ಭಾವ ಗುಚ್ಛ by “ತ್ರಿವೇಣಿ ತನಯ”
ದಶಾವತಾರ ಸ್ಮರಣೆ
ಮತ್ಸ್ಯಾವತಾರ
ಮೀನು -ನೀನು ಕಲ್ಪನಾತೀತ ಮೀನು,
ಪ್ರಳಯ ಜಲದಲಿ ಪ್ರಕಟವಾದ ಮೀನು,
ಸತ್ಯವ್ರತಗೆ ಬೊಗಸೆಯಲಿ ಸಿಕ್ಕ ಮೀನು,
ಮರಿ ಮೀನಿನಿಂದ ಬೃಹತ್ ರೂಪ ಪಡೆದ ಮೀನು,
ಓಷಧಿ ಬೀಜಗಳ ರಕ್ಷಿಸಿದ ಮೀನು,
ಪ್ರಳಯಾಂತ ಸಕಲ "ಬೀಜ"ಗಳ ಕಾಪಿಟ್ಟ ಮೀನು,
ವೈವಸ್ವತ ಮನುವಿನವತಾರಕ್ಕೆ ಕಾರಣ ಮೀನು,
ಭವಸಾಗರದ ಜೀವಿಗಳಿಗೆ ಈಜಲು ಕಲಿಸಿದ ಮೀನು,
ಶರಣ ಭಕ್ತರ ಹೃದಯಕೊಳದಲಿ ಈಜುತಿಹ ಮೀನು.
ಮೀನು -ನೀನು ಕಲ್ಪನಾತೀತ ಮೀನು.
ಕೂರ್ಮಾವತರ
ನಮೋ ನಮೋ ಕೂರ್ಮ,
ಮಂದರಧರ ಕೂರ್ಮ,
ಭಾರ ಹೊರುವುದ ತೋರಿದ ವರ್ಮ,
ಇಂದ್ರಿಯ ಒಳಸೆಳೆವ ಮರ್ಮ,
ತೋರಿದೆ ಮಥಿಸಿ ಬಾಳುವ ಧರ್ಮ,
ಪ್ರಕಟಿಸಿದೆ ಆಯ್ದುಕೊಳ್ಳುವ ಮರ್ಮ,
ಕಾರುಣ್ಯದಿ ಮಾಡಿಸು ಸತ್ಕರ್ಮ,
ನಿನ್ನ ಪಾದಸ್ಮರಣೆಯಾಗಲಿ ಸ್ವಧರ್ಮ.
(Contributed by
Shri Govind Magal)
No comments:
Post a Comment
ಗೋ-ಕುಲ Go-Kula