Wednesday 23 March 2016

Sāra Saṅgama 03

ಸಾರ ಸಂಗಮ  by “ತ್ರಿವೇಣಿ ತನಯ

ದೈವಪ್ರಜ್ಞೆ

ಏನೇ ಬರಲಿ ನಿನ್ನಲ್ಲಿ ಮನವಿರಲಿ ರಾಮ,
ನಿಯಾಮಕ ನೀನೆಂದು ದೃಢ ಮಾಡು ಶ್ಯಾಮ,
ಮನ ನಿನ್ನ ತಾತನಲ್ಲಿಟ್ಟಿರು ಕೈಲಾಸವಾಸ,
ದೈವಪ್ರಜ್ಞೆಯಲಿ ಸಾಗಿರಲಿ ಜೀವನ ಪ್ರವಾಸ.

ಎಚ್ಚರದ ಬಾಳು

ನೂರೆಂಟು ಬರುತಿರಲಿ ಸಂಸಾರದೇಳು ಬೀಳು,
ತುಡಿತವದು ತಪ್ಪದಿರಲಿ ಅಧ್ಯಾತ್ಮದ ಗೀಳು,
ಗುರುಗಳ ಪ್ರವಚನದ ನೂತನ ಹೋಳು,
ಭ್ರಮೆ ಹೊಸಕಿ ಮೈಮುರಿದು ಎಚ್ಚರದಿ ಬಾಳು.

ವೈರಾಗ್ಯ

ಇರದಿರೆ ಮಾನಸಿಕ ಆರೋಗ್ಯ,
ಹತ್ತಿರ ಬರದದು ನಿಜ ವೈರಾಗ್ಯ,
ಬಿಡದಿರು ಬಿಡದಿರು ಸಜ್ಜನರ ಸಂಗ,
ತಿಳಿಯಾದೀತು ಮುಂದೊಮ್ಮೆ ಅಂತರಂಗ.

ಕಾಣೋದು -ಕಾಣದ್ದು

ಕಾಣದ್ದು ತಿಳಿಯದ್ದು ಇಲ್ಲವೆನಬೇಡ,
ಗಂಧ ಗಾಳಿ ಶಾಖವವು ಕಾಣಿಸವು ನೋಡ,
ಅನೇಕ ಸಂಗತಿಗಳು ಅನುಭವಕ್ಕಷ್ಟೇ ಗೋಚರ,
ಅನುಭವಿಸಲಾಗದಿರೆ ಅದು ನಮ್ಮ "ಗ್ರಹಚಾರ".

ಅಗೋಚರ ವ್ಯಾಪ್ತ -ಅನಂತ

ನಮ್ಮ ಅರಿವಿನ ವ್ಯಾಪ್ತಿಗೆ ಸಿಗದವ ಪರಮಾತ್ಮ,
ಸರ್ವ ಜಡ ಜೀವಗಳಿಗೂ ಅವನೇ "ಅಂತರಾತ್ಮ"
ನಮ್ಮ ನೋಟ ಬುದ್ಧಿ ಆಚರಣೆ ಎಲ್ಲವೂ ಸೀಮಿತ,
ಅದಕೆಂದೇ ಯೋಗ್ಯತಾನುಸಾರ "ತಳಮಳ"ಅನವರತ.


(Contributed by Shri Govind Magal)

No comments:

Post a Comment

ಗೋ-ಕುಲ Go-Kula