Friday 20 December 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 14: 91 - 95

ಭಾಗೇತ ಏವ ತನಯಸ್ಯ ಸ ಏವ ವಹ್ನೇರ್ನ್ನಾಮ್ನಾ ಶುಚೇಃ ಸ ತು ಪಿತಾsಸ್ಯ ಹಿ ಮಿತ್ರಭಾಗಃ ।
ರಾಹ್ವಂಶಯುಕ್ ತದನುಜೌ ಕ್ರಥಕೈಶಿಕಾಖ್ಯೌ ಭಾಗೌ ತಥಾsಗ್ನಿಸುತಯೋಃ ಪವಮಾನಶುನ್ಧ್ಯೋಃ ॥೧೪.೯೧॥
ರುಗ್ಮಿ -ಶುಚಿ ಹೆಸರಿನ ಅಗ್ನಿಪುತ್ರನ ಅಂಶ,
ಅವನಪ್ಪ ಭೀಷ್ಮಕ ಮಿತ್ರನ(ಸೂರ್ಯ)ಅಂಶ.
ಭೀಷ್ಮಕನಲ್ಲಿತ್ತು ರಾಹುವಿನದೂ ಅಂಶ,
ಭೀಷ್ಮಕನ ತಮ್ಮಂದಿರಾಗಿ ಕ್ರಥ ಕೈಶಿಕರ ವೇಷ,
ಪವಮಾನ ಮತ್ತು ಶುಂಧ್ಯುಗಳ ಅಂಶ.

ಬನ್ಧೋರ್ನ್ನಿಜಸ್ಯ ತು ಬಲಂ ಸುಪರೀಕ್ಷಮಾಣಃ ಶಲ್ಯೋsಪಿ ತೇನ ಯುಯುಧೇ ವಿಜಿತಸ್ತಥೈವ ।
ಭೀಮೋ ಜಿಗಾಯ ಯುಧಿ ವೀರಮಥೈಕಲವ್ಯಂ ಸರ್ವೇ ನೃಪಾಶ್ಚ ವಿಜಿತಾ ಅಮುನೈವಮೇವ ॥೧೪.೯೨॥
ಶಲ್ಯ ಮಾಡಿದ ಯುದ್ಧದಿಂದ ಭೀಮನ ಬಲಪರೀಕ್ಷೆ,
ಬಂಧು ಭೀಮನಿಂದ ಸಿಕ್ಕಿತವನಿಗೆ ಸೋಲಿನ ಶಿಕ್ಷೆ.
ವೀರನಾದ ಏಕಲವ್ಯನ ಭೀಮ ಯುಧ್ಧದಲಿ ಗೆದ್ದ,
ಎಲ್ಲ ರಾಜರುಗಳಿಗೂ ಸೋಲಾಗಿದ್ದು ಭೀಮನಿಂದ.

ತದ್ಬಾಹುವೀರ್ಯ್ಯಪರಿಪಾಲಿತ ಇನ್ದ್ರಸೂನುಃ ಶೇಷಾನ್ ನೃಪಾಂಶ್ಚ ಸಮಜೈದ್ ಬಲವಾನಯತ್ನಾತ್।
ಸಾಲ್ವಂ ಚ ಹಂಸಡಿಭಕೌ ಚ ವಿಜಿತ್ಯ ಭೀಮೋ ನಾಗಾಹ್ವಯಂ ಪುರಮಗಾತ್ ಸಹಿತೋsರ್ಜ್ಜುನೇನ ॥೧೪.೯೩॥
ಭೀಮನ ಬಾಹುಬಲದಿಂದ ಅರ್ಜುನ ರಕ್ಷಿತ,
ಉಳಿದ ರಾಜರುಗಳ ಮಾಡಿದ ಯುದ್ಧದಿ ಪರಾಜಿತ.
ಸಾಲ್ವ, ಹಂಸ ಡಿಭಕರನ್ನು ಗೆದ್ದಮೇಲೆ ಭೀಮ,
ಅರ್ಜುನನೊಂದಿಗೆ ಸೇರಿದ ಹಸ್ತಿನಪುರದ ಧಾಮ.

ತದ್ಬಾಹುವೀರ್ಯ್ಯಮಥ ವೀಕ್ಷ್ಯ ಮುಮೋದ ಧರ್ಮ್ಮಸೂನುಃ ಸಮಾತೃಯಮಜೋ ವಿದುರಃ ಸಭೀಷ್ಮಃ ।
ಅನ್ಯೇ ಚ ಸಜ್ಜನಗಣಾಃ ಸಹಪೌರರಾಷ್ಟ್ರಾಃ ಶ್ರುತ್ವೈವ ಸರ್ವಯದವೋ ಜಹೃಷುರ್ನ್ನಿತಾನ್ತಮ್ ॥೧೪.೯೪॥
ತಾಯಿ ಮತ್ತು ನಕುಲ ಸಹದೇವರಿಂದ ಕೂಡಿದ ಧರ್ಮರಾಜ ತಾನು,
ಭೀಮಸೇನನ ಬಾಹುಬಲ ಕಂಡು ಸವಿದ ಸಂತಸದ ಜೇನು.
ವಿದುರ, ಭೀಷ್ಮ ಸಮಸ್ತ ಸಜ್ಜನರ ಸಮೂಹ,
ರಾಷ್ಟ್ರವಾಸಿಗಳ ಮೀಯಿಸಿತು ಸಂತಸದ ಪ್ರವಾಹ.

ಕೃಷ್ಣಃ ಸುಯೋಧನಮುಖಾಕ್ರಮಮಾಮ್ಬಿಕೇಯಂ ಜಾನನ್ ಸ್ವಪುತ್ರವಶವರ್ತ್ತಿನಮೇವ ಗತ್ವಾ ।
ಶ್ವಾಫಲ್ಕಿನೋ ಗೃಹಮಮುಂ ಧೃತರಾಷ್ಟ್ರಶಾನ್ತ್ಯೈ ಗನ್ತುಂ ದಿದೇಶ ಗಜನಾಮ ಪುರಂ ಪರೇಶಃ ॥೧೪.೯೫॥
ಶ್ರೀಕೃಷ್ಣ ತಿಳಿದು ದುರ್ಯೋಧನನ ಅಕ್ರಮಗಳ ವ್ಯೂಹ,
ಹಾಗೆಯೇ ಧೃತರಾಷ್ಟ್ರನ ಅತಿಯಾದ ಪುತ್ರವ್ಯಾಮೋಹ.
ಕೊಡಲೆಂದೇ ಧೃತರಾಷ್ಟ್ರಗೆ ಸರಿಯಾದ ತಿಳುವಳಿಕೆ,
ಶ್ವಫಲ್ಕಪುತ್ರ ಅಕ್ರೂರನ ಹಸ್ತಿನವತಿಗೆ ಕಳಿಸುವಿಕೆ. .ಕೆ. .

No comments:

Post a Comment

ಗೋ-ಕುಲ Go-Kula