Wednesday, 2 March 2016

Bhava Guccha 36

ಭಾವ ಗುಚ್ಛ  by “ತ್ರಿವೇಣಿ ತನಯ

ಹತ್ತವತಾರದ ಹರಿ

ಮತ್ಸ್ಯ --ಕೊಡು ತನು ಮನದ ಸ್ವಾಸ್ಥ್ಯ.
ಕೂರ್ಮ --ತಿಳಿಸು ಮಥನದ ಮರ್ಮ.
ವರಾಹ --ಕೊಡು ಜ್ಞಾನ ದಾಹ.
ನಾರಸಿಂಹ --ತಿಳಿಸು ಜೀವದ ಮರ್ಮ.
ವಾಮನ --ಮಾಡು "ಅಹಂ "ದಹನ.
ಪರಶು ರಾಮ --ತರಿದುಬಿಡು ಕಾಮ.
ದಾ .ರಾಮ --ನೀಡು ಮರ್ಯಾದಾ ನೇಮ.
ಕೃಷ್ಣ --ಕಳೆ ಭವದ ಉಷ್ಣ.
ಬುದ್ಧ --ಮಾಡು ಧರ್ಮ ಬದ್ಧ.
ಕಲ್ಕಿ --ತೆರೆ ಬೆಳಕಿನ ಕಿಟಕಿ

ಹತ್ತಾವತಾರದ ಉತ್ತಮೋತ್ತಮನೇ,
ಇತ್ತು ಮತಿ ಮೇಲೆತ್ತು ಪುರುಷೋತ್ತಮನೇ,
ನಿನ್ನವರ ನೀನಲ್ಲದೆ ಕಾಯುವವರಾರು?
ಸನ್ಮಾರ್ಗದಲಿ ನಡೆಸಿ ಸೇರಿಸಿಕೊ ನಿನ್ನೂರು.

ಸಂಸಾರ

ಮುಗಿಯದಾ ವ್ಯಾಪಾರ ಅದುವೆ ಸಂಸಾರ,
ಒಂದನಿಳಿಸೆ ಏರಿಹುದು ಮತ್ತೊಂದು ಭಾರ,
ಭಾರವಿದ್ದರೆ ಸೆಳೆತ ಭಾರವಿದ್ದರೆ ಕುಸಿತ,
ಹಗುರಾಗುತ್ತಲೇ ಇರು ಕಳಚುತ್ತ ಸತತ.

ಸಾಧನೆ

ಸಾಧನೆ ಸಾಧನೆ ಎನುತ ಕೊರಗದಿರು ನೀನು,
ನಡೆದಿರುವುದೆಲ್ಲ ಸಾಧನೆ ಎಂಬರಿವು ಬರಲಿನ್ನು,
ಅನಿಸಿದ್ದು ಮಾಡಬಲ್ಲೆಯಾ ನೀ ಅಸ್ವತಂತ್ರ,
ಮಾಡಬೇಕಾದ್ದೇ ಮಾಡಿಸುತಿಹ ಸರ್ವಸ್ವತಂತ್ರ.

ಸೊಗಸು

ಒಮ್ಮೆ ರುಚಿಸಿತೋ ಹರಿವ್ಯಾಪಾರದ ಸೊಗಸು,
ಯಾರಲ್ಲಿಯೂ ಬರದು ಸಿಟ್ಟು ಸೆಡವು ಮುನಿಸು,
ಸ್ವಭಾವ-ಕರ್ಮಕ್ಕನುಗುಣವಾಗಿ ನಡೆಸಿರುವ ಆಟ,
ತಿಳಿದರ್ಪಿಸು ಇದನೇ ಕಳೆವ ಭವದ ಕಾಟ.


(Contributed by Shri Govind Magal)

No comments:

Post a Comment

ಗೋ-ಕುಲ Go-Kula