಟ್ಟ ನಿಮ್ಮ ಪ್ರಯತ್ನದ ಪ್ರವೃತ್ತಿಗೆ ಧಿಕ್ಕಾರ.
ನೀವು ಹುಟ್ಟಿದ್ದು ಉತ್ಕೃಷ್ಟವಾದ ಭರತ ಕುಲ,
ದೇವತಾರ್ಚಿತವಾದ ಅಸ್ತ್ರಗಳ ನೀವು ತಿಳಿದಿಲ್ಲ.

ಇತೀರಿತಾ ಅಸ್ತ್ರವಿದಂ ಕುಮಾರಾ ವಿಜ್ಞಾಯ ವಿಪ್ರಂ ಸುರಪೂಜ್ಯಪೌತ್ರಮ್ ।
ಸಮ್ಪ್ರಾರ್ತ್ಥಯಾಮಾಸುರಥೋದ್ಧೃತಿಂ ಪ್ರತಿ ಪ್ರಧಾನಮುದ್ರಾಯುತಕನ್ದುಕಸ್ಯ ॥೧೫.೨೯॥
ಈರೀತಿ ಕುಮಾರರು ಕೇಳಿಸಿಕೊಂಡರು ದ್ರೋಣರ ಆ ಮಾತ,
ಅರಿವಾಯಿತವರಿಗೆ ಬೃಹಸ್ಪತಿ ಮೊಮ್ಮಗ ಬ್ರಾಹ್ಮಣ ಅಸ್ತ್ರವೇತ್ತ.
ಬೇಡಿಕೊಂಡರು -ಉಂಗುರ ಚೆಂಡನ್ನು ಎತ್ತಿ ಕೊಡಿರಿ ಅಂತ.

ಸ ಚಾsಶ್ವಿಷೀಕಾಭಿರಥೋತ್ತರೋತ್ತರಂ ಸಮ್ಪ್ರಾಸ್ಯ ದಿವ್ಯಾಸ್ತ್ರಬಲೇನ ಕನ್ದುಕಮ್ ।
ಉದ್ಧೃತ್ಯ ಮುದ್ರೋದ್ಧರಣಾರ್ತ್ಥಿನಃ ಪುನರ್ಜ್ಜಗಾದ ಭುಕ್ತಿರ್ಮ್ಮಮ ಕಲ್ಪ್ಯತಾಮಿತಿ ॥೧೫.೩೦॥
ದ್ರೋಣರು ಮಾಡಿದರು ದರ್ಭೆಗಳ ಬಳಕೆ,
ದಿವ್ಯಾಸ್ತ್ರ ಬಲದಿಂದಾಯ್ತು ಚೆಂಡೆತ್ತುವಿಕೆ.
ಉಂಗುರವನ್ನೂ ಎತ್ತಲು ಧರ್ಮರಾಜ ಬಯಸಿದ,
ಜೀವನೋಪಾಯಕ್ಕೆ ಬೇಡಿಕೆ ಆಗ ದ್ರೋಣರಿಂದ.
[Contributed by Shri Govind Magal] 

Saturday 28 December 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 15: 21 - 25

ದಾನೇsರ್ದ್ಧರಾಜ್ಯಸ್ಯ ಹಿ ತತ್ಪ್ರತಿಜ್ಞಾಂ ಸಂಸ್ಮೃತ್ಯ ಪೂರ್ವಾಮುಪಯಾತಂ ಸಖಾಯಮ್ ।
ಸಖಾ ತವಾಸ್ಮೀತಿ ತದೋದಿತೋsಪಿ ಜಗಾದ ವಾಕ್ಯಂ  ದ್ರುಪದೋsತಿದರ್ಪ್ಪಾತ್ ॥೧೫.೨೧॥
ಹಿಂದೆ ಆಗಿತ್ತು ಇವರಿಬ್ಬರಲ್ಲಿ ಅರ್ಧರಾಜ್ಯ ಕೊಡುವ ಮಾತು,
ದ್ರೋಣರು ನೆನಪಿಸಿದರು ದ್ರುಪದನ ಪ್ರತಿಜ್ಞೆಯ ಕುರಿತು.
ದ್ರುಪದಗೆ ಹೇಳಿದರು -ನಾನು ನಿನ್ನ ಸ್ನೇಹಿತ,
ನೆನಪಿದ್ದರೂ ದ್ರುಪದ ಆಡಿದ-ದರ್ಪದ ಮಾತ.

ನ ನಿರ್ದ್ಧನೋ ರಾಜಸಖೋ ಭವೇತ ಯಥೇಷ್ಟತೋ ಗಚ್ಛ ವಿಪ್ರೇತಿ ದೈವಾತ್ ।
ಇತೀರಿತಸ್ಯಾsಶು ಬಭೂವ ಕೋಪೋ ಜಿತೇನ್ದ್ರಿಯಸ್ಯಾಪಿ ಮುನೇರ್ಹರೀಚ್ಛಯಾ ॥೧೫.೨೨॥
ಎಲೋ ಬ್ರಾಹ್ಮಣಾ, ಹಣವಿರದವ ರಾಜನ ಗೆಳೆಯನಾಗಲಾರ,
ನೀನೇ ನಿರ್ಧರಿಸು-ಇರುವುದು ಬಿಡುವುದು ನಿನ್ನ ಇಷ್ಟಾನುಸಾರ.
ಹೀಗಿತ್ತು ದೈವಪ್ರೇರಣೆಯಿಂದ ಬಂದ ದ್ರುಪದನ ನುಡಿ,
ಜಿತೇಂದ್ರಿಯರಾದ ದ್ರೋಣರಿಗೂ ಹಚ್ಚಿತ್ತು ಕೋಪದ ಕಿಡಿ.

ಪ್ರತಿಗ್ರಹಾತ್ ಸನ್ನಿವೃತ್ತೇನ ಸೋsಯಂ ಮಯಾ ಪ್ರಾಪ್ತೋ ಮತ್ಪಿತುಃ ಶಿಷ್ಯಕತ್ವಾತ್ ।
ಪಿತುಃ ಶಿಷ್ಯೋ ಹ್ಯಾತ್ಮಶಿಷ್ಯೋ ಭವೇತ ಶಿಷ್ಯಸ್ಯಾರ್ತ್ಥಃ ಸ್ವೀಯ ಏವೇತಿ ಮತ್ವಾ॥೧೫.೨೩॥
ಈ ದ್ರುಪದ ನನ್ನ ತಂದೆಯ ಶಿಷ್ಯ,
ತಂದೆಯ ಶಿಷ್ಯನಾದವ ನನಗೂ ಶಿಷ್ಯ.
ಶಿಷ್ಯನ ಸೊತ್ತು ನನ್ನದೇ ಎನ್ನುವ ಭಾವ,
ತಿಳಿದೇ ಬಂದದ್ದು ನಾ ತೊರೆದಿದ್ದರೂ ಪ್ರತಿಗ್ರಹ.

ಸೋsಯಂ ಪಾಪೋ ಮಾಮವಜ್ಞಾಯ ಮೂಢೋ ದುಷ್ಟಂ ವಚೋsಶ್ರಾವಯದಸ್ಯ ದರ್ಪ್ಪಮ್ ।
ಹನಿಷ್ಯ ಇತ್ಯೇವ ಮತಿಂ ನಿಧಾಯ ಯಯೌ ಕುರೂಞ್ಛಷ್ಯತಾಂ ನೇತುಮೇತಾನ್ ॥೧೫.೨೪॥
ಮೂಢ ಪಾಪಿ ದ್ರುಪದನಿಂದಾಗಿದೆ ಎನಗೆ ಅವಮಾನ,
ಇವನ ದರ್ಪ ಮುರಿಯುವೆನೆಂದು ದ್ರೋಣರು ಮಾಡುವರು ತೀರ್ಮಾನ.
ಕೌರವರ ಶಿಷ್ಯರಾಗಿ ಹೊಂದಲು ಹೊರಟರು ಕುರುದೇಶದತ್ತ ಪಯಣ.

ಪ್ರತಿಗ್ರಹಾದ್ ವಿನಿವೃತ್ತಸ್ಯ ಚಾರ್ತ್ಥಃ ಸ್ಯಾಚ್ಛಿಷ್ಯೇಭ್ಯಃ ಕೌರವೇಭ್ಯೋ ಮಮಾತ್ರ ।
ಏವಂ ಮನ್ವಾನಃ ಕ್ರೀಡತಃ ಪಾಣ್ಡವೇಯಾನ್ ಸಧಾರ್ತ್ತರಾಷ್ಟ್ರಾನ್ ಪುರಬಾಹ್ಯತೋsಖ್ಯತ್ ॥೧೫.೨೫॥
ಅಪರಿಗ್ರಹದ ವ್ರತನಿಷ್ಠನಾದ ನನಗಾದರೆ ಇವರು ಶಿಷ್ಯರು,
ನಾನು ಬಯಸಿದ ಕಾರ್ಯ ಮಾಡಿಯಾರಿವರು ಕೌರವರು.
ಯೋಚಿಸುತ್ತಾ ದ್ರೋಣರು ಬಂದದ್ದು ಪಟ್ಟಣದ ಹೊರಭಾಗ,
ಆಡುತ್ತಿದ್ದ ದುರ್ಯೋಧನಾದಿ ಪಾಂಡವರ ಕಂಡರು ಅಲ್ಲಿ ಆಗ.


Thursday 26 December 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 15: 16 - 20

ಏವಂ ವಿಚಿನ್ತ್ಯಾಪ್ರತಿಮಃ ಸ ಭಾರ್ಗ್ಗವೋ ಬಭಾಷ ಈಷತ್ಸ್ಮಿತಶೋಚಿಷಾ ಗಿರಾ ।
ಅನನ್ತಶಕ್ತಿಃ ಸಕಲೇಶ್ವರೋsಪಿ ತ್ಯಕ್ತಂ ಸರ್ವಂ ನಾದ್ಯ ವಿತ್ತಂ ಮಮಾಸ್ತಿ ॥೧೫.೧೬॥
ಹೀಗೆ ಸಾಗಿತ್ತು ಪರಶುರಾಮ ದೇವರ ಆಲೋಚನೆ,
ತಿಳಿಸಲಳವೇ ಅವನನ್ನು ಯಾರದಾದ್ರೂ ವಿವೇಚನೆ.
ಮುಗುಳ್ನಗುತ್ತಾ ನುಡಿದ ಜಗದೊಡೆಯ ಸರ್ವಶಕ್ತ,
ಎಲ್ಲವ ಬಿಟ್ಟಿರುವ ನಾನೀಗ ಸಂಪತ್ತಿಂದಲೂ ತ್ಯಕ್ತ.

ಆತ್ಮಾ ವಿದ್ಯಾ ಶಸ್ತ್ರಮೇತಾವದಸ್ತಿ ತೇಷಾಂ ಮದ್ಧ್ಯೇ ರುಚಿತಂ ತ್ವಂ ಗೃಹಾಣ ।
ಉಕ್ತಃ ಸ ಇತ್ಥಂ ಪ್ರವಿಚಿನ್ತ್ಯ ವಿಪ್ರೋ ಜಗಾದ ಕಸ್ತ್ವದ್ಗ್ರಹಣೇ ಸಮರ್ತ್ಥಃ ॥೧೫.೧೭॥
ನಾನು, ಪರವಿದ್ಯೆ ಹಾಗೂ ನನ್ನ ಅಸ್ತ್ರ,
ನನ್ನಲ್ಲಿರುವುದು ಈ ಮೂರು ಮಾತ್ರ.
ಈ ಮೂರರಲ್ಲಿ ನಿಂಗಾವುದಿಷ್ಟ ಎಂದ ಪರಶುರಾಮ,
ದ್ರೋಣರ ಯೋಚನೆ -ಇವನೆಲ್ಲದರ ಸಾರ್ವಭೌಮ.

ಸರ್ವೇಶಿತಾ ಸರ್ವಪರಃ ಸ್ವತನ್ತ್ರಸ್ತ್ವಮೇವ ಕೋsನ್ಯಃ ಸದೃಶಸ್ತವೇಶ ।
ಸ್ವಾಮ್ಯಂ ತವೇಚ್ಛನ್ ಪ್ರತಿಯಾತ್ಯಧೋ ಹಿ ಯಸ್ಮಾನ್ನಚೋತ್ಥಾತುಮಲಂ ಕದಾಚಿತ್ ॥೧೫.೧೮॥
ನೀನು ಎಲ್ಲರೊಡೆಯ ಮಿಗಿಲಾದ ಸರ್ವೇಶ,
ಎಲ್ಲರೂ ಎಲ್ಲವೂ ಯಾವಾಗಲೂ ನಿನ್ನ ವಶ.
ನಿನಗೆ ಯಾರಿದ್ದಾರೆ ಹೇಳು ಸಮಾನ,
ಸಾಮ್ಯ ಬಯಸುವವಗೆ ಅಂಧಂತಮಸ್ಸಿನ ಸ್ಥಾನ,
ಮತ್ತೆ ಮೇಲೇಳಲಾಗದ ಗತಿಯದು ಬಲು ಹೀನ.

ಸರ್ವೋತ್ತಮಸ್ಯೇಶ ತವೋಚ್ಚಶಸ್ತ್ರೈಃ ಕಾರ್ಯ್ಯಂ ಕಿಮಸ್ಮಾಕಮನುದ್ಬಲಾನಾಮ್ ।
ವಿದ್ಯೈವ ದೇಯಾ ಭವತಾ ತತೋsಜ ಸರ್ವಪ್ರಕಾಶಿನ್ಯಚಲಾ ಸುಸೂಕ್ಷ್ಮಾ ॥೧೫.೧೯॥
ನಿನ್ನ ಉತ್ಕೃಷ್ಟ ಶಸ್ತ್ರಗಳಿಂದ ಏನು ಪ್ರಯೋಜನ,
ಬಳಸಲು ನಮ್ಮಲ್ಲಿ ಎಲ್ಲಿದೆ ಬುದ್ಧಿ ಮತ್ತು ತ್ರಾಣ.
ಹಾಗಾಗಿ ಇರಲಿ ಸರ್ವಶಕ್ತ ಸರ್ವಪ್ರೇರಕ ತತ್ವಜ್ಞಾನ.

ಇತೀರಿತಸ್ತತ್ತ್ವವಿದ್ಯಾದಿಕಾಃ ಸ ವಿದ್ಯಾಃ ಸರ್ವಾಃ ಪ್ರದದೌ ಸಾಸ್ತ್ರಶಸ್ತ್ರಾಃ ।
ಅಬ್ದದ್ವಿಷಟ್ಕೇನ ಸಮಾಪ್ಯ ತಾಃ ಸ ಯಯೌ ಸಖಾಯಂ ದ್ರುಪದಂ ಮಹಾತ್ಮಾ ॥೧೫.೨೦॥
ಹೀಗಿತ್ತು ಪರಶುರಾಮರಲ್ಲಿ ದ್ರೋಣಾಚಾರ್ಯರ ನಿವೇದನ,
ಭಗವಂತ ಮಾಡಿದ ಸಕಲ ಅಸ್ತ್ರ ಶಸ್ತ್ರ ವಿದ್ಯೆಗಳ ಪ್ರದಾನ.
ಹನ್ನೆರಡು ವರ್ಷಕಾಲ ಗುರುಗಳಲ್ಲಿ ದ್ರೋಣರ ವಾಸ- ವಿದ್ಯಾಭ್ಯಾಸ,
ವಿದ್ಯೆಗಳಿಸಿ ದ್ರೋಣರು ಹೊರಟರು ಗೆಳೆಯ ದ್ರುಪದನೆಡೆಗೆ ಪ್ರವಾಸ. 

Sunday 22 December 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 15:11 - 15

ಪ್ರತಿಗ್ರಹಾತ್ ಸನ್ನಿವೃತ್ತಃ ಸ ರಾಮಂ ಯಯೌ ನ ವಿಷ್ಣೋರ್ಹಿ ಭವೇತ್ ಪ್ರತಿಗ್ರಹಃ ।
ದೋಷಾಯ ಯಸ್ಮಾತ್ ಸ ಪಿತಾsಖಿಲಸ್ಯ ಸ್ವಾಮೀ ಗುರುಃ ಪರಮಂ ದೈವತಂ ಚ ॥೧೫.೧೧॥
ಅಪರಿಗ್ರಹವ್ರತನಿಷ್ಠ ದ್ರೋಣರು ಹೊರಟರು ಗುರು  ಪರಶುರಾಮನೆಡೆಗೆ,
ಭಗವಂತನಿಂದ ಏನಾದರೂ ಪಡೆದರೆ ದೋಷವೆಲ್ಲಿ ಎಂದಿತವರ ಒಳಬಗೆ.
ಪರಶುರಾಮ ಸಮಸ್ತ ಪ್ರಪಂಚದ ಸ್ವಾಮಿ, ತಂದೆ, ಗುರು-ಪರದೈವ,
ಹೀಗಿತ್ತು ಪರಶುರಾಮನಲ್ಲಿಗೆ ಬಂದ ದ್ರೋಣರ ಅಪರಿಗ್ರಹ ಭಾವ.

ದೃಷ್ಟ್ವೈವೈನಂ ಜಾಮದಗ್ನ್ಯೋsಪ್ಯಚಿನ್ತಯದ್ ದ್ರೋಣಂ ಕರ್ತ್ತುಂ ಕ್ಷಿತಿಭಾರಾಪನೋದೇ ।
ಹೇತುಂ ಸುರಾಣಾಂ ನರಯೋನಿಜಾನಾಂ ಹನ್ತಾ ಚಾಯಂ ಸ್ಯಾತ್ ಸಹ ಪುತ್ರೇಣ ಚೇತಿ ॥೧೫.೧೨॥
ಬಳಿಬಂದ ದ್ರೋಣಾಚಾರ್ಯರ ಕಂಡ ಪರಶುರಾಮ,
ಯೋಚಿಸಿದ ತನ್ನಲ್ಲಿ ಭೂಭಾರಹರಣಯಜ್ಞದ ನೇಮ.
ಮಾಡಿಕೊಂಡು ದ್ರೋಣ -ಅಶ್ವತ್ಥಾಮರನ್ನು ಕಾರಣ,
ನಡೆಯಲಿ ಮನುಷ್ಯರೂಪಿ ದೇವತೆಗಳ ಪ್ರಾಣಹರಣ.

ತೇಷಾಂ ವೃದ್ಧಿಃ ಸ್ಯಾತ್ ಪಾಣ್ಡವಾರ್ತ್ದೇ ಹತಾನಾಂ ಮೋಕ್ಷೇsಪಿ ಸೌಖ್ಯಸ್ಯ ನ ಸನ್ತತಿಶ್ಚ ।
ಯೋಗ್ಯಾ ಸುರಾಣಾಂ ಕಲಿಜಾ ಸುಪಾಪಾಃ ಪ್ರಾಯೋ ಯಸ್ಮಾತ್ ಕಲಿಜಾಃ ಸಮ್ಭವನ್ತಿ ॥೧೫.೧೩॥
ಆಗಬೇಕು ಪಾಂಡವರಿಗಾಗಿ ಯುದ್ಧದಿ ಸತ್ತ ದೇವತೆಗಳ ಅಭಿವೃದ್ಧಿ,
ಆಗಬೇಕು ಅವರಿಗೆ ಸ್ವರ್ಗದಲ್ಲೂ ಮೋಕ್ಷದಲ್ಲೂ ಆನಂದದ ವೃದ್ಧಿ.
ಮನುಷ್ಯರಾಗಿ ಹುಟ್ಟಿದ ದೇವತೆಗಳ ಸಂತತಿ ಕಲಿಯುಗದಿ ಸಲ್ಲದು,
ಪಾಪಿಷ್ಠರೇ ಹೆಚ್ಚು ಹುಟ್ಟುವ ಕಲಿಯುಗದಿ ದೇವತೆಗಳಿರಬಾರದು.

ನ ದೇವಾನಾಮಾಶತಂ ಪೂರುಷಾ ಹಿ ಸನ್ತಾನಜಾಃ ಪ್ರಾಯಶಃ ಪಾಪಯೋಗ್ಯಾಃ ।
ನಾಕಾರಣಾತ್ ಸನ್ತತೇರಪ್ಯಭಾವೋ ಯೋಗ್ಯಃ ಸುರಾಣಾಂ ಸದಮೋಘರೇತಸಾಮ್ ॥೧೫.೧೪॥
ದೇವತೆಗಳಲ್ಲಿ ಸಾಮಾನ್ಯ ನೂರು ತಲೆಮಾರು ತನಕ ಪಾಪಯೋಗ್ಯರಿಲ್ಲ,
ಸಂತಾನಹೀನತೆಯೂ ಅಮೋಘವೀರ್ಯರಾದವರ ಕೂಡುವುದಿಲ್ಲ.

ಅವ್ಯುಚ್ಛಿನ್ನೇ ಸಕಲಾನಾಂ ಸುರಾಣಾಂ ತನ್ತೌ ಕಲಿರ್ನ್ನೋ ಭವಿತಾ ಕಥಞ್ಚಿತ್ ।
ತಸ್ಮಾದುತ್ಸಾದ್ಯಾಃ ಸರ್ವ ಏತೇ ಸುರಾಂಶಾ ಏತೇನ ಸಾಕಂ ತನಯೇನ ವೀರಾಃ ॥೧೫.೧೫॥
ಆಗದಿದ್ದರೆ ದೇವತೆಗಳ ಸಂತತಿಯ ಸಂಹಾರ,
ಮುಂದೆ ಸಾಗುವುದಿಲ್ಲ ಕಲಿಯುಗದ ವ್ಯಾಪಾರ.
ದೇವತಾವತಾರಿಗಳು ಅಶ್ವತ್ಥಾಮನಿಂದ ಆಗಬೇಕು ನಾಶ,
ದೈವಹೆಣೆದ ದ್ರೋಣ ಅಶ್ವತ್ಥಾಮರ ಸಾಂದರ್ಭಿಕ ಪಾಶ.
ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 15: 

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 15: 06 - 10

ವ್ಯಾಸಾದವಾಪ ಪರಮಾತ್ಮಸತತ್ತ್ವವಿದ್ಯಾಂ ಧರ್ಮ್ಮಾತ್ಮಜೌsಪಿ ಸತತಂ ಭಗವತ್ಪ್ರಪನ್ನಾಃ ।
ತೇ ಪಞ್ಚ ಪಾಣ್ಡುತನಯಾ ಮುಮುದುರ್ನ್ನಿತಾನ್ತಂ ಸದ್ಧರ್ಮ್ಮಚಾರಿಣ ಉರುಕ್ರಮಶಿಕ್ಷಿತಾರ್ತ್ಥಾಃ  ॥೧೫.೦೬॥
ಧರ್ಮರಾಜ ಕೂಡಾ ವೇದವ್ಯಾಸರಿಂದ ಭಗವಂತನ ಪರತತ್ವ ವಿದ್ಯೆಯ ಪಡೆದ,
ಪಾಂಡವರೂ ಭಗವದಾಸಕ್ತರಾಗಿ ಧರ್ಮದಿ ಇರುತ್ತಾ ಹೊಂದಿದರು ಅಮಿತಾನಂದ.

ಯದಾ ಭರದ್ವಾಜಸುತಸ್ತ್ವಸಞ್ಚಯೀ ಪ್ರತಿಗ್ರಹೋಜ್ಝೋ ನಿಜಧರ್ಮ್ಮವರ್ತ್ತೀ ।
ದ್ರೌಣಿಸ್ತದಾ ಧಾರ್ತ್ತರಾಷ್ಟ್ರೈಃ ಸಮೇತ್ಯ ಕ್ರೀಡನ್ ಪಯಃ ಪಾತುಮುಪೈತಿ ಸದ್ಮ ॥೧೪.೦೭॥
ದ್ರೋಣರದು ಏನನ್ನೂ ಸಂಗ್ರಹಿಸಿಟ್ಟುಕೊಳ್ಳದ ದಾನರಹಿತವಾದ ಬ್ರಾಹ್ಮಣಧರ್ಮ,
ಪುತ್ರ ಅಶ್ವತ್ಥಾಮ ದುರ್ಯೋಧನಾದಿಗಳೊಂದಿಗೆ ಆಡುತ್ತಲಿದ್ದದು ಬಾಲಕನೇಮ,
ಹಾಗೆ ಆಡುವಾಗ ಹಾಲು ಕುಡಿಯಲೆಂದು ಮನೆಗೆ ಬರುತ್ತಿದ್ದದವನ ನಿತ್ಯಕರ್ಮ.

ತಸ್ಮೈ ಮಾತಾ ಪಿಷ್ಟಮಾಲೋಡ್ಯ ಪಾತುಂ ದದಾತಿ ಪೀತ್ವೈತಿ ತದೈಷ ನಿತ್ಯಮ್ ।
ಪೀತಕ್ಷೀರಾನ್ ಧಾರ್ತ್ತರಾಷ್ಟ್ರಾನ್ ಸ ಚೈತ್ಯ ಮಯಾ ಪೀತಂ ಕ್ಷೀರಮಿತ್ಯಾಹ ನಿತ್ಯಮ್ ॥೧೫.೦೮॥
ಹೀಗೆ ದಿನವೂ ಬರುತ್ತಿದ್ದ ಅಶ್ವತ್ಥಾಮನಿಗೆ ತಾಯಿಕೃಪಿ ಕೊಡುತ್ತಿದ್ದದು ಹಿಟ್ಟು ನೀರಿನ ಮಿಶ್ರಣ,
ಹಾಲು ಕುಡಿದುಬಂದ ದುರ್ಯೋಧನಾದಿಗಳಿಗೆ ನಾನೂ ಹಾಲುಕುಡಿದೆನೆಂದವನ ಅಂಬೋಣ.

ನೃತ್ಯನ್ತಮೇನಂ ಪಾಯಯಾಮಾಸುರೇತೇ ಪಯಃ ಕದಾಚಿತ್  ರಸಮಸ್ಯ ಸೋsವೇತ್ ।
ಪುನಃ ಕದಾಚಿತ್ ಸ ತು ಮಾತೃದತ್ತೇ ಪಿಷ್ಟೇ ನೇದಂ ಕ್ಷೀರಮಿತ್ಯಾರುರಾವ ॥೧೫.೦೯॥
ಹೀಗೆ ಹಿಟ್ಟಿನ್ಹಾಲು ಕುಡಿಯುತ್ತಿದ್ದ ಅಶ್ವತ್ಥಾಮಗೊಮ್ಮೆ ಆಯಿತು ದುರ್ಯೋಧನಾದಿಗಳಿಂದ ನೈಜ  ಹಾಲಸೇವನೆ,
ನಿಜ ಹಾಲಿನರುಚಿ ಉಂಡ ಅಶ್ವತ್ಥಾಮನಿಂದ ತಾಯಿ ಕೃಪಿಯೆದುರು ಇದು ಹಾಲಲ್ಲಾ ಎಂಬ ರೋದನೆ.

ದೃಷ್ಟ್ವಾ ರುವನ್ತಂ ಸುತಮಾತ್ಮಜಸ್ಯ ಸ್ನೇಹಾನ್ನಿಯತ್ಯೈವ ಜನಾರ್ದ್ದನಸ್ಯ ।
ಸಮ್ಪ್ರೇರಿತಃ ಕೃಪಯಾ ಚಾsರ್ತ್ತರೂಪೋ ದ್ರೋಣೋ ಯಯಾವಾರ್ಜ್ಜಯಿತುಂ ತದಾ ಗಾಮ್ ॥೧೫.೧೦ ॥
ಇದು ಅಶ್ವತ್ಥಾಮನ ಮನೆಯಲ್ಲಿ ಹಾಲು ತಂದಿಟ್ಟಂಥ  ಬವಣೆ,
ಇದರಿಂದ ಕೃಪಿಯಿಂದ ದ್ರೋಣರಿಗೆ ಹಸುಹೊಂದಲು ಪ್ರೇರಣೆ.
[Contributed by Shri Govind Magal] 

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 15: 01 - 05

ಏವಂ ಪ್ರಶಾಸತಿ ಜಗತ್ ಪುರುಶೋತ್ತಮೇsಸ್ಮಿನ್ ಭೀಮಾರ್ಜ್ಜುನೌ ತು ಸಹದೇವಯುತಾವನುಜ್ಞಾಮ್ l
ಕೃಷ್ಣಾದವಾಪ್ಯ ವರ್ಷತ್ರಿತಯಾತ್ ಪುರಂ ಸ್ವಮಾಜಗ್ಮತುರ್ಹರಿಸುತೇನ ವಿಶೋಕನಾಮ್ನಾ ॥೧೫.೦೧॥
ಹೀಗೆ ನಡೆಯುತ್ತಿರಲು ಪುರುಷೋತ್ತಮ ಕೃಷ್ಣನಿಂದ ಜಗದ ಆಳ್ವಿಕೆ,
ಸಹದೇವಸಮೇತ ಭೀಮಾರ್ಜುನರು ಮಾಡಿದರಲ್ಲಿ ಮೂರ್ವರ್ಷ ಪೂರೈಕೆ.
ಶ್ರೀಕೃಷ್ಣನ ಆಜ್ಞೆಯನ್ನು ಪಡೆದುಕೊಂಡ ಅವರು,
ಕೃಷ್ಣಪುತ್ರ ವಿಶೋಕನೊಡನೆ ಹಸ್ತಿನವತಿಗೆ ಬಂದರು.

ಸೈರನ್ಧ್ರಿಕೋದರಭವಃ. ಸ ತು ನಾರದಸ್ಯ ಶಿಷ್ಯೋ ವೃಕೋದರರಥಸ್ಯ ಭಭೂವ ಯನ್ತಾ ।
ಯಾ ಪಿಙ್ಗಲಾsನ್ಯಭವ ಆತ್ಮನಿ ಸಂಸ್ಥಿತಂ ತಂ ಸಂಸ್ಮೃತ್ಯ ಕಾನ್ತಮುರುಗಾಯಮಭೂತ್ ತ್ರಿವಕ್ರಾ ॥೧೫.೦೨॥
ಈ ವಿಶೋಕ ಸೈರಂಧ್ರಿ ತ್ರಿವಕ್ರೆಯಲ್ಲಿ ಶ್ರೀಕೃಷ್ಣನಿಂದ ಜನಿಸಿದವನು,
ನಾರದ ಶಿಷ್ಯನಾದ ಆತ ಮುಂದೆ ಭೀಮಸೇನನ ಸಾರಥಿಯಾದವನು.
ಹೋದಜನ್ಮದಲ್ಲಿ ಪಿಂಗಲೆಯಾಗಿದ್ದು ಮಾಡಿದ್ದಳು ಬಿಂಬರೂಪಿ ಹರಿಯ ಗಂಡನೆಂದು ಧ್ಯಾನ,
ದೈವೇಚ್ಛೆಯ ಅನುಸರಿಸಿ ಮುಂದಿನಜನ್ಮದಲ್ಲಿ ತ್ರಿವಕ್ರೆ ಆಗಿ ಘಟಿಸಿತ್ತು ಅವಳ ಜನನ.

ತಂ ಪಞ್ಚರಾತ್ರವಿದಮಾಪ್ಯ ಸುಷಾರಥಿಂ ಸ ಭೀಮೋ ಮುಮೋದ ಪುನರಾಪ ಪರಾತ್ಮವಿದ್ಯಾಮ್ ।
ವ್ಯಾಸಾತ್ ಪರಾತ್ಮತ ಉವಾಚ ಚ ಫಲ್ಗುನಾದಿದೈವೇಷು ಸರ್ವವಿಜಯೀ ಪರವಿದ್ಯಯೈಷಃ ॥೧೫.೦೩॥
ಭೀಮಸೇನ ಪಂಚರಾತ್ರ ತಿಳಿದ ವಿಶೋಕನ ಸಾರಥಿಯಾಗಿ ಪಡೆದು ಪಟ್ಟ ಸಂತಸ,
ಅಂತಹ ಭೀಮಸೇನಗೆ ಪರವಿದ್ಯೆ ಬೋಧಿಸಿದ್ದು ಪರಮಾತ್ಮನೇ ಆದ ವೇದವ್ಯಾಸ.
ಪರವಿದ್ಯೆಯಿಂದ ಎಲ್ಲರ ಗೆದ್ದ ಭೀಮ ಅರ್ಜುನ ಮೊದಲಾದವರಿಗೆ ನೀಡಿದ್ದ ಉಪದೇಶ.

ಸರ್ವಾನಭಾಗವತಶಾಸ್ತ್ರಪಥಾನ್ ವಿಧೂಯ ಮಾರ್ಗ್ಗಂ ಚಕಾರ ಸ ತು ವೈಷ್ಣವಮೇವ ಶುಭ್ರಮ್ ।
ಕ್ರೀಡಾರ್ತ್ಥಮೇವ ವಿಜಿಗಾಯ ತಥೋಭಯಾತ್ಮಯುದ್ಧೇ ಬಲಂ ಚ ಕರವಾಕ್ಪ್ರಭವೇsಮಿತಾತ್ಮಾ ॥೧೫.೦೪॥
ಭೀಮ ಮಾಡಿದ ಭಾಗವತಶಾಸ್ತ್ರವಲ್ಲದ ಬೇರೆ ದಾರಿಗಳ ನಿರಾಕರಣೆ,
ವಿಷ್ಣುಸಂಬಂಧಿ ಉನ್ನತಶಾಸ್ತ್ರವ ಉಳಿಸಿಬೆಳೆಸಿ  ಅವಕ್ಕೆ ಹಾಕಿದ ಮಣೆ.
ಯಾವುದೇ ಇರಲದು ಬಾಹು ಅಥವಾ ವಾಗ್ಯುದ್ಧ,
ಆಟದಂತೆ ಎಲ್ಲರನೂ ಭೀಮಸೇನ ತಾನು ಗೆದ್ದ.

ನಿತ್ಯಪ್ರಭೂತಸುಶುಭಪ್ರತಿಭೋSಪಿ ವಿಷ್ಣೋಃ ಶ್ರುತ್ವಾ ಪರಾಂ ಪುನರಪಿ ಪ್ರತಿಭಾಮವಾಪ ।
ಕೋ ನಾಮ ವಿಷ್ಣ್ವನುಪಜೀವಕ ಆಸ ಯಸ್ಯ ನಿತ್ಯಾಶ್ರಯಾದಭಿಹಿತಾSಪಿ ರಮಾ ಸದಾ ಶ್ರೀಃ ॥೧೫.೦೫॥
ಭೀಮನಲ್ಲಿ ಯಾವಾಗಲೂ ಇದ್ದರೂ ಮಂಗಳವಾದ ಪ್ರತಿಭೆ,
ಶ್ರೀಹರಿಯಿಂದ ಪಡೆದ ಪರವಿದ್ಯೆಯ ಉತ್ಕೃಷ್ಟವಾದ ಶೋಭೆ.
ಕೃಷ್ಣ -ವ್ಯಾಸ ರೂಪೀ ಹರಿಯಿಂದ ಹೊಂದಿದ ಜ್ಞಾನದ ಪ್ರಭೆ.
ನಾರಾಯಣನನ್ನ ಆಶ್ರಯಿಸದೇ ಇರುವವರು ಯಾರು,
ಹಾಗಾಗೇ ನಿತ್ಯಾಶ್ರಯಿ ಲಕ್ಶ್ಮಿದೇವಿಗೆ "ಶ್ರೀ"ಎಂದು ಹೆಸರು. 

Friday 20 December 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 14:1 05 - 112


ಕೃಷ್ಣೋsಥ ಚೌಪಗವಿಮುತ್ತಮನೀತಿಯುಕ್ತಂ ಸಮ್ಪ್ರೇಷಯನ್ನಿದಮುವಾಚ ಹ ಗೋಕುಲಾಯ ।
ದುಃಖಂ ವಿನಾಶಯ ವಚೋಭಿರರೇ ಮದೀಯೈರ್ನ್ನನ್ದಾದಿನಾಂ ವಿರಹಜಂ ಮಮ ಚಾsಶು ಯಾಹಿ ॥೧೪.೧೦೫ ॥
ಕೆಲದಿನಗಳ ನಂತರ ಶ್ರೀಕೃಷ್ಣ ನೀತಿಜ್ಞ ಉದ್ಧವನ ಗೋಕುಲಕ್ಕೆ ಕಳಿಸುತ್ತಾನೆ,
ಉಪಗವ ಯಾದವನ ಪುತ್ರ ಉದ್ಧವನ ಕಳಿಸುತ್ತಾ ಕೆಳಗಿನಂತೆ ಹೇಳುತ್ತಾನೆ.
ಉದ್ಧವಾ ಶೀಘ್ರವಾಗಿ ನೀನು ನಂದಗೋಕುಲಕ್ಕೆ ಹೋಗು,
ನಂದಾದಿಗಳ ನನ್ನ ವಿಯೋಗದುಃಖವ ನನ್ನ ಮಾತಿಂದ ನೀಗು.

ಮತ್ತೋ ವಿಯೋಗ ಇಹ ಕಸ್ಯಚಿದಸ್ತಿ ನೈವ ಯಸ್ಮಾದಹಂ ತನುಭೃತಾಂ ನಿಹಿತೋsನ್ತರೇವ ।
ನಾಹಂ ಮನುಷ್ಯ ಇತಿ ಕುತ್ರಚ ವೋsಸ್ತು ಬುದ್ಧಿರ್ಬ್ರಹ್ಮೈವ ನಿರ್ಮ್ಮಲತಮಂ ಪ್ರವದನ್ತಿ ಮಾಂ ಹಿ ॥೧೪.೧೦೬॥
ಯಾಕಾಗಿ ನಾನು ಸಮಸ್ತ  ದೇಹಿಗಳ ಒಳಗೇ ಇದ್ದೇನೆ,
ಹಾಗಾಗಿ ಯಾರಿಗೂ ಆಗುವುದಿಲ್ಲ ವಿಯೋಗದ ಬೇನೆ.
ಬಾರದಿರಲಿ ನಿಮಗೆ ನಾನು ಮನುಷ್ಯ ಎಂಬ ಬುದ್ಧಿ,
ನಾನು ದೋಷರಹಿತ ಪರಬ್ರಹ್ಮನೆಂದೇ ಪ್ರಸಿದ್ಧಿ.


ಪೂರ್ವಂ ಯದಾ ಹ್ಯಜಗರೋ ನಿಜಗಾರ ನನ್ದಂ ಸರ್ವೇ ನ ಶೇಕುರಥ ತತ್ಪ್ರವಿಮೋಕ್ಷಣಾಯ ।
ಮತ್ಪಾದಸಂಸ್ಪರ್ಶತಃ ಸ ತದಾsತಿದಿವ್ಯೋ ವಿದ್ಯಾಧರಸ್ತದುದಿತಂ ನಿಖಿಲಂ ಸ್ಮರನ್ತು ॥೧೪.೧೦೭॥
ಹಿಂದೊಮ್ಮೆ ಹೆಬ್ಬಾವಿನಿಂದ ನಂದನಾದ ಬಂಧಿತ,
ಬಿಡಿಸಲು ಅವನ ಯಾರಾಗಲಿಲ್ಲ ಅಲ್ಲಿ ಸಮರ್ಥ.
ನನ್ನ ಪಾದಸ್ಪರ್ಶದಿಂದ ಹೆಬ್ಬಾವು ವಿದ್ಯಾಧರನಾದ ಘಟನೆ,
ಶಾಪವಿಮುಕ್ತನಾದ ವಿದ್ಯಾಧರ ಹೇಳಿದ ಮಾತುಗಳ ಸ್ಮರಣೆ.

ಪೂರ್ವಂ ಸ ರೂಪಮದತಃ ಪ್ರಜಹಾಸ ವಿಪ್ರಾನ್ ನಿತ್ಯಂ ತಪಃಕೃಶತರಾಙ್ಗಿರಸೋ ವಿರೂಪಾನ್ ।
ತೈಃ ಪ್ರಾಪಿತಃ ಸಪದಿ ಸೋsಜಗರತ್ವಮೇವ ಮತ್ತೋ ನಿಜಾಂ ತನುಮವಾಪ್ಯ ಜಗಾದ ನನ್ದಮ್ ॥೧೪.೧೦೮॥
ಹಿಂದೆ ವಿದ್ಯಾಧರಗೆ ಆವರಿಸಿತ್ತು ತನ್ನ ರೂಪಮದ,
ಕೃಶತಪಸ್ವೀ ಬ್ರಾಹ್ಮಣರ ನೋಡಿ ಅಪಹಾಸ್ಯ ಮಾಡಿದ್ದ.
ಅಂತಹ ವಿದ್ಯಾಧರ ತಾನು ಹೆಬ್ಬಾವಿನ ರೂಪ ಪಡೆದ, ನನ್ನಿಂದ ಸ್ವರೂಪ ಪಡೆದು ನಂದಗೆ ಈರೀತಿ ನುಡಿದ.

ನಾಯಂ ನರೋ ಹರಿರಯಂ ಪರಮಃ ಪರೇಭ್ಯೋ ವಿಶ್ವೇಶ್ವರಃ ಸಕಲಕಾರಣ ಆತ್ಮತನ್ತ್ರಃ ।
ವಿಜ್ಞಾಯ ಚೈನಮುರುಸಂಸೃತಿತೋ ವಿಮುಕ್ತಾ ಯಾನ್ತ್ಯಸ್ಯ ಪಾದಯುಗಳಂ ಮುನಯೋ ವಿರಾಗಾಃ’ ॥೧೪.೧೦೯॥
ಇವನಲ್ಲವೇ ಅಲ್ಲ ಮನುಷ್ಯ-ಇವನು ಭಗವಂತ,
ಜಗದೊಡೆಯನಾಗಿ ಶ್ರೇಷ್ಠರಲ್ಲಿಯೂ ಶ್ರೇಷ್ಠನೀತ.
ಸರ್ವಕ್ಕೂ ಕಾರಣ ಸರ್ವಸ್ವತಂತ್ರ-ವಿರಾಗಿಗಳಿಗೆ ಆಗಿ ಇವನ ಜ್ಞಾನ,
ಸಂಸಾರವಿಮೋಚನೆಯಾಗಿ ಜೋಡಿ ಪಾದಗಳಲ್ಲಿ ಆಗುವರು ಲೀನ.

ನನ್ದಂ ಯದಾ ಚ ಜಗೃಹೇ ವರುಣಸ್ಯ ದೂತಸ್ತತ್ರಾಪಿ ಮಾಂ ಜಲಪತೇರ್ಗ್ಗೃಹಮಾಶು ಯಾತಮ್ ।
ಸಮ್ಪೂಜ್ಯ ವಾರಿಪತಿರಾಃ ವಿಮುಚ್ಚ್ಯ ನನ್ದಂ ನಾಯಂ ಸುತಸ್ತವ ಪುಮಾನ್ ಪರಮಃ ಸ ಏಷಃ ॥೧೪.೧೧೦॥
ಒಮ್ಮೆ ವರುಣಭೃತ್ಯನೊಬ್ಬ ನಂದನ ಹಿಡಿದ,
ವರುಣ ನನ್ನನೋಡಿ ಪೂಜಿಸಿ ನಂದನ ಬಿಡುತ್ತ ಹೇಳಿದ.
ಇವನಲ್ಲವೇ ಅಲ್ಲ ನಿನ್ನ ಪುತ್ರ,
ಉತ್ಕೃಷ್ಟ ಪುರುಷ ಸರ್ವಸ್ವತಂತ್ರ.

ಸನ್ದರ್ಶಿತೋ ನನು ಮಯೈವ ವಿಕುಣ್ಠಲೋಕೋ ಗೋಜೀವಿನಾಂ ಸ್ಥಿತಿರಪಿ ಪ್ರವರಾ ಮದೀಯಾ ।
ಮಾನುಷ್ಯಬುದ್ಧಿಮಪನೇತುಮಜೇ ಮಯಿ ಸ್ಮ ತಸ್ಮಾನ್ಮಯಿ ಸ್ಥಿತಿಮವಾಪ್ಯ ಶಮಂ ಪ್ರಯಾನ್ತು॥೧೪.೧೧೧॥
ನನ್ನಿಂದಲೇ ಆಗಿದೆ ಗೋಪಾಲಕರಿಗೆ ವೈಕುಂಠದರ್ಶನ,
ತೋರಿರುವೆ ನನ್ನ ಮಹಿಮೆ -ನನಗೆಂದೂ ಇಲ್ಲ ಜನನ.
ನಾನು ಮನುಷ್ಯನೆಂಬ ಬುದ್ಧಿ ನಾಶವಾಗಿ ಹೋಗಲು,
ಆ ಜ್ಞಾನ ಬಂದು ನಿಮ್ಮಲ್ಲಿ ಶಾಂತಿಯದು ನೆಲೆಸಲು.

ಶ್ರುತ್ವೋದ್ಧವೋ ನಿಗದಿತಂ ಪರಮಸ್ಯ ಪುಂಸೋ ವೃನ್ದಾವನಂ ಪ್ರತಿ ಯಯೌ ವಚನೈಶ್ಚ ತಸ್ಯ।
ದುಃಖಂ ವ್ಯಪೋಹ್ಯ ನಿಖಿಲಂ ಪಶುಜೀವನಾನಾಮಾಯಾತ್ ಪುನಶ್ಚರಣಸನ್ನಿಧಿಮೇವ ವಿಷ್ಣೋಃ ॥೧೪.೧೧೨॥
ಉದ್ಧವ ಕೃಷ್ಣನ ಮಾತಕೇಳಿ ವೃಂದಾವನಕ್ಕೆ ತೆರಳಿದ,
ಗೋಪರ ದುಃಖತೊಡೆದು ಮತ್ತೆ ಕೃಷ್ಣಸನ್ನಿಧಿಗೆ ಬಂದ.

ಇತಿ ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ ಶ್ರೀಮಹಾಭಾರತತಾತ್ಪರ್ಯ್ಯನಿರ್ಣ್ಣಯೇ
ಉದ್ಧವಪ್ರತಿಯಾನಂ ನಾಮ ಚತುರ್ದ್ದಶೋsದ್ಧ್ಯಾಯಃ ॥
ಶ್ರೀಮದಾನಂದತೀರ್ಥರಿಂದ ವಿರಚಿತವಾದ, ಮಹಾಭಾರತ ತಾತ್ಪರ್ಯ ನಿರ್ಣಯಾನುವಾದ.
ಉದ್ಧವಪ್ರತಿಯಾನವೆಂಬ ಹದಿನಾಕನೇ ಅಧ್ಯಾಯ,
ಆತ್ಮಸಖನಾದ ಶ್ರೀಕೃಷ್ಣಗರ್ಪಿಸಿದ ಧನ್ಯತಾಭಾವ.