ದ್ವಿರಷ್ಟಸೇನಯಾ ಯುತೌ ಸಹೈಕಯೈವ ತೌ ನೃಪೌ ।
ಸಮೀಯತುರ್ಯ್ಯುಧೇ ಹರಿಂ
ಹರಿಶ್ಚ ತೌ ಸಸಾರ ಹ ॥೧೭.೨೪೯॥
ಹದಿನೇಳು ಅಕ್ಷೋಹಿಣೀ ಸೇನೆಯೊಂದಿಗೆ ಹಂಸ ಡಿಭಕರು,
ಭಗವಂತ ಕೃಷ್ಣ ಯುದ್ಢದಿ ಪರಸ್ಪರ ಎದುರು ಬದಿರಾದರು .
ಅಥ
ದ್ವಯೋರ್ದ್ದ್ವಯೋರಭೂದ್ ರಣೋ ಭಯಾನಕೋ ಮಹಾನ್ ।
ಹರಿರ್ವಿಚಕ್ರಮೇಯಿವಾನ್
ಬಲಶ್ಚ ಹಂಸಮುದ್ಧತಮ್ ॥೧೭.೨೫೦॥
ತದಾsಸ್ಯ ಚಾನುಜಂ ಯಯೌ ಶಿನಿಪ್ರವೀರ ಆಯುಧೀ ।
ಗದಶ್ಚ ನಾಮತೋsನುಜೋ ಹರೇಃ ಸ ರೋಹಿಣೀಸುತಃ ॥೧೭.೨೫೧॥
ಪುರಾ ಸ ಚಣ್ಡಕೋ ಗಣೋ ಹರೇರ್ನ್ನಿವೇದಿತಾಶನಃ ।
ಸಮಾಹ್ವಯದ್ ರಣಾಯ ವೈ
ತಯೋಃ ಸ ತಾತಮೇವ ಹಿ ॥೧೭.೨೫೨॥
ಸ್ವಲ್ಪ ಕಾಲಾನಂತರ ಪ್ರಾರಂಭವಾಯಿತಲ್ಲಿ ಭಾರೀ ದ್ವಂದ್ವಯುದ್ಧ ,
ಕೃಷ್ಣ ವಿಚಕ್ರನೆದುರಿಸಿದರೆ ಬಲರಾಮ ಉದ್ಧಟ ಹಂಸನೆದುರಿಸಿದ ,
ಆಯುಧಪಾಣಿಯಾದ ಸಾತ್ಯಕಿ ಹಂಸಸೋದರ ಡಿಭಕಗೆ ಎದುರಾದ .
ಗದನೆನ್ನುವವನು ಶ್ರೀಕೃಷ್ಣನ ಕಿರಿಯ ಸಹೋದರ ,
ವಸುದೇವ ರೋಹಿಣಿಸುತನಾಗಿ ಬಂದ ಚಂಡನವತಾರ .
ಅವನು ಭಗವಂತಗೆ ಮಾಡುತ್ತಿದ್ದ ಅನ್ನದ ಅರ್ಪಣೆ ,
ಯುದ್ಧಕೆ ಕರೆದ ಹಂಸ ಡಿಭಕರ ತಂದೆ ಬ್ರಹ್ಮದತ್ತನನ್ನೆ .
ಅಕ್ಷೋಹಿಣೀತ್ರಯಾನ್ವಿತಾಃ
ಸಮಸ್ತಯಾದವಾಸ್ತದಾ ।
ತ್ರಿಲೋಚನಾನುಗೌ ಚ ತೌ
ನ್ಯವಾರಯನ್ ಸರಾಕ್ಷಸೌ ॥೧೭.೨೫೩॥
ಆ ಸಮಯದಿ ಮೂರು ಅಕ್ಷೋಹಿಣೀ ಸೇನೆಯುಳ್ಳ ಯಾದವರು ,
ರಕ್ಕಸಸೇನೆ , ಅವೆರಡೂ ಭೂತ ಮತ್ತು
ಹಿಡಿಂಬನ ಎದುರಿಸಿದರು.
ಹರಿರ್ವಿಚಕ್ರಮೋಜಸಾ
ಮಹಾಸ್ತ್ರಶಸ್ತ್ರವರ್ಷಿಣಮ್ ।
ವಿವಾಹನಂ ನಿರಾಯುಧಂ
ಕ್ಷಣಾಚ್ಚಕಾರ ಸಾಯಕೈಃ ॥೧೭.೨೫೪॥
ಅಸ್ತ್ರ ಶಸ್ತ್ರಗಳ ಮಳೆಗರೆಯುತ್ತಿದ್ದ ಆ ವಿಚಕ್ರನೆದುರಿಸಿದ ಸ್ವಾಮಿ
ಕೃಷ್ಣ ,
ಕೆಲಕ್ಷಣಗಳಲ್ಲಿ ಬಾಣಗಳಿಂದ ಅವನ ಮಾಡಿದ ಆಯುಧ ವಾಹನಹೀನ .
ಪುನಶ್ಚ ಪಾದಪಾನ್
ಗಿರೀನ್ ಪ್ರಮುಞ್ಚತೋsರಿಣಾsರಿಹಾ ।
ಶಿರೋ ಜಹಾರ ದೇವತಾ
ವಿನೇದುರತ್ರ ಹರ್ಷಿತಾಃ ॥೧೭.೨೫೫ ॥
ಮತ್ತೆ ವಿಚಕ್ರ ಮರ ಬಂಡೆಗಳ ಪ್ರಯೋಗಿಸಿದ,
ಶ್ರೀಕೃಷ್ಣ ತನ್ನ ಚಕ್ರದಿಂದ ಅವನ ತಲೆಯ ತರಿದ ,
ದೇವತೆಗಳಿಂದಾಯಿತು ಆಗ ಹರ್ಷದ ಸಿಂಹನಾದ .
ಪ್ರಸೂನವರ್ಷಿಭಿಃ
ಸ್ತುತಶ್ಚತುರ್ಮ್ಮುಖಾದಿಭಿಃ ಪ್ರಭುಃ ।
ಸಸಾರ ತೌ ಹರಾನುಗೌ
ಪ್ರಭಕ್ಷಕೌ ಸ ಸಾತ್ತ್ವತಾಮ್ ॥೧೭.೨೫೬ ॥
ಬ್ರಹ್ಮಾದಿಗಳು ಕೃಷ್ಣನ ಸ್ತೋತ್ರ ಮಾಡುತ್ತಾ ಸುರಿಸುತ್ತಿರಲು
ಹೂಮಳೆಯನ್ನು ,
No comments:
Post a Comment
ಗೋ-ಕುಲ Go-Kula