Sunday 5 December 2021

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 21: 29-33

 

ವಹ್ನಿಂ ವಿವಿಕ್ಷನ್ತಮಮುಂ ನಿವಾರ್ಯ್ಯ ಯಯೌ ಸವಿಪ್ರಃ  ಸಹಫಲ್ಗುನೋ ಹರಿಃ ।

ಆಶಾಮುದೀಚೀಂ ಬೃಹತಾ ರಥೇನ ಕ್ಷಣೇನ ತೀರ್ತ್ತ್ವೈವ ಚ ಸಪ್ತವಾರಿಧೀನ್             ॥೨೧.೨೯॥

ಆನಂತರ ಅಗ್ನಿಪ್ರವೇಶ ಮಾಡಲು ಉದ್ಯುಕ್ತನಾಗಿದ್ದ ಅರ್ಜುನ,

ಹಾಗೆ ಮಾಡದಂತೆ ಅವನ ತಡೆದ ಸಕಲನಿಯಾಮಕ ಶ್ರೀಕೃಷ್ಣ.

ಬ್ರಾಹ್ಮಣ, ಅರ್ಜುನನೊಂದಿಗೆ ಕೃಷ್ಣ ಬೃಹತ್ ರಥವನ್ನೇರಿದ,

ಉತ್ತರದಿಕ್ಕಿನಲಿ ಕ್ಷಣದಿ ಏಳು ಸಮುದ್ರಗಳ ದಾಟಿ ತೆರಳಿದ.

 

ದದುಶ್ಚ ಮಾರ್ಗ್ಗಂ ಗಿರಯೋsಬ್ಧಯಸ್ತಥಾ ವಿದಾರ್ಯ್ಯ ಚಕ್ರೇಣ ತಮೋsನ್ಧಮೀಶಃ ।

ಘನೋದಕಂ ಚಾಪ್ಯತಿತೀರ್ಯ್ಯ ತತ್ರ ದದರ್ಶ ಧಾಮ ಸ್ವಮನನ್ತವೀರ್ಯ್ಯಃ             ॥೨೧.೩೦॥

ಅವರಿಗೆ ದಾರಿ ಮಾಡಿಕೊಟ್ಟವು ಪರ್ವತ ಸಮುದ್ರಗಳು,

ಕೃಷ್ಣಚಕ್ರ ಭೇದಿಸಿತು ದಟ್ಟವಾದ (ಅಂಧತಮಸ್ಸು) ಆ ಕತ್ತಲು.

ಕೃಷ್ಣ ದಾಟಿಸಿದ ಘನೋದಕವನ್ನು ಕೂಡಾ,

ತನ್ನ ಅಪ್ರಾಕೃತವಾದ ಧಾಮವನ್ನು ಕಂಡ.

 

ಸಂಸ್ಥಾಪ್ಯ ದೂರೇ ಸರಥಂ ಸವಿಪ್ರಂ ಪಾರ್ತ್ಥಂ ಸ್ವರೂಪೇ ದ್ವಿಚತುಷ್ಕಬಾಹೌ ।

ಸಮಸ್ತರತ್ನೋಜ್ಜ್ವಲದಿವ್ಯಭೂಷಣೇ ವಿವೇಶ ನಿತ್ಯೋರುಗುಣಾರ್ಣ್ಣವೇ ಪ್ರಭುಃ             ॥೨೧.೩೧॥

ಕೃಷ್ಣ ದೂರದಲ್ಲಿ ಬ್ರಾಹ್ಮಣ ಮತ್ತು ಅರ್ಜುನರಿದ್ದ ರಥವ ನಿಲ್ಲಿಸಿದ,

ಅಷ್ಟಬಾಹುಗಳ ರತ್ನಖಚಿತ ಭೂಷಣಗಳ ಮೂಲ ರೂಪ ಪ್ರವೇಶಿಸಿದ.

 

ಸಹಸ್ರಮೂರ್ದ್ಧನ್ಯುರುಶೇಷಭೋಗ ಆಸೀನರೂಪೇsಮಿತಸೂರ್ಯ್ಯದೀಧಿತೌ ।

ರಮಾಸಹಾಯೇ ತಟಿದುಜ್ಜ್ವಲಾಮ್ಬರೇ ಮುಕ್ತೈರ್ವಿರಿಞ್ಚಾದಿಭಿರರ್ಚ್ಚಿತೇ ಸದಾ             ॥೨೧.೩೨॥

 

ಸ್ಥಿತ್ವೈಕರೂಪೇಣ ಮುಹೂರ್ತ್ತಮೀಶ್ವರೋ ವಿನಿರ್ಯ್ಯಯೌ ವಿಪ್ರಸುತಾನ್ ಪ್ರಗೃಹ್ಯ ।

ಸುನನ್ದನನ್ದಾದಯ ಏವ ಪಾರ್ಷದಾಸ್ತೇ ವೈಷ್ಣವಾ ಭೂಮಿತಳೇ ಪ್ರಜಾತಾಃ             ॥೨೧.೩೩॥

ಅನಂತ ತಲೆಗಳ ಉತ್ಕೃಷ್ಟ ಮುಕ್ತಶೇಷನ ಮೈಮೇಲೆ ಕುಳಿತಿದ್ದ,

ಲಕ್ಷ್ಮಿಯೊಂದಿಗೆ ಮಿತಿಯಿರದ ಸೂರ್ಯರ ಕಾಂತಿಯಿಂದ ಹೊಳೆಯುತ್ತಿದ್ದ.

ಮಿಂಚಿನಂತಹಾ ಬಣ್ಣದ ಬಟ್ಟೆಯನ್ನು ತೊಟ್ಟಿದ್ದ,

ಮುಕ್ತಬ್ರಹ್ಮಾದಿಗಳಿಂದ ಪೂಜಿಸಲ್ಪಡುತ್ತಿದ್ದ,

ಸರ್ವೇಶ್ವರ ಕೃಷ್ಣ ಆ ಮೂಲರೂಪದಲ್ಲಿ ಐಕ್ಯ ಹೊಂದಿದ,

ಅತಿ ಸ್ವಲ್ಪಕಾಲದಲ್ಲೇ ಬ್ರಾಹ್ಮಣಪುತ್ರರೊಂದಿಗೆ ಹೊರಬಂದ.

ಸುನಂದ, ನಂದ, ಕುಮುದ, ಕುಮುದಾಕ್ಷ ಎಂಬುವರು ವಿಷ್ಣುಲೋಕ ಪಾಲಕರು,

ಅವರುಗಳೇ ವಿಪ್ರಗೃಹದಲ್ಲಿ ಜನಿಸಿ ನಂತರ ಮಾಯವಾಗಿ ಹೋಗುತ್ತಿದ್ದವರು.

[Contributed by Shri Govind Magal]

Thursday 2 December 2021

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 21: 23-28

[ದೇವರು ಅರ್ಜುನನ ಜೊತೆಗೆ ಬಲರಾಮ-ಪ್ರದ್ಯುಮ್ನ-ಅನಿರುದ್ಧ ಇವರನ್ನು ಏಕೆ ಕಳುಹಿಸಲಿಲ್ಲ ಎಂದರೆ:]

ನ್ಯಯೋಜಯತ್ ತತ್ಸಹಾಯೇ ಯಶಸ್ತೇಷ್ವಭಿರಕ್ಷಿತುಮ್  

ಪ್ರಿಯೋ ಹಿ ನಿತರಾಂ ರಾಮಃ  ಕೃಷ್ಣಸ್ಯಾನು ತಂ ಸುತಃ          ೨೧.೨೩

 

ಅನಿರುದ್ಧಃ ಕಾರ್ಷ್ಣ್ಣಿಮನು ಪ್ರದ್ಯುಮ್ನಾದ್ ಯೋsಜನಿಷ್ಟ ಹಿ

ರುಗ್ಮಿಪುತ್ರ್ಯಾಂ ರುಗ್ಮವತ್ಯಾಮಾಹೃತಾಯಾಂ ಸ್ವಯಮ್ಬರೇ      ೨೧.೨೪

ಬಲರಾಮ, ಪ್ರದ್ಯುಮ್ನ, ಅನಿರುದ್ಧಾದಿಗಳಿಗೆ ಅಪಕೀರ್ತಿ,

ಬಾರದೇ ಯಶಸ್ಸು ರಕ್ಷಣೆಯಾಗಲೆಂಬುದು ಕೃಷ್ಣನೀತಿ,

ಅವರನ್ನು ಅರ್ಜುನನೊಂದಿಗೆ ಕಳಿಸದಿದ್ದುದು ಅದೇ ರೀತಿ.

ಕೃಷ್ಣಗೆ ಅನುಕ್ರಮವಾಗಿ ಬಲುಪ್ರಿಯರಿವರು -ಬಲರಾಮ, ಪ್ರದ್ಯುಮ್ನ, ಅನಿರುದ್ಧ,

ಈ ಅನಿರುದ್ಧ ;ಪ್ರದ್ಯುಮ್ನ ಸ್ವಯಂವರದಿ ಕದ್ದು ತಂದ ರುಗ್ಮವತಿಯಲ್ಲಿ ಜನಿಸಿದ್ದ.

 

ರತಿರೇವ ಹಿ ಯಾ ತಸ್ಯಾಂ ಜಾತೋsಸೌ ಕಾಮನನ್ದನಃ

ಪೂರ್ವಮಪ್ಯನಿರುದ್ಧಾಖ್ಯೋ ವಿಷ್ಣೋಸ್ತನ್ನಾಮ್ನ ಏವಚ  ೨೧.೨೫

 

ಆವೇಶಯುಕ್ತೋ ಬಲವಾನ್ ರೂಪವಾನ್ ಸರ್ವಶಾಸ್ತ್ರವಿತ್

ತಸ್ಮಾತ್ ತಾಂಸ್ತ್ರಿನೃತೇ ಕೃಷ್ಣಃ ಪಾರ್ತ್ಥಸಾಹಾಯ್ಯಕಾರಣಾತ್   ೨೧.೨೬

 

ನ್ಯಯೋಜಯತ್ ಸೂತಿಕಾಲೇ ಬ್ರಾಹ್ಮಣ್ಯಾಃ ಫಲ್ಗುನಃ

ಅಸ್ತ್ರೈಶ್ಚಕಾರ ದಿಗ್ಬನ್ಧಂ ಕುಮಾರೋsಥಾಪಿತು ಕ್ಷಣಾತ್             ೨೧.೨೭

 

ಅದರ್ಶನಂ ಯಯೌ ಪಾರ್ತ್ಥೋ ವಿಷಣ್ಣಃ ಸಹ ಯಾದವೈಃ

ಅಧಿಕ್ಷಿಪ್ತೋ ಬ್ರಾಹ್ಮಣೇನ ಯಯೌ ಯತ್ರ ಶ್ರಿಯಃಪತಿಃ                ೨೧.೨೮

ಆ ರುಗ್ಮವತಿ ಮೂಲರೂಪದಲ್ಲಿ ಸಾಕ್ಷಾತ್ ರತಿ,

ಅನಿರುದ್ಧ ಮಗನಾದರೆ, ರತಿ ಕಾಮ ಸತಿ ಪತಿ.

ಈತನಲ್ಲಿತ್ತು 'ಅನಿರುದ್ಧ' ನಾಮಕ ಭಗವಂತನ ಆವೇಶ,

ಬಲಿಷ್ಠ, ರೂಪವಂತ,ಶಾಸ್ತ್ರಜ್ಞನಾಗಿದ್ದದ್ದು ಅವನ ವಿಶೇಷ.

 

ಅರ್ಜುನಗೆ ಸಹಾಯ ಮಾಡಲು ಈ ಮೂವರನ್ನು ಬಿಟ್ಟು,

ಮಿಕ್ಕೆಲ್ಲ ಯಾದವರನ್ನು ಕಳಿಸಿದ್ದು ದೈವಸಂಕಲ್ಪದ ಗುಟ್ಟು.

ಅರ್ಜುನ ವಿಪ್ರಪತ್ನಿಯ ಪ್ರಸವಕಾಲದಲ್ಲಿ ಮಾಡಿದ್ದ ಅಸ್ತ್ರದಿಗ್ಬಂಧನ,

ಆದರೂ ಹುಟ್ಟಿದಕ್ಷಣದಲ್ಲೇ ಮಗು ಕಾಣದಾದಾಗ ನಿಂದಿತನಾದ ಅರ್ಜುನ,

ವಿಷಾದದಿಂದ ಯಾದವರೊಂದಿಗೆ ಬಂದುಸೇರಿದ ಶ್ರೀಕೃಷ್ಣನ ಸನ್ನಿಧಾನ.


[Contributed by Shri Govind Magal]

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 21: 12-16

ಹಯಂ ಸಭೀಮಫಲ್ಗುನಾ  ಹರೇ ರಥಂ ಸಮಾಸ್ಥಿತಾಃ ।

ವ್ಯಚಾರಯನ್ ಹರೇಃ ಸುತಾ ದಿನಸ್ಯ ಪಾದಮಾತ್ರತಃ ॥೨೧.೧೨॥

ಭೀಮಾರ್ಜುನ ಮೊದಲಾದವರ ಜೊತೆಯಲ್ಲಿ,

ಕೃಷ್ಣಪುತ್ರರು ಏರಿಕುಳಿತರು ಭಗವದ್ರಥದಲ್ಲಿ.

ಯಾಗದ ಕುದುರೆಯೊಂದಿಗೆ ಎಲ್ಲಾ ಸುತ್ತಿ ಬಂದಾಗ,

ಸಮಯ ಕಳೆದದ್ದಷ್ಟೇ ಒಂದು ದಿನದಲ್ಲಿ ಕಾಲುಭಾಗ.

 

ಜಿತಾಃ ಸಮಸ್ತಭೂಭೃತೋ ಜರಾಸುತಾದಯಃ ಕ್ಷಣಾತ್ ।

ವೃಕೋದರಾದಿಭಿಸ್ತು ತೈರ್ಹಯಶ್ಚ ದಿವ್ಯ ಆಯಯೌ ॥೨೧.೧೩॥

ಜರಾಸಂಧಾದಿ ರಾಜರೆಲ್ಲರೂ ಭೀಮಸೇನಾದಿಗಳಿಂದ ಸೋತಾಗ,

ದಿನದ ಕಾಲಂಶ ಸಂದಿತ್ತು ಯಾಗದ ಅಲೌಕಿಕ ಕುದುರೆ ಹಿಂದಿರುಗಿದಾಗ.

 

ಹಯಃ ಸ ಕೃಷ್ಣನಿರ್ಮ್ಮಿತೋ ದಿನೇನ ಲಕ್ಷಯೋಜನಮ್ ।

ಕ್ಷಮೋ ಹಿ ಗನ್ತುಮಞ್ಜಸಾ ದಿನಾಶ್ವಮೇಧಸಿದ್ಧಯೇ ॥೨೧.೧೪॥

ಒಂದು ದಿನದಲ್ಲಿ ಅಶ್ವಮೇಧ ಯಾಗವ ಮಾಡುವ ಉದ್ದೇಶ,

ಅದಕ್ಕಾಗೇ ಕೃಷ್ಣನಿಂದ ನಿರ್ಮಿಸಲ್ಪಟ್ಟಿತ್ತು ಯಾಗದ ಅಶ್ವ.

ಒಂದೇ ದಿನದಲ್ಲಿ ಲಕ್ಷ ಯೋಜನದ ಸಂಚಾರ,

ಸಮರ್ಥವಾಗಿಸಿತ್ತು ಕುದುರೆಯ ದೈವವ್ಯಾಪಾರ.

 

ಪರಾಶರಾತ್ಮಜೋ ಹರಿರ್ಹರಿಂ ಯದಾ ತ್ವದೀಕ್ಷಯತ್ ।

ತದಾssಸಸಾದ ಹ ದ್ವಿಜಸ್ತೃಣಾವಹೋ ರುರಾವ ಚ ॥೨೧.೧೫॥

ಪರಾಶರ ಪುತ್ರ ವ್ಯಾಸರೂಪಿ ನಾರಾಯಣ,

ದೀಕ್ಷಿತನನ್ನಾಗಿ ಮಾಡಿದನು -ಶ್ರೀಕೃಷ್ಣನನ್ನ.

ಆಗಲ್ಲಿಗೆ ಬಂದ ಒಂದಿಷ್ಟು ಹುಲ್ಲು ಹಿಡಿದ ಬ್ರಾಹ್ಮಣ,

ಹಾಗೆ ಬಂದ ಅವನು ಮಾಡುತ್ತಿದ್ದದ್ದು ರೋದನ.

 

ಬ್ರಜನ್ತಿ ಜನ್ಮನೋsನು ಮೇ ಸದಾ ಸುತಾ ಅದೃಶ್ಯತಾಮ್ ।

ಇತೀರಿತೇsರ್ಜ್ಜುನೋsಬ್ರವೀದಹಂ ಹಿ ಪಾಮಿ ತೇ ಸುತಾನ್ ॥೨೧.೧೬॥

ಬ್ರಾಹ್ಮಣನೆಂದ -ನನ್ನ ಮಕ್ಕಳೆಲ್ಲರೂ ಹುಟ್ಟಿದ ಕೊಡಲೇ ಆಗುತ್ತಿದ್ದಾರೆ ಅದೃಶ್ಯ,

ಅರ್ಜುನ ಉತ್ತರಿಸಿದ -ನಿನ್ನ ಮಕ್ಕಳನ್ನು ರಕ್ಷಿಸಿ ಕೊಡುವುದು ನನ್ನ ಕೆಲಸ.


[Contributed by Shri Govind Magal]

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 21: 17-22

ನ ಕೃಷ್ಣರಾಮಕಾರ್ಷ್ಣಿಭಿಃ ಸುತಾ ನು ಮೇsತ್ರ ಪಾಲಿತಾಃ ।

ಕ್ವ ತೇsತ್ರ ಶಕ್ತಿರಿತ್ಯಮುಂ ಜಗಾದ ಸೋsರ್ಜ್ಜುನಮ್  ದ್ವಿಜಃ ॥೨೧.೧೭॥

 ಯಾವಾಗ ಅರ್ಜುನ ತಾನು ರಕ್ಷಿಸುತ್ತೇನೆಂದು ಹೇಳಿದ,

ಅದನ್ನ ಕೇಳಿದ ಆ ಬ್ರಾಹ್ಮಣ ಅರ್ಜುನನಿಗೆ ಕೇಳಿದ.

ಕೃಷ್ಣ ಬಲರಾಮ ಪ್ರದ್ಯುಮ್ನನಿಂದ ಆಗದೇ ಇದ್ದದ್ದು,

ನಿನ್ನಲ್ಲಿ ಎಲ್ಲುಂಟು ಆ ಶಕ್ತಿ -  ಅದು ಹೇಗೆ ಆಗುವುದು?

 

ತದಾ ಜಗಾದ ಫಲ್ಗುನೋsಸುರೈರ್ವಿದೂಷಿತಾತ್ಮನಾ ।

ನ ವಿಪ್ರ ತಾದೃಶೋsಸ್ಮ್ಯಹಂ ಯಥೈವ ಕೇಶವಾದಯಃ ॥೨೧.೧೮॥

ಆಗ ಅರ್ಜುನ ಅಸುರಾವೇಶದಿಂದ ಹೇಳುವ,

ಎಲೈ ಬ್ರಾಹ್ಮಣ ನಾನು ಕೃಷ್ಣಾದಿಗಳಂತಲ್ಲ ಎನ್ನುವ.

 

 

ಮಯಾ ಜಿತಾ ಹಿ ಖಾಣ್ಡವೇ ಸುರಾಸ್ತಥಾsಸುರಾನಹಮ್ ।

ನಿವಾತವರ್ಮ್ಮನಾಮಕಾನ್  ವಿಜೇಷ್ಯ ಉತ್ತರತ್ರ ಹಿ ॥೨೧.೧೯॥

ಹಿಂದೆ ಖಾಂಡವವನ ದಹನದಲ್ಲಿ ದೇವತೆಗಳ ಗೆದ್ದಿದ್ದೇನೆ,

ಮುಂದೆ ನಿವಾತಕವಚರೆಂಬ ಅಸುರರನ್ನು ಗೆಲ್ಲುವವನಿದ್ದೇನೆ.

 

 

ಉದೀರ್ಯ್ಯ ಚೇತಿ ಕೇಶವಂ ಸ ಊಚಿವಾನ್ ವ್ರಜಾಮ್ಯಹಮ್ ।

ಇತೀರಿತೋsವದದ್ಧರಿಸ್ತವಾತ್ರ ಶಕ್ಯತೇ ನು ಕಿಮ್ ॥೨೧.೨೦॥

ಹೀಗೆ ಹೇಳಿದ ಅರ್ಜುನ ಕೃಷ್ಣಗೆ ನಾನು ಹೋಗುತ್ತೇನೆ ಅಂದ,

ಎಲ್ಲಾ ಕೇಳಿದ ಕೃಷ್ಣ ನಿನ್ನಲ್ಲಿ ಆ ಸಾಮರ್ಥ್ಯವಿದೆಯೇ ಎಂದ.

 

 

ವಿಲಜ್ಜಮಾನಮೀಕ್ಷ್ಯ ತಂ ಜಗಾದ ಕೇಶವೋsರಿಹಾ ।

ವ್ರಜೇತಿ ಸ ಪ್ರತಿಶ್ರವಂ ಚಕಾರ ಹಾಪ್ಯರಕ್ಷಣೇ ॥೨೧.೨೧॥

 

ವಹ್ನಿಂ ಪ್ರವೇಕ್ಷ್ಯೆsಶಕ್ತಶ್ಚೇದಿತ್ಯುಕ್ತ್ವಾ ಸರ್ವಯಾದವೈಃ ।

ಯಯೌ ನ ರಾಮಪ್ರದ್ಯುಮ್ನಾವನಿರುದ್ಧಂ ಚ ಕೇಶವಃ ॥೨೧.೨೨॥

ಕೃಷ್ಣನ ಮಾತನ್ನು ಕೇಳಿದ ಅರ್ಜುನ ಲಜ್ಜಿತನಾದ,

ಅರಿಗಳ ನಿಗ್ರಹಿಸುವ ಹರಿ-ಸರಿ ಹೊರಡು ಎಂದ.

ಒಂದುವೇಳೆ ನನ್ನಿಂದ ಬ್ರಾಹ್ಮಣಪುತ್ರರ ರಕ್ಷಣೆ ಆಗದಿದ್ದರೆ,

ಅರ್ಜುನನೆಂದ-ಅಗ್ನಿಪ್ರವೇಶ ಮಾಡುವೆ ಸೋತು ಹೋದರೆ.

ಪ್ರತಿಜ್ಞೆಗೈದ ಅರ್ಜುನ ಯಾದವರನ್ನೊಡಗೂಡಿ ಹೊರಟ,

ಬಲರಾಮ ಪ್ರದ್ಯುಮ್ನ ಅನಿರುದ್ಧರನ್ನು ಕೃಷ್ಣ ಕಳಿಸದೇ ಬಿಟ್ಟ,

ಅವರುಗಳ ಕೀರ್ತಿ ಕಾಪಾಡುವುದಕ್ಕೆ ಶ್ರೀಕೃಷ್ಣ ಆಡಿದ ಆಟ.


[Contributed by Shri Govind Magal]