Friday 28 August 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 18: 87 - 96

 ಪಪ್ರಚ್ಛೈನಂ ತದಾ ದ್ರೋಣಸಖ್ಯಮಸ್ತ್ಯುತ ನೇತಿ ಹ ।

ಅಸ್ತೀದಾನೀಮಿತಿ ಪ್ರಾಹ ದ್ರುಪದೋsಙ್ಗಿರಸಾಂ ವರಮ್ ॥೧೮.೮೭ ॥

ತನ್ನೆದುರು ಸೆರೆಯಾಗಿ ನಿಂತ ದ್ರುಪದನ ಕುರಿತು ,

ದ್ರೋಣಾಚಾರ್ಯರು ಕೇಳಿದರು ಕೆಳಗಿನ ಮಾತು .

ಈಗ ನಮ್ಮಿಬ್ಬರ ಮಧ್ಯೆ ಇದೆಯೋ ಇಲ್ಲವೋ ಗೆಳೆತನ ,

ದ್ರುಪದ-ಸಖ್ಯವಿದೆ ಅಂಗೀರಸಗೋತ್ರಶ್ರೇಷ್ಠ ದ್ರೋಣ .

 

ಅಥಾsಹ ದ್ರುಪದಂ ದ್ರೋಣಃ ಸಖ್ಯಮಿಚ್ಛೇsಕ್ಷಯಂ ತವ ।

ನಹ್ಯರಾಜ್ಞಾ ಭವೇತ್ ಸಖ್ಯಂ ತವೇತೀದಂ ಕೃತಂ ಮಯಾ ॥೧೮.೮೮ ॥

ದ್ರೋಣರೆಂದರು-ಬೇಕೆನಗೆ ನಿನ್ನ ನಾಶವಾಗದ ಗೆಳೆತನ ,

ಗೆಳೆತನ ಇರಲಾರದಾಯಿತು ನಾನು ರಾಜನಲ್ಲದ ಕಾರಣ .

ಈ ಕಾರಣದಿಂದ ಹೀಗೆ ಮಾಡಬೇಕಾಗಿತೆಂದರು ದ್ರೋಣ .

 

ನ ವಿಪ್ರಧರ್ಮ್ಮೋ ಯದ್ ಯುದ್ಧಮತಸ್ತ್ವಂ ನ ಮಯಾ ಧೃತಃ ।

ಶಿಷ್ಯೈರೇತತ್ ಕಾರಿತಂ ಮೇ ತವ ಸಖ್ಯಮಭೀಪ್ಸತಾ ॥೧೮.೮೯ ॥

ಯುದ್ಧ ಮಾಡುವುದಲ್ಲ ಬ್ರಾಹ್ಮಣ ಧರ್ಮ ,

ಅದು ನಾನು ನಿನ್ನ ಬಂಧಿಸದಿರುವ ಮರ್ಮ .

ನಿನ್ನ ಸ್ನೇಹಕ್ಕೆ ಶಿಷ್ಯರಿಂದ ಮಾಡಿಸಿದ ಈ ಕರ್ಮ .

 

ಅತಃ ಸಖ್ಯಾರ್ತ್ಥಮೇವಾದ್ಯ ತ್ವದ್ರಾಜ್ಯಾರ್ದ್ಧೋ ಹೃತೋ ಮಯಾ ।

ಗಙ್ಗಾಯಾ ದಕ್ಷಿಣೇ ಕೂಲೇ  ತ್ವಂ ರಾಜೈವೋತ್ತರೇ ತ್ವಹಮ್ ॥೧೮.೯೦ ॥

ಗೆಳೆತನಕ್ಕಾಗೇ ಮಾಡುತ್ತಿದ್ದೇನೆ ನಿನ್ನ ರಾಜ್ಯದ ಭಾಗ ,

ನಾನು ವಶಪಡಿಸಿಕೊಳ್ಳುತ್ತಿದ್ದೇನೆ ರಾಜ್ಯದಲ್ಪಭಾಗ .

ಗಂಗೆಯ ದಕ್ಷಿಣದ ಪ್ರದೇಶ ನಿನ್ನದು ,

ಗಂಗೆಯ ಉತ್ತರದ ಪ್ರದೇಶ ನನ್ನದು .

 

 

ನಹ್ಯರಾಜತ್ವ ಏಕಸ್ಯ ಸಖ್ಯಂ ಸ್ಯಾದಾವಯೋಃ ಸಖೇ ।

ಇತ್ಯುಕ್ತ್ವೋನ್ಮುಚ್ಯ ತಂ ದ್ರೋಣೋ ರಾಜ್ಯಾರ್ದ್ಧಂ ಗೃಹ್ಯ ಚಾಮುತಃ ॥೧೮.೯೧ ॥

ಯಯೌ ಶಿಷ್ಯೈರ್ನ್ನಾಗಪುರಂ ನ್ಯವಸತ್  ಸುಖಮತ್ರ ಚ ।

ಬ್ರಾಹ್ಮಣ್ಯತ್ಯಾಗಭೀರುಃ ಸ ನ ಗೃಹ್ಣನ್  ಧನುರಪ್ಯಸೌ ॥೧೮.೯೨ ॥

ದ್ರೋಣರೆಂದರು-ನಾನು ರಾಜನಾಗದ ಹೊರತು ,

ಉಳಿಯಲಾರದು ನಮ್ಮಿಬ್ಬರಲ್ಲಿ ಸ್ನೇಹದ ತಂತು .

ಈಗ ನೋಡು ನಾವಿಬ್ಬರೂ ರಾಜರು ,

ಹಾಗೆಯೇ ನಾವಿಬ್ಬರೂ ಸ್ನೇಹಿತರು .

ಹಾಗೆಂದ ದ್ರೋಣರು ಮಾಡಿದರು ದ್ರುಪದರಾಜ್ಯ ಭಾಗದ ಸ್ವೀಕಾರ ,

ದ್ರುಪದನ ಬಿಟ್ಟು,ಶಿಷ್ಯರೊಂದಿಗೆ ಹಸ್ತಿನಾವತಿಗೆ ಹೋಗಿದ್ದ ವ್ಯಾಪಾರ .

ದ್ರೋಣರ ಬ್ರಾಹ್ಮಣ್ಯನಾಶದ ಭಯದ ನೋಟ ,

ತಾನು ಬಿಲ್ಲು ಹಿಡಿಯದೆ ಕಾರ್ಯಸಾಧಿಸಿದ ಆಟ .

 

ಪಪ್ರಚ್ಛೈನಂ ತದಾ ದ್ರೋಣಸಖ್ಯಮಸ್ತ್ಯುತ ನೇತಿ ಹ ।

ಅಸ್ತೀದಾನೀಮಿತಿ ಪ್ರಾಹ ದ್ರುಪದೋsಙ್ಗಿರಸಾಂ ವರಮ್ ॥೧೮.೮೭ ॥

ತನ್ನೆದುರು ಸೆರೆಯಾಗಿ ನಿಂತ ದ್ರುಪದನ ಕುರಿತು ,

ದ್ರೋಣಾಚಾರ್ಯರು ಕೇಳಿದರು ಕೆಳಗಿನ ಮಾತು .

ಈಗ ನಮ್ಮಿಬ್ಬರ ಮಧ್ಯೆ ಇದೆಯೋ ಇಲ್ಲವೋ ಗೆಳೆತನ ,

ದ್ರುಪದ-ಸಖ್ಯವಿದೆ ಅಂಗೀರಸಗೋತ್ರಶ್ರೇಷ್ಠ ದ್ರೋಣ .

 

ಅಥಾsಹ ದ್ರುಪದಂ ದ್ರೋಣಃ ಸಖ್ಯಮಿಚ್ಛೇsಕ್ಷಯಂ ತವ ।

ನಹ್ಯರಾಜ್ಞಾ ಭವೇತ್ ಸಖ್ಯಂ ತವೇತೀದಂ ಕೃತಂ ಮಯಾ ॥೧೮.೮೮ ॥

ದ್ರೋಣರೆಂದರು-ಬೇಕೆನಗೆ ನಿನ್ನ ನಾಶವಾಗದ ಗೆಳೆತನ ,

ಗೆಳೆತನ ಇರಲಾರದಾಯಿತು ನಾನು ರಾಜನಲ್ಲದ ಕಾರಣ .

ಈ ಕಾರಣದಿಂದ ಹೀಗೆ ಮಾಡಬೇಕಾಗಿತೆಂದರು ದ್ರೋಣ .

 

ನ ವಿಪ್ರಧರ್ಮ್ಮೋ ಯದ್ ಯುದ್ಧಮತಸ್ತ್ವಂ ನ ಮಯಾ ಧೃತಃ ।

ಶಿಷ್ಯೈರೇತತ್ ಕಾರಿತಂ ಮೇ ತವ ಸಖ್ಯಮಭೀಪ್ಸತಾ ॥೧೮.೮೯ ॥

ಯುದ್ಧ ಮಾಡುವುದಲ್ಲ ಬ್ರಾಹ್ಮಣ ಧರ್ಮ ,

ಅದು ನಾನು ನಿನ್ನ ಬಂಧಿಸದಿರುವ ಮರ್ಮ .

ನಿನ್ನ ಸ್ನೇಹಕ್ಕೆ ಶಿಷ್ಯರಿಂದ ಮಾಡಿಸಿದ ಈ ಕರ್ಮ .

 

ಅತಃ ಸಖ್ಯಾರ್ತ್ಥಮೇವಾದ್ಯ ತ್ವದ್ರಾಜ್ಯಾರ್ದ್ಧೋ ಹೃತೋ ಮಯಾ ।

ಗಙ್ಗಾಯಾ ದಕ್ಷಿಣೇ ಕೂಲೇ  ತ್ವಂ ರಾಜೈವೋತ್ತರೇ ತ್ವಹಮ್ ॥೧೮.೯೦ ॥

ಗೆಳೆತನಕ್ಕಾಗೇ ಮಾಡುತ್ತಿದ್ದೇನೆ ನಿನ್ನ ರಾಜ್ಯದ ಭಾಗ ,

ನಾನು ವಶಪಡಿಸಿಕೊಳ್ಳುತ್ತಿದ್ದೇನೆ ರಾಜ್ಯದಲ್ಪಭಾಗ .

ಗಂಗೆಯ ದಕ್ಷಿಣದ ಪ್ರದೇಶ ನಿನ್ನದು ,

ಗಂಗೆಯ ಉತ್ತರದ ಪ್ರದೇಶ ನನ್ನದು .

 

ನಹ್ಯರಾಜತ್ವ ಏಕಸ್ಯ ಸಖ್ಯಂ ಸ್ಯಾದಾವಯೋಃ ಸಖೇ ।

ಇತ್ಯುಕ್ತ್ವೋನ್ಮುಚ್ಯ ತಂ ದ್ರೋಣೋ ರಾಜ್ಯಾರ್ದ್ಧಂ ಗೃಹ್ಯ ಚಾಮುತಃ ॥೧೮.೯೧ ॥

ಯಯೌ ಶಿಷ್ಯೈರ್ನ್ನಾಗಪುರಂ ನ್ಯವಸತ್  ಸುಖಮತ್ರ ಚ ।

ಬ್ರಾಹ್ಮಣ್ಯತ್ಯಾಗಭೀರುಃ ಸ ನ ಗೃಹ್ಣನ್  ಧನುರಪ್ಯಸೌ ॥೧೮.೯೨ ॥

ದ್ರೋಣರೆಂದರು-ನಾನು ರಾಜನಾಗದ ಹೊರತು ,

ಉಳಿಯಲಾರದು ನಮ್ಮಿಬ್ಬರಲ್ಲಿ ಸ್ನೇಹದ ತಂತು .

ಈಗ ನೋಡು ನಾವಿಬ್ಬರೂ ರಾಜರು ,

ಹಾಗೆಯೇ ನಾವಿಬ್ಬರೂ ಸ್ನೇಹಿತರು .

ಹಾಗೆಂದ ದ್ರೋಣರು ಮಾಡಿದರು ದ್ರುಪದರಾಜ್ಯ ಭಾಗದ ಸ್ವೀಕಾರ ,

ದ್ರುಪದನ ಬಿಟ್ಟು,ಶಿಷ್ಯರೊಂದಿಗೆ ಹಸ್ತಿನಾವತಿಗೆ ಹೋಗಿದ್ದ ವ್ಯಾಪಾರ .

ದ್ರೋಣರ ಬ್ರಾಹ್ಮಣ್ಯನಾಶದ ಭಯದ ನೋಟ ,

ತಾನು ಬಿಲ್ಲು ಹಿಡಿಯದೆ ಕಾರ್ಯಸಾಧಿಸಿದ ಆಟ .


 

ಧಾರ್ತ್ತರಾಷ್ಟ್ರೈಸ್ತು ಭೀಮಸ್ಯ ಭಯಾತ್ ಪಾದೌ ಪ್ರಣಮ್ಯ ಚ ।

ಶರಣಾರ್ತ್ಥಂ ಯಾಚಿತತ್ವಾತ್ ಸಪುತ್ರೋ ಯುಯುಧೇ ಪರೈಃ ॥೧೮.೯೩ ॥

ದುರ್ಯೋಧನಾದಿಗಳಿಗೆ ಆವರಿಸಿತ್ತು ಭೀಮನ ಭಯ ,

ದ್ರೋಣಪಾದಕೆ ಬಿದ್ದು ಬೇಡಿದರು ರಕ್ಷಣೆಯ ಅಭಯ .

ಮಗ ಅಶ್ವತ್ಥಾಮನೊಡಗೂಡಿ ಯುದ್ಧಗೈದರು ಆಚಾರ್ಯ.

 

ಏವಂ ಹರೀಚ್ಛಯೈವಾಸೌ ಕ್ಷಾತ್ರಂ ಧರ್ಮ್ಮಮುಪೇಯಿವಾನ್ ।

ದ್ರುಪದಸ್ತು ದಿವಾರಾತ್ರಂ ತಪ್ಯಮಾನಃ ಪರಾಭವಾತ್ ॥೧೮.೯೪ ॥

ಭೀಮಾರ್ಜ್ಜುನಬಲಂ ದೃಷ್ಟ್ವಾ ಚೇಚ್ಛನ್ ಪಾಣ್ಡವಸಂಶ್ರಯಮ್ ।

ಸಮ್ಬನ್ಧೀತ್ಯರ್ಜ್ಜುನವಚಶ್ಚಿಕೀರ್ಷುಃ ಸತ್ಯಮೇವ ಚ ॥೧೮.೯೫ ॥

ಮಾರ್ದ್ದವಂ ಚಾರ್ಜ್ಜುನೇ ದೃಷ್ಟ್ವಾ ಸುತಾಮೈಚ್ಛತ್ ತದರ್ತ್ಥತಃ ।

ಪುತ್ರಂ ಚ ದ್ರೋಣಹನ್ತಾರಮಿಚ್ಛನ್ ವಿಪ್ರವರೌ ಯಯೌ ॥೧೮.೯೬ ॥

ಹೀಗೆ ದ್ರೋಣರಿಂದ ಭಗವದಿಚ್ಛೆಯಂತೆ ಕ್ಷತ್ರಿಯಧರ್ಮ ಪಾಲನೆ ,

ದ್ರುಪದನಿಗಾದರೋ ಹಗಲುರಾತ್ರಿ ಪರಾಜಯದ್ದೇ ಪರಿತಪನೆ .

ದ್ರುಪದ ಗಮನಿಸಿದ ಭೀಮಾರ್ಜುನರ ಬಲ ಮತ್ತು ಶೌರ್ಯ ,

ಸತ್ಯಮಾಡಲು 'ಇವ ಸಂಬಂಧಿ' ಎಂಬ ಪಾರ್ಥನುಡಿಯ ಆಂತರ್ಯ,

ತಿಳಿದು ಅರ್ಜುನನಲ್ಲಿ ತನ್ನ ಬಗೆಗಿದ್ದ ಮೃದುಸ್ವಭಾವ ,

ಬಂತವನಲ್ಲಿ ಅವನಿಗಾಗಿ ಮಗಳ ಪಡೆಯುವ ಭಾವ .

ಹಾಗೆಯೇ ದ್ರೋಣನ ಕೊಲ್ಲುವ ಮಗನೊಬ್ಬನನ್ನು ಬಯಸಿ ,

ತೆರಳಿದ ಯಾಜ ಉಪಯಾಜರೆಂಬ ಶ್ರೇಷ್ಠವಿಪ್ರರನ್ನು ಅರಸಿ.

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 18: 78 - 86

 ಹಸ್ತಪ್ರಾಪ್ತಂ ಚ ಪಾಞ್ಚಾಲಂ ನಾಗ್ರಹೀತ್ ಸ ವೃಕೋದರಃ ।

ಗುರ್ವರ್ತ್ಥಾಮರ್ಜ್ಜುನಸ್ಯೋರ್ವೀಂ ಪ್ರತಿಜ್ಞಾಂ ಕರ್ತ್ತುಮಪ್ಯೃತಾಮ್ ॥೧೮.೭೮॥

ಮಾನಭಙ್ಗಾಯ ಕರ್ಣ್ಣಸ್ಯ ಪಾರ್ತ್ಥಮೇವ ನ್ಯಯೋಜಯತ್ ।

ಸ ಶರಾನ್ ಕ್ಷಿಪತಸ್ತಸ್ಯ ಪಾಞ್ಚಾಲಸ್ಯಾರ್ಜ್ಜುನೋ ದ್ರುತಮ್ ॥೧೮.೭೯॥

ಪುಪ್ಲುವೇ ಸ್ಯನ್ದನೇ ಚಾಪಂ ಛಿತ್ವಾ ತಂ ಚಾಗ್ರಹೀತ್ ಕ್ಷಣಾತ್ ।

ಸಿಂಹೋ ಮೃಗಮಿವಾsದಾಯ ಸ್ವರಥೇ ಚಾಭಿಪೇತಿವಾನ್ ॥೧೮.೮೦॥

ತಮ್ಮನ ಮೇಲಿನ ಪ್ರೀತಿಯಿಂದ ದ್ರುಪದನ ಬಂಧಿಸಲಿಲ್ಲ ಭೀಮ ,

ಅರ್ಜುನನ ಮಹಾ ಪ್ರತಿಜ್ಞೆಯ ಈಡೇರಿಸುವಲ್ಲಿ ಇತ್ತವನ ಕಾಮ ,

ಕರ್ಣನ ಮಾನಭಂಗಕ್ಕೆ ಅರ್ಜುನನೇ ಕಾರಣವಾಗಲೆo ನೇಮ .

ಬಾಣ ಬಿಡುತ್ತಿದ್ದ ದ್ರುಪದನ ರಥದೊಳಗೆ ಅರ್ಜುನ ಹಾರಿದ ,

ಅವನ ಬಿಲ್ಲನ್ನು ಮುರಿದುಹಾಕಿ ಕ್ಷಣದಲ್ಲಿ ಅವನ ಸೆರೆ ಹಿಡಿದ ,

ಸಿಂಹ ಜಿಂಕೆಯ ಎಳೆತರುವಂತೆ ಅವನನ್ನು ತನ್ನ ರಥಕ್ಕೆ ಎಳೆತಂದ .

 

ಅಥ ಪ್ರಕುಪಿತಂ ಸೈನ್ಯಂ ಫಲ್ಗುನಂ ಪರ್ಯ್ಯವಾರಯತ್ ।

ಜಘಾನ ಭೀಮಸ್ತರಸಾ ತತ್ ಸೈನ್ಯಂ ಶರವೃಷ್ಟಿಭಿಃ ॥೧೮.೮೧॥

ಆಗ ಅರ್ಜುನನ ಸುತ್ತುವರೆಯಿತು ಕೋಪಗೊಂಡ ದ್ರುಪದಸೈನ್ಯ ,

ಆ ಸೈನ್ಯವನ್ನು ಸಂಹರಿಸತೊಡಗಿದ ಬಾಣಗಳಿಂದ ಭೀಮಸೇನ .

 

ಅಥ ಸತ್ಯಜಿದಭ್ಯಾಗಾತ್ ಪಾರ್ತ್ಥಂ ಮುಞ್ಚಞ್ಛರಾನ್ ಬಹೂನ್ ।

ತಮರ್ಜ್ಜುನಃ ಕ್ಷಣೇನೈವ ಚಕ್ರೇ ವಿರಥಕಾರ್ಮ್ಮುಕಮ್ ॥೧೮.೮೨ ॥

ಆನಂತರ ದ್ರುಪದಪುತ್ರ ಸತ್ಯಜಿತ್ ಅರ್ಜುನನ ಮೇಲೆ ಬಾಣ ಬಿಡುತ್ತಾ ಬಂದ ,

ಹಾಗೆ ಬಂದ ಅವನನ್ನು ಕ್ಷಣದಲ್ಲೇ ಅರ್ಜುನ ರಥ ಮತ್ತು ಶಸ್ತ್ರಹೀನನ ಮಾಡಿದ .

 

ಘ್ನನ್ತಂ ಭೀಮಂ ಪುನಃ ಸೈನ್ಯಮರ್ಜ್ಜುನಃ ಪ್ರಾಹ ಮಾ ಭವಾನ್ ।

ಸೇನಾಮರ್ಹತಿ ರಾಜ್ಞೋsಸ್ಯ ವೀರ ಹನ್ತುಮಶೇಷತಃ ॥೧೮.೮೩॥

ಸಮ್ಬನ್ಧಯೋಗ್ಯಸ್ತಾತಸ್ಯ ಸಖಾsಯಂ ನಃ ಸುಧಾರ್ಮ್ಮಿಕಃ ।

ನೇಷ್ಯಾಮ ಏನಮೇವಾತೋ ಗುರೋರ್ವಚನಗೌರವಾತ್ ॥೧೮.೮೪॥

ಪಾಂಚಾಲಸೈನ್ಯ ತರಿಯುತ್ತಿದ್ದ ಭೀಮಗೆ ಹೇಳುತ್ತಾನೆ ಅರ್ಜುನ ,

ಎಲವೋ ವೀರ ಪೂರ್ಣಸೈನ್ಯವನ್ನು ಮಾಡಿಬಿಡಬೇಡ ದಮನ ,

ಈ ದ್ರುಪದ ಧಾರ್ಮಿಕ ಮತ್ತು ನಮ್ಮ ತಂದೆಯ ಮಿತ್ರ ,

ಧರ್ಮದಲ್ಲಿದ್ದು , ನಮ್ಮ ಸಂಬಂಧಕ್ಕೆ ಕೂಡಾ ಪಾತ್ರ .

ನಮ್ಮ ಗುರುಗಳ ಮಾತಿಗೆ ಗೌರವ ಕೊಡುವ ,

ಇವನನ್ನು ಮಾತ್ರ ಹಿಡಿದುಕೊಂಡೊಯ್ಯುವ .

 

ಸ್ನೇಹಪಾಶಂ ತತಶ್ಚಕ್ರೇ ಬೀಭತ್ಸೌ ದ್ರುಪದೋsಧಿಕಮ್ ।

ತತಃ ಸೇನಾಂ ವಿಹಾಯೈವ ಭೀಮೋ ಬೀಭತ್ಸುಮನ್ವಯಾತ್ ॥೧೮.೮೫॥

ಅರ್ಜುನನ ಈ ಮಾತಿನಿಂದ ದ್ರುಪದಗಾಯಿತು ಅವನಲ್ಲಿ ತುಂಬು ಸ್ನೇಹ ,

ಭೀಮ ಪಾಂಚಾಲಸೇನೆಯ ಸಂಹಾರ ಬಿಟ್ಟ ಅನುಸರಿಸಿ ತಮ್ಮನ ಭಾವ .

 

ಮುಕ್ತಾ ಕಥಞ್ಚಿದ್ ಭೀಮಾತ್ ಸ್ಯಾತ್ ಸಾ ಸೇನಾ ದುದ್ರುವೇ ಭಯಾತ್ ।

ದ್ರುಪದಂ ಸ್ಥಾಪಯಾಮಾಸಾಥಾರ್ಜ್ಜುನೋ ದ್ರೋಣಸನ್ನಿಧೌ ॥೧೮.೮೬ ॥

ಭೀಮಸೇನನಿಂದ ಪಾರಾಗಿ ಉಳಿದ ಆ ಸೇನೆ ಆರಂಭಿಸಿತು ಓಟ ,

ಹೀಗೆ ಅರ್ಜುನ ದ್ರೋಣಸನ್ನಿಧಿಯಲ್ಲಿ ದ್ರುಪದನ ನಿಲ್ಲಿಸಿದ ಆಟ .

Thursday 27 August 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 18: 69 -77

 ತಾನ್ ಪ್ರಭಗ್ನಾನ್ ಸಮಾಲೋಕ್ಯ ಭೀಮಃ ಪ್ರಹರತಾಂ ವರಃ ।

ಆರುರೋಹ ರಥಂ ವೀರಃ ಪುರ ಆತ್ತಶರಾಸನಃ ॥೧೮.೬೯॥

ಪ್ರಹಾರದಲ್ಲಿ ಮುಖ್ಯ ಮುಂದಾಳಾದ ಭೀಮಸೇನ ,

ಕಂಡು ಸೋಲುಂಡು ಬಂದ ದುರ್ಯೋಧನಾದಿಗಳನ್ನ ,

ಮುಂದೆ ರಥವೇರಿದ ತಾನು ಹಿಡಿದು ಬಿಲ್ಲುಬಾಣಗಳನ್ನ.

 

ತಮನ್ವಯಾದಿನ್ದ್ರಸುತೋ ಯಮೌ ತಸ್ಯೈವ ಚಕ್ರಯೋಃ ।

ಯುಧಿಷ್ಠಿರಸ್ತು ದ್ರೋಣೇನ ಸಹ ತಸ್ಥೌ ನಿರೀಕ್ಷಕಃ ॥೧೮.೭೦॥

ಭೀಮನ ಅನುಸರಿಸಿಕೊಂಡು ತಾನು ಹೊರಟ ಅರ್ಜುನನಾಗ ,

ನಕುಲ ಸಹದೇವರು ವಹಿಸಿಕೊಂಡರು ರಥಚಕ್ರ ರಕ್ಷಕರಜಾಗ ,

ಧರ್ಮರಾಜ ದ್ರೋಣರೊಡಗೂಡಿ ಯುದ್ಧನಿರೀಕ್ಷಕ ಆದರಾಗ .

 

 

ಅಯಾನ್ತಮಗ್ರತೋ ದೃಷ್ಟ್ವಾಭೀಮಮಾತ್ತಶರಾಸನಮ್ ।

ದುದ್ರುವುಃ ಸರ್ವಪಾಞ್ಚಾಲಾಃ ವಿವಿಶುಃ ಪುರಮೇವ ಚ ॥೧೮.೭೧॥

ಮುಂದೆ ಬಿಲ್ಲು ಹಿಡಿದು ನುಗ್ಗಿ ಬರುತ್ತಿರುವ ಭೀಮಸೇನನ ಆ ನೋಟ ,

ಹೆಂಗಸರು ಮಕ್ಕಳು ಪಾಂಚಾಲರನ್ನು ಪಟ್ಟಣಕ್ಕೆ ಸೇರಿಸಿತು ಅವರ ಓಟ .

 

ದ್ರುಪದಸ್ತ್ವಭ್ಯಯಾದ್ ಭೀಮಂ ಸಪುತ್ರಃ ಸಾರಸೇನಯಾ ।

ಚಕ್ರರಕ್ಷೌ ತು ತಸ್ಯಾsಸ್ತಾಂ ಯುಧಾಮನ್ಯೂತ್ತಮೋಜಸೌ ॥೧೮.೭೨॥

ಧಾತ್ರರ್ಯ್ಯಮಾವೇಶಯುತೌ ವಿಶ್ವಾವಸುಪರಾವಸೂ ।

ಸುತೌ ತಸ್ಯ ಮಹಾವೀರ್ಯ್ಯೌ ಸತ್ಯಜಿತ್ ಪೃಷ್ಠತೋsಭವತ್ ॥೧೮.೭೩॥

ಸ ಮಿತ್ರಾಂಶಯುತೋ ವೀರಶ್ಚಿತ್ರಸೇನೋ ಮಹಾರಥಃ ।

ಅಗ್ರತಸ್ತು ಶಿಖಣ್ಡ್ಯಾಗಾದ್ ರಥೋದಾರಃ ಶರಾನ್ ಕ್ಷಿಪನ್ ॥೧೮.೭೪॥

ದ್ರುಪದ ಮಕ್ಕಳೊಡಗೂಡಿ ನುರಿತ ಸೈನಿಕರೊಂದಿಗೆ ಭೀಮನ ಎದುರಿಸಿದಾಗ ,

ಯುಧಾಮನ್ಯು ಮತ್ತು ಉತ್ತಮೋಜಸ್ ಅವನ ರಥ ಚಕ್ರರಕ್ಷಕರಾಗಿ ನಿಂತರಾಗ .

ಧಾತ್ರ ಮತ್ತು ಅರ್ಯಮಾ ಹೆಸರಿರುವವರು

ದ್ವಾದಶ ಆದಿತ್ಯರಲ್ಲಿ ಅವರೂ ಕೂಡಾ ಇಬ್ಬರು .

ಅವರ ಆವೇಶದಿ ಕೂಡಿದ ವಿಶ್ವಾವಸು ಪರಾವಸು ಎಂಬ ಗಂಧರ್ವರು,

ಮಹಾಪರಾಕ್ರಮಶಾಲಿಗಳಾಗಿ ದ್ರುಪದರಾಜನ ಮಕ್ಕಳಾಗಿ ಬಂದವರು .

ಸತ್ಯಜಿತ್ ಎಂಬುವವ ದ್ರುಪದನ ಹಿಂದಿನ ರಕ್ಷಕನಾಗಿದ್ದ ,

ಅವ ಮಿತ್ರಾಂಶದಿ ಕೂಡಿದ ಚಿತ್ರಸೇನ ಗಂಧರ್ವನಾಗಿದ್ದ .

ಮುಂಭಾಗದಿ ಶ್ರೇಷ್ಠರಥಿ ಶಿಖಂಡಿ ಬಾಣ ಬಿಡುತ್ತಾ ಬಂದ .

 

ಜನಮೇಜಯಸ್ತಮನ್ವೇವ ಪೂರ್ವಂ ಚಿತ್ರರಥೋ ಹಿ ಯಃ ।

ತ್ವಷ್ಟುರಾವೇಶಸಂಯುಕ್ತಃ ಸ ಶರಾನಭ್ಯವರ್ಷತ ॥೧೮.೭೫॥

ಜನಮೇಜಯ ಶಿಖಂಡಿಯ ಹಿಂದಿನಿಂದ ಬಾಣಗಳ ಎಸೆದ ,

ಮೊದಲು ಅವನು ಚಿತ್ರರಥ ಎಂಬ ಹೆಸರಿನ ಗಂಧರ್ವ ಆಗಿದ್ದ .

ದ್ವಾದಶಾದಿತ್ಯರಲ್ಲಿ ಒಬ್ಬನಾದ ತ್ವಷ್ಟವಿನ ಆವೇಶದವ ಆಗಿದ್ದ .

 

ತಾವುಭೌ ವಿರಥೌ ಕೃತ್ವಾ ವಿಚಾಪೌ ಚ ವಿವರ್ಮ್ಮಕೌ ।

ಭೀಮೋ ಜಘಾನ ತಾಂ ಸೇನಾಂ ಸವಾಜಿರಥಕುಞ್ಜರಾಮ್ ॥೧೮.೭೬॥

ಜನಮೇಜಯ ಶಿಖಂಡಿಯರ ರಥ ಬಿಲ್ಲು ಕವಚಗಳ ಮುರಿದ ಭೀಮ ,

ಆನೆ ರಥ ಕುದುರೆ ಒಳಗೊಂಡ ಆ ಸೇನೆಯ ಮಾಡಿದ ನಿರ್ನಾಮ .

 

ಅಥೈನಂ ಶರವರ್ಷೇಣ ಯುಧಾಮನ್ಯೂತ್ತಮೋಜಸೌ ।

ಅಭೀಯತುಸ್ತೌ ವಿರಥೌ ಚಕ್ರೇ ಭೀಮೋ ನಿರಾಯುಧೌ ॥೧೮.೭೭॥

ನಂತರ ಯುಧಾಮನ್ಯು ಮತ್ತು ಉತ್ತಮೋಜಸ್ರದು ಭೀಮನ ಮೇಲೆ ಯುದ್ಧ ,

ಭೀಮಸೇನ ಅವರಿಬ್ಬರನ್ನೂ ಆಯುಧಹೀನ ಮತ್ತು ರಥಹೀನರ ಮಾಡಿದ.