Monday, 16 December 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 14: 25 -30

ತಂ ವೈ ಚುಕೋಪಯಿಷುರಗ್ರತ ಉಗ್ರಸೇನಂ ಕೃಷ್ಣೋ ನಿಧಾಯ ಸಮಗಾತ್ ಸ್ವಯಮಸ್ಯ ಪಶ್ಚಾತ್ ।
ದೃಷ್ಟ್ವಾsಗ್ರತೋ ಮಗಧರಾಟ್ ಸ್ಥಿತಮುಗ್ರಸೇನಂ ಕೋಪಾಚ್ಚಲತ್ತನುರಿದಂ ವಚನಂ ಬಭಾಷೇ॥೧೪.೨೫॥
ಜರಾಸಂಧಗೆ ಕೋಪ ತರಿಸಲು ಕೃಷ್ಣ ಬಯಸಿದ,
ತಾನ್ಹಿಂದಿದ್ದು ಉಗ್ರಸೇನನ ಮುಂದೆಮಾಡಿ ಬಂದ.
ಜರಾಸಂಧ ಉಗ್ರಸೇನನ ಕಂಡು ಕಡುಕೋಪದಿಂದ,
ಕಂಪಿಸುವ ಮೈಯುಳ್ಳವಾಗಿ ಈ ತೆರನಾಗಿ ನುಡಿದ.

ಪಾಪಾಪಯಾಹಿ ಪುರತೋ ಮಮ ರಾಜ್ಯಕಾಮ ನಿರ್ಲಜ್ಜ ಪುತ್ರವಧಕಾರಣ ಶತ್ರುಪಕ್ಷ ।
ತ್ವಂ ಜೀರ್ಣ್ಣಬಸ್ತಸದೃಶೋ ನ ಮಯೇಹ ವದ್ಧ್ಯಃ ಸಿಂಹೋ ಹಿ ಸಿಂಹಮಭಿಯಾತಿ ನ ವೈ ಸೃಗಾಲಮ್ ॥೧೪.೨೬॥
ಪಾಪಿಷ್ಠ, ರಾಜ್ಯಾಕಾಂಕ್ಷಿ, ಪುತ್ರನಾಶಕಾರಕ,
ನಾಚಿಕೆಯಿರದ ನೀನು ಶತ್ರುಪಕ್ಷಕ್ಕೇ ಪೂರಕ.
ಮುದಿಟಗರಿನಂಥ ನೀನು ನನ್ನಿಂದ ಸಾಯಲು ಯೋಗ್ಯನಲ್ಲ,
ಸಿಂಹ ಸಿಂಹವ ಎದುರುಗೊಳ್ಳುವುದು ಹೊರತು ನರಿಯನ್ನಲ್ಲ.

ಆಕ್ಷಿಪ್ತ ಇತ್ಥಮಮುನಾsಥ ಸ ಭೋಜರಾಜಸ್ತೂಣಾತ್ ಪ್ರಗೃಹ್ಯ ನಿಶಿತಂ ಶರಮಾಶು ತೇನ ।
ಛಿತ್ವಾ ಜರಾಸುತಧನುರ್ಬಲವನ್ನನಾದ ವಿವ್ಯಾಧ ಸಾಯಕಗಣೈಶ್ಚ ಪುನಸ್ತಮುಗ್ರೈಃ ॥೧೪.೨೭॥
ಹೀಗೆ ಜರಾಸಂಧನಿಂದ ಉಗ್ರಸೇನನ ತೀಕ್ಷ್ಣನಿಂದನೆ,
ಉಗ್ರಸೇನಬಾಣದಿಂದ ಜರಾಸಂಧನ ಬಿಲ್ಲು ಛೇದನೆ.
ಘರ್ಜಿಸುತ್ತ ಹೊಡೆದ ಸುರಿಸಿ ಬಾಣಗಳ ಮಳೆಯನ್ನೆ.

ಅನ್ಯಚ್ಛರಾಸನವರಂ ಪ್ರತಿಗೃಹ್ಯ ಕೋಪಸಂರಕ್ತನೇತ್ರಮಭಿಯಾನ್ತಮುದೀಕ್ಷ್ಯಕೃಷ್ಣಃ ।
ಭೋಜಾಧಿರಾಜವಧಕಾಙ್ಕ್ಷಿಣಮುಗ್ರವೇಗಂ ಬಾರ್ಹದ್ರಥಂ ಪ್ರತಿಯಯೌ ಪರಮೋ ರಥೇನ ॥೧೪.೨೮॥
ಉಗ್ರವೇಗಿ ಜರಾಸಂಧ ತಾ ಇನ್ನೊಂದು ಬಿಲ್ಲು ಹಿಡಿದು ಬಂದ,
ಕೋಪದ ಕಂಗಳಿಂದ ಉಗ್ರಸೇನನ ವಧಾಕಾಂಕ್ಷಿ ಆಗಿ ನಿಂದ.
ಇದ ನೋಡಿದ ಶ್ರೀಕೃಷ್ಣ ತಾನು ಅವನೆದುರಿಗೆ ರಥದಿ ಬಂದ.

ಆಯಾನ್ತಮೀಕ್ಷ್ಯ ಭಗವನ್ತಮನನ್ತವೀರ್ಯಂ ಚೇದೀಶಪೌಣ್ಡ್ರಮುಖರಾಜಗಣೈಃ ಸಮೇತಃ ।
ನಾನಾವಿಧಾಸ್ತ್ರವರಶಸ್ತ್ರಗಣೈರ್ವವರ್ಷ ಮೇರುಂ ಯಥಾ ಘನ ಉದೀರ್ಣ್ಣರವೋ ಜಲೌಘೈಃ ॥೧೪.೨೯॥
ಬರುತ್ತಿರಲು ಎಣೆಯಿರದ ವೀರ್ಯಪರಾಕ್ರಮದ ಸತ್ಯಸಂಧ,
ಶಿಶುಪಾಲ ಪೌಂಡ್ರಕವಾಸುದೇವ ರಾಜರ ಕೂಡಿದ ಜರಾಸಂಧ.
ವಿಧವಿಧವಾದ ಅಸ್ತ್ರಗಳಿಂದ ಭಗವಂತಗೆ ಅವ  ಪೀಡಿಸಿದ,
ಮೇರುವಿನ ಮೇಲೆ ಭಾರೀ ಮಳೆ ಸುರಿಸುವಂತೆ ಮೋಡ.
ಎಷ್ಟೇ ಮಳೆ ಸುರಿದರೂ ಹೇಗಿರುವುದೋ ಮೇರು ತಟಸ್ಥ,
ಅಂತೆಯೇ ಏನೂ ಲೇಪವಾಗದೆ ನಿಂತನವ ಸ್ವಾಮಿ ಭಗವಂತ.

ಶಸ್ತ್ರಾಸ್ತ್ರವೃಷ್ಟಿಮಭಿತೋ ಭಗವಾನ್ ವಿವೃಶ್ಚ್ಯ ಶಾರ್ಙ್ಗೋತ್ಥಸಾಯಕಗಣೈರ್ವಿರಥಾಶ್ವಸೂತಮ್।
ಚಕ್ರೇ ನಿರಾಯುಧಮಸೌ ಮಗಧೇನ್ದ್ರಮಾಶು ಚ್ಛಿನ್ನಾತಪತ್ರವರಕೇತುಮಚಿನ್ತ್ಯಶಕ್ತಿಃ ॥೧೪.೩೦॥
ಕೃಷ್ಣ ತನ್ನ ಸುತ್ತ ಬರುತ್ತಿರುವ ಆಯುಧಗಳ ಮಳೆಯನ್ನು,
ತನ್ನ ಬಿಲ್ಲಿನಿಂದ ಬಿಟ್ಟ ಬಾಣಗಳಿಂದ ಕತ್ತರಿಸಿ ತಡೆದನು.
ರಥ ಕುದುರೆ ಸೂತಹೀನನಾದ ಜರಾಸಂಧ,
ಛತ್ರ ಧ್ವಜಗಳ ಕಳೆದುಕೊಂಡಾದ ನಿರಾಯುಧ. 
[Contributed by Shri Govind Magal]

No comments:

Post a Comment

ಗೋ-ಕುಲ Go-Kula