Friday, 20 December 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 14: 86 - 90


ಏವಂ ಗತೇಷು ಬಹುಶೋ ನತಕನ್ಧರೇಷು ರಾಜಸ್ವಜೋsಪಿ ಮಧುರಾಂ ಸ್ವಪುರೀಂ ಪ್ರವಿಶ್ಯ ।

ರಾಮೇಣ ಸಾರ್ದ್ಧಮಖಿಲೈರ್ಯ್ಯದುಭಿಃ ಸಮೇತೋ ರೇಮೇ ರಮಾಪತಿರಚಿನ್ತ್ಯಬಲೋ ಜಯಶ್ರೀಃ ॥೧೪.೮೬॥
ಈರೀತಿಯಾಗಿ ಅನೇಕಬಾರಿ ಆ ರಾಜರುಗಳಿಗೆ ತಲೆತಗ್ಗಿಸಿದ ನಡೆ,
ಜಯಲಕ್ಷ್ಮಿಯ ಹೊಂದುತ್ತಿತ್ತು ಅಚಿಂತ್ಯಬಲದ ರಮಾಪತಿಯ ಪಡೆ.
ಬಲರಾಮನೊಡನೆ ಮಧುರೆ ಪ್ರವೇಶಿಸಿದ ಕೃಷ್ಣನದು ಯದುಗಳೊಡನೆ ಕ್ರೀಡೆ.

ವ್ಯರ್ತ್ಥೋದ್ಯಮಾಃ ಪುನರಪಿ ಸ್ಮ ಸದಾರ್ತ್ತರಾಷ್ಟ್ರಾ ಭೀಮಂ ನಿಹನ್ತುಮುರುಯತ್ನಮಕುರ್ವತಾಜ್ಞಾಃ ।
ರಾಜ್ಞಾಂ ಸುತಾಸ್ತಮಖಿಲಂ ಸ ಮೃಷೈವ ಕೃತ್ವಾ ಚಕ್ರೇ ಜಯಾಯ ಚ ದಿಶಾಂ ಬಲವಾನ್ ಪ್ರಯತ್ನಮ್ ॥೧೪.೮೭॥
ಇತ್ತ ದುರ್ಯೋಧನಾದಿಗಳ ಅವಿವೇಕಿ ದುಷ್ಟಕೂಟ,
ಸೋಲಾದರೂ ಭೀಮನ ಕೊಲ್ಲುವ ವಿಫಲ ಆಟ.
ಅವರೆಲ್ಲ ಪ್ರಯತ್ನಗಳ ವ್ಯರ್ಥ ಮಾಡಿದ ಭೀಮಸೇನ,
ಪ್ರಯತ್ನಿಸುತ್ತಿದ್ದ ನಡೆಸಲು ದಿಗ್ವಿಜಯದ ಯಾನ.

ಪ್ರಾಚೀಂ ದಿಶಂ ಪ್ರಥಮಮೇವ ಜಿಗಾಯ ಪಶ್ಚಾದ್ ಯಾಮ್ಯಾಂ ಜಲೇಶಪರಿಪಾಲಿತಯಾ ಸಹಾನ್ಯಾಮ್ ।
ಯೌ ತೌ ಪುರಾತನದಶಾನನಕುಮ್ಭಕರ್ಣ್ಣೌ ಮಾತೃಷ್ವಸಾತನಯತಾಂ ಚ ಗತೌ ಜಿಗಾಯ ॥೧೪.೮೮॥
ಭೀಮ ಮೊದಲು ಪೂರ್ವ, ನಂತರ ದಕ್ಷಿಣ, ಆನಂತರ ವರುಣಾಶ್ರಯದ ಪಶ್ಚಿಮವ ಗೆದ್ದ,
ಹಿಂದೆ ರಾವಣ ಕುಂಭಕರ್ಣರಾಗಿದ್ದು ಚಿಕ್ಕಮ್ಮನ ಮಕ್ಕಳಾಗಿ ಹುಟ್ಟಿಬಂದವರನ್ನು ಭೀಮ ಗೆದ್ದ.

ಪೂರ್ವಸ್ತಯೋರ್ಹಿ ದಮಘೋಷಸುತಃ ಪ್ರಜಾತಃ ಪ್ರಾಹುಶ್ಚ ಯಂ ನೃಪತಯಃ ಶಿಶುಪಾಲನಾಮ್ನಾ ।
ಅನ್ಯಂ ವದನ್ತಿ ಚ ಕರೂಶನೃಪಂ ತಥಾsನ್ಯಮಾತೃಷ್ವಸಾತನಯಮೇವ ಚ ದನ್ತವಕ್ರಮ್ ॥೧೪.೮೯॥
ರಾವಣ ದಮಘೋಷನ ಮಗನಾಗಿ ಹುಟ್ಟಿದ್ದ,
ಶಿಶುಪಾಲನೆಂಬ ಹೆಸರು ಹೊತ್ತು ಬಂದಿದ್ದ.
ಕುಂಭಕರ್ಣ ಕರೂಶರಾಜನಾಗಿ ಹುಟ್ಟಿದ್ದ,
ದಂತವಕ್ರನೆಂಬ ಹೆಸರನ್ನು ತಾ ಹೊಂದಿದ್ದ.

ಜಿತ್ವೈವ ತಾವಪಿ ಜಿಗಾಯ ಚ ಪೌಣ್ಡ್ರಕಾಖ್ಯಂ ಶೌರೇಃ ಸುತಂ ಸುತಮಜೈದಥ ಭೀಷ್ಮಕಸ್ಯ ।
ಯಃ ಪೂರ್ವಮಾಸ ದಿತಿಜೋ ನರಹೇಲ್ವಲಾಖ್ಯೋ ರುಗ್ಮೀತಿ ನಾಮ ಚ ಬಭೂವ ಸ ಕುಣ್ಡೀನೇಶಃ ॥೧೪.೯೦॥
ಇವರಿಬ್ಬರ ನಂತರ ಪೌಂಡ್ರಕ ಹೆಸರಿನ ವಸುದೇವಪುತ್ರನ ಗೆದ್ದ,
ನಂತರ ಭೀಷ್ಮಕಪುತ್ರನಾದ ರುಗ್ಮಿಯನ್ನೂ ಭೀಮಸೇನ ಗೆದ್ದ.
ಹಿಂದೆ ಇಲ್ವಲನೆಂಬ ದೈತ್ಯನಾಗಿ, ಕುಂಡಿನಪುರದ ಒಡೆಯನಾಗಿದ್ದ .

No comments:

Post a Comment

ಗೋ-ಕುಲ Go-Kula