Sunday, 5 December 2021

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 21: 29-33

 

ವಹ್ನಿಂ ವಿವಿಕ್ಷನ್ತಮಮುಂ ನಿವಾರ್ಯ್ಯ ಯಯೌ ಸವಿಪ್ರಃ  ಸಹಫಲ್ಗುನೋ ಹರಿಃ ।

ಆಶಾಮುದೀಚೀಂ ಬೃಹತಾ ರಥೇನ ಕ್ಷಣೇನ ತೀರ್ತ್ತ್ವೈವ ಚ ಸಪ್ತವಾರಿಧೀನ್             ॥೨೧.೨೯॥

ಆನಂತರ ಅಗ್ನಿಪ್ರವೇಶ ಮಾಡಲು ಉದ್ಯುಕ್ತನಾಗಿದ್ದ ಅರ್ಜುನ,

ಹಾಗೆ ಮಾಡದಂತೆ ಅವನ ತಡೆದ ಸಕಲನಿಯಾಮಕ ಶ್ರೀಕೃಷ್ಣ.

ಬ್ರಾಹ್ಮಣ, ಅರ್ಜುನನೊಂದಿಗೆ ಕೃಷ್ಣ ಬೃಹತ್ ರಥವನ್ನೇರಿದ,

ಉತ್ತರದಿಕ್ಕಿನಲಿ ಕ್ಷಣದಿ ಏಳು ಸಮುದ್ರಗಳ ದಾಟಿ ತೆರಳಿದ.

 

ದದುಶ್ಚ ಮಾರ್ಗ್ಗಂ ಗಿರಯೋsಬ್ಧಯಸ್ತಥಾ ವಿದಾರ್ಯ್ಯ ಚಕ್ರೇಣ ತಮೋsನ್ಧಮೀಶಃ ।

ಘನೋದಕಂ ಚಾಪ್ಯತಿತೀರ್ಯ್ಯ ತತ್ರ ದದರ್ಶ ಧಾಮ ಸ್ವಮನನ್ತವೀರ್ಯ್ಯಃ             ॥೨೧.೩೦॥

ಅವರಿಗೆ ದಾರಿ ಮಾಡಿಕೊಟ್ಟವು ಪರ್ವತ ಸಮುದ್ರಗಳು,

ಕೃಷ್ಣಚಕ್ರ ಭೇದಿಸಿತು ದಟ್ಟವಾದ (ಅಂಧತಮಸ್ಸು) ಆ ಕತ್ತಲು.

ಕೃಷ್ಣ ದಾಟಿಸಿದ ಘನೋದಕವನ್ನು ಕೂಡಾ,

ತನ್ನ ಅಪ್ರಾಕೃತವಾದ ಧಾಮವನ್ನು ಕಂಡ.

 

ಸಂಸ್ಥಾಪ್ಯ ದೂರೇ ಸರಥಂ ಸವಿಪ್ರಂ ಪಾರ್ತ್ಥಂ ಸ್ವರೂಪೇ ದ್ವಿಚತುಷ್ಕಬಾಹೌ ।

ಸಮಸ್ತರತ್ನೋಜ್ಜ್ವಲದಿವ್ಯಭೂಷಣೇ ವಿವೇಶ ನಿತ್ಯೋರುಗುಣಾರ್ಣ್ಣವೇ ಪ್ರಭುಃ             ॥೨೧.೩೧॥

ಕೃಷ್ಣ ದೂರದಲ್ಲಿ ಬ್ರಾಹ್ಮಣ ಮತ್ತು ಅರ್ಜುನರಿದ್ದ ರಥವ ನಿಲ್ಲಿಸಿದ,

ಅಷ್ಟಬಾಹುಗಳ ರತ್ನಖಚಿತ ಭೂಷಣಗಳ ಮೂಲ ರೂಪ ಪ್ರವೇಶಿಸಿದ.

 

ಸಹಸ್ರಮೂರ್ದ್ಧನ್ಯುರುಶೇಷಭೋಗ ಆಸೀನರೂಪೇsಮಿತಸೂರ್ಯ್ಯದೀಧಿತೌ ।

ರಮಾಸಹಾಯೇ ತಟಿದುಜ್ಜ್ವಲಾಮ್ಬರೇ ಮುಕ್ತೈರ್ವಿರಿಞ್ಚಾದಿಭಿರರ್ಚ್ಚಿತೇ ಸದಾ             ॥೨೧.೩೨॥

 

ಸ್ಥಿತ್ವೈಕರೂಪೇಣ ಮುಹೂರ್ತ್ತಮೀಶ್ವರೋ ವಿನಿರ್ಯ್ಯಯೌ ವಿಪ್ರಸುತಾನ್ ಪ್ರಗೃಹ್ಯ ।

ಸುನನ್ದನನ್ದಾದಯ ಏವ ಪಾರ್ಷದಾಸ್ತೇ ವೈಷ್ಣವಾ ಭೂಮಿತಳೇ ಪ್ರಜಾತಾಃ             ॥೨೧.೩೩॥

ಅನಂತ ತಲೆಗಳ ಉತ್ಕೃಷ್ಟ ಮುಕ್ತಶೇಷನ ಮೈಮೇಲೆ ಕುಳಿತಿದ್ದ,

ಲಕ್ಷ್ಮಿಯೊಂದಿಗೆ ಮಿತಿಯಿರದ ಸೂರ್ಯರ ಕಾಂತಿಯಿಂದ ಹೊಳೆಯುತ್ತಿದ್ದ.

ಮಿಂಚಿನಂತಹಾ ಬಣ್ಣದ ಬಟ್ಟೆಯನ್ನು ತೊಟ್ಟಿದ್ದ,

ಮುಕ್ತಬ್ರಹ್ಮಾದಿಗಳಿಂದ ಪೂಜಿಸಲ್ಪಡುತ್ತಿದ್ದ,

ಸರ್ವೇಶ್ವರ ಕೃಷ್ಣ ಆ ಮೂಲರೂಪದಲ್ಲಿ ಐಕ್ಯ ಹೊಂದಿದ,

ಅತಿ ಸ್ವಲ್ಪಕಾಲದಲ್ಲೇ ಬ್ರಾಹ್ಮಣಪುತ್ರರೊಂದಿಗೆ ಹೊರಬಂದ.

ಸುನಂದ, ನಂದ, ಕುಮುದ, ಕುಮುದಾಕ್ಷ ಎಂಬುವರು ವಿಷ್ಣುಲೋಕ ಪಾಲಕರು,

ಅವರುಗಳೇ ವಿಪ್ರಗೃಹದಲ್ಲಿ ಜನಿಸಿ ನಂತರ ಮಾಯವಾಗಿ ಹೋಗುತ್ತಿದ್ದವರು.

[Contributed by Shri Govind Magal]

No comments:

Post a Comment

ಗೋ-ಕುಲ Go-Kula