Thursday, 2 December 2021

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 21: 12-16

ಹಯಂ ಸಭೀಮಫಲ್ಗುನಾ  ಹರೇ ರಥಂ ಸಮಾಸ್ಥಿತಾಃ ।

ವ್ಯಚಾರಯನ್ ಹರೇಃ ಸುತಾ ದಿನಸ್ಯ ಪಾದಮಾತ್ರತಃ ॥೨೧.೧೨॥

ಭೀಮಾರ್ಜುನ ಮೊದಲಾದವರ ಜೊತೆಯಲ್ಲಿ,

ಕೃಷ್ಣಪುತ್ರರು ಏರಿಕುಳಿತರು ಭಗವದ್ರಥದಲ್ಲಿ.

ಯಾಗದ ಕುದುರೆಯೊಂದಿಗೆ ಎಲ್ಲಾ ಸುತ್ತಿ ಬಂದಾಗ,

ಸಮಯ ಕಳೆದದ್ದಷ್ಟೇ ಒಂದು ದಿನದಲ್ಲಿ ಕಾಲುಭಾಗ.

 

ಜಿತಾಃ ಸಮಸ್ತಭೂಭೃತೋ ಜರಾಸುತಾದಯಃ ಕ್ಷಣಾತ್ ।

ವೃಕೋದರಾದಿಭಿಸ್ತು ತೈರ್ಹಯಶ್ಚ ದಿವ್ಯ ಆಯಯೌ ॥೨೧.೧೩॥

ಜರಾಸಂಧಾದಿ ರಾಜರೆಲ್ಲರೂ ಭೀಮಸೇನಾದಿಗಳಿಂದ ಸೋತಾಗ,

ದಿನದ ಕಾಲಂಶ ಸಂದಿತ್ತು ಯಾಗದ ಅಲೌಕಿಕ ಕುದುರೆ ಹಿಂದಿರುಗಿದಾಗ.

 

ಹಯಃ ಸ ಕೃಷ್ಣನಿರ್ಮ್ಮಿತೋ ದಿನೇನ ಲಕ್ಷಯೋಜನಮ್ ।

ಕ್ಷಮೋ ಹಿ ಗನ್ತುಮಞ್ಜಸಾ ದಿನಾಶ್ವಮೇಧಸಿದ್ಧಯೇ ॥೨೧.೧೪॥

ಒಂದು ದಿನದಲ್ಲಿ ಅಶ್ವಮೇಧ ಯಾಗವ ಮಾಡುವ ಉದ್ದೇಶ,

ಅದಕ್ಕಾಗೇ ಕೃಷ್ಣನಿಂದ ನಿರ್ಮಿಸಲ್ಪಟ್ಟಿತ್ತು ಯಾಗದ ಅಶ್ವ.

ಒಂದೇ ದಿನದಲ್ಲಿ ಲಕ್ಷ ಯೋಜನದ ಸಂಚಾರ,

ಸಮರ್ಥವಾಗಿಸಿತ್ತು ಕುದುರೆಯ ದೈವವ್ಯಾಪಾರ.

 

ಪರಾಶರಾತ್ಮಜೋ ಹರಿರ್ಹರಿಂ ಯದಾ ತ್ವದೀಕ್ಷಯತ್ ।

ತದಾssಸಸಾದ ಹ ದ್ವಿಜಸ್ತೃಣಾವಹೋ ರುರಾವ ಚ ॥೨೧.೧೫॥

ಪರಾಶರ ಪುತ್ರ ವ್ಯಾಸರೂಪಿ ನಾರಾಯಣ,

ದೀಕ್ಷಿತನನ್ನಾಗಿ ಮಾಡಿದನು -ಶ್ರೀಕೃಷ್ಣನನ್ನ.

ಆಗಲ್ಲಿಗೆ ಬಂದ ಒಂದಿಷ್ಟು ಹುಲ್ಲು ಹಿಡಿದ ಬ್ರಾಹ್ಮಣ,

ಹಾಗೆ ಬಂದ ಅವನು ಮಾಡುತ್ತಿದ್ದದ್ದು ರೋದನ.

 

ಬ್ರಜನ್ತಿ ಜನ್ಮನೋsನು ಮೇ ಸದಾ ಸುತಾ ಅದೃಶ್ಯತಾಮ್ ।

ಇತೀರಿತೇsರ್ಜ್ಜುನೋsಬ್ರವೀದಹಂ ಹಿ ಪಾಮಿ ತೇ ಸುತಾನ್ ॥೨೧.೧೬॥

ಬ್ರಾಹ್ಮಣನೆಂದ -ನನ್ನ ಮಕ್ಕಳೆಲ್ಲರೂ ಹುಟ್ಟಿದ ಕೊಡಲೇ ಆಗುತ್ತಿದ್ದಾರೆ ಅದೃಶ್ಯ,

ಅರ್ಜುನ ಉತ್ತರಿಸಿದ -ನಿನ್ನ ಮಕ್ಕಳನ್ನು ರಕ್ಷಿಸಿ ಕೊಡುವುದು ನನ್ನ ಕೆಲಸ.


[Contributed by Shri Govind Magal]

No comments:

Post a Comment

ಗೋ-ಕುಲ Go-Kula