Wednesday 18 April 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 5: 46 - 51



ದೇಹೇsಪಿ ಯತ್ರ ಪವನೋsತ್ರ ಹರಿರ್ಯ್ಯತೋsಸೌ ತತ್ರೈವ ವಾಯುರಿತಿ ವೇದವಚಃ ಪ್ರಸಿದ್ಧಮ್ ।

 ‘ಕಸ್ಮಿನ್ ನ್ವಹಂ’ ತ್ವಿತಿ  ತಥೈವ ಹಿ ಸೋsವತಾರೇ ತಸ್ಮಾತ್ ಸ ಮಾರುತಿಕೃತೇ ರವಿಜಂ ರರಕ್ಷ 
॥೫.೪೬॥

ಎಲ್ಲಿ ಮುಖ್ಯಪ್ರಾಣ ಅಲ್ಲಿ ನಾರಾಯಣ,
ಎಲ್ಲಿ ನಾರಾಯಣ ಅಲ್ಲಿ ಮುಖ್ಯಪ್ರಾಣ.
ಇದು ಪ್ರಸಿದ್ಧವಾದ ವೇದ ವಚನ,
ಅವತಾರದಲ್ಲೂ ಅದರ ಪ್ರದರ್ಶನ.
ಹನುಮಗಾಗಿ ರಾಮನಿಂದ ಕಾಪಾಡಲ್ಪಟ್ಟ ಸುಗ್ರೀವ,
ಸಾಬೀತಾದ ಪ್ರಾಣ ನಾರಾಯಣರ ಅವಿನಾಭಾವ.

ಏವಂ ಸ ಕೃಷ್ಣತನುರರ್ಜ್ಜುನಮಪ್ಯರಕ್ಷದ್ ಭೀಮಾರ್ಥಮೇವ ತದರಿಂ ರವಿಜಂ ನಿಹತ್ಯ ।
ಪೂರ್ವಂ ಹಿ ಮಾರುತಿಮವಾಪ ರವೇಃ ಸುತೋsಯಂ ತೇನಾಸ್ಯ ವಾಲಿನಮಹನ್ ರಘುಪಃ ಪ್ರತೀಪಮ್॥೫.೪೭॥

ಕೃಷ್ಣಾವತಾರದಲ್ಲಿ ಅರ್ಜುನ ಭೀಮಾಭಿರಕ್ಷಿತ,
ಹಾಗೆಂದೇ ಕೃಷ್ಣಾನುಗ್ರಹದಿಂದ ಸದಾ ಸುರಕ್ಷಿತ.
ಭೀಮ ದ್ವೇಷಿಯಾಗಿದ್ದ ಅವ ಕರ್ಣ,
ಕಳೆದುಕೊಳ್ಳಬೇಕಾಯಿತು ತನ್ನ ಪ್ರಾಣ.
ಸುಗ್ರೀವ ಹನುಮಂತನ ಆಶ್ರಯಿಸಿದ ಕಾರಣ,
ರಾಮ ರಕ್ಷಿಸಿ ಅವನ ಹನುಮತ್ಯಕ್ತ ವಾಲಿಗಿತ್ತ ಮರಣ.

ಏವಂ ಸುರಾಶ್ಚ ಪವನಸ್ಯ ವಶೇ ಯತೋSತಃ ಸುಗ್ರೀವಮತ್ರ ತು ಪರತ್ರ ಚ ಶಕ್ರಸೂನುಮ್ ।
ಸರ್ವೇ ಶ್ರಿತಾ ಹನುಮತಸ್ತದನುಗ್ರಹಾಯ ತತ್ರಾಗಮದ್ ರಘುಪತಿಃ ಸಹ ಲಕ್ಷ್ಮಣೇನ ॥೫.೪೮॥

ದೇವತೆಗಳೆಲ್ಲಾ ಎಂದೂ ಮುಖ್ಯಪ್ರಾಣನ ಅಧೀನ,
ಅಂತೇ ಪ್ರಾಣನಾಶ್ರಯಿಸಿದ ಸುಗ್ರೀವನ ಸ್ವಾಧೀನ.
ಕೃಷ್ಣಾವತಾರದಲ್ಲಿ ಹರಿಗೆ ಬಲು ಪ್ರಿಯ ಭೀಮಾರ್ಜುನ,
ದೇವತೆಗಳೆಲ್ಲಾ ಇತ್ತಿದ್ದು ಅರ್ಜುನಗೇ ಸದಾ ಸಮ್ಮಾನ.
ಇದು ಪ್ರಾಣ ನಾರಾಯಣರ ಎಂದೆಂದೂ ಬೇರಾಗದ ಸಂಬಂಧ,
ಪ್ರಿಯ ಮಗನ ಅನುಗ್ರಹಿಸಲೆಂದೇ ಋಷ್ಯಮೂಕಕೆ ರಾಮ ಬಂದ.

ಯತ್ಪಾದಪಙ್ಕಜರಜಃ ಶಿರಸಾ ಬಿಭರ್ತಿ ಶ್ರೀರಬ್ಜಜಶ್ಚ ಗಿರಿಶಃ ಸಹ ಲೋಕಪಾಲೈಃ ।
ಸರ್ವೇಶ್ವರಸ್ಯ ಪರಮಸ್ಯ ಹಿ ಸರ್ವಶಕ್ತೇಃ ಕಿಂ ತಸ್ಯ ಶತ್ರುಹನನೇ ಕಪಯಃ ಸಹಾಯಾಃ 
॥೫.೪೯॥

ರಮಾ ಬ್ರಹ್ಮ ರುದ್ರ ಲೋಕಪಾಲ ಮೊದಲಾದ ದೇವತೆಗಳು,
ಪರಮಾದರ ಭಕ್ತಿಯಿಂದ ಧರಿಸುವರು ಶ್ರಿಹರಿಯ  ಪಾದಧೂಳು.
ಅಂಥ ಸರ್ವಶಕ್ತ ಸರ್ವೇಶ್ವರ ಸರ್ವೋತ್ತಮಗೆ ಬೇಕಿತ್ತೆ ಕಪಿಗಳ ನೆರೆವು,
ಹಾಗಲ್ಲ ,ಭಗವತ್ ಕಾರ್ಯದಲ್ಲಿ ಹರಿಸಬೇಕಿತ್ತವರಿಗೆ ಅನುಗ್ರಹದ ಹರಿವು.

ಸಮಾಗತೇ ತು ರಾಘವೇ ಪ್ಲವಙ್ಗಮಾಃ ಸಸೂರ್ಯ್ಯಜಾಃ ।
ವಿಪುಪ್ಲವುರ್ಭಯಾರ್ದಿತಾ ನ್ಯವಾರಯಚ್ಚ ಮಾರುತಿಃ ॥೫.೫೦॥

ಆಗಮಿಸುತ್ತಿದ್ದಂತೆ ಶ್ರೀರಾಮಚಂದ್ರನ ಸವಾರಿ,
ಭಯಭೀತ ಕಪಿಗಳೆಲ್ಲಾ ಹೊರಟವು ದೂರ ಹಾರಿ.
ರಾಮನ ಹಿರಿಮೆ ಮಹಿಮೆ ಅರಿತವನವನು ಹನುಮ,
ತಡೆದ ಕಪಿಗಳನ್ನೆಲ್ಲಾ ತಿಳಿಸುತ್ತಾ ಬಂದವನು ಶ್ರೀರಾಮ.

ಸಂಸ್ಥಾಪ್ಯಾsಶು ಹರೀನ್ದ್ರಾನ್ ಜಾನನ್ ವಿಷ್ಣೋರ್ಗುಣಾನನನ್ತಾನ್ ಸಃ ।
ಸಾಕ್ಷಾದ್ ಬ್ರಹ್ಮಪಿತಾsಸಾವಿತ್ಯೇನೇನಾಸ್ಯ ಪಾದಯೋಃ ಪೇತೇ ॥೫.೫೧॥

ನಾರಾಯಣನ ಅನಂತ ಮಹಿಮೆ ಅರಿತ ಮುಖ್ಯಪ್ರಾಣ,
ಸಂತೈಸಿ ತಿಳಿಸಿದ-ಕಪಿಗಳಿಗೆ ತುಂಬಿದ ಧೈರ್ಯ ತ್ರಾಣ.
ತನ್ನಲ್ಲಿತ್ತು ಸೃಷ್ಟಿಕರ್ತ ಬ್ರಹ್ಮನ ಪಿತ ಬಂದನೆಂಬ ಜ್ಞಾನ,
ರಾಮಪಾದಕ್ಕೆರಗುತ್ತ ಹನುಮ ಮಾಡಿದ ಸಮ್ಮಾನ.

ಇತಿ ಶ್ರೀಮದಾನನ್ದತೀರ್ಥಭಗವತ್ಪಾದವಿರಚಿತೇ ಶ್ರೀಮಹಾಭಾರತತಾತ್ಪರ್ಯನಿರ್ಣಯೇ ರಾಮಚರಿತೇ ಹನೂಮದ್ದರ್ಶನಂ ನಾಮ ಪಞ್ಚಮೋsಧ್ಯಾಯಃ ॥

ಇಲ್ಲಿಗೆ ಶ್ರೀಮದಾನಂದತೀರ್ಥಭಗವತ್ಪಾದರಿಂದ,
ಶ್ರೀಮಹಾಭಾರತತಾತ್ಪರ್ಯನಿರ್ಣಯದ ವಾದ,
ರಾಮಚರಿತೆ ಹನುಮದರ್ಶನ ಹೆಸರ ಐದನೇ ಅಧ್ಯಾಯ,

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 5: 44 - 45


ದೃಷ್ಟ್ವಾ ತಮೇವ ಶಬರೀ ಪರಮಂ ಹರಿಂ ಚ ಜ್ಞಾತ್ವಾವಿವೇಶ ದಹನಂ ಪುರತೋsಸ್ಯ ತಸ್ಯೈ ।
ಪ್ರಾದಾತ್ ಸ್ವಲೋಕಮಿಮಮೇವ ಹಿ ಸಾ ಪ್ರತೀಕ್ಷ್ಯ ಪೂರ್ವಂ ಮತಙ್ಗವಚನೇನ ವನೇsತ್ರಸಾsಭೂತ್ ॥೫.೪೪॥

ಶಬರಿ ದೃಢವಾಗಿ ನಂಬಿದ್ದಳು ಶ್ರೀರಾಮನೇ ಹರಿ ಸರ್ವೇಶ,
ಅವನಿಗಾಗಿ ಕಾದವಳು ಅವನೆದುರೇ ಮಾಡಿದಳು ಅಗ್ನಿಪ್ರವೇಶ.
ರಾಮ ಅನುಗ್ರಹಿಸಿ ಅವಳಿಗಿತ್ತ ತನ್ನ ಅಮೃತ ಲೋಕವಾಸ,
ರಾಮನ ನಿರೀಕ್ಷೆಯಲಿ ನಿರ್ಭಯವಾಗಿತ್ತವಳ ಮತಂಗವನ ವಾಸ.

ಶಾಪಾತ್ ವರಾಪ್ಸರಸಮೇವ ಹಿ ತಾಂ ವಿಮುಚ್ಯ ಶಚ್ಯಾ ಕೃತಾತ್ ಪತಿಪುರಸ್ತ್ವತಿದರ್ಪ್ಪಹೇತೋಃ ।
ಗತ್ವಾ ದದರ್ಶ ಪವನಾತ್ಮಜಮೃಶ್ಯಮೂಕೇ ಸ ಹ್ಯೇಕ ಏನಮವಗಚ್ಛತಿ ಸಮ್ಯಗೀಶಮ್ 
॥೫.೪೫॥

ಅಪ್ಸರೆಯಾಗಿದ್ದವಳು ಸೌಂದರ್ಯದ ಹಮ್ಮು  ತೋರಿದ ಪಾಪ,
ಇಂದ್ರಪತ್ನಿ ಶಚಿಯಿಂದ ಬೇಡತಿಯಾಗೆಂದಿತ್ತವಳಿಗೆ ಶಾಪ.
ಶ್ರೀರಾಮನಿಂದ ಬೇಡತಿ ಶಬರಿಗೆ ವಿಶಾಪ,
ಋಷ್ಯಮೂಕದಿ ಹನುಮನ ಕಂಡ ಭೂಪ.
ರಾಮನ ಸರಿಯಾಗಿ ತಿಳಿದವನು ಹನುಮ,
ಅವನ ಅನುಗ್ರಹಿಸಲೆಂದೇ ಬಂದ ಶ್ರೀರಾಮ.

Saturday 7 April 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 5: 39 -43

ಮಾರ್ಗ್ಗೆ ವ್ರಜನ್ತಮಭಿಯಾಯ ತತೋ ಹನೂಮಾನ್ ಸಂವಾರಿತೋ ರವಿಸುತೇನ ಚ ಜಾನಮಾನಃ ।
ದೈವಂ ತು ಕಾರ್ಯ್ಯಮಥ ಕೀರ್ತ್ತಿಮಭೀಪ್ಸಮಾನೋ ರಾಮಸ್ಯ ನೈನಮಹನದ್ ವಚನಾದ್ಧರೇಶ್ಚ ॥೫.೩೯॥
ಲಂಕಾಭಿಮುಖವಾಗಿ ಸೀತೆಯೊಂದಿಗೆ ರಾವಣನ ನಡೆ,
ಮಾರ್ಗದಿ ಮುನ್ನುಗ್ಗಿದ ಹನುಮಗೆ ಸುಗ್ರೀವನಿಂದ ತಡೆ.
ಸಂಕಲ್ಪಿಸಿಯಾಗಿದೆ ಆಗಲೇ ದೇವತಾಕಾರ್ಯ,
ಅದ ಗೌರವಿಸಿ ನಿಲ್ಲುವ ರಾಮಬಂಟನ ಚರ್ಯ.
ರಾಮಗೇ ಸಲ್ಲಬೇಕಿದೆ ರಾವಣ ಸಂಹಾರದ ಕೀರ್ತಿ,
ಮಿತಿ ಅರಿತು ತೋರಿದ ವಾಯುಪುತ್ರನ ಲೋಕನೀತಿ.

ಪ್ರಾಪ್ಯೈವ ರಾಕ್ಷಸ ಉತಾsತ್ಮಪುರೀಂ ಸ ತತ್ರ ಸೀತಾಕೃತಿಂ ಪ್ರತಿನಿಧಾಯ ರರಕ್ಷ ಚಾಥ ।
ರಾಮೋsಪಿ ತತ್ತು ವಿನಿಹತ್ಯ ಸುದುಷ್ಟರಕ್ಷಃ ಪ್ರಾಪ್ಯಾsಶ್ರಮಂ ಸ್ವದಯಿತಾಂ ನಹಿ ಪಶ್ಯತೀವ 
॥೫.೪೦॥

ರಾವಣ ಸೀತಾಕೃತಿಯೊಂದಿಗೆ ಸೇರಿದ ಲಂಕಾಪಟ್ಟಣ,
ನೇಮಿಸಿದ ಕಾವಲುಪಡೆಯ ಮಾಡಲವಳ ರಕ್ಷಣ.
ಇತ್ತ ರಾಮ ಮುಗಿಸಿ ಬಂದ ದುರುಳ ಮಾರೀಚನ ಸಂಹಾರ,
ಆಶ್ರಮದಿ ಸೀತೆಯಿರದಾಗ ತೋರಿಸಿಕೊಂಡ ದುಃಖ ಅಪಾರ.

ಅನ್ವೇಷಮಾಣ ಇವ ತಂ ಚ ದದರ್ಶ ಗೃಧ್ರಂ ಸೀತಾರಿರಕ್ಷಿಷುಮಥೋ ರಿಪುಣಾ ವಿಶಸ್ತಮ್ ।
ಮನ್ದಾತ್ಮಚೇಷ್ಟಮಮುನೋಕ್ತಮರೇಶ್ಚ ಕರ್ಮ್ಮ  ಶ್ರುತ್ವಾ ಮೃತಂ ತಮದಹತ್ ಸ್ವಗತಿಂ ತಥಾsದಾತ್ ॥೫.೪೧॥

ಸೀತಾವಿಯೋಗದಿಂದ ದುಃಖತಪ್ತನಾದಂತೆ ರಾಮನ ಸಂಚಾರ,
ಹುಡುಕುವಾಗ ಮರಣಾವಸ್ತೆಯಲ್ಲಿದ್ದ ಜಟಾಯು ಕಂಡ ರಘುವೀರ.
ಜಟಾಯುವಿನಿಂದ ರಾಮ ತಿಳಿದಂತೆ ರಾವಣನ ದುರುಳ ವ್ಯಾಪಾರ,
ಅವಗೆ ಸದ್ಗತಿಯಿತ್ತು ರಾಮ ಮಾಡಿದ ಜಟಾಯು  ಅಂತ್ಯಸಂಸ್ಕಾರ.



ಅನ್ಯತ್ರ ಚೈವ ವಿಚರನ್ ಸಹಿತೋsನುಜೇನ ಪ್ರಾಪ್ತಃ ಕರೌ ಸ ಸಹಸಾsಥ ಕವನ್ಧನಾಮ್ನಃ ।
ಧಾತುರ್ವರಾದಖಿಲಜಾಯಿನ ಉಜ್ಝಿತಸ್ಯ ಮೃತ್ಯೋಶ್ಚ ವಜ್ರಪತನಾದತಿಕುಞ್ಚಿತಸ್ಯ 
॥೫.೪೨॥

ಲಕ್ಷ್ಮಣನೊಡನೆ ರಾಮನ ಸೀತೆಯ ಹುಡುಕುವಾಟ ದುಃಖದಿಂದ,
ಬ್ರಹ್ಮವರದಿಂದ ಅವಧ್ಯನಾದ ರಕ್ಕಸ ಎದುರಾದನವ ಕಬಂಧ.
ವಜ್ರಾಪಾತದಿಂದ ರುಂಡ ಕಾಲುಗಳು ಹೊಟ್ಟೆ ಸೇರಿ ಪ್ರಧಾನವಾದ ಬಾಹುಗಳು,
ದೈವಯೋಜನೆಯಂತೆ ರಾಮಲಕ್ಷ್ಮಣರಾದರು ಅವನ  ತೋಳ ಸೆರೆಯಾಳು.

ಛಿತ್ವಾsಸ್ಯ ಬಾಹುಯುಗಳಂ ಸಹಿತೋsನುಜೇನ ತಂ ಪೂರ್ವವತ್ ಪ್ರತಿವಿಧಾಯ ಸುರೇನ್ದ್ರಭೃತ್ಯಮ್ ।
ನಾಮ್ನಾ ದನುಂ ತ್ರಿಜಟಯೈವ ಪುರಾsಭಿಜಾತಂ ಗನ್ಧರ್ವಮಾಶು ಚ ತತೋsಪಿ ತದರ್ಚ್ಚಿತೋsಗಾತ್ ॥೫.೪೩॥

ತಮ್ಮನೊಡಗೂಡಿ ರಾಮ ಮಾಡಿದ ಅವನ ತೋಳುಗಳ ಛೇದ,
ರಕ್ಕಸದೇಹ ದಹಿಸಿ ಮೊದಲಂತೆ "ದನು" ಗಂಧರ್ವನ ಮಾಡಿದ.
ಸ್ವೀಕರಿಸಿದ ದನು ಗಂಧರ್ವನ ಪೂಜಾ ಸತ್ಕಾರ,
ಅನುಗ್ರಹಿಸಿ ಅವನ ಹೊರಟ ಶ್ರೀರಾಮಚಂದ್ರ.
[Contributed by Shri Govind Magal]

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 5: 35 -38


ಯಾಂಯಾಂ ಪರೇಶ ಉರುಧೈವ ಕರೋತಿ ಲೀಲಾಂ ತಾನ್ತಾಂ  ಕರೋತ್ಯನು ತಥೈವ ರಮಾsಪಿ ದೇವೀ ।
 ನೈತಾವತಾsಸ್ಯ  ಪರಮಸ್ಯ ತಥಾ ರಮಾಯಾ ದೋಷೋsಣುರಪ್ಯನುವಿಚಿನ್ತ್ಯ ಉರುಪ್ರಭೂ ಯತ್ ॥೫.೩೫॥
ನಾರಾಯಣನು ಹೇಗ್ಹೇಗೆ ಆಡುತ್ತಾನೋ ಬಗೆ ಬಗೆಯ ಆಟ,
ಲಕ್ಷ್ಮಿಯೂ ಅನುಸರಿಸುತ್ತಾಳೆ ಪತಿಯ ವಿಡಂಬನಾ ನೋಟ.
ಜಗದ್ ಮಾತಾ ಪಿತರಲ್ಲಿ ಎಣಿಸಲೇಬಾರದು ದೋಷ,
ಲೋಕ ಕಲ್ಯಾಣಕ್ಕಾಗಿ ತಂದೆ ತಾಯಿಯರ ವಿವಿಧ ವೇಷ.

ಕ್ವಾಜ್ಞಾನಮಾಪದಪಿ ಮನ್ದಕಟಾಕ್ಷಮಾತ್ರಸರ್ಗ್ಗಸ್ಥಿತಿಪ್ರಳಯಸಂಸೃತಿಮೋಕ್ಷಹೇತೋಃ ।
ದೇವ್ಯಾ ಹರೇಃ ಕಿಮು ವಿಡಮ್ಬನಮಾತ್ರಮೇತದ್ ವಿಕ್ರೀಡತೋಃ ಸುರನರಾದಿವದೇವ ತಸ್ಮಾತ್॥೫.೩೬॥
ಕೇವಲ ಕುಡಿನೋಟ ಮಾತ್ರದಿಂದ ಸೃಷ್ಟಿ ಸ್ಥಿತಿ ಲಯ ಮೊದಲಾದ ಅಷ್ಟ ಕಾರ್ಯ ,
ನಿಭಾಯಿಸುವ ತಾಯಿ ಲಕ್ಷ್ಮೀದೇವಿಗೆಲ್ಲಿದೆ ಅಜ್ಞಾನ ಆಪತ್ತುಗಳ ಸ್ಪರ್ಶ ವಿಕಾರ .
ಶ್ರೀದೇವಿಗೇ ಅದಿಲ್ಲದಿರುವಾಗ ಇನ್ನು ನಾರಾಯಣಗೆಲ್ಲಿಯ ಲೇಪ ,
ಅವತಾರದಲ್ಲಿ ದುರ್ಜನಮೋಹನಕ್ಕೆ ಅವರಾಡುವ ನಾಟಕದ ರೂಪ .
ದೇವ್ಯಾಃ ಸಮೀಪಮಥ ರಾವಣ ಆಸಸಾದ್ ಸಾsದೃಶ್ಯತಾಮಗಮದಪ್ಯವಿಷಹ್ಯಶಕ್ತಿಃ ।
ಸೃಷ್ಟ್ವಾssತ್ಮನಃ ಪ್ರತಿಕೃತಿಂ ಪ್ರಯಯೌ ಚ ಶೀಘ್ರಂ  ಕೈಲಾಸಮರ್ಚ್ಚಿತಪದಾ  ನ್ಯವಸಚ್ಛಿವಾಭ್ಯಾಮ್॥೫.೩೭॥
ಆನಂತರ ರಾವಣ ಸೀತೆಯ ಬಳಿಗೆ ಧಾವಿಸುವ ದೃಶ್ಯ,
ಸೀತಾಕೃತಿಯ ನಿರ್ಮಿಸಿ ಸೀತೆಯಾದಳು ಅಲ್ಲಿಂದ ಅದೃಶ್ಯ.
ರಾವಣನ ಹೊಸಕಲು ಲಕ್ಷ್ಮಿಗಿರಲಿಲ್ಲವೆಂದಲ್ಲ ಶಕ್ತಿ,
ಅವತಾರದಲ್ಲಿ ಲೋಕವ್ಯವಹಾರ ತೋರೋ ಯುಕ್ತಿ.
ಅಲ್ಲಿಂದ ಸೀತಾಮಾತೆ ಸೇರಿಕೊಂಡಳು ಕೈಲಾಸ,
ಶಿವ ಉಮೆಯರ ಸೇವೆ ಸ್ವೀಕರಿಸುತ್ತಲ್ಲವಳ ವಾಸ.

ತಸ್ಯಾಸ್ತು ತಾಂ ಪ್ರತಿಕೃತಿಂ ಪ್ರವಿವೇಶ ಶಕ್ರೋ ದೇವ್ಯಾಶ್ಚ ಸನ್ನಿಧಿಯುತಾಂ ವ್ಯವಹಾರಸಿದ್ಧ್ಯೈ ।
ಆದಾಯ ತಾಮಥ ಯಯೌ ರಜನೀಚರೇನ್ದ್ರೋ ಹತ್ವಾ ಜಟಾಯುಷಮುರುಶ್ರಮತೋ ನಿರುದ್ಧಃ॥೫.೩೮॥
ಸೀತಾಕೃತಿಯಲ್ಲಿ ವ್ಯವಹಾರಸಿದ್ಧಿಗಾಗಿ ಇಂದ್ರನ ಪ್ರವೇಶ,
ದೇವೇಂದ್ರ ಶರೀರದಲ್ಲಿದ್ದುದರಿಂದ ಸೀತೆಯದೂ ಇತ್ತು ಆವೇಶ.
ಅಂಥಾ ಸೀತಾಕೃತಿಯೊಂದಿಗೆ ರಾವಣನ ಲಂಕಾ ಪಯಣ,
ಮಾರ್ಗದಲ್ಲಿ ತಡೆದ ಜಟಾಯುವಿಗೆ ರಾವಣ ಕೊಟ್ಟ ಮರಣ.


Thursday 5 April 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 5: 32 -34


ಸ ಪ್ರಾಪ್ಯ ಹೈಮಮೃಗತಾಂ ಬಹುರತ್ನಚಿತ್ರಃ  ಸೀತಾಸಮೀಪ ಉರುಧಾ ವಿಚಚಾರ ಶೀಘ್ರಮ್ ।
ನಿರ್ದೋಷನಿತ್ಯವರಸಂವಿದಪಿ ಸ್ಮ ದೇವೀ ರಕ್ಷೋವಧಾಯ ಜನಮೋಹಕೃತೇ ತಥಾsಹ 
॥೫.೩೨॥
ಮಾರೀಚ ಬಹುರತ್ನಖಚಿತ ಬಂಗಾರದ ಜಿಂಕೆಯಾದ,
ಸೀತೆಯ ಗಮನ ಸೆಳೆಯಲು ಬಳಿಯೇ ಓಡಾಡಿದ.
ನಿತ್ಯ ನಿರ್ದೋಷ ಜ್ಞಾನಸ್ವರೂಪಳಾದ ಲೋಕಮಾತೆ,
ದುಷ್ಟ ಮೋಹನ-ಸಂಹಾರಕ್ಕೆ ಹೀಗೆ ನುಡಿದಳು ಸೀತೆ.
ದೇವೇಮಮಾಶು ಪರಿಗೃಹ್ಯ ಚ ದೇಹಿ ಮೇ ತ್ವಂ ಕ್ರೀಡಾಮೃಗಂ ತ್ವಿತಿ ತಯೋದಿತ ಏವ ರಾಮಃ।
ಅನ್ವಕ್ ಸಸಾರ ಹ ಶರಾಸನಬಾಣಪಾಣಿರ್ಮ್ಮಾಯಾಮೃಗಂ ನಿಶಿಚರಂ ನಿಜಘಾನ ಜಾನನ್ 
॥೫.೩೩॥
ದೇವಾ, ಆಟವಾಡುವುದಕೆ ನಂಗೆ ಆ ಜಿಂಕೆ ಬೇಕು,
ನೀನು ಬೆನ್ನಟ್ಟಿ ಹೋಗಿ ಅದನ ಹಿಡಿದು ತಾ ಸಾಕು".
ಸರ್ವಜ್ಞನಾದ ರಾಮ ಅದರ ಬೆನ್ನಟ್ಟಿ ಹೋಗುವಿಕೆ,
ಕೊಂದದನ  ಮಾಡಿದ ಮುಂದಿನ ಕಾರ್ಯಕೆ ವೇದಿಕೆ.
ತೇನಾsಹತಃ ಶರವರೇಣ ಭೃಷಂ ಮಮಾರ ವಿಕ್ರುಶ್ಯ ಲಕ್ಷ್ಮಣಮುರುವ್ಯಥಯಾ ಸ ಪಾಪಃ ।
ಶ್ರುತ್ವೈವ ಲಕ್ಷ್ಮಣಮಚೂಚುದದುಗ್ರವಾಕ್ಯೈಃ ಸೋsಪ್ಯಾಪ ರಾಮಪಥಮೇವ ಸಚಾಪಬಾಣಃ 
॥೫.೩೪
ರಾಮಬಾಣದಿಂದ ಬಂತು ಮಾರೀಚಗೆ ಮರಣ,
ಕುಯುಕ್ತಿಯಿಂದ ಸಾಯುವಾಗ ಕೂಗಿದ ಹಾ ಲಕ್ಷ್ಮಣ.
ರಾಮನಿರುವಲ್ಲಿಗೆ ಹೋಗಲು ಲಕ್ಷ್ಮಣಗೆ ಸೀತೆಯ ಆದೇಶ,
ಧನುರ್ಧಾರಿಯಾಗಿ ಲಕ್ಷ್ಮಣ ಅನುಸರಿಸಿದ ತನ್ನ ಪಾತ್ರದ ವೇಷ.

Wednesday 4 April 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 5: 28 - 31


ದತ್ತೇsಭಯೇ ರಘುವರೇಣ ಮಾಹಾಮುನೀನಾಂ ದತ್ತೇ ಭಯೇ ಚ ರಜನೀಚರಮಣ್ಡಲಸ್ಯ ।
ರಕ್ಷಃಪತಿಃ ಸ್ವಸೃಮುಖಾದವಿಕಮ್ಪನಾಚ್ಚ ಶ್ರುತ್ವಾ ಬಲಂ ರಘುಪತೇಃ ಪರಮಾಪ ಚಿನ್ತಾಮ್ 
॥೫.೨೮॥
ಶ್ರೀರಾಮನಿಂದ ಸಜ್ಜನ ಮುನಿಗಳಿಗೆ ಅಭಯ,
ಹಾಗೇ ಜನಕಂಟಕ ರಾಕ್ಷಸ ಸಮೂಹಕ್ಕೆ ಭಯ.
ಸುದ್ದಿ ಮುಟ್ಟಿಸಿದರು ರಾವಣಗೆ ಶೂರ್ಪಣಖಿ ಮತ್ತು ಅಕಂಪನ,
ಶ್ರೀರಾಮನ ಮಹಾಬಲದ ವಾರ್ತೆ ಹುಟ್ಟಿಸಿತವನಿಗೆ ಕಂಪನ.
ಸ ತ್ವಾಶು ಕಾರ್ಯ್ಯಮವಮೃಶ್ಯ ಜಗಾಮ ತೀರೇ ಕ್ಷೇತ್ರಂ ನದೀನದಪತೇಃ ಶ್ರವಣಂ ಧರಿತ್ರ್ಯಾಃ ।
ಮಾರೀಚಮತ್ರ ತಪಸಿ ಪ್ರತಿವರ್ತಮಾನಂ ಭೀತಂ ಶರಾದ್ ರಘುಪತೇರ್ನಿತರಾಂ ದದರ್ಶ
॥೫.೨೯॥
ವಾರ್ತೆ ಕೇಳಿದ ರಾವಣ ಮುಂದಿನ ಯೋಜನೆ ಮಾಡಿದ,
ವರುಣ ಸಾನ್ನಿಧ್ಯದ ಗೋಕರ್ಣ ಸಾಗರ ತೀರ ಸೇರಿದ.
ಅಲ್ಲಿದ್ದ ರಾಮಬಾಣದಿ ಭಯಗ್ರಸ್ತ ಮಾರೀಚ ತಪೋನಿರತ,
ರಾಮಬಾಣದ ರುಚಿ ಉಂಡವನ ಕಂಡ ಲಂಕೆಯ ದೊರೆಯಾತ.
ತೇನಾರ್ಥಿತಃ ಸಪದಿ ರಾಘವವಞ್ಚನಾರ್ಥೇ  ಮಾರೀಚ ಆಹ ಶರವೇಗಮಮುಷ್ಯ ಜಾನನ್ ।
ಶಕ್ಯೋ ನ ತೇ ರಘುವರೇಣ ಹಿ ವಿಗ್ರಹೋsತ್ರ  ಜಾನಾಮಿ ಸಂಸ್ಪರ್ ಶಮಸ್ಯ ಶರಸ್ಯ ಪೂರ್ವಮ್ ॥೫.೩೦॥
ರಾಮ ವಂಚನೆಗೆ ಮಾರೀಚನ  ಸಹಾಯ ಕೇಳಿದ ರಾವಣ,
ಮಾರೀಚ ಎಚ್ಚರಿಸಿದ ಅತಿ ಭಯಂಕರವದು ರಾಮ ಬಾಣ.
ರಾಮನೊಡನೆ ವೈರದಿಂದ ಸುಖವಿಲ್ಲ,
ಸಾಕ್ಷಿಯಾಗಿ ನೋವುಂಡ ನಾನಿದ್ದೇನಲ್ಲ.
ಇತ್ಯುಕ್ತವನ್ತಮಥ ರಾವಣ ಆಹ ಖಡ್ಗಂ ನಿಷ್ಕೃಷ್ಯ ಹನ್ಮಿ ಯದಿ ಮೇ ನ ಕರೋಷಿ ವಾಕ್ಯಮ್ ।
ತಚ್ಛುಶ್ರುವಾನ್ ಭಯಯುತೋsಥ ನಿಸರ್ಗ್ಗತಶ್ಚ ಪಾಪೋ ಜಗಾಮ ರಘುವರ್ಯ್ಯ ಸಕಾಶಮಾಶು ॥೫.೩೧॥
ಮಾರೀಚನ ಮಾತಿಗೆ ಕತ್ತಿ ಹಿರಿದ್ಹೇಳಿದ  ರಾವಣ,
ಎನ್ನ ಮಾತ ಕೇಳದಿದ್ದರೆ ತೆಗೆಯುವೆ ನಿನ್ನ ಪ್ರಾಣ.
ಭಯಗ್ರಸ್ತ ಮಾರೀಚ ಸ್ವಭಾವದಿಂದಲೂ ದುಷ್ಟ,
ಒಪ್ಪಿ ರಾಮನ ವಂಚಿಸಲು ಧಾವಂತದಿ ಹೊರಟ.

Tuesday 3 April 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 5: 22 - 27

ಪ್ರೀತಿಂ ವಿಧಿತ್ಸುರಗಮದ್ ಭವನಂ ನಿಜಸ್ಯ ಕುಮ್ಭೋದ್ಭವಸ್ಯ ಪರಮಾದರತೋsಮುನಾ ಚ ।
ಸಮ್ಪೂಜಿತೋ ಧನುರನೇನ ಗೃಹೀತಮಿನ್ದ್ರಾಚ್ಛಾರ್ಙ್ಗಂ ತದಾದಿಪುರುಷೋ ನಿಜಮಾಜಹಾರ॥೫.೨೨॥

ತನ್ನ ಭಕ್ತ ಅಗಸ್ತ್ಯರಿಗೆ ಉಂಟುಮಾಡಲು ಪ್ರೀತಿ,
ಶ್ರೀರಾಮ ಅವರ ಮನೆಗೆ ಕೊಡುತಾನೆ ತಾ ಭೇಟಿ.
ಅಗಸ್ತ್ಯರಿಂದ ಶ್ರೀರಾಮಗೆ ಪೂಜಾ ಸತ್ಕಾರ,
ಇಂದ್ರನಿಂದ ಬಂದ ಶಾರ್ಙ್ಗಧನುಸ್ಸಿನ ಸ್ವೀಕಾರ.


ಆತ್ಮಾರ್ತ್ಥಮೇವ ಹಿ ಪುರಾ ಹರಿಣಾ ಪ್ರದತ್ತಮಿನ್ದ್ರೇ ತದಿನ್ದ್ರ ಉತ ರಾಮಕರಾರ್ಥಮೇವ ।
ಪ್ರಾದಾದಗಸ್ತ್ಯಮುನಯೇ ತದವಾಪ್ಯ ರಾಮೋ ರಕ್ಷನ್ ಋಷೀನವಸದೇವ ಸ ದಣ್ಡಕೇಷು ॥೫.೨೩॥

ಹರಿಯಿಂದ ತನಗಾಗೇ ಶಾರ್ಙ್ಗವನ್ನು ಇಂದ್ರಗೆ ಕೊಡುವಿಕೆ,
ರಾಮನ ಸೇರಲೆಂದೇ ಇಂದ್ರನಿಂದ ಅಗಸ್ತ್ಯರಿಗೆ ಹಸ್ತಾಂತರಿಕೆ.
ಅಗಸ್ತ್ಯರಿಂದ ಶ್ರೀರಾಮ ಮಾಡಿದ ಧನುಸ್ಸು ಸ್ವೀಕಾರ,
ಋಷಿಗಳ ರಕ್ಷಿಸುತ್ತಾ ದಂಡಕದಲ್ಲಿ ಹೂಡಿದ ಬಿಡಾರ.

ಕಾಲೇ ತದೈವ ಖರದೂಷಣಯೋರ್ಬಲೇನ ರಕ್ಷಃ ಸ್ವಸಾ ಪತಿನಿಮಾರ್ಗಣತತ್ಪರಾssಸೀತ್ ।
ವ್ಯಾಪಾದಿತೇ ನಿಜಪತೌ ಹಿ ದಶಾನನೇನ ಪ್ರಾಮಾದಿಕೇನ ವಿಧಿನಾsಭಿಸಸಾರ ರಾಮಮ್ ॥೫.೨೪॥

ರಾವಣನ ಮರೆವಿನಿಂದಾಗಿತ್ತು ಶೂರ್ಪಣಖಿಯ ಗಂಡನ ಮರಣ,
ಗಂಡನ ಹುಡುಕುತ್ತಿದ್ದಳವಳು ಒಡಗೂಡಿ - ಖರದೂಷಣ.
ಸೆಳೆಯಿತು ಶೂರ್ಪಣಖಿಯ ಶ್ರೀರಾಮನ ಮೋಹಕ ರೂಪ,
ಅದೇ ಗುಂಗಿನಲ್ಲಿ ಬಂದಳಾ ರಾಕ್ಷಸಿ ರಾಮಚಂದ್ರನ ಸಮೀಪ.

ಸಾsನುಜ್ಞಯೈವ  ರಜನೀಚರಭರ್ತುರುಗ್ರಾ  ಭ್ರಾತೃದ್ವಯೇನ  ಸಹಿತಾ  ವನಮಾವಸನ್ತೀ ।
ರಾಮಂ ಸಮೇತ್ಯ ಭವ ಮೇ ಪತಿರಿತ್ಯವೋಚದ್ ಭಾನುಂ ಯಥಾ ತಮ ಉಪೇತ್ಯ ಸುಯೋಗಕಾಮಮ್ ॥೫.೨೫॥

ರಾವಣನಾದೇಶದಂತೆ ಶೂರ್ಪಣಖಿಯ ದಂಡಕದಲ್ಲಿ ವಾಸ,
ಸೋದರರಾದ ಖರದೂಷಣರದೂ ಅವಳೊಂದಿಗೇ ಸಹ ವಾಸ.
ಕಾರ್ಗತ್ತಲು ಹೋಗಿ ಸೂರ್ಯನ ಸಂಗ ಕೋರಿದಂತೆ,
ರಾಕ್ಷಸಿ ರಾಮನ ಮದುವೆಯಾಗೆಂದು ಕೇಳಿದಳಂತೆ.

ತಾಂ ತತ್ರ ಹಾಸ್ಯಕಥಯಾ ಜನಕಾಸುತಾಗ್ರೇ ಗಚ್ಛಾನುಜಂ ಮ ಇಹ ನೇತಿ ವಚಃ ಸ ಉಕ್ತ್ವಾ ।
ತೇನೈವ ದುಷ್ಟಚಿರಿತಾಂ ಹಿ ವಿಕರ್ಣ್ಣನಾಸಾಂ ಚಕ್ರೇ ಸಮಸ್ತರಜನೀಚರನಾಶಹೇತೋಃ 
॥೫.೨೬॥

ರಾಮ ಮಾಡಿದ ಸಮಸ್ತ ದುಷ್ಟ ರಾಕ್ಷಸರ ನಾಶಕ್ಕೆ ಸಂಕಲ್ಪ,
ಹಾಸ್ಯ ಮಾಡುತ್ತಲೇ ಕಳಿಸಿದ ಅವಳ ಲಕ್ಷ್ಮಣನ ಸಮೀಪ.
ನನಗೆ ನೀನು ಬೇಡ ನನ್ನ ತಮ್ಮನ ಬಳಿ ಹೋಗು,
ಲಕ್ಷ್ಮಣನ ಮೂಲಕ ಕತ್ತರಿಸಿದ ಅವಳ ಕಿವಿ ಮೂಗು.

ತತ್ ಪ್ರೇರಿತಾನ್ ಸಪದಿ ಭೀಮಬಲಾನ್ ಪ್ರಯಾತಾಂಸ್ತಸ್ಯಾಃ ಖರತ್ರಿಶಿರದೂಷಣಮುಖ್ಯಬನ್ಧೂನ್ ।
ಜಘ್ನೇ ಚತುರ್ದಶಸಹಸ್ರಮವಾರಣೀಯಕೋದಣ್ಡಪಾಣಿರಖಿಲಸ್ಯ ಸುಖಂ ವಿಧಾತುಮ್ 
॥೫.೨೭॥

ಗಾಯಗೊಂಡ ಶೂರ್ಪಣಖಿಯಿಂದ ರಕ್ಕಸರಿಗೆ ಪ್ರಚೋದನೆ,
ಎದಿರಾಯ್ತು ಖರ ತ್ರಿಶಿರ ದೂಷಣರ ಅಸಂಖ್ಯ ಬಲಿಷ್ಠ ಸೇನೆ.
ಎಲ್ಲ ಸಜ್ಜನರ ಸೌಖ್ಯ ಸಂತಸಕ್ಕೋಸ್ಕರ,
ಅಜೇಯ ರಾಮ ಮಾಡಿದ ದುಷ್ಟಸಂಹಾರ.
[Contributed by Shri Govind Magal]