Monday 17 August 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 17: 281 -288

 ವಿಧೂಯ ಸೈನಿಕಾಂಶ್ಚ ಸಃ ಪ್ರಗೃಹ್ಯ ಚಾಪಮಾತತಮ್ ।

ಹರಿಂ ಜಗಾಮ ಚೋನ್ನದನ್ ಮಹಾಸ್ತ್ರಶಸ್ತ್ರವರ್ಷಣಃ ॥೧೭.೨೮೦॥

ಯಾದವ ಸೈನಿಕರೆಲ್ಲರ ಓಡಿಸಿದ ಡಿಭಕ ಆನಂತರ ತನ್ನ ಬಿಲ್ಲನ್ನು ಹಿಡಿದ ,

ಅರಚುತ್ತಾ ಭಾರೀ ಅಸ್ತ್ರ ಶಸ್ತ್ರಗಳೊಂದಿಗೆ ಶ್ರೀಕೃಷ್ಣನ ಮೇಲೇರಿ ಹೋದ .

 

ತಮಾಶು ಕೇಶವೋsರಿಹಾ ಸಮಸ್ತಸಾಧನೋಜ್ಝಿತಮ್ l

ಕ್ಷಣಾಚ್ಚಕಾರ ಸೋsಪ್ಯಗಾದ್ ವಿಸೃಜ್ಯ ತಂ ಹಲಾಯುಧಮ್ ॥೧೭.೨೮೧॥

ಶತ್ರುನಾಶಕನಾದ ಶ್ರೀಕೃಷ್ಣ ಕ್ಷಣದಲ್ಲೇ ಡಿಭಕನ ಮಾಡಿದ ಸಾಧನಹೀನ ,

ಆಗ ಡಿಭಕ ಶ್ರೀಕೃಷ್ಣನ ಬಿಟ್ಟುಕೊಟ್ಟು ತೆರಳಿದ ಅರಸಿ ಬಲರಾಮನನ್ನ .

 

ಹಲಾಯುಧೋ ನಿರಾಯುಧಂ ವಿಧಾಯ ಹಂಸಮೋಜಸಾ ।

ವಿಕೃಷ್ಟಚಾಪ ಆಗತಂ ದದರ್ಶ ತಸ್ಯ ಚಾನುಜಮ್ ॥೧೭.೨೮೨॥

ಆಗ ಬಲರಾಮ ತನ್ನ ಶಕ್ತಿಯಿಂದ ಹಂಸನ ಮಾಡುತ್ತಿದ್ದ ನಿರಾಯುಧ ,

ಹಂಸನ ತಮ್ಮನಾದ ಡಿಭಕನೂ ಬಲರಾಮನಿದ್ದಲ್ಲಿಗೆ ಸಾರಿಬಂದ .

 

ಸ ಹಂಸ ಆಶು ಕಾರ್ಮ್ಮುಕಂ ಪುನಃ ಪ್ರಗೃಹ್ಯ ತಂ ಬಲಮ್ ।

ಯದಾssಸಸಾದ ಕೇಶವೋ ನ್ಯವಾರಯತ್ ತಮೋಜಸಾ ॥೧೭.೨೮೩॥

ಹಂಸ ಬಿಲ್ಲ ಹಿಡಿದು ಬಲರಾಮನತ್ತ ಬಂದ ,

ಆಗ ಕೇಶವ ಬಲವಾಗಿ ಅವನ ತಡೆವನಾದ .

 

ಶಿನೇಃ  ಸುತಾತ್ಮಜೋsಪ್ಯಸೌ ವಿಹಾಯ ಹಂಸಕಾನುಜಮ್ ।

ರಥಾನ್ತರಂ ಸಮಾಸ್ಥಿತೋ ಜಗಾಮ ತಾತಮಸ್ಯ ಚ ॥೧೭.೨೮೪ ॥

ಆಗ , ಡಿಭಕನಿಂದ ರಥಹೀನನಾಗಿ ಹೋಗಿದ್ದ ಸಾತ್ಯಕಿ ಬಂದ ,

ಮತ್ತೊಂದು ರಥವ ಏರಿಕೊಂಡು ಬಂದು ಬ್ರಹ್ಮದತ್ತಗೆ ಎದುರಾದ .

 

ವಯೋಗತಃ ಪಿತಾ ತಯೋರ್ಯುಯೋಧ ತೇನ ವೃಷ್ಣಿನಾ ।

ಶರಂ ಚ ಕಣ್ಠಕೂಬರೇ ವ್ಯಸರ್ಜ್ಜಯತ್ ಸ ಸಾತ್ಯಕೇಃ ॥೧೭.೨೮೫ ॥

ಮುದುಕನಾದ ಬ್ರಹ್ಮದತ್ತ ಸಾತ್ಯಕಿಯೊಡನೆ ಹೋರಾಡಿದ,

ಸಾತ್ಯಕಿಯ ಕುತ್ತಿಗೆ ಹತ್ತಿರದ ಭಾಗಕ್ಕೆ ಬಾಣವನ್ನು ಎಸೆದ .

 

ಸ ಸಾತ್ಯಕಿರ್ದ್ದೃಢಾಹತೋ ಜಗಾಮ ಮೋಹಮಾಶು ಚ ।

ಸುಲಬ್ದಸಞ್ಜ್ಞ ಉತ್ಥಿತಃ ಸಮಾದದೇsರ್ದ್ಧಚನ್ದ್ರಕಮ್ ॥೧೭.೨೮೬॥

ಗಟ್ಟಿಯಾದ ಪೆಟ್ಟುತಿಂದ ಸಾತ್ಯಕಿ ತಕ್ಷಣ ಮೂರ್ಛೆ ಹೋದ ,

ಕೆಲಕಾಲಾನಂತರ ಎಚ್ಚೆತ್ತು ಅರ್ಧಚಂದ್ರಾಕಾರದ ಬಾಣ ತೆಗೆದ .

 

ಸ ತೇನ ತಚ್ಛಿರೋ ಬಲೀ ಚಕರ್ತ್ತ ಶುಕ್ಲಮೂರ್ದ್ಧಜಮ್ ।

ಯದಮ್ಬಯಾSಭಿಕಾಮಿತಂ ಪುರಾ ಪಪಾತ ತತ್  ಕ್ಷಿತೌ ॥೧೭.೨೮೭॥

ಸಾತ್ಯಕಿ ಬಾಣದಿಂದ ತೆಗೆದ  ಬಿಳಿಕೂದಲ ಸಾಲ್ವನ ಆ  ಶಿರವನ್ನೇ ,

ಹಿಂದೆ ಅಂಬೆಯಿಂದ ಪ್ರೀತಿಸಲ್ಪಟ್ಟವನ ತಲೆ ಕಚ್ಚಿತ್ತು ನೆಲವನ್ನೇ .

 

ನದಂಶ್ಚ ಸಾತ್ಯಕಿರ್ಹರೇರ್ಜ್ಜಗಾಮ ಪಾರ್ಶ್ವಮುದ್ಧತಃ ।

ಬಲೋsಪಿ ಹಂಸಕಾನುಜಂ ಯುಯೋಧ ಸೇನಯಾ ಯುತಮ್ ॥೧೭.೨೮೮॥

ಸಾತ್ಯಕಿ ಸಿಂಹನಾದಗೈಯುತ್ತಾ ಗೆಲುವಿoದ ಬೀಗುತ್ತಾ ,

ನಡೆದುಬಂದ ಪರಮಾತ್ಮ ಶ್ರೀಕೃಷ್ಣನು ಇರುವತ್ತ ,

ಬಲರಾಮನ ಯುದ್ಧವಿತ್ತು -ಸೇನಾಯುಕ್ತ ಡಿಭಕನತ್ತ .

No comments:

Post a Comment

ಗೋ-ಕುಲ Go-Kula