Monday 24 August 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 18: 01 - 10

                                                             ॥ ಓಂ ॥

ಯದಾ ರಾಮಾದವಾಪ್ತಾನಿ ದಿವ್ಯಾಸ್ತ್ರಾಣಿ ಪ್ರಪೇದಿರೇ ।

ದ್ರೋಣಾತ್ ಕುಮಾರಾಸ್ತೇಷ್ವಾಸೀತ್ ಸರ್ವೇಷ್ವಪ್ಯಧಿಕೋsರ್ಜ್ಜುನಃ ॥೧೮.೦೧॥

 ದ್ರೋಣಾಚಾರ್ಯ ನೀಡಿದರು ರಾಜಕುವರರಿಗೆಲ್ಲಾ ಪರಶುರಾಮರಿಂದ ಪಡೆದ ಅಸ್ತ್ರವಿದ್ಯೆ ,

ಅರ್ಜುನ ಮಾತ್ರ ಮಿಗಿಲೆನಿಸಿಕೊಂಡ ಆಗ ಅಸ್ತ್ರ ಪಡೆದೆಲ್ಲಾ ಕುರುಕುಲದ ರಾಜಕುವರರ ಮಧ್ಯೆ .

 

ನಿಜಪ್ರತಿಭಯಾ ಜಾನನ್ ಸರ್ವಾಸ್ತ್ರಾಣಿ ತತೋsಧಿಕಮ್ ।

ನಾಸ್ತ್ರಯುದ್ಧಂ ಕ್ವಚಿದ್ ಭೀಮೋ ಮನ್ಯತೇ ಧರ್ಮ್ಮಮಞ್ಜಸಾ ॥೧೮.೦೨॥

ತನ್ನ ಸ್ವಪ್ರತಿಭೆಯಿಂದಲೇ ಎಲ್ಲಾ ಅಸ್ತ್ರಗಳನ್ನೂ ಮಿಗಿಲಾದ್ದನ್ನೂ ತಿಳಿದ ಭೀಮಸೇನ ,

ಆದರೆ ಯಾವ ಪ್ರಸಂಗದಲ್ಲೂ ಅಸ್ತ್ರವಿದ್ಯೆಗೆ ಕೊಡಲಿಲ್ಲ ಅವನು ಆತ್ಯoತಿಕ ಧರ್ಮಸ್ಥಾನ .

 

ನಹಿ ಭಾಗವತೋ ಧರ್ಮ್ಮೋ ದೇವತಾಭ್ಯುಪಯಾಚನಮ್ ।

ಜ್ಞಾನಭಕ್ತೀ ಹರೇಸ್ತೃಪ್ತಿಂ ವಿನಾ ವಿಷ್ಣೋರಪಿ ಕ್ವಚಿತ್ ॥೧೮.೦೩॥

ಅಸ್ತ್ರ ಮಂತ್ರಗಳಿಂದ ದೇವತೆಗಳ ಬೇಡುವುದು ಅಲ್ಲ ಭಾಗವತ ಧರ್ಮ ,

ಜ್ಞಾನ ಭಕ್ತಿ ಪ್ರೀತಿ ಬಿಟ್ಟು ದೇವರಲ್ಲೇನೂ ಬೇಡಕೂಡದು ಎಂಬ ಮರ್ಮ .

 

ನಾsಕಾಙ್ಕ್ಷ್ಯಂ ಕಿಮುತಾನ್ಯೇಭ್ಯೋ ಹ್ಯಸ್ತ್ರಂ ಕಾಮ್ಯಫಲಪ್ರದಮ್ ।

ಶುದ್ಧೇ ಭಾಗವತೇ ಧರ್ಮ್ಮೇ ನಿರತೋ ಯದ್ ವೃಕೋದರಃ ॥೧೮.೦೪॥

ನ ಕಾಮ್ಯಕರ್ಮ್ಮಕೃತ್ ತಸ್ಮಾನ್ನಾಯಾಚದ್ ದೇವಮಾನುಷಾನ್ ।

ನ ಹರಿಶ್ಚಾರ್ತ್ಥಿತಸ್ತೇನ ಕದಾಚಿತ್ ಕಾಮಲಿಪ್ಸಯಾ ॥೧೮.೦೫॥

 

 

ದೇವರಿಂದಲೂ ಕಾಮ್ಯಫಲ ಬಯಸಬಾರದು ಎಂದು ಸಿದ್ಧಾಂತ ,

ಇನ್ನು ಉಳಿದವರಿಂದಲೂ ಬಯಸಬಾರದೆಂದೇ ಅದರ ಅರ್ಥ .

ಅಸ್ತ್ರಗಳಿಂದ ಆಗುವುದು ಕಾಮ್ಯಫಲ ಸಿದ್ಧಿ ,

ಶುದ್ಧಭಾಗವತ ಧರ್ಮದಲ್ಲೇ ಭೀಮನ ಬುದ್ಧಿ .

ಭೀಮಸೇನ ಸದಾ ಶುದ್ಧಭಾಗವತ ಧರ್ಮನಿರತ ,

ಎಂದೂ ಎಳಸಲಿಲ್ಲವನ ಮನ ಕಾಮ್ಯಕರ್ಮಗಳತ್ತ.

ದೇವತೆಗಳಲ್ಲಿ ಮನುಷ್ಯರಲ್ಲಿ ಎಂದೂ ಇರಲಿಲ್ಲ ಅವನ ಬೇಡಿಕೆ ,

ನಾರಾಯಣನಲ್ಲೂ ಎಂದೂ ಸಲ್ಲಿಸಲಿಲ್ಲ ಕಾಮಕ್ಕಾಗಿ ಕೋರಿಕೆ .

 

ಭಿಕ್ಷಾಮಟಂಶ್ಚ ಹುಙ್ಕಾರಾತ್ ಕರವದ್ ವೈಶ್ಯತೋsಗ್ರಹೀತ್ ।

ನಾನ್ಯದೇವಾ ನತಾಸ್ತೇನ ವಾಸುದೇವಾನ್ನ ಪೂಜಿತಾಃ ॥೧೮.೦೬॥

ಅವನ ಭಿಕ್ಷೆ ಕೂಡಾ ಹೂಂಕಾರದಿಂದಿರುತ್ತಿತ್ತು ವೈಶ್ಯನಿಂದ ರಾಜ ಸ್ವೀಕರಿಸುವಂತೆ ಕರ ,

ಭಗವಂತನೊಬ್ಬನ ಬಿಟ್ಟು ಬೇರಾರಿಗೂ ವಂದಿಸಿ ಪೂಜಿಸಿ ಜೋಡಿಸಲಿಲ್ಲವನು ಕರ .

 

ನ ಪ್ರತೀಪಂ ಹರೇಃ ಕ್ವಾಪಿ ಸ ಕರೋತಿ ಕಥಞ್ಚನ ।

ಅನುಪಸ್ಕರಿಣೋ ಯುದ್ಧೇ ನಾಭಿಯಾತಿ ಹ್ಯುಪಸ್ಕರೀ ॥೧೮.೦೭॥

ಪರಮಾತ್ಮನಿಗೆ ಎಂದೂ ಎಲ್ಲಿಯೂ ಯಾವಾಗಲೂ ಮಾಡಲಿಲ್ಲ ವಿರೋಧ ,

ಯುದ್ಢದಿ ಆಯುಧದಿ ದಾಳಿ ಮಾಡಲಿಲ್ಲ ಯಾರು ಆಗಿರುತ್ತಾರೋ ನಿರಾಯುಧ .

 

ನಾಪಯಾತಿ ಯುಧಃ ಕ್ವಾಪಿ ನ ಕ್ವಚಿಚ್ಛದ್ಮಾ ಚಾsಚರೇತ್ ।

ನೈವೋರ್ಧ್ವದೈಹಿಕಾನುಜ್ಞಾಮವೈಷ್ಣವಕೃತೇsಕರೋತ್ ॥೧೮.೦೮॥

ಯುದ್ಧದಲ್ಲಿ ಎಂದೂ ಮಾಡಲಿಲ್ಲ ತಿರುಗಿ ಓಟ ,

ತೋರಲಿಲ್ಲ ಎಲ್ಲೂ ಮೋಸದ ಯುದ್ಧದ ಆಟ .

ಮಾಡಲಿಲ್ಲ ಎಂದೂ ವಿಷ್ಣುದ್ವೇಷಿಗಳ ಸಂಸ್ಕಾರ ,

ಬೇರೆಯವರಿಗೂ ಕೊಡಲಿಲ್ಲ ಅದಕೆ ಪುರಸ್ಕಾರ .

 

ನ ಕರೋತಿ ಸ್ವಯಂ ನೈಷಾಂ ಪ್ರಿಯಮಪ್ಯಾಚರೇತ್ ಕ್ವಚಿತ್ ।

ಸಖ್ಯಂ ನಾವೈಷ್ಣವೈಶ್ಚಕ್ರೇ ಪ್ರತೀಪಂ ವೈಷ್ಣವೇ ನ ಚ ॥ ೧೮.೦೯॥

ಭೀಮ ಮಾಡಲಿಲ್ಲೆಂದೂ ವಿಷ್ಣುದ್ವೇಷಿಗಳ ಅಂತ್ಯಕರ್ಮ ,

ಅವರಿಗೆ ಪ್ರಿಯವಾದದ್ದೇನೂ ಮಾಡಲಿಲ್ಲ ಎಂಬ ಮರ್ಮ.

ವಿಷ್ಣುದ್ವೇಷಿಗಳೊಂದಿಗೆ ಎಂದೂ ಇಲ್ಲ ಗೆಳೆತನ ,

ವಿಷ್ಣುಭಕ್ತರಲ್ಲಿ ಎಂದೆಂದೂ ತೋರಲಿಲ್ಲ ಹಗೆತನ .

 

ಪರೋಕ್ಷೇsಪಿ ಹರೇರ್ನ್ನಿನ್ದಾಕೃತೋ ಜಿಹ್ವಾಂ ಛಿನತ್ತಿ ಚ ।

ಪ್ರತೀಪಕಾರಿಣೋ ಹನ್ತಿ ವಿಷ್ಣೋರ್ವೈನಾನಜೀಘನತ್॥೧೮.೧೦॥

ಹಿಂದೆಯೂ ಭಗವದ್ ನಿಂದನೆ ಮಾಡಿದವರ ನಾಲಿಗೆ ಸೀಳುತ್ತಿದ್ದ ,

ವಿಷ್ಣುವಿರೋಧ ಮಾಡಿದವರ ಭೀಮ ತಾನೇ ಸಂಹಾರ ಮಾಡುತ್ತಿದ್ದ .

No comments:

Post a Comment

ಗೋ-ಕುಲ Go-Kula