Tuesday, 29 March 2016

Sāra Saṅgama 08

ಸಾರ ಸಂಗಮ  by “ತ್ರಿವೇಣಿ ತನಯ

ಜಗದ ಶಾಲೆಯ ವಿದ್ಯಾರ್ಥಿ

ಹಂಗ್ಯಾಕೆ ಹಿಂಗ್ಯಾಕೆ ಊರ ಉಸಾಬರಿ ಯಾಕೆ?
ನಿನ್ನ ನೀ ಅರಿವುದಕ್ಕಿಂತ ವಿಶೇಷ ಬೇರೆ ಬೇಕೆ?
ಬೇಕಿರಲಿ ಬೇಡದಿರಲಿ ಎಲ್ಲರೊಂದಿಗೆ ಕೂಡು,
ಜಗದ ಶಾಲೆಯಲಿ ನಿನ್ನ ನೀನರಿಯುವ ವಿದ್ಯಾರ್ಥಿ ನೋಡು.

ಗುರು -ಗುರಿ

ಗುರಿ ಬೇಕು ಗುರು ಬೇಕು ಬದುಕಿನಲಿ ಎಂದೂ,
ಎರಡೂ ಇರದಿರೆ ಬಿಡುಗಡೆ ಇಲ್ಲ ಎಂದೆಂದೂ,
ಗುರಿ ಅದು ಹರಿಚರಣ ಗುರು ತಾ ಮುಖ್ಯಪ್ರಾಣ,
ಪ್ರತಿಕ್ಷಣದ ಬದುಕಾದಾಗ "ಮಂಥನ"ದೊರಕೀತವನ ಕರುಣ.

ಕಡೆತ -ಮಿಡಿತ

ಬೆಣ್ಣೆಗಾಗಿ ಮೊಸರ ಕಡೆಯಬೇಕು,
ನಿಜ ಭಕ್ತಿಗಾಗಿ ಮನವ ಕಡೆಯಬೇಕು,
ಮಧ್ವಶಾಸ್ತ್ರ ದಧಿಯ ಮನನದಿಂದ ಕಡೆ,
ಜನ್ಮಾಂತರಗಳಾಗಲಿ ಹರಿಪಾದದೆಡೆಗೆ ನಡೆ.

ಪುಟಕ್ಕಿಟ್ಟ ಭಕ್ತಿ -ಮುಕ್ತಿ

ಮೊಸರ ಕಡೆದಾಗ ಬೆಣ್ಣೆ,
ಮನವ ಕಡೆದಾಗ ಭಕ್ತಿ ದೊನ್ನೆ,
ಬೆಣ್ಣೆ ಕಾಯಿಸಿದಾಗಾ ತುಪ್ಪ,
ಭಕ್ತಿ ಪುಟಕ್ಕಿಟ್ಟಾಗ ಮುಕ್ತಿ ನೋಡಪ್ಪ.

ಅಂತರಂಗದ ಆಚರಣೆ

ಪಾರಾಯಣ ಪುರಾಣ ಯಾತ್ರೆಗಳಿಂದಲ್ಲ ಮುಕ್ತಿ,
ಮೆಟ್ಟಿಲುಗಳವು ಸಾಧಿಸಲು ನಿಜದೈವ ಭಕ್ತಿ,
ಹೃದಯ ಮನಗಳಲ್ಲಿ "ಮಂಥನ"ಸತತವಿರಲಿ,
ಕೊಳೆನೀಗಿ ಮನತಿಳಿಯಾಗಿ ಹರಿಪಾದ ಸೇರಲಿ.


(Contributed by Shri Govind Magal)

No comments:

Post a Comment

ಗೋ-ಕುಲ Go-Kula