ಅಥ ಪೃಷ್ಟೋ ದಕ್ಷಿಣಾರ್ತ್ಥಂ ದ್ರೋಣ ಆಹ ಕುಮಾರಕಾನ್ ।
ಬಧ್ವಾ ಪಾಞ್ಚಾಲರಾಜಾನಂ
ದತ್ತೇತ್ಯೂಚುಸ್ತಥೇತಿ ತೇ ॥೧೮.೫೮॥
ತೇ
ಧಾರ್ತ್ತರಾಷ್ಟ್ರಾಃ ಕರ್ಣ್ಣೇನ ಸಹಿತಾಃ ಪಾಣ್ಡವಾ
ಅಪಿ ।
ಯಯುರ್ದ್ದ್ರೋಣೇನ
ಸಹಿತಾಃ ಪಾಞ್ಚಾಲನಗರಂ ಪ್ರತಿ ॥೧೮.೫೯॥
ಆನಂತರ ಗುರುದಕ್ಷಿಣೆ ಏನು ಬೇಕೆಂದು ದ್ರೋಣರಲ್ಲಿ ಕೇಳಿದರು ಎಲ್ಲಾ
ಕುಮಾರರು ,
ಪಾಂಚಾಲರಾಜನಾದ ದ್ರುಪದನ ಕಟ್ಟಿ ತಂದೊಪ್ಪಿಸಿ ಅಂದರು ದ್ರೋಣಾಚಾರ್ಯರು
.
ಒಪ್ಪಿದ ಕರ್ಣಸಹಿತ ಕೌರವರು ದ್ರೋಣರ ಜೊತೆ ಪಾಂಡವರು ಪಾಂಚಾಲಕ್ಕೆ
ಹೊರಟರು.
ಅಥಾsಹ ಭೀಮಃ ಸಾಮರ್ತ್ಥ್ಯವಿವೇಕಾಭೀಪ್ಸಯಾ ಗುರುಮ್ ।
ಗರ್ವ ಏಷ ಕುಮಾರಾಣಾಮನಿವಾರ್ಯ್ಯೋ ದ್ವಿಜೋತ್ತಮ ।
ಗಚ್ಛನ್ತ್ವೇತೇsಗ್ರತೋ ನೈಷಾಂ ವಶಗೋ ದ್ರುಪದೋ ಭವೇತ್ ॥೧೮.೬೦॥
ನಿವೃತ್ತೇಷ್ವಕೃತಾರ್ತ್ಥೇಷು
ವಯಂ ಬಧ್ವಾ ರಿಪುಂ ತವ ।
ಆನಯಾಮ ನ ಸನ್ದೇಹ ಇತಿ
ತಸ್ಥೌ ಸಸೋದರಃ ॥೧೮.೬೧॥
ನಂತರ ಗುರುದ್ರೋಣರಲ್ಲಿ ತಮ್ತಮ್ಮ ಸಾಮರ್ಥ್ಯ ತಿಳಿಸುವ ದೃಷ್ಟಿಯಿಂದ
ಭೀಮಸೇನ,
ವಿಪ್ರೋತ್ತಮಾ, ಈ ದುರ್ಯೋಧನಾದಿಗಳಿಗೆಲ್ಲಾ
ಸಹಿಸಲಾಗದ ಗರ್ವ-ದುರಭಿಮಾನ .
ಇವರು ಈಗ ಮುಂದೆ ಹೋದರೂ ದ್ರುಪದರಾಜನು ಆಗಲಾರ ಇವರ ವಶ ,
ಹಿಂದಿರುಗಲಿ ಸೋತು,ನಾವು ಕಾರ್ಯ ಸಾಧಿಸುತ್ತೇವೆ ಸಂದೇಹ ಬೇಡ ಲೇಶ .
ಹೀಗೆಂದು ನುಡಿದು ಸೋದರರೊಡಗೂಡಿ ಹಿಂದೆಯೇ ನಿಂತನವನು ಪ್ರಾಣೇಶ .
ಸದ್ರೋಣಕೇಷು
ಪಾರ್ತ್ಥೇಷು ಸ್ಥಿತೇಷ್ವನ್ಯೇ ಸಸೂತಜಾಃ ।
ಯಯುರಾತ್ತಪ್ರಹರಣಾಃ
ಪಾಞ್ಚಾಲಾನ್ತಃಪುರಂ ದ್ರುತಮ್ ॥೧೮.೬೨॥
ಈ ತೆರನಾಗಿ ದ್ರೋಣರಿಂದ ಕೂಡಿದ ಪಾಂಡವರು ಹಿಂದೆ ನಿಂತರು ,
No comments:
Post a Comment
ಗೋ-ಕುಲ Go-Kula