Showing posts with label Bhava Guccha. Show all posts
Showing posts with label Bhava Guccha. Show all posts

Sunday, 20 March 2016

Bhava Guccha 51

ಭಾವ ಗುಚ್ಛ  by “ತ್ರಿವೇಣಿ ತನಯ

ಬುದ್ಢಾವತಾರ

ದೇವದ್ವೇಷಿಗಳಾದ ಅಸುರರಿಗೆ ತೋರಿದಮೋಹಾವತಾರ,
ದೇವತೆಗಳಿಗೆ "ಪ್ರಶಾಂತವಿದ್ಯೆ"ಯ ಕೊಟ್ಟ ಮಹಾ ಅವತಾರ,
ಕ್ಷಣಿಕ ಶೂನ್ಯ ನಶ್ವರ ಎಂದು "ಅಶಾಶ್ವತತೆ"ತೋರಿದವತಾರ,
ಪಾಷಂಡಿಗಳು ತಮಗೆ ತೋಚಿದಂತೆ ತಿಳಿದ ಮೋಹಾವತಾರ.

ಕಲ್ಕ್ಯಾವತಾರ

ಕುದುರೆ ಏರಿ ಖಡ್ಗ ಹಿಡಿದು ಕಾಣಿಸಿಕೊಂಡಾವತಾರ,
ಧರ್ಮಗ್ಲಾನಿಯಾಗಿ ಅಧರ್ಮ ಮೆರೆದಾಗ ಬಂದ ಅವತಾರ,
ದುರುಳರನು ದೈತ್ಯರನು ಕರ್ಮಭ್ರಷ್ಟರನು ತರಿದವತಾರ,
ದಾನವರ ತರಿದು ಮಾನವತ್ವ ಧರ್ಮ ಉಳಿಸಿದ ಕಲ್ಕ್ಯಾವತಾರ.

ಹತ್ತಾವತಾರದಲಿ ಮೆರೆದವನೇ,
ಹೊತ್ಹೊತ್ತಿಗೆ ಸುಜನರ ಕಾಯ್ವವನೇ,
ಕತ್ತಲೋಡಿಸಿ ಬೆಳಕ ತಂದವನೇ,
ಇತ್ತಲೂ ನೋಡೊಮ್ಮೆ ಭಕುತ ಬಾಂಧವನೇ.

ಮಂಗಲಮ್ ಜಯ ಮಂಗಲಮ್,
ಮಂಗಲಮ್ ಜಯ ಮಂಗಲಮ್,

ಮಂಗಲಮ್ ಮಧುಸೂದನಗೆ,
ಮಂಗಲಮ್ ಮಹಾ ಮಾಧವಗೆ,
ಮಂಗಲಮ್ ದಶಾವತಾರನಿಗೆ,
ಮಂಗಲಮ್ ಅನಂತಾವತಾರನಿಗೆ.

ಮಂಗಲಮ್ ಜಯ ಮಂಗಲಮ್,
ಮಂಗಲಮ್ ಜಯ ಮಂಗಲಮ್.

(Contributed by Shri Govind Magal)

Saturday, 19 March 2016

Bhava Guccha 50

ಭಾವ ಗುಚ್ಛ  by “ತ್ರಿವೇಣಿ ತನಯ

ಕೃಷ್ಣಾವತಾರ

ದುಷ್ಟಶಿಕ್ಷಣಕೆ ಶಿಷ್ಟರಕ್ಷಣಕೆ ದ್ವಾಪರಾಂತ್ಯದಲಿ ಕೃಷ್ಣಾವತಾರ,
ಕೂಸಿರುವಾಗಲೇ ಮಾಡಿದ ಅನೇಕ ರಾಕ್ಷಸರ ಸಂಹಾರ,
ಒಂದೊಂದು ನಡೆಯಲ್ಲೂ ನಿಲುಕಿಗೇ ಸಿಗದೆ ತೋರಿದ ವ್ಯಾಪಾರ,
ತಾಯಿಗೆ ಬಾಯಲ್ಲೇ ಬ್ರಹ್ಮಾಂಡ ತೋರಿದ ಭಾರೀ ಪೋರ.

ಇಂದ್ರನ ಜಂಭಮುರಿದು ಗೋವರ್ಧನ ಗಿರಿಯನೆತ್ತಿದ ಗೋವಿಂದ,
ಕೊಳಲನೂದುತ ಗೋವಕಾಯುತ ಗೋಪಿಯರಿಗಿತ್ತ ಆನಂದ,
ಹಿಂಸಿಸುವ ಕಂಸಾದಿಗಳ ಸವರಿ ಅನೇಕ ರಕ್ಕಸರ ತರಿದ ಮುರಾರಿ,
ಭಾರತ ಯುದ್ಧದಿ ಸಾರಥ್ಯವಹಿಸಿ ಅರ್ಜುನಗೆ ಗೀತೆ ಕೊಟ್ಟ ಶೌರಿ.

ಸಂಧಾನದಲಿ ಕದನದಲಿ ಸ್ನೇಹದಲಿ ಪ್ರೀತಿಯಲಿ ಎಲ್ಲಿಲ್ಲ ಅವನ ಮಹಿಮೆ,
ಜೀವನದ ಮುತ್ಸದ್ದಿತನವನು ಕ್ಷಣ ಕ್ಷಣಕೂ ತೋರಿದ ಗರಿಮೆ,
ಬದುಕು ಧರ್ಮಗಳ ದರ್ಶನ ಮಾಡಿಸಿದ ಮೊದಲ ಮನೋವಿಜ್ಞಾನಿ,
ತನಗೆ ತಾನೇ ಶಪಥತೊಟ್ಟ ಅವತರಿಸುವೆ ಧರ್ಮಕ್ಕಾದಾಗ ಗ್ಲಾನಿ.

ಭೀಮಾಭಿರಕ್ಷಿತ ಸೈನ್ಯವ ಪೋಷಿಸಿ ಜಯವ ತಂದಿತ್ತೆ,
ಮಧ್ವಾಭಿರಕ್ಷಿತ ಸೈನ್ಯದ ರಕ್ಷಣವೂ ನಿನ್ನದೇ ಮತ್ತೆ,
ನಿನ್ನ ನಂಬಿದವರ ನೀನೆಂದೂ ಕೈ ಬಿಟ್ಟಿಲ್ಲ ಕೃಷ್ಣ,
ಭಕುತ ಜನರ ಎದೆಯಲಿ ನೆಲೆಸಿ ಕಳೆ ಭವದ ಉಷ್ಣ .


(Contributed by Shri Govind Magal)

Friday, 18 March 2016

Bhava Guccha 49

ಭಾವ ಗುಚ್ಛ  by “ತ್ರಿವೇಣಿ ತನಯ


ಪರಶುರಾಮಾವತಾರ

ಮದೋನ್ಮತ್ತ ಕ್ಷತ್ರಿಯರ ಹಾವಳಿ ಮಿತಿ ಮೀರಿತ್ತು,
ಸಮತೋಲನ ಕಾಪಾಡಲು ಭಗವದವತಾರ ಬೇಕಿತ್ತು,
ಜಮದಗ್ನಿ ಪುತ್ರನಾಗಿ ಅವತರಿಸಿದ ಭಾರ್ಗವ ರಾಮ,
ಪರಶು ಹಿಡಿದು ಇಪ್ಪತ್ತೊಂದು ಬಾರಿ ದುಷ್ಟರ ಮಾಡಿದ ನಿರ್ನಾಮ.

ಲೋಕ ಕಂಟಕರ ವಧಿಸಿ ಭೂಭಾರ ಇಳಿಸಿದ ಸ್ವಾಮಿ,
ಬ್ರಾಹ್ಮಣರಿಗೆ ದಾನವಾಗಿ ಕೊಟ್ಟ ತನ್ನಧೀನವಾದ ಭೂಮಿ,
ನಮ್ಮೊಳಗಿಹ ದೈತ್ಯರ ಕತ್ತರಿಸು ಓ ಕೊಡಲಿ ರಾಮ,
ಮೊಮ್ಮಗನ ಎಮ್ಮಮನದಲಿರಿಸಿ ನುಡಿಸು ರಾಮನಾಮ.

ರಾಮಾವತಾರ

ಬ್ರಹ್ಮಾದಿ ದೇವತೆಗಳಿಂದ ರಾವಣ ಸಂಹಾರದ ಬೇಡಿಕೆ,
ಸರಿ ಸಿದ್ಧವಾಯಿತು ಶ್ರೀ ರಾಮಾವತಾರದ ವೇದಿಕೆ,
ದಶರಥ ಪುತ್ರನಾಗಿ ಇಕ್ಷ್ವಾಕುವಂಶದಿ ರಾಮನಾಗಿ ಬಂದ,
ಲಕ್ಷ್ಮಣ ,ಭರತ ,ಶತ್ರುಘ್ನರನೂ ತಮ್ಮಂದಿರಾಗಿ ತಂದ.

ಬಾಲ್ಯದಲ್ಲೇ ವಿಶ್ವಾಮಿತ್ರರ ಯಾಗ ರಕ್ಷಣೆಗೆ ನಡೆದ,
ತಾಟಕಿ ಸುಬಾಹು ಮಾರೀಚ ಮೊದಲಾದವರ ಬಡಿದ,
ಅಹಲ್ಯೆ ಉದ್ಧರಿಸಿ ಶಿವಬಿಲ್ಲ ಮುರಿದು ಸೀತೆಯ ಕೈ ಹಿಡಿದ,
ಕೈಕೇಯಿ ನೆಪ ಮಾಡಿ ಸತಿತಮ್ಮರೊಡಗೂಡಿ ಕಾಡಿಗೆ ನಡೆದ.

ಸಾವು ಸೆಳೆಯಿತು ರಾವಣನ ಸೀತೆಯ ರೂಪದಿಂದ,
ಸನ್ಯಾಸಿಯಾಗಿ ಬಂದು ಸೀತಾಕೃತಿ ಅಪಹರಿಸಿದ,
ನಂತರ ರಾಮಲಕ್ಷ್ಮಣರ ಸೀತೆಯ ಹುಡುಕುವಾಟ,
ಸಿದ್ಧವಾಯಿತು ಹನುಮ-ಸುಗ್ರೀವರ ಕಪಿಸೇನೆಯ ಕೂಟ.

ಶರಧಿಲಂಘಿಸಿ ಸೀತೆಯಕಂಡು ಹನುಮ ತಂದ ಸುವಾರ್ತೆ,
ಶ್ರೀರಾಮ ಹನುಮಾದಿಗಳ ಕೂಡಿ ಮುಗಿಸಿದ ರಾವಣಾದಿಗಳ ಮನೆವಾರ್ತೆ,
ಸುಜೀವಿ ವಿಭೀಷಣಗೆ ಪಟ್ಟಗಟ್ಟಿ ನಾಟಕ ಮುಗಿಸಿದ ರಾಮ,
ನಿನ್ನ ದಾಸರ ದಾಸರನೂ ಉದ್ಧರಿಸಿ ಸಲಹು ವೈಕುಂಠಧಾಮ.


(Contributed By Shri Govind Magal)

Thursday, 17 March 2016

Bhava Guccha 48

ಭಾವ ಗುಚ್ಛ  by “ತ್ರಿವೇಣಿ ತನಯ

ವಾಮನಾವತಾರ

ಅದಿತಿಯ ವ್ರತ ನೇಮ ಭಕುತಿಗೆ ಒಲಿದ,
ಅನುಗ್ರಹಿಸಲು ವಾಮನ ಮಗನಾಗಿ  ಬಂದ,
ಬಲೀಂದ್ರನ ಯಾಗಮಂಟಪಕೆ ನಡೆದ,
ಮೂರು ಪಾದ ಭೂಮಿ ಕೊಡು ಸಾಕೆಂದ.

ವ್ಯಾಪ್ತತ್ವದನುಸಂಧಾನದಲಿ ಬಲಿ ತನ್ನನರ್ಪಿಸಿಕೊಂಡ,
ತ್ರಿವಿಕ್ರಮನಾದ ಹರಿ ಬಲಿಯನುದ್ಧರಿಸಿ ಬಾಗಿಲ ಕಾಯ್ದ,
ಅರ್ಪಿಸಿಕೊಂಡವರನಪ್ಪುವ ನೀನೆಷ್ಟು ಕರುಣಾಳು,
ನಮಗೂ ನಿನ್ನ ಇರವಿನ ಅರಿವಿತ್ತು ಕೊಳೆ ಕಳೆಯ ಕೀಳು.

ನಮೋ ನಮೋ ಶ್ರೀ ವಾಮನ ರೂಪ,
ಮೂರ್ಪಾದ ಭೂಮಿ ಬೇಡಿದ ಭೂಪ,
ಒಪ್ಪಿಸಿಕೊಂಡವರನಪ್ಪುವ ಮಾಧವ,
ತಪ್ಪಿ ನಡೆವರ ಮಟ್ಟ ಹಾಕುವ ಭಾರ್ಗವ,
ಎಣಿಸಲಳವೇ ನಿನ್ನ ಒಂದೊಂದು ರೂಪ,
ಅನಂತ ರೂಪದಿ ಬಂದು ಕಳೆವೆ ಭಕ್ತರ ತಾಪ,
ಒಪ್ಪಿದೆ "ಸಮ"ನಿನ್ನ ಕಾಯಿದೆ ಕಾನೂನು,
ಪಾಳಿ ನಿಂತವರ ಗತಿ ಸುಳಿವು ನೀಡೆಯಾ ನೀನು.

ನೀ ಬೇಡಿದ್ದು ಮೂರು,
ನಾ ಬೇಡುವುದೂ ಮೂರುl
ಕಳೆದು ಬಿಡು ಆರು,
ತೊಳೆದು ಬಿಡು ನೂರುl
ಕೀಳು ವಾಂಛೆಗಳ ಬೇರು,
ಸೃಜಿಸು ಭಕುತಿಯ ನೀರುl
ಮನ್ನಿಸಿ ಕಾರುಣ್ಯ ಬೀರು,
ನಿನ ಮನೆ ದಾರಿಯಾ ತೋರುl

(Contributed by Shri Govind Magal)

Wednesday, 16 March 2016

Bhava Guccha 47

ಭಾವ ಗುಚ್ಛ  by “ತ್ರಿವೇಣಿ ತನಯ

ವರಾಹಾವತಾರ

ಬ್ರಹ್ಮನ ಮೂಗಿನಿಂದ ಉದುರಿದ ರೂಪ,
ಅಗಾಧರೂಪ ತಾಳಿ ನಿಂತ ಸೂಕರ ರೂಪ,
ದೈತ್ಯ ಹಿರಣ್ಯಾಕ್ಷನಿಂದ ಕಕ್ಷೆ ತಪ್ಪಿತ್ತು ಭೂಮಿ,
ಅದನ್ನ ರಕ್ಷಿಸಲೆಂದೇ ವರಾಹರೂಪ ತಾಳಿದ ಸ್ವಾಮಿ,
ಬ್ರಹ್ಮಾದಿ ದೇವತೆಗಳ ಪ್ರಾರ್ಥನೆ ಆಲಿಸಿದ ಸೂಕರ,
ಭಾರೀ ಘರ್ಜನೆಯೊಂದಿಗೆ ಜಲ ಪ್ರವೇಶಿಸಿದ ಆಕಾರ,
ದೈತ್ಯ ಹಿರಣ್ಯಾಕ್ಷನ ಸಂಹರಿಸಿ ಕೊಟ್ಟ ಶಿಕ್ಷೆ,
ಕೋರೆ ದಾಡಿಯಲೆತ್ತಿ ಭೂಮಿಯ ಸೇರಿಸಿದ ಕಕ್ಷೆ,
ನಮೋ ನಮೋ ಭೂಮಿ ರಕ್ಷಿಸಿದ ವರಾಹ ರೂಪ,
"ನಿನ್ನವರ"ನೂ ರಕ್ಷಿಸಿ "ಕಕ್ಷೆ "ಸೇರಿಸು ಅನಂತ ರೂಪ.

ನೃಸಿಂಹಾವತಾರ

ಅಗಾಧ ತಪಸ್ಸಾಚರಿಸಿ ದಿತಿಪುತ್ರ ಬ್ರಹ್ಮ ವರದಿ ಉನ್ಮತ್ತ,
ಅವನ ಉದರದಿಂದಲೇ ಬಂದ ಪ್ರಹ್ಲಾದ -ಹರಿಚಿತ್ತ,
ಬಾಲ್ಯದಿಂದಲೇ ಬಾಲಕ ಅವಿಚ್ಛಿನ್ನ ವಿಷ್ಣುಭಕ್ತ,
ತಂದೆಯೇ ಅವನ ಮುಗಿಸಲನೇಕ ಪೀಡನೆಗಳಿತ್ತ.

ರಾಕ್ಷಸತ್ವ ಮೇರೆ ಮೀರಿ ಮೆರೆದಾಡತೊಡಗಿತು,
ಕೂಸು ಪ್ರಹ್ಲಾದ ತದೇಕಚಿತ್ತದಿ ಹರಿಯ ಧ್ಯಾನಿಸಿತು,
ಭಕ್ತನ ರಕ್ಷಣೆಗೆ ಕಂಬದಿಂ ಬಂದ ನಾರಸಿಂಹ,
ದೈತ್ಯನ ಸೀಳಿ ಭಕ್ತನನುಗ್ರಹಿಸಿದ ಲಕ್ಷ್ಮೀ ನೃಸಿಂಹ

ನಮೋ ನಮೋ ಲಕ್ಷ್ಮೀ ನಾರಸಿಂಹ,
ಅನುಗ್ರಹಿಸಿ ರಕ್ಷಿಸಿ ಪೊರೆಯೆಮ್ಮ,
ನಮ್ಮೊಳಗಿಹ ಹಿರಣ್ಯಕಶಿಪುವ ಸೀಳಿ,
ಸೇರಿಸಿಕೊ ನಿನ್ನ ಭಕ್ತರ ಪಾಳಿ.

ಆರ್ಭಟಿಸಿ ಘುಡುಘುಡಿಸಿ ಕಂಬದಿಂ ಬಂದವತಾರ,
ತನ್ನ ಭಕ್ತನ ರಕ್ಷಿಸಿ ದೈತ್ಯನ ಸೀಳಿದವತಾರ,
ಬಾಲಕ ಮೊರೆಯಿಡಲು ಕಾಣಿಸಿಕೊಂಡ ನೃಸಿಂಹಾವತಾರ,
ರಾಕ್ಷಸತ್ವ ಮಿತಿ ಮೀರಿರಲು ಮಟ್ಟ ಹಾಕಿದ ಭೀಕರವತಾರ.

ರಾಕ್ಷಸನ ಪೀಡನೆಗಳಿಂದ ಭಕ್ತನ ಪಾರುಮಾಡಿದವತಾರ,
ಎಲ್ಲರೊಳಿಹ ಶಕ್ತಿ ತಾನೇ ಎಂದು ತೋರಿ ಕಾಣಿಸಿಕೊಂಡಾವತಾರ,
ಮಗ ನಾಲ್ಮೊಗನ ವರವ ನಿಜಮಾಡಿ ಶತ್ರುವ ಸೀಳಿದವತಾರ,
ನಮ್ಮೊಳಿಹ ಶತ್ರುವ ಬಗೆದು ಆಹ್ಲಾದ ಕೊಡು ನೃಸಿಂಹಾವತಾರ.


(Contributed by Shri Govind Magal)

Tuesday, 15 March 2016

Bhava Guccha 46

ಭಾವ ಗುಚ್ಛ  by “ತ್ರಿವೇಣಿ ತನಯ

ದಶಾವತಾರ ಸ್ಮರಣೆ

ಮತ್ಸ್ಯಾವತಾರ

ಮೀನು -ನೀನು ಕಲ್ಪನಾತೀತ ಮೀನು,
ಪ್ರಳಯ ಜಲದಲಿ ಪ್ರಕಟವಾದ ಮೀನು,
ಸತ್ಯವ್ರತಗೆ ಬೊಗಸೆಯಲಿ ಸಿಕ್ಕ ಮೀನು,
ಮರಿ ಮೀನಿನಿಂದ ಬೃಹತ್ ರೂಪ ಪಡೆದ ಮೀನು,
ಓಷಧಿ ಬೀಜಗಳ ರಕ್ಷಿಸಿದ ಮೀನು,
ಪ್ರಳಯಾಂತ ಸಕಲ "ಬೀಜ"ಗಳ ಕಾಪಿಟ್ಟ ಮೀನು,
ವೈವಸ್ವತ ಮನುವಿನವತಾರಕ್ಕೆ ಕಾರಣ ಮೀನು,
ಭವಸಾಗರದ ಜೀವಿಗಳಿಗೆ ಈಜಲು ಕಲಿಸಿದ ಮೀನು,
ಶರಣ ಭಕ್ತರ ಹೃದಯಕೊಳದಲಿ ಈಜುತಿಹ ಮೀನು.
ಮೀನು -ನೀನು ಕಲ್ಪನಾತೀತ ಮೀನು.

ಕೂರ್ಮಾವತರ

ನಮೋ ನಮೋ ಕೂರ್ಮ,
ಮಂದರಧರ ಕೂರ್ಮ,
ಭಾರ ಹೊರುವುದ ತೋರಿದ ವರ್ಮ,
ಇಂದ್ರಿಯ ಒಳಸೆಳೆವ ಮರ್ಮ,
ತೋರಿದೆ ಮಥಿಸಿ ಬಾಳುವ ಧರ್ಮ,
ಪ್ರಕಟಿಸಿದೆ ಆಯ್ದುಕೊಳ್ಳುವ ಮರ್ಮ,
ಕಾರುಣ್ಯದಿ ಮಾಡಿಸು ಸತ್ಕರ್ಮ,
ನಿನ್ನ ಪಾದಸ್ಮರಣೆಯಾಗಲಿ ಸ್ವಧರ್ಮ.



(Contributed by Shri Govind Magal)

Monday, 14 March 2016

Bhava Guccha 45

ಭಾವ ಗುಚ್ಛ  by “ತ್ರಿವೇಣಿ ತನಯ

ಹಬ್ಬ

ವೇದವ್ಯಾಸನ ನಿತ್ಯ ಸ್ತುತಿಪುದೇ ಹಬ್ಬ,
ಸಾಧು ಸಜ್ಜನರೊಳು ನಲಿದಾಡುವುದೇ ಹಬ್ಬ,
ಸವಿ ನುಡಿಯುತ ಸಿಹಿ ಹಂಚುವುದೇ ಹಬ್ಬ,
ನೋಯದೇ ನೋಯಿಸದೇ ಬದುಕಿ ಬಾಳುವುದೇ ಹಬ್ಬ.

ಮುಖವಾಡಗಳ ಕಿತ್ತೆಸೆವುದೇ ಹಬ್ಬ,
ನಖಶಿಖಾಂತ ಶುದ್ಧವಾಗಿರುವುದೇ ಹಬ್ಬ,
ಸುಜ್ಞಾನದ ನಿಜ ಹಂಬಲವೇ ಹಬ್ಬ,
"ವಿಜ್ಞಾನಿ"ಯ ಇರವಿನ ಅರಿವೇ ಹಬ್ಬ.

ನವರಾತ್ರಿಯದು ಬೊಂಬೆಗಳ ಹಬ್ಬ,
ಬಿಂಬ ಜೀವಿಬೊಂಬೆಗಳಾಡಿಸೋ ಹಬ್ಬ,
ಜೀವ ನೀ ಕಂಬ ನಾ ಬಿಂಬಎಂದು ನೆನಪಿಸುವ ಹಬ್ಬ,
ಕಂಬಕೆ ಬಿಂಬನರಿವಾದರೆ ಅದು ನಿಜ ಹಬ್ಬ.

ಸಜ್ಜನರ ಸಂಗ

ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ,
ಪರಮ ಲೌಕಿಗರ ಸಂಗವದು ಅಂತೆ ಕಂತೆಯ ಬೊಂತೆ,
ಸಜ್ಜನರ ಪ್ರತಿ ಮಾತಿನಲೂ ಭಗವಂತನ ಹುಡುಕಾಟ,
ಅನ್ಯರ ಸಂಗದಲಿ ನಿತ್ಯ ಸಂಸಾರದ ಗೋಳಾಟ.

ಆಟ -ನೋಟ

ನಿತ್ಯ ಬದುಕಲಿ ಸಂಸಾರದಾಟವನೇ ಆಡು ,
ಎಲ್ಲದರೊಳಗೆ ನಿಯಾಮಕನವನ ನೋಡು,
ಏನೇ ಮಾಡುತಿರು ಹಚ್ಚಿಕೊಳ್ಳದಿರು ಅಂಟು,
ಜತೆಗೆ ಕಟ್ಟುತಿರು ಅಧ್ಯಾತ್ಮ ಬುತ್ತಿಯ ಗಂಟು.


(Contributed by Shri Govind Magal)

Sunday, 13 March 2016

Bhava Guccha 44

ಭಾವ ಗುಚ್ಛ  by “ತ್ರಿವೇಣಿ ತನಯ

ಸತ್ಯ -ಮಿಥ್ಯ

ಕೇಳಿದ್ದೆಲ್ಲ ಸತ್ಯವಲ್ಲ ನೋಡಿದ್ದೆಲ್ಲ ಸತ್ಯವಲ್ಲ,
ಅಸಲು ಸತ್ಯ ಮಿಥ್ಯಗಳ ಅರ್ಥವೇ ಸಾರ್ವತ್ರಿಕವಲ್ಲ,
ಒಪ್ಪು ಬಿಡು ಈ ದ್ವಂದ್ವವಂತೂ ಉಂಟೇ ಉಂಟು,
ದ್ವಂದ್ವಾತೀತನೊಂದಿಗೆ ಬೆಳೆಸಿಕೊ ನೋವಿರದ ನಂಟು.

ತಾತ -ಮೊಮ್ಮಗ

ತಾತಂದಿರೊಡನಾಡುವುದು ಮೊಮ್ಮಕ್ಕಳ ರೀತಿ,
ನಿನ್ನ ತಾತನೊಡನಿರಲು ನಿನಗಿಲ್ಲವೇ ಪ್ರೀತಿ?
ನಿನ್ನ ತಾತನಂತೂ ಇರುವ ಆತ್ಮ ಸಖನಾಗಿ,
ನೀನೂ ಸೇರಲು ಮನದಕಲ್ಲರಳುವುದು ಹೂವಾಗಿ.

ಏಳು -ಬೀಳು -ಗೀಳು

ನೂರೆಂಟು ಇರಲಿ ಸಂಸಾರದೇಳು ಬೀಳು,
ತಪ್ಪದಿರಲದು ಅಧ್ಯಾತ್ಮ ತುಡಿತದ ಗೀಳು,
ಬಂದದ್ದು ಬರಲಿ ತಪ್ಪದ ಭವದ ಉಷ್ಣ,
ನಿನ್ನ ಪಾದದ ಸ್ಮರಣೆ ತಪ್ಪಿಸದಿರು ಕೃಷ್ಣ.

ನಾಟಕಕಾರ

ನಯ ವಿನಯ ಪ್ರೇಮ ಕರುಣೆ ತೋರಿದ ರಾಮ,
ಕಪಟಿ ವಂಚಕರಿಗೆ ಕೃಷ್ಣನಾಡಿದ ಆಟವೇ ನೇಮ,
ಎರಡವತಾರಗಳಲ್ಲಿ ತೋರಿದ ಅದ್ಭುತ ಲೀಲೆ,
ಇಡೀ ಬ್ರಹ್ಮಾಂಡವಲ್ಲವೇ ಅವನ ಪ್ರಯೋಗ ಶಾಲೆ.

ನಿಜ ಕಾರ್ಯ .

ಜಗದೊಳು ಮೂರ್ಖರಿಗೆ ತೋರಿದ ಔದಾರ್ಯ,
ನೀನಾದೆ ಅವರ ದೃಷ್ಟಿಯಲಿ ಪರಮ ನಿರ್ವೀರ್ಯ,
ಎಲ್ಲರನೂ ಎಲ್ಲ ಕಾಲಕ್ಕೂ ಮೆಚ್ಚಿಸುವದಲ್ಲ ಅನಿವಾರ್ಯ,
ವಿಧಾತನ ಆಟಕ್ಕೆ ಮಣಿಯುವುದೇ ನಿಜ ಕಾರ್ಯ.


(Conributed by Shri Govind Magal)

Saturday, 12 March 2016

Bhava Guccha 43

ಭಾವ ಗುಚ್ಛ  by “ತ್ರಿವೇಣಿ ತನಯ

ಮಂಥನ

ಅಮೃತ ಮಥನದಲ್ಲಿ ಮೊದಲು ಬಂದದ್ದೇ ಹಾಲಾಹಲ,
ತತ್ವ ಮಂಥನದಲ್ಲೂ ಎದುರಾಗುವವು ಗೊಂದಲ,
ತಳ್ಳುತ ಹಾಲಾಹಲ ಗೆಲ್ಲುತ್ತಾ ಬಾ ಗೊಂದಲ,
ಗುರು ಹರಿ ಕೃಪೆ ಒದಗಿತೋ ಎಲ್ಲವೂ ಸರಳ,

ಅನುಭವ -ಅನುಭಾವ

ಅನುಭವಿಸಿ ಕೇಳದ ಪ್ರವಚನವದ್ಯಾಕೆ,
ಅನುಭಾವವಾಗದ ನೀತಿ ಪಾಠವದ್ಯಾಕೆ,
ಅಳವಡಿಸಿಕೊಳ್ಳಲಾಗದ ತತ್ವ ಜ್ಞಾನವದ್ಯಾಕೆ,
ಅನುಸಂಧಾನವಿರದ ಶ್ವಾನ ಬಾಳು ಅದ್ಯಾಕೆ?

ಜಾತಿ -ನೀತಿ

ರಾಮಾಯಣ ಕೊಟ್ಟ ವಾಲ್ಮೀಕಿ ಬೇಡ,
ರಾಮಾಯಣವದು ಯಾರಿಗೆ ಬೇಡ?
ಮಹಾಭಾರತ ಕೊಟ್ಟ ವ್ಯಾಸ ಕಾನೀನ,
ತತ್ವ ಶಾಸ್ತ್ರಗಳಲ್ಲೇ ಅತ್ಯಂತ ಘನ,
ಗೀತೆ ಕೊಟ್ಟ ಕೃಷ್ಣನವನು ಗೊಲ್ಲ,
ಗುಣ ಗ್ರಹಿಕೆ ಮುಖ್ಯ ಜಾತಿಯದು ಸಲ್ಲ.


ಕಾಲ -ಮನದ ಜಾಲ

ಕೆಟ್ಟಿರುವುದು ಕಾಲವಲ್ಲ ನೋಡುವ ಮನಸು,
ನೋಡುವ ದೃಷ್ಟಿ ಶುಭ್ರವಿರೆ ಜಗವೆಲ್ಲ ಸೊಗಸು,
ನಿನ್ನ ಪಾಲಿನ ಕರ್ಮ ಪ್ರೀತಿ ಶ್ರದ್ಧೆಯಲಿ ಮಾಡು,
ನಡೆದಿರುವ ವ್ಯಾಪಾರ ಹರಿಯಧೀನವದು ನೋಡು.

ಭ್ರಮೆಯಾನಂದ

ಸಂಸಾರ ಲೋಕದಾಟದ ಭ್ರಮೆಯೇ ಮಹದಾನಂದ,
ಕಣ್ಮುಚ್ಚಿ ಯೋಚಿಸಿದರೆ ಅದುವೆ ಘೋರ ಪ್ರತಿಬಂಧ,
ಲೋಕದಾಟದ ಅಶಾಶ್ವತತೆಯ ಅರಿವಿದ್ದು-ಅಂಟದಂತಿರಲಿ,
ತಪಿಸುವ ಮನವದು ಶಾಶ್ವತ ಆನಂದದೆಡೆಗಿರಲಿ .


(Contributed by Shri Govind Magal)

Wednesday, 9 March 2016

Bhava Guccha 42

ಭಾವ ಗುಚ್ಛ  by “ತ್ರಿವೇಣಿ ತನಯ

ಆನೆ ನೀನು ಆನಂದದಾನೆ

ಆನೆ ನೀನು ಆನಂದದಾನೆ
ನಿಜ ಭಕ್ತರ ಮನದಲ್ಲಿದ್ದಾನೆ

ನಾಟಕದ ಹಿರಿಯಾನೆ,
ಹೊಕ್ಕುಳಲಿ ಬ್ರಹ್ಮನ ಹೆತ್ತಾನೆ,
ಎದೆಯಲಿ ಲಕುಮಿಯ ಹೊತ್ತಾನೆ,
ಗದೆಯೊಳಗೆ ಮಗನ ಇತ್ತಾನೆ.

ಆನೆ ನೀನು ಆನಂದದಾನೆ

ಗೋವು ಗೊಲ್ಲರೊಡನೆ ನಲಿದಾನೆ,
ಕಾಳಿಂಗನ ಹೆಡೆ ತುಳಿದಾನೆ,
ಮಾವ ಕಂಸನ ಕೊಂದಾನೆ,
ರಕ್ಕಸರ ಹೊಸಕಿದಾನೆ.

ಆನೆ ನೀನು ಆನಂದದಾನೆ

ಕ್ಷೀರಸಾಗರದಿ ಮಲಗಿದಾನೆ,
ಆನೆಯ ಕಾಯಲು ಬಂದಾನೆ,
ಮಕರಿಗೆ ಮೋಕ್ಷವಿತ್ತಾನೆ,
ತನ್ನವರ ಕೈ ಬಿಡದಾನೆ.

ಆನೆ ನೀನು ಆನಂದದಾನೆ

ಮದವೇರಿದವರ ಮದವಡಗಿಸಿದಾನೆ,
ಶರಣರ ಸಲಹಿ ರಕ್ಷಿಸಿದಾನೆ,
ದುರುಳರ ಪಾಲಿಗೆ ಮದ್ದಾನೆ,
ಭಕುತರ ಮನದಲಿ ಇದ್ದಾನೆ.

ಆನೆ ನೀನು ಆನಂದದಾನೆ

ಸೆಟೆದು ನಿಂತವರಿಗೆ ಸಿಡಿದಾನೆ,
ಬಾಗಿದ ಭಕ್ತರ ಮನದಾನೆ,
ನೀ ನೋಡುವ ನೋಟಕೆ ತಕ್ಕಾನೆ,
ಶಾರಣ್ಯದ ಭಕುತರಿಗೆ ದಕ್ಯಾನೆ.

ಆನೆ ನೀನು ಆನಂದದಾನೆ,
ನಿಜ ಭಕ್ತರ ಮನದಲ್ಲಿದ್ದಾನೆ.

(Contributed by Shri Govind Magal)

Tuesday, 8 March 2016

Bhava Guccha 41

ಭಾವ ಗುಚ್ಛ  by “ತ್ರಿವೇಣಿ ತನಯ


"ಇರುವೆ" ನೀನೆಲ್ಲೆಲ್ಲೂ "ಇರುವೆ"

ಇರುವೆ ನೀನೆಲ್ಲೆಲ್ಲೂ ಇರುವೆ,
ಸಿಹಿಯಲ್ಲೂ ಇರುವೆ,
ಕೊಳೆತಲ್ಲೂ ಇರುವೆ,
ಕೆಂಪಾದವರಿಗೆ ಕೆಂಪಿರುವೆ,
ಕಪ್ಪಾದವರಿಗೆ ಕಪ್ಪಿರುವೆ,
ಇರುವೆ ನೀನೆಲ್ಲೆಲ್ಲೂ ಇರುವೆ.

ಕಟ್ಟಿಕೊಂಡವರಿಗೆ ಕಟ್ಟಿರುವೆ,
ಬಿಟ್ಟುಕೊಂಡವರಿಗೆ ಬಿಟ್ಟಿರುವೆ,
ಸಿಟ್ಟುಗೊಂಡವರನು ಸುಟ್ಟಿರುವೆ,
ಕೆಚ್ಚು ತೋರಿದವರಿಗೆ ಇಟ್ಟಿರುವೆ,
ಇರುವೆ ನೀನೆಲ್ಲೆಲ್ಲೂ ಇರುವೆ.

ದ್ವೇಷದ ಮನಗಳ ಕಚ್ಚಿರುವೆ,
ರೋಷದ ಹೃದಯವ ಚುಚ್ಚಿರುವೇ,
ಹಾಲಿನ ಮನಗಳಿಗೆ ಹತ್ತಿರುವೆ,
ಜೇನಿನ ಹೃದಯಗಳ ಮೆತ್ತಿರುವೆ,
ಇರುವೆ ನೀನೆಲ್ಲೆಲ್ಲೂ ಇರುವೆ.

ಬೆಂಬತ್ತಿರುವವರಿಗೆ ಆಸೆ ಬಿಟ್ಟಿರುವೆ,
"ನಾನು" ಬಿಟ್ಟವರ ಪಾಶ ಕಿತ್ತಿರುವೆ,
ನಿಜ ಭಕ್ತರಿಗೆ ನೀ ಸೋತಿರುವೆ,
ಇರವಿನ ಅರಿವು ಕೊಟ್ಟಿರುವೆ,
ಇರುವೆ ನೀನೆಲ್ಲೆಲ್ಲೂ ಇರುವೆ.


(Contributed by Shri Govind Magal)

Sunday, 6 March 2016

Bhava Guccha 40

ಭಾವ ಗುಚ್ಛ  by “ತ್ರಿವೇಣಿ ತನಯ

ಅರಮನೆ --ಗುರುಮನೆ

ರಾಜ ರಾಜ್ಯದ ದೋಷಗಳ ನಿವಾರಿಸಿದ್ದು ಯತಿಗಳ ತಪ,
ಮತಿ ನೈತಿಕತೆಯೇ ಇಲ್ಲದ ಮಠ ಸ್ವಾಮಿಗಳು ಇಂದು ಶಾಪ,
ಇದು ಮನುಕುಲ ನಡೆಸುವ ಮಠ ಸ್ವಾಮಿಗಳ ಪಾಡು,
ಇನ್ನೂ ಏನೇನು ಕಾದು ನೋಡಬೇಕಿದೆಯೋ ನಾಡು.

ನಿರ್ಲಿಪ್ತತೆ

ಬೇಕಿರಲಿ ಬೇಡದಿರಲಿ ಸುಖ ದುಃಖ ಉಂಟು,
ತಾಳುತಾ ಸಹಿಸಿಕೋ ಹಚ್ಚಿಕೊಳ್ಳದೇ ಅಂಟು,
ಮಾಡಿದುದು ನಾನಲ್ಲ ಹರಿ ಎಂದು ಅರ್ಪಿಸು,
ಈ ಅನುಸಂಧಾನವಿರೇ ಬದುಕೆಲ್ಲ ಸೊಗಸು.

ಅನಾದಿ

ಅವನಂತೆಯೇ ಜನ್ಮ ಮೃತಿಯಿಲ್ಲದ ಅನಾದಿಗಳು ನಾವೆಲ್ಲಾ,
ಆದರೆ ನಮಗೆಲ್ಲಾ ಸ್ವಂತ ಪ್ರಜ್ಞೆ ಎಂಬುದಿಲ್ಲ,
ಒಳಗಿರುವ ಬಿಂಬನಾಮಕ ಹರಿ ಸಲಹುತಿಹನೆಲ್ಲಾ,
ಪಾಳಿ ಬರಲು ಕೊಡುವ ಸ್ವಭಾವದ ಬೇವು ಬೆಲ್ಲ.

ಸಂವೇದನೆ

ಮನುಷ್ಯಗಿರಬೇಕಾದ್ದು ಭಾವನೆ ಸಂವೇದನೆ ಸ್ಪಂದನೆ,
ಇವ್ಯಾವೂ ಇರದವರೊಂದಿಗೆ ಜೀವನವೆಂಥ ವೇದನೆ,
ಹೊರಗೇ ಲೀನವಾದ ಕಣ್ಮುಚ್ಚಿ ಒಳನೋಡುವ ಇಷ್ಟ ಯಾರಿಗುಂಟು,
ಅದಕೆಂದೇ ಆಗುತಿದೆ ಸಮಾಜ ಸಂಸಾರ ನಿತ್ಯ ಕಗ್ಗಂಟು.

ಪರಾಧೀನತೆ

ಕ್ಷಣ ಕ್ಷಣಕೂ ಜೀವಪರಾಧೀನತೆಯ ಅನುಭವ,
ಆದರೂ ಬರಲೊಲ್ಲದು ತಾನು ಶಾರಣ್ಯ ಭಾವ,
ನಾನು ನನ್ನದು ಎಂಬ ಭ್ರಮೆಯದು ಅಪಾರ,
ಕಳಚುತದನು ತಿಳಿಸಬೇಕವನೇ ತನ್ನ ವ್ಯಾಪಾರ.


(Contributed by Shri Govind Magal)

Saturday, 5 March 2016

Bhava Guccha 39

ಭಾವ ಗುಚ್ಛ  by “ತ್ರಿವೇಣಿ ತನಯ

ಮುಖ್ಯ ಪ್ರಾಣ -ಜಗದ ತ್ರಾಣ

ಮೊದಲೆರಡು ಅವತಾರಗಳಲ್ಲಿ ಶಕ್ತಿ ಜ್ಞಾನಗಳ ಮೇಳ,
ಮೂರನೆಯದಾದರೋ ಜ್ಞಾನ ಪ್ರಸಾರದ್ದೇ ಆಳ,
ವ್ಯಾಸಪೂಜೆಗೆಂದೇ ಅವತರಿಸಿದ ಶ್ರೀಮದಾಚಾರ್ಯ,
ಇಪ್ಪತ್ತೊಂದು ತರಿದು ತತ್ವವಾದ ಕೊಟ್ಟ ಮಧ್ವಾಚಾರ್ಯ.

ಪಾಜಕದಲಿ ಅವತರಿಸಿದ ದಶ ಪ್ರಮತಿ ,
ಇಪ್ಪತ್ತೊಂದು ಕುಮತಗಳ ಖಂಡಿಸಿದ ಪೂರ್ಣಪ್ರಮತಿ,
ಸಹಜ ಸರ್ವಕಾಲಿಕ ಸಿದ್ಧಾಂತ ಎತ್ತಿ ತೋರಿದ,
ಶಿಸ್ತಿನಿಂದ ವ್ಯಾಸಪೂಜೆ ಸಲ್ಲಿಸಿ ಕೃಷ್ಣಾರ್ಪಣವೆಂದ.

ಪಾಜಕದಲಿ ಉದಯಿಸಿತು ನಿಜಜ್ಞಾನ ಸೂರ್ಯ,
ಆಮೇಲೆ ಲೋಕದಿಂದ ಕರೆಸಿಕೊಂಡದ್ದು ಮಧ್ವಾಚಾರ್ಯ,
ಹೆತ್ತವರಿಟ್ಟ ಹೆಸರದು ವಾಸುದೇವ,
ಹನುಮ ಭೀಮರ ನಂತರ ಬಂದ ಪ್ರಾಣದೇವ.

ಬಾಲ್ಯದಿಂದಲೇ ತೋರಿದ ಅನೇಕ ವಿಸ್ಮಯಗಳ,
ತಂದೆ ತಾಯಿಗಳಿಗೆ ಏನೋ ವಿಚಿತ್ರ ಕಳವಳ,
ಆಡಾಡುತಲೇ ನಿವಾರಿಸಿದ ಮಾಯಾವಾದದ ಗೊಂದಲ,
ನೈಜಸಾಧಕರಿಗೆ ತಿಳಿಸಿ ತೋರಿದ "ನಿಜ ಹಂಬಲ."

ಪಂಚಭೇದಗಳ ಪ್ರಪಂಚದಲಿ ಎಲ್ಲವೂ ಒಂದಲ್ಲವೆಂದ,
ಒಂದರಂತೆ ಒಂದಿಲ್ಲ ಅದೇ ಸೃಷ್ಟಿಯ ನಿಯಮ ನೋಡೆಂದ,
ತತ್ವವಾದದ ತಾರತಮ್ಯವ ತಿಳಿಸಿ ದಾರಿ ತೋರಿದ ಧೀರ,
ಜಗದ ಮಾತಾಪಿತರ ಪ್ರೀತಿಪಾತ್ರ ನಿರವದ್ಯ ಕುಮಾರ.


(Contributed by Shri Govind Magal)