Sunday 11 December 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 23: 49-59

 

ಏವಂ ವಿರಾಟಂ ಮೋಚಯಿತ್ವೈವ ಗಾಶ್ಚ ತಮಸ್ಯನ್ಧೇ ಕೀಚಕಾನ್ ಪಾತಯಿತ್ವಾ ।

ಪ್ರಾಪ್ತೋ ಧರ್ಮ್ಮಃ ಸುಮಹಾನ್ ವಾಯುಜೇನ ತಸ್ಯಾನು ಪಾರ್ತ್ಥೇನ ಚ ಗೋವಿಮೋಕ್ಷಣಾತ್ ॥೨೩.೪೯॥

ಹೀಗೆ ವಿರಾಟನನ್ನೂ ಅವನ ಹಸುಗಳನ್ನೂ ಬಿಡುಗಡೆಗೊಳಿಸಿದ ಭೀಮಸೇನ,

ಕೀಚಕರ ಅಂಧಂತಮಸ್ಸಿಗೆ ಕಳಿಸಿದ ಭೀಮಗಾಯಿತು ಮಹಾಪುಣ್ಯ ಪ್ರದಾನ.

ಗೋವುಗಳನ್ನು ಬಿಡಿಸಿದ್ದರಿಂದ ಭೀಮನ ನಂತರದ ಪುಣ್ಯ ಹೊಂದಿದ ಅರ್ಜುನ.

 

ಅಯಾತಯನ್ ಕೇಶವಾಯಾಥ ದೂತಾನ್ ಸಹಾಭಿಮನ್ಯುಃ ಸೋSಪಿ ರಾಮೇಣ ಸಾರ್ದ್ಧಮ್ ।

ಆಗಾದನನ್ತಾನನ್ದಚಿದ್ ವಾಸುದೇವೋ ವಿವಾಹಯಾಮಾಸುರಥಾಭಿಮನ್ಯುಮ್ ॥೨೩.೫೦॥

ಆನಂತರ ಪಾಂಡವರ ಕಡೆಯಿಂದ ಶ್ರೀಕೃಷ್ಣನಲ್ಲಿಗೆ ಕಳುಹಿಸಲ್ಪಡುತ್ತಾನೆ ಒಬ್ಬ ದೂತ,

ಬಲಭದ್ರ ಅಭಿಮನ್ಯುವಿನೊಡನೆ ವಿರಾಟನಗರಕ್ಕೆ ಸಾಗಿ ಬರುತ್ತಾನೆ ಸರ್ವಜ್ಞನಾತ.

ಅಭಿಮನ್ಯುವಿಗೆ ಮದುವೆ ಮಾಡಿಸಿದರು ಒದಗಿ ಬಂದಿದ್ದರಿಂದ ಸುಮುಹೂರ್ತ.

 

ಆಸೀನ್ಮಹಾನುತ್ಸವಸ್ತತ್ರ ತೇಷಾಂ ದಶಾರ್ಹವೀರೈಃ ಸಹ ಪಾಣ್ಡವಾನಾಮ್ ।

ಸಪಾಞ್ಚಾಲಾನಾಂ ವಾಸುದೇವೇನ ಸಾರ್ದ್ಧಮಜ್ಞಾತವಾಸಂ ಸಮತೀತ್ಯ ಮೋದತಾಮ್ ॥೨೩.೫೧॥

ಆಗ ಯಾದವರಿಂದ ಕೂಡಿದ ಪಾಂಡವರಿಗೆ ಅದು ಹಬ್ಬದ ಸಂಭ್ರಮ,

ಪಾಂಚಾಲರೂ ಇದ್ದ ಹಬ್ಬದಲ್ಲವರು ಮುಗಿಸಿದ್ದರು ಅಜ್ಞಾತದ ನಿಯಮ.

 

ದುರ್ಯ್ಯೋಧನಾದ್ಯಾಃ ಸೂತಪುತ್ರೇಣ ಸಾರ್ದ್ಧಂ ಸಸೌಬಲೇಯಾ ಯುಧಿ ಪಾರ್ತ್ಥಪೀಡಿತಾಃ ।

ಭೀಷ್ಮಾದಿಭಿಃ ಸಾರ್ದ್ಧಮುಪೇತ್ಯ ನಾಗಪುರಂ ಮನ್ತ್ರಂ ಮನ್ತ್ರಯಾಮಾಸುರತ್ರ ॥೨೩.೫೨॥

ಈಕಡೆ ಯುದ್ಧದಲ್ಲಿ ಅರ್ಜುನನಿಂದ ಸೋತ ದುರ್ಯೋಧನ, ಕರ್ಣ, ಶಕುನಿ ಮುಂತಾದವರು,

ಭೀಷ್ಮಾದಿಗಳೊಡನೆ ಹಸ್ತಿನಪುರಕ್ಕೆ ಹೋಗಿ ಮಂತ್ರಾಲೋಚನೆ ಮಾಡಲೆಂದು ಸೇರಿದರು.

 

ಅಜ್ಞಾತವಾಸೇ ಫಲ್ಗುನೋ ನೋSದ್ಯ ದೃಷ್ಟಸ್ತಸ್ಮಾತ್ ಪುನರ್ಯ್ಯಾನ್ತು ಪಾರ್ತ್ಥಾ ವನಾಯ ।

ಇತಿ ಬ್ರುವಾಣಾನಾಹ ಭೀಷ್ಮೋSಭ್ಯತೀತಮಜ್ಞಾತವಾಸಂ ದ್ರೋಣ ಆಹೈವಮೇವ ॥೨೩.೫೩॥

ಅಜ್ಞಾತವಾಸದಲ್ಲಿ ಅರ್ಜುನ ತಮಗೆ ಕಂಡಿದ್ದರಿಂದ ಮತ್ತವರು ಕಾಡಿಗೆ ಹೋಗಬೇಕೆಂದು ಕೌರವರ ವಾದ,

ಅಜ್ಞಾತವಾಸ ಮುಗಿದಿದೆಯೆಂದು ತಿಳಿಸಿ ಭೀಷ್ಮ ದ್ರೋಣರು ಕೌರವರಿಗೆ ಹೇಳುತ್ತಾರೆ ಬುದ್ಧಿವಾದ.

 

ತಯೋರ್ವಾಕ್ಯಂ ತೇ ತ್ವನಾದೃತ್ಯ ಪಾಪಾ ವನಂ ಪಾರ್ತ್ಥಾಃ ಪುನರೇವ ಪ್ರಯಾನ್ತು ।

ಇತಿ ದೂತಂ ಪ್ರೇಷಯಾಮಾಸುರತ್ರ ಜಾನನ್ತಿ ವಿಪ್ರಾ ಇತಿ ಧರ್ಮ್ಮಜೋSವದತ್ ॥೨೩.೫೪॥

ಅವರಿಬ್ಬರ ಮಾತಿನೆಡೆಗೆ ಕೌರವರ ಅನಾದರ ಮತ್ತು ತಿರಸ್ಕಾರ,

ದೂತನ ಕಳಿಸಿ ಮಾಡುತ್ತಾರೆ ಪಾಂಡವರ ಕಾಡಿಗಟ್ಟುವ ಹುನ್ನಾರ.

ಧರ್ಮರಾಜನಿಂದ 'ಬ್ರಾಹ್ಮಣರಿಗೆ ತಿಳಿದಿದೆ' ಎಂದ್ಹೇಳುವ ವ್ಯಾಪಾರ.

 

[ಯಾವ ಕಾಲಮಾನದ ಪ್ರಕಾರ ಯುಧಿಷ್ಠಿರ, ಭೀಷ್ಮ-ದ್ರೋಣಾದಿಗಳು ಅಜ್ಞಾತವಾಸ ಪೂರ್ಣವಾಗಿದೆ ಎಂದು ಹೇಳಿದರು ಹಾಗೂ ಯಾವ ಕಾಲಮಾನದ ಪ್ರಕಾರ ದುರ್ಯೋಧನಾದಿಗಳು ಅಜ್ಞಾತವಾಸ ಅಪೂರ್ಣವಾಗಿದೆ  ಎಂದರು ಎನ್ನುವುದನ್ನು ವಿವರಿಸುತ್ತಾರೆ-]  

 

ಸೌರಮಾಸಾನುಸಾರೇಣ ಧಾರ್ತ್ತರಾಷ್ಟ್ರಾ ಅಪೂರ್ಣ್ಣತಾಮ್ ।

ಆಹುಶ್ಚಾನ್ದ್ರೇಣ ಮಾಸೇನ ಪೂರ್ಣ್ಣಃ ಕಾಲೋSಖಿಲೋSಪ್ಯಸೌ ॥೨೩.೫೫॥

ಪಾಂಡವರ ಅಜ್ಞಾತವಾಸಕ್ಕೆ ವರ್ಷವಾಗಿರಲಿಲ್ಲ ಸೌರಮಾನದ ಪ್ರಕಾರ,

ಸಂಪೂರ್ಣವಾಗಿತ್ತು ಆಗಿನ ಮಾಪನವಾಗಿದ್ದ ಚಾಂದ್ರಮಾನದ ಪ್ರಕಾರ.

 

ದಿನಾನಾಮಧಿಪಃ ಸೂರ್ಯ್ಯಃ ಪಕ್ಷಮಾಸಾಬ್ದಪಃ ಶಶೀ ।

ತಸ್ಮಾತ್ ಸೌಮ್ಯಾಬ್ದಮೇವಾತ್ರ ಮುಖ್ಯಮಾಹುರ್ಮ್ಮನೀಷಿಣಃ ॥೨೩.೫೬॥

ದಿನಗಳ ಅಧಿಪತಿ ಸೂರ್ಯನಾದುದರಿಂದ,

ಪಕ್ಷ ತಿಂಗಳಿಗೆ ಚಂದ್ರನೇ ಅಧಿಪತಿಯಾದ್ದರಿಂದ, ಚಾಂದ್ರಮಾನವೇ ಸರಿಯೆಂದರಾ ಕಾರಣದಿಂದ.

 

ಸೌಮ್ಯಂ ಕಾಲಂ ತತೋ ಯಜ್ಞೇ ಗೃಹ್ಣನ್ತಿ ನತು ಸೂರ್ಯ್ಯಜಮ್ ।

ತದೇತದವಿಚಾರ್ಯ್ಯೈವ ಲೋಭಾಚ್ಚ ಧೃತರಾಷ್ಟ್ರಜೈಃ ॥೨೩.೫೭॥

ಇದಾಗಿತ್ತು ವೈದಿಕ ಸಂಪ್ರದಾಯ ಸಿದ್ಧ,

ಯಜ್ಞಗಳಿಗೂ ಚಾಂದ್ರಮಾನವೇ ಬದ್ಧ.

ಲೋಭಿ ದುರ್ಯೋಧನಾದಿಗಳಿಂದ ಇದ್ಯಾವುದೂ ಆಗಲಿಲ್ಲ ವಿಚಾರ,

ದುರಾಸೆ ದುರಾಲೋಚನೆಯ ಕೌರವರು ಬಿಟ್ಟು ಕೊಡಲಿಲ್ಲ ರಾಜ್ಯಭಾರ.

 

ರಾಜ್ಯಂ ನ ದತ್ತಂ ಪಾರ್ತ್ಥೇಭ್ಯಃ ಪಾರ್ತ್ಥಾಃ ಕಾಲಸ್ಯ ಪೂರ್ಣ್ಣತಾಮ್ ।

ಖ್ಯಾಪಯನ್ತೋ ವಿಪ್ರವರೈರುಪಪ್ಲಾವ್ಯಮುಪಾಯಯುಃ ॥೨೩.೫೮॥

ಪಾಂಡವರು ಕಾಲ ಪೂರ್ಣವಾಗಿದೆಯೆಂದು ಜಗತ್ತಿಗೆ ಹೇಳುತ್ತಾ,

ಬ್ರಾಹ್ಮಣರೊಡಗೂಡಿ ಬರುತ್ತಾರೆ ಉಪಪ್ಲಾವ್ಯ ನಗರದತ್ತ.

 

ಸವಾಸುದೇವಾ ಅಖಿಲೈಶ್ಚ ಯಾದವೈಃ ಪಾಞ್ಚಾಲಮತ್ಸೈಶ್ಚ ಯುತಾಃ ಸಭಾರ್ಯ್ಯಾಃ ।

ಉಪಪ್ಲಾವ್ಯೇ ತೇ ಕತಿಚಿದ್ ದಿನಾನಿ ವಾಸಂ ಚಕ್ರುಃ ಕೃಷ್ಣಸಂಶಿಕ್ಷಿತಾರ್ತ್ಥಾಃ ॥೨೩.೫೯॥

ಶ್ರೀಕೃಷ್ಣನೇ ಮೊದಲಾದ ಎಲ್ಲಾ ಯಾದವರು,

ಪಾಂಚಾಲ, ಮತ್ಸ್ಯದೇಶದವರು, ಪತ್ನಿಯರು,

ಇವರೆಲ್ಲರೊಡಗೂಡಿದ ಪಾಂಡವರು ಪಡೆಯುತ್ತಾ ಕೃಷ್ಣನುಪದೇಶ,

ಮಾಡುತ್ತಾರೆ ಉಪಪ್ಲಾವ್ಯ ನಗರದಲ್ಲೇ ಕೆಲವು ದಿನಗಳ ವಾಸ.

[ಆದಿತಃ ಶ್ಲೋಕಾಃ :  ೩೬೩೯+೫೯=೩೬೯೮]

ಇತಿ ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ ಶ್ರಿಮನ್ಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ಅಜ್ಞಾತವಾಸಸಮಾಪ್ತಿರ್ನ್ನಾಮ ತ್ರಯೋವಿಂಶೋSದ್ಧ್ಯಾಯಃ ॥

 

ಹೀಗೆ ಶ್ರೀಮದಾನಂದತೀರ್ಥಭಗವತ್ಪಾದರಿಂದ ವಿರಚಿತವಾದ,

ಶ್ರೀಮನ್ಮಹಾಭಾರತತಾತ್ಪರ್ಯನಿರ್ಣಯದ ಭಾವಾನುವಾದ,

ಅಜ್ಞಾತವಾಸಸಮಾಪ್ತಿ ಹೆಸರಿನ ಇಪ್ಪತ್ಮೂರನೇ ಅಧ್ಯಾಯ,

ಶ್ರೀಕೃಷ್ಣ, ಆಚಾರ್ಯಮಧ್ವರಿಗರ್ಪಿಸಿದ ಧನ್ಯತಾ ಭಾವ.

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 23: 36-48

 

ತತೋSಪರದಿನೇ ಸರ್ವೇ ಭೀಷ್ಮದ್ರೋಣಪುರಸ್ಸರಾಃ ।

ರಹಿತಂ ಕೀಚಕೈರ್ಮ್ಮಾತ್ಸ್ಯಂ ಶಕ್ಯಂ ಮತ್ವಾSಭಿನಿರ್ಯ್ಯಯುಃ ॥೨೩.೩೬॥

ಕೀಚಕನ ಸಾವಿನ ಮಾರನೇ ದಿನ ಮತ್ಸ್ಯದೇಶವಾಗಿತ್ತು ಕೀಚಕ ರಹಿತ,

ಭೀಷ್ಮದ್ರೋಣಾದಿಗಳು ಹೊರಟರು ಸುಲಭತುತ್ತು ವಿರಾಟ ನಗರದತ್ತ.

 

[ಹಾಗಿದ್ದರೆ ಈ ಹಿಂದೆ ಏಕೆ ಈ ಭೀಷ್ಮಾದಿಗಳು ವಿರಾಟನನ್ನು ಗೆಲ್ಲುವ ಪ್ರಯತ್ನ ಮಾಡಿರಲಿಲ್ಲ ಎಂದರೆ ಹೇಳುತ್ತಾರೆ-]

 

ಕೀಚಕಸ್ಯ ಹಿಡಿಮ್ಬಸ್ಯ ಬಕಕಿರ್ಮ್ಮೀರಯೋರಪಿ ।

ಜರಾಸನ್ಧಸ್ಯ ನೃಪತೇಃ ಕಂಸಾದೀನಾಂ ಚ ಸರ್ವಶಃ ॥೨೩.೩೭॥

 

ನ ಬಾಧನಾಯ ಭೀಷ್ಮಾದ್ಯಾ ಅಪಿ ಶೇಕುಃ ಕಥಞ್ಚನ ।

ತಸ್ಮಾತ್ ತೇ ಕೀಚಕಂ ಶಾನ್ತಂ ಶ್ರುತ್ವಾ ಮಾತ್ಸ್ಯಂ ಯಯುರ್ಯ್ಯುಧೇ ॥೨೩.೩೮॥

ಕೀಚಕ, ಹಿಡಿಂಬ, ಬಕ, ಕಿರ್ಮೀರ, ಜರಾಸಂಧ ಮತ್ತು ಕಂಸ,

ಇವರಗೆಲ್ಲುವುದಾಗಿರಲಿಲ್ಲ ಭೀಷ್ಮಾದಿಗಳಿಗೂ ನಿರಾಯಾಸ.

ಭೀಷ್ಮಾದಿಗಳಿಗೆ ಸ್ಪಷ್ಟವಾಗಿತ್ತು ಕೀಚಕನ ಮರಣ,

ವಿರಾಟನಗರದ ಮೇಲೆ ಆಕ್ರಮಿಸಲಾಗಿತ್ತು ಕಾರಣ.

 

[ದ್ರೋಣಾಚಾರ್ಯರು ಈ ಯುದ್ಧದಲ್ಲಿ ಪಾಲ್ಗೊಂಡಿರುವುದಕ್ಕೆ ಕಾರಣವನ್ನು ಹೇಳುತ್ತಾರೆ-]

 

ಯತಿಷ್ಯೇ ರಕ್ಷಿತುಂ ಭೀಮಾದ್ ಧಾರ್ತ್ತರಾಷ್ಟ್ರಾನಿತಿ ಸ್ವಕಾಮ್ ।

ಸತ್ಯಾಂ ಕರ್ತ್ತುಂ ಪ್ರತಿಜ್ಞಾಂ ತು ಯಯೌ ದ್ರೋಣಃ ಸಪುತ್ರಕಃ ॥೨೩.೩೯॥

ಭೀಮಸೇನನಿಂದ ದುರ್ಯೋಧನಾದಿಗಳ ರಕ್ಷಿಸುವ ಪ್ರಯತ್ನದ ಪಣವನ್ನ,

ತೊಟ್ಟಿದ್ದರಿಂದ ಮಗ ಅಶ್ವತ್ಥಾಮನ ಜೊತೆ ಹೊರಡುತ್ತಾರೆ ಆಚಾರ್ಯ ದ್ರೋಣ.

 

[ಯುದ್ಧಕ್ಕೆಂದು ಬರುತ್ತಿರುವ ಕೌರವಾದಿಗಳ ಯೋಚನೆ ಏನಿತ್ತು? ಅವರಿಗೆ ನಿಖರವಾಗಿ ಪಾಂಡವರು ವಿರಾಟನಗರದಲ್ಲಿದ್ದಾರೆ ಎಂದು ಗೊತ್ತಿತ್ತೇ? - ]

 

ಯದಿ ಯುದ್ಧಾಯ ನಿರ್ಯ್ಯಾನ್ತಿ ಜ್ಞಾತಾಃ ಸ್ಯುಃ ಪಾಣ್ಡವಾಸ್ತದಾ ।

ನ ಚೇದ್ ವಿರಾಟಮನತಂ ನಮಯಿಷ್ಯಾಮಹೇ ವಯಮ್ ।

ಇತಿ ಮತ್ವಾ ವಿರಾಟಸ್ಯ ಜಗೃಹುರ್ಗ್ಗಾಃ ಸಮನ್ತತಃ ॥೨೩.೪೦॥

ಒಂದೊಮ್ಮೆ ಪಾಂಡವರು ಯುದ್ಧಕೆ ಬಂದರೆ ಆಗುವುದು ಅವರ ಪತ್ತೆ ಕಾರ್ಯ,

ಇಲ್ಲದಿರೆ ವಿರಾಟನ ಬಗ್ಗಿಸುವುದಾಗಲೆಂದು ಮಾಡಿದರು ಗೋವು ಅಪಹಾರ.

 

ತದೋತ್ತರಃ ಸಾರಥಿತ್ವೇ ಪ್ರಕಲ್ಪ್ಯ ಪಾರ್ತ್ಥಂ ಯಯೌ ತಾನ್ ನಿಶಾಮ್ಯೈವ ಭೀತಃ ।

ತತೋSರ್ಜ್ಜುನಃ ಸಾರಥಿಂ ತಂ ವಿಧಾಯ ಕೃಚ್ಛ್ರೇಣ ಸಂಸ್ಥಾಪ್ಯ ಚ ತಂ ಯಯೌ ಕುರೂನ್ ॥೨೩.೪೧॥

ಆಗ ವಿರಾಟರಾಜನ ಮಗನಾದಂಥ ಉತ್ತರಕುಮಾರ ತಾನು,

ಅರ್ಜುನನ ಸಾರಥಿ ಮಾಡಿಕೊಂಡು ಕೌರವರನೆದುರಿಸಲು ಬರುವನು.

ಆದರೆ ಕೌರವರನ್ನು ನೋಡಿಯೇ ಉತ್ತರಕುಮಾರ ಭಯಗ್ರಸ್ತನಾಗುತ್ತಾನೆ,

ಪ್ರಯಾಸದಿಂದವನ ಹಿಡಿದು ಸಾರಥಿಯಾಗಿಸಿದ ಅರ್ಜುನ ಕೌರವರನೆದುರಿಸುತ್ತಾನೆ.

 

ಆದಾಯ ಗಾಣ್ಡೀವಮಥ ಧ್ವಜಂ ಚ ಹನೂಮದಙ್ಕಂ ಸದರೋSಗ್ರತೋ ಗಾಃ ।

ನಿವರ್ತ್ತ್ಯ ಯುದ್ಧಾಯ ಯಯೌ ಕುರೂಂಸ್ತಾನ್ ಜಿಗ್ಯೇ ಸರ್ವಾನ್ ದ್ವೈರಥೇನೈವ ಸಕ್ತಾನ್ ॥೨೩.೪೨॥

ಅರ್ಜುನ ಗಾಂಡೀವ,ಹನುಮ ಚಿಹ್ನೆಯಧ್ವಜ, ಶಂಖ ಹೊಂದುತ್ತಾನೆ,

ಹಸುಗಳನ್ನು ವಿರಾಟನಗರದತ್ತ ತಿರುಗಿಸಿ ಯುದ್ಧಕ್ಕಾಗಿ ತೆರಳುತ್ತಾನೆ.

ದ್ವಂದ್ವಯುದ್ಧಕ್ಕೆ ಬಂದ ಕೌರವ ವೀರರನ್ನು ಅರ್ಜುನನು ಗೆಲ್ಲುತ್ತಾನೆ.

 

ಏಕೀಭೂತಾನ್ ಪುನರೇವಾನುಯಾತಾನ್ ಸಮ್ಮೋಹನಾಸ್ತ್ರೇಣ ವಿಮೋಹಯಿತ್ವಾ ।

ಜಗ್ರಾಹ ತೇಷಾಮುತ್ತರೀಯಾಣ್ಯೃತೇ ತು ಭೀಷ್ಮಸ್ಯ ವೇದಾಸ್ತ್ರಘಾತಂ ಸ ಏವ ॥೨೩.೪೩॥

ನಂತರ ಒಟ್ಟಿಗೆ ಎಲ್ಲರೂ ಸೇರಿ ಅರ್ಜುನನ ಮೇಲೆ

ಮಾಡುತ್ತಾರೆ ಆಕ್ರಮಣ,

ಅರ್ಜುನ ಅವರೆಲ್ಲರನ್ನು ಮೂರ್ಛೆ ಗೊಳಿಸುತ್ತಾನೆ ಬಿಟ್ಟು ಸಮ್ಮೋಹನ ಬಾಣ.

ಭೀಷ್ಮರೊಬ್ಬರನ್ನು ಬಿಟ್ಟು ಎಲ್ಲರ ಉತ್ತರೀಯಗಳ ಪಡಕೊಂಡ,

ಪ್ರಭಾವಕ್ಕೊಳಗಾಗದಿದ್ದ ಭೀಷ್ಮರ ತಾಕತ್ತಾಗಿತ್ತದು ಬಲು ಗಾಢ.

 

ವಿಧಾಯ ಭೀಷ್ಮಂ ವಿರಥಂ ಜಗಾಮ ತದಾ ಶ್ರುತ್ವಾ ಮತ್ಸ್ಯಪತಿರ್ಜ್ಜಿತಾನ್ ಕುರೂನ್ ।

ಮುಮೋದ ಪುತ್ರೇಣ ಜಿತಾ ಇತಿ ಸ್ಮ ತದಾSSಹ ಷಣ್ಢೇನ ಜಿತಾನ್ ಯುಧಿಷ್ಠಿರಃ ॥೨೩.೪೪॥

ಭೀಷ್ಮರನ್ನು ರಥಹೀನರನ್ನಾಗಿ ಮಾಡಿ ಅರ್ಜುನ ಹಿಂದಿರುಗಿದ,

ಕೌರವರು ತನ್ನ ಮಗನಿಂದ ಸೋತದ್ದು ಕೇಳಿ ವಿರಾಟರಾಜ ಬೀಗಿದ.

ಆಗ ಧರ್ಮರಾಯ : 'ಬೃಹನ್ನಳೆಯಿಂದಲೇ ಈ ವಿಜಯ' ಎಂದ.

 

ತದಾ ಕ್ರುದ್ಧಃ ಪ್ರಾಹರತ್ ತಂ ವಿರಾಟಃ ಸೋSಕ್ಷೇಣ ತದ್ ಭೀಮಧನಞ್ಜಯಾಭ್ಯಾಮ್ ।

ಶ್ರುತಂ ತದಾ ಕುಪಿತೌ ತೌ ನಿಶಾಮ್ಯ ನ್ಯವಾರಯತ್ ತಾವಪಿ ಧರ್ಮ್ಮಸೂನುಃ ॥೨೩.೪೫॥

ಆ ಮಾತನ್ನು ಕೇಳಿದ ವಿರಾಟರಾಜ ಮುನಿದ,

ಜೂಜಾಡುವ ದಾಳದಿಂದ ಧರ್ಮಜಗೆ ಹೊಡೆದ.

ಭೀಮಾರ್ಜುನರ ಕಿವಿ ಮುಟ್ಟಿತು ಆ ತಾಡನದ ಶಬ್ದ,

ಕೋಪಗೊಂಡ ಅವರಿಬ್ಬರನ್ನು ಧರ್ಮರಾಜ ತಡೆದ.

 

ನಿಜಸ್ವರೂಪೇಣ ಸಮಾಸ್ಥಿತಾನ್ ನೋ ಯದಿ ಸ್ಮ ನಾಸೌ ಪ್ರಣಿಪಾತಪೂರ್ವಕಮ್ ।

ಕ್ಷಮಾಪಯೇದ್ ವದ್ಧ್ಯ ಇತ್ಯಾತ್ಮರೂಪಂ ಸಮಾಸ್ಥಿತಾಸ್ತಸ್ಥುರಥಾಪರೇ ದಿನೇ ॥೨೩.೪೬॥

ಅವನಿಗಿಲ್ಲ ನಮ್ಮ ನಿಜರೂಪದ ಅರಿವು,

ಅದಾದಮೇಲೂ ಬಾಗದಿರೆ ಅವಗೆ ಸಾವು.

ಮರುದಿನ ತಮ್ಮ ನಿಜರೂಪದಿ ನಿಂತರು ತಾವು.

 

ತದಾ ವಿರಾಟಾಸನಮಾಸ್ಥಿತಂ ನೃಪಂ ಯುಧಿಷ್ಠಿರಂ ವೀಕ್ಷ್ಯ ವಿರಾಟ ಆಹ ।

ಕಿಮೇತದಿತ್ಯೂಚಿವಾನುತ್ತರೋSಸ್ಮೈ ತಾನ್ ಪಾಣ್ಡವಾನ್ ಗೋಗ್ರಹಣೇ ಚ ವೃತ್ತಮ್ ॥೨೩.೪೭॥

ವಿರಾಟನ ಸಿಂಹಾಸನ ಅಲಂಕರಿಸಿ ಕೂತಿದ್ದ ಯುಧಿಷ್ಠಿರ,

ಪ್ರಶ್ನಿಸಿದ ವಿರಾಟನಿಗೆ ತಿಳಿಹೇಳುತ್ತಾನೆ ಉತ್ತರಕುಮಾರ.

ಇವರು ಪಾಂಡವರು ಎಂದು ಉತ್ತರ ಹೇಳಿದ,

ಗೋಗ್ರಹಣ ಘಟನೆಗಳನ್ನು ತಂದೆಗೆ ವಿವರಿಸಿದ.

 

ತತೋ ವಿರಾಟೋ ಭಯಕಮ್ಪಿತಾಙ್ಗಃ ಪ್ರಣಮ್ಯ ಪಾರ್ತ್ಥಾಞ್ಛರಣಂ ಜಗಾಮ ।

ದದೌ ಚ ಕನ್ಯಾಮುತ್ತರಾಂ ಫಲ್ಗುನಾಯ ಪುತ್ರಾರ್ತ್ಥಮೇವ ಪ್ರತಿಜಗ್ರಾಹ ಸೋsಪಿ ॥೨೩.೪೮॥

ಭಯಗೊಂಡ ವಿರಾಟ ಪಾಂಡವರಿಗೆ ಮಾಡುತ್ತಾನೆ ನಮಸ್ಕಾರ,

ರಕ್ಷಕರಾಗವರ ಹೊಂದಿ ಅರ್ಜುನಗೊಪ್ಪಿಸುತ್ತಾನೆ ಉತ್ತರೆಯ ಕರ.

ಅರ್ಜುನ ತನ್ನ ಮಗನಿಗಾಗಿಯೇ ಎಂದು ಮಾಡಿದ ಅವಳ ಸ್ವೀಕಾರ.

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 23: 27-35

 

ಅವದ್ಧ್ಯಂ ತಂ ನಿಹತಂ ವೀಕ್ಷ್ಯ ತಸ್ಯ ಪಞ್ಚೋತ್ತರಂ ಶತಮೇವಾನುಜಾನಾಮ್ ।

ಸರ್ವಂ ವರಾಚ್ಛಙ್ಕರಸ್ಯ ಹ್ಯವದ್ಧ್ಯಂ ಸಹೈವ ಕೃಷ್ಣಾಂ ತೇನ ದಗ್ಧುಂ ಬಬನ್ಧ ॥೨೩.೨೭॥

ಅವಧ್ಯನಾಗಿದ್ದಂಥ ದುಷ್ಟ ಕೀಚಕನವನು ಸತ್ತು ಬಿದ್ದಿದ್ದನ್ನು ಕಂಡು,

ರೊಚ್ಚೆದ್ದಿತು ರುದ್ರವರದಿ ಅವಧ್ಯರಾದ ನೂರೆಂಟು ಉಪಕೀಚಕರ ದಂಡು.

ದ್ರೌಪದಿಯನ್ನು ಕಟ್ಟಿಹಾಕಿದರು ಕೀಚಕನ ಜೊತೆ ಅವಳನ್ನೂ ಸುಡಲೆಂದು.

 

ಸಾ ನೀಯಮಾನಾ ಕೀಚಕೈಃ ಸಂರುರಾವ ಶ್ರುತ್ವೈವ ತಂ ಭೀಮಸೇನೋ ಮಹಾನ್ತಮ್ ।

ಉದ್ಧೃತ್ಯ ವೃಕ್ಷಂ  ತೇನ ಜಘಾನ ಸರ್ವಾನಾದಾಯ ಕೃಷ್ಣಾಂ ಪುನರಾಗಾತ್ ಪುರಂ ಚ ॥೨೩.೨೮॥

ಉಪಕೀಚಕರು ದ್ರೌಪದಿಯ ಕೊಂಡೊಯ್ಯುತ್ತಿರುವಾಗ,

ಅವಳು ಗಟ್ಟಿಯಾಗಿ ಕಿರುಚಿ ಕೂಗಿಕೊಳ್ಳುತ್ತಾಳಾಗ.

ಕೂಗ ಕೇಳಿದ ಭೀಮಸೇನ ದೊಡ್ಡ ಮರವೊಂದನ್ನು ಕಿತ್ತು ತಂದ,

ಅವರನ್ನೆಲ್ಲ ಕೊಂದು ದ್ರೌಪದಿಯೊಂದಿಗೆ ಮತ್ತೆ ಪಟ್ಟಣಕ್ಕೆ ಬಂದ.

 

ಏವಂ ಯತ್ನಾತ್ ತಪಸಾ ತೈರವಾಪ್ತೋ ವರಃ ಶಿವಾದಜಯತ್ವಂ ರಣೇಷು ।

ಅವದ್ಧ್ಯತಾ ಚೈವ ಷಡುತ್ತರಾಸ್ತೇ ಶತಂ ಹತಾ ಭೀಮಸೇನೇನ ಸಙ್ಖೇ ॥೨೩.೨೯॥

ಹೀಗೆ ಕೀಚಕನಂತೆ ನೂರೈದು ಉಪಕೀಚಕರ ಆ ದಂಡು,

ತಪಸ್ಸಾಚರಿಸಿ ಕೊಬ್ಬಿತ್ತು ಅಜೇಯತ್ವ ಅವಧ್ಯತ್ವದ ವರವುಂಡು.

ಕೀಚಕನ ಮತ್ತೆ ನೂರೈದು ಮಂದಿ ಉಪಕೀಚಕರ,

ನೂರಾಆರು ಜನರ ಭೀಮ ಮಾಡಿದ ಸಂಹಾರ.

 

ಗನ್ಧರ್ವ ಇತ್ಯೇವ ನಿಹತ್ಯ ಸರ್ವಾನ್ ಮುಮೋದ ಭೀಮೋ ದ್ರೌಪದೀ ಚಾsಥ ಕೃಷ್ಣಾಮ್ ।

ಯಾಹೀತ್ಯೂಚೇ ತಾಂ ಸುದೇಷ್ಣಾ ಭಯೇನ ತ್ರಯೋದಶಾಹಂ ಪಾಲಯೇತ್ಯಾಹ ತಾಂ ಸಾ ॥೨೩.೩೦॥

ಅವರನ್ನು ಕೊಂದ ಭೀಮ 'ಗಂಧರ್ವ ಕೊಂದ',

ಎಂದು ಎಲ್ಲರಿಗೆ ಹೇಳುತ್ತಾ ಆನಂದಪಡುತ್ತಿದ್ದ.

ದ್ರೌಪದಿಗೂ ಸಹಜವಾಗಿತ್ತು ಮಹದಾನಂದ.

ಭಯಗೊಂಡ ಸುದೇಷ್ಣೆ ದ್ರೌಪದಿಗೆ ಹೋಗೆನ್ನುತ್ತಾಳೆ,

ದ್ರೌಪದಿ : ಇನ್ನೂ ಹದಿಮೂರು ದಿನ ತಡೆದುಕೋ ಎನ್ನುತ್ತಾಳೆ.

 

ಅಸ್ತ್ವೀತ್ಯೇನಾಮಾಹ ಭಯಾತ್ ಸುದೇಷ್ಣಾ ತಥಾSವಸನ್ ಪೂರ್ಣಮಬ್ದಂ ಚ ತೇSತ್ರ ।

ತದಾ ಪಾರ್ತ್ಥಾನ್ ಪ್ರವಿಚಿತ್ಯಾಖಿಲಾಯಾಂ ಪೃಥ್ವ್ಯಾಂ ಛನ್ನಾನ್ ಧಾರ್ತ್ತರಾಷ್ಟ್ರಸ್ಯ ದೂತಾಃ ॥೨೩.೩೧॥

 

ಅವಿಜ್ಞಾಯ ಪ್ರಯಯುರ್ದ್ಧಾರ್ತ್ತರಾಷ್ಟ್ರಮೂಚುರ್ಹತಂ ಕೀಚಕಂ ಯೋಷಿದರ್ತ್ಥೇ ।

ತೇನಾವದದ್ ದ್ರೌಪದೀಕಾರಣೇನ ದುರ್ಯ್ಯೋಧನೋ ನಿಹತಂ ಕೀಚಕಂ ತಮ್ ॥೨೩.೩೨॥

ದ್ರೌಪದಿಯ ಮಾತನ್ನು ಭಯದಿಂದ ಒಪ್ಪಿಕೊಳ್ಳುತ್ತಾಳೆ ಸುದೇಷ್ಣಾ,

ಹೀಗಾಗುತ್ತದೆ ವಿರಾಟನಗರದಲ್ಲಿ ಪಾಂಡವರ ವಾಸ ವರ್ಷಪೂರ್ಣ.

ಇತ್ತ ದುರ್ಯೋಧನನ ದೂತರಿಂದ ನಡೆದಿತ್ತು ಪಾಂಡವರ ಹುಡುಕಾಟ,

ಹೇಳುತ್ತಾರೆ ;ಅವರು ಸಿಗಲಿಲ್ಲ ಆದರೆ ಕೀಚಕ ಒಂದ್ಹೆಣ್ಣಿಗಾಗಿ ಕೊಲ್ಲಲ್ಪಟ್ಟ.

ದುರ್ಯೋಧನ ಹೇಳುತ್ತಾನೆ : ದ್ರೌಪದಿಗಾಗಿ ಕೀಚಕನು ಸತ್ತದ್ದದು ದಿಟ.

 

ಭೀಮೇನಾಗುಸ್ತತ್ರ ದುರ್ಯ್ಯೋಧನಾದ್ಯಾ ಭೀಷ್ಮಾದಿಭಿಃ ಸಹ ಕರ್ಣ್ಣೇನ ಚೈವ ।

ಅಗ್ರೇ ಯಯೌ ತತ್ರ ಯೋದ್ಧುಂ ಸುಶರ್ಮ್ಮಾ ಸ ಗಾ ವಿರಾಟಸ್ಯ ಸಮಾಜಹಾರ ॥೨೩.೩೩॥

ದುರ್ಯೋಧನ ಹೇಳಿದ : ಭೀಮಸೇನನೇ ಕೀಚಕನ ಕೊಂದಿದ್ದಾನೆ,

ಭೀಷ್ಮ, ಕರ್ಣ ಮುಂತಾದದವರೊಡನೆ ವಿರಾಟ ನಗರಕ್ಕೆ ಬರುತ್ತಾನೆ.

ಮೊದಲು ರಾಜ ಸುಶರ್ಮ ಯುದ್ಧಕೆ ಬಂದ,

ವಿರಾಟನ ಗೋವುಗಳ ಅಪಹರಣ ಮಾಡಿದ.

 

ಶ್ರುತ್ವಾ ವಿರಾಟೋSನುಯಯೌ ಸಸೇನಸ್ತಂ ಪಾಣ್ಡವಾಶ್ಚಾನುಯಯುರ್ವಿನಾSರ್ಜ್ಜುನಮ್ ।

ವಿಜಿತ್ಯ ಸಙ್ಖೇ ಜಗೃಹೇ ವಿರಾಟಂ ತದಾ ಸುಶರ್ಮ್ಮಾ ತಮಯಾದ್ ವೃಕೋದರಃ ॥೨೩.೩೪॥

ತ್ರಿಗರ್ತದೇಶದ ರಾಜ ಸುಶರ್ಮ ಆಕ್ರಮಣ ಮಾಡಿದಾಗ,

ವಿರಾಟರಾಜ ಸೈನ್ಯದೊಂದಿಗೆ ಸುಶರ್ಮನ ಬೆನ್ನಟ್ಟಿದನಾಗ.

ಅರ್ಜುನನನ್ನು ಬಿಟ್ಟುಳಿದ ಪಾಂಡವರು ಅವನನ್ನನುಸರಿಸುತ್ತಾರೆ,

ಯುದ್ಧದಲ್ಲಿ ಗೆದ್ದ ಸುಶರ್ಮ ಮಾಡುತ್ತಾನೆ ವಿರಾಟರಾಜನ ಸೆರೆ.

ಆಗ ಭೀಮಸೇನದೇವರು ಸುಶರ್ಮನ ಹಿಂಬಾಲಿಸಿ ತೆರಳುತ್ತಾರೆ.

 

ಸ ತಸ್ಯ ಸೇನಾಂ ವಿನಿಹತ್ಯ ಮಾತ್ಸ್ಯಂ ವಿಮೋಚ್ಯ ಜಗ್ರಾಹ ಸುಶರ್ಮ್ಮರಾಜಮ್ ।

ಯುಧಿಷ್ಠಿರೋ ಮೋಚಯಮಾಸ ತಂ ಚ ತತೋ ರಾತ್ರೌ ನ್ಯವಸನ್ ಬಾಹ್ಯತಸ್ತೇ ॥೨೩.೩೫॥

ಭೀಮಸೇನ ಸುಶರ್ಮನ ಸೇನೆಯ ಕೊಂದ,

ವಿರಾಟನ ಬಿಡಿಸಿ, ಸುಶರ್ಮನ ಸೆರೆಹಿಡಿದ.

ಸುಶರ್ಮನನ್ನು ಯುಧಿಷ್ಠಿರ ಬಿಡಿಸುತ್ತಾನಾಗ,

ಅವರೆಲ್ಲ ಆರಾತ್ರಿ ಕಳೆದದ್ದು ನಗರದ ಹೊರಭಾಗ.