Monday, 24 August 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 18: 11 - 18

  ನ ಸಂಶಯಂ ಕದಾsಪ್ಯೇಷ ಧರ್ಮ್ಮೇ ಜ್ಞಾನೇsಪಿ ವಾsಕರೋತ್ ।

ವಿದ್ಯೋಪಜೀವನಂ ನೈಷ ಚಕಾರಾsಪದ್ಯಪಿ ಕ್ವಚಿತ್ ॥೧೮.೧೧ ॥

ಧರ್ಮದಲ್ಲಿ ಜ್ಞಾನದಲ್ಲಿ ಎಂದೂ ಸಂಶಯ ಮಾಡಲಿಲ್ಲ ಭೀಮಸೇನ ,

ಎಂತಹಾ ಆಪತ್ಕಾಲದಲ್ಲೂ ವಿದ್ಯೆಯಿಂದ ಮಾಡಲಿಲ್ಲ ಉಪಜೀವನ .

 

ಅತೋ ನ ಧರ್ಮ್ಮನಹುಷೌ ಪ್ರತ್ಯುವಾಚ ಕಥಞ್ಚನ ।

ಆಜ್ಞಯೈವ ಹರೇರ್ದ್ದ್ರೌಣೇರಸ್ತ್ರಾಣ್ಯಸ್ತ್ರೈರಶಾತಯತ್ ॥೧೮.೧೨॥

ಹೀಗಾಗೇ ಯಕ್ಷರೂಪೀ ಧರ್ಮಗೆ ಅಜಗರರೂಪೀ ನಹುಷಗೆ ಉತ್ತರಿಸಲಿಲ್ಲ ಭೀಮಸೇನ ,

ಭಗವಂತನ ಆಜ್ಞೆಯಿಂದಲೇ ಅಶ್ವತ್ಥಾಮ ಪ್ರಯೋಗಿಸಿದ ಅಸ್ತ್ರಗಳ ಮಾಡಿದ ಶಮನ .

 

ಅದೃಶ್ಯೋsಲಮ್ಬುಸೋ ಭಗ್ನೋ ನಾನ್ಯತ್ರ ತು ಕಥಞ್ಚನ ।

ನಹ್ಯಸ್ತ್ರಯುದ್ಧೇ ಸದೃಶೋ ದ್ರೌಣೇರಸ್ತ್ಯರ್ಜ್ಜುನಾದೃತೇ ॥೧೮.೧೩ ॥

ಸರ್ವವಿತ್ತ್ವಂ  ತತೋ ಭೀಮೇ ಪ್ರದರ್ಶಯಿತುಮೀಶ್ವರಃ ।

ಅದಾದಾಜ್ಞಾಮಸ್ತ್ರಯುದ್ಧೇ ತಥೈವಾಲಮ್ಬುಸಂ ಪ್ರತಿ ॥೧೮.೧೪॥

ಅಲಂಬುಸ ಮಾಡುತ್ತಿದ್ದ ಅದೃಶ್ಯವಾಗಿ ಮಾಯಾ ಅಸ್ತ್ರ ಯುದ್ಧ ,

ಭೀಮಸೇನ ಅಸ್ತ್ರಯುದ್ಧದಿಂದಲೇ ಅವನನ್ನು ಸೋಲಿಸಿ ಗೆದ್ದ .

ಆಗ ಅಸ್ತ್ರಯುದ್ಧದಲ್ಲಿ ಸಾಟಿಯಿರದವರು ಅರ್ಜುನ ಮತ್ತು ಅಶ್ವತ್ಥಾಮ ,

ಭೀಮನ ಸರ್ವಜ್ಞತ್ವವನ್ನು ತೋರಲು ಕೃಷ್ಣ ಮಾಡಿದ ಆಜ್ಞೆಯ ನಿಯಮ ,

ಹರಿಯ ಆಜ್ಞೆ ಶಿರಸಾವಹಿಸಿ ಅಸ್ತ್ರವಿದ್ಯೆಯ ಮಾಡಿದ ಹರಿಭಕ್ತ ಬಲಭೀಮ .

 

ಪ್ರತ್ಯಕ್ಷೀಭೂತದೇವೇಷು ಬನ್ಧುಜ್ಯೇಷ್ಠೇಷು ವಾ ನತಿಮ್ ।

ಮರ್ಯ್ಯಾದಾಸ್ಥಿತಯೇsಶಾಸದ್ ಭಗವಾನ್ ಪುರುಷೋತ್ತಮಃ ॥೧೮.೧೫॥

ತತ್ರಾಪಿ ವಿಷ್ಣುಮೇವಾಸೌ ನಮೇನ್ನಾನ್ಯಂ ಕಥಞ್ಚನ ।

ಆಜ್ಞಯೈವಾಸ್ತ್ರದೇವಾಂಶ್ಚ ಪ್ರೇರಯಾಮಾಸ ನಾರ್ತ್ಥನಾತ್ ॥೧೮.೧೬॥

ಪ್ರತ್ಯಕ್ಷರಾಗಿ ಬರುವ ದೇವತೆಗಳು ವಯಸ್ಸಲ್ಲಿ ಹಿರಿಯರಾದ ಬಂಧುಗಳಲ್ಲಿ ನಮಸ್ಕಾರ ,

ದೇವರ ಆಜ್ಞೆಯಂತೆ ಪಾಲಿಸುತ್ತಿದ್ದ ಭೀಮಸೇನ

ಅವ ತೋರಿದ ಲೋಕನಿಯಮಾನುಸಾರ .

ಅವರಲ್ಲೂ ಅವ ನಮಿಸುತ್ತಿದ್ದದ್ದು ಅಂತರ್ಯಾಮಿ ನಾರಾಯಣನನ್ನೇ ,

ಅಸ್ತ್ರದೇವತೆಗಳ ಬೇಡಿಕೊಳ್ಳದೆ ಮಾಡಿಸುತ್ತಿದ್ದ ಕೊಟ್ಟು ಆಜ್ಞೆಯನ್ನೇ .

 

ಅನ್ವೇನಮೇವ ತದ್ಧರ್ಮ್ಮೇ ಕೃಷ್ಣೈಕಾ ಸಂಸ್ಥಿತಾ ಸದಾ ।

ಧೃತರಾಷ್ಟ್ರಾದಪಿ ವರಂ ತತೋ ನಾsತ್ಮಾರ್ತ್ಥಮಗ್ರಹೀತ್ ॥೧೮.೧೭॥

ನಾಶಪದ್ ಧಾರ್ತ್ತರಾಷ್ಟ್ರಾಂಶ್ಚ ಮಹಾಪದ್ಯಪಿ ಸಾ ತತಃ ।

ನ ವಾಚಾ ಮನಸಾ ವಾsಪಿ ಪ್ರತೀಪಂ ಕೇಶವೇsಚರತ್ ॥೧೮.೧೮॥

ಭೀಮನನುಸರಿಸಿ ದ್ರೌಪದಿ ಸದಾ ಅನುಸರಿಸುತ್ತಿದ್ದದ್ದು ಶುದ್ಧ ಭಾಗವತಧರ್ಮ ,

ಆ ಕಾರಣವೇ ಹೇಳುತ್ತದೆ ಅವಳು ಎಂದೂ ಧೃತರಾಷ್ಟ್ರನ ಏನೂ ಬೇಡದ ಮರ್ಮ .

ವಸ್ತ್ರಾಪಹರಣಕ್ಕೊಳಗಾದಾಗಲೂ ದುರ್ಯೋಧನಾದಿಗಳಿಗೆ ಕೊಡಲಿಲ್ಲ ಶಾಪ ,

ಸುಳಿಯಗೊಡಲಿಲ್ಲ ಸನಿಹ ಮಾತು ಮನಗಳಿಂದ ಭಗವದ್ವಿರೋಧ ಮಾಡಿದ ಪಾಪ .

No comments:

Post a Comment

ಗೋ-ಕುಲ Go-Kula