Sunday, 11 December 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 22: 332-336

 

ಸರ್ವೇ ಹತಾಸ್ತೇನ ಮಹಾರಥೇನ ತೇ ದಾನವಾಃ ಸೋSಪಿ ಯಯೌ ತಥಾSನ್ಯಾನ್ ।

ಪೌಲೋಮಕಾಲೇಯಗಣಾಭಿಧಾನಾನ್ ಷಷ್ಟಿಂ ಸಹಸ್ರಾಣಿ ಮಹಾರಥಾನಾಮ್ ॥೨೨.೩೩೨॥

ಮಹಾರಥನಾದ ಅರ್ಜುನನಿಂದಾಯಿತು ಆ ಎಲ್ಲಾ ನಿವಾತಕವಚ ರಕ್ಕಸರ ಸಂಹಾರ,

ನಂತರ ಆಕ್ರಮಿಸಿದ:ಪೌಲೋಮ ಕಾಲೇಯ ಗಣ ಹೆಸರಿನ ದೈತ್ಯರಿದ್ದರು ಅರವತ್ತುಸಾವಿರ.

 

ತಾನಸ್ತ್ರಶತ್ರಾಣ್ಯಭಿವರ್ಷಮಾಣಾನ್ ಧನಞ್ಜಯಃ ಪಾಶುಪತಾಸ್ತ್ರತೋ ದ್ರಾಕ್ ।

ದಗ್ಧ್ವಾ ಯಯೌ ಪುನರೇವೇನ್ದ್ರಸದ್ಮ ತಂ ಸಸ್ವಜೇ ಪ್ರೀತಿಯುತಶ್ಚ ಶಕ್ರಃ ॥೨೨.೩೩೩॥

ಅಸ್ತ್ರ ಶಸ್ತ್ರಗಳನ್ನು ಎಸೆಯುತ್ತಿದ್ದ ಅವರನ್ನು ಧನಂಜಯ ಪಾಶುಪತಾಸ್ತ್ರದಿಂದ ಸುಟ್ಟ,

ಪುನಃ ಇಂದ್ರನಲ್ಲಿಗೆ ಹೋದ ಅರ್ಜುನನಿಗೆ ಇಂದ್ರ ಪ್ರೀತಿಯ ಆಲಿಂಗನವನ್ನ ಕೊಟ್ಟ.

 

ಯಯುರನ್ಧಂ ತಮಸ್ತೇSಪಿ ಸರ್ವದೇವದ್ವಿಷೋSಸುರಾಃ ।

ಅಥಾನುಜ್ಞಾಪ್ಯ ಪಿತರಂ ರಥೇನೈನ್ದ್ರೇಣ ಭಾಸ್ವತಾ ।

ಸೋದರ್ಯ್ಯಾಣಾಂ ಸಕಾಶಂ ಸ ಯಯೌ ವಜ್ರಧರಾತ್ಮಜಃ ॥೨೨.೩೩೪॥

ದೇವದ್ವೇಷಿಗಳಾದ ಆ ಎಲ್ಲಾ ರಾಕ್ಷಸರು,

ತಕ್ಕುದಾದ ಅಂಧಂತಮಸ್ಸು ಸೇರಿದರು.

ತಂದೆಯ ಆಜ್ಞೆ ಪಡೆದ ಇಂದ್ರ ರಥದಲ್ಲಿ ಅರ್ಜುನ,

ಸೇರಿಕೊಂಡ ತನ್ನ ಅಣ್ಣ ತಮ್ಮಂದಿರಿರುವ ತಾಣ.

 

ಆಯಾನ್ತಮೀಕ್ಷ್ಯ ಬೀಭತ್ಸುಂ ಮುಮುದುರ್ಭ್ರಾತರೋSಧಿಕಮ್ ।

ಊಷುಶ್ಚ ಚತುರೋSಬ್ದಾಂಸ್ತೇ ಪುನರ್ಮ್ಮೇರೌ ಪ್ರಮೋದಿನಃ ॥೨೨.೩೩೫॥

ಎಲ್ಲಾ ಅಣ್ಣ ತಮ್ಮಂದಿರಿಗೆ ಅರ್ಜುನನ ಕಂಡಾಗ ಆದದ್ದು ಬಲು ಸಂತೋಷ,

ಅವರೆಲ್ಲರೂ ಮತ್ತೆ ಮೇರುಪರ್ವತದಲ್ಲಿಯೇ ಆನಂದದಿ ಕಳೆದರು ನಾಕು ವರುಷ.

 

ಕಥಾಭಿರ್ವಾಸುದೇವಸ್ಯ ದ್ಧ್ಯಾನೇನಾಭ್ಯರ್ಚ್ಚನೇನ ಚ 

ಯಯೌ ಕಾಲಃ ಸುಖೇನೈವ ತೇಷಾಂ ವಿಷ್ಣುರತಾತ್ಮನಾಮ್ ॥೨೨.೩೩೬॥

ಸದಾ ಭಗವಂತನ ಕಥೆ, ಪರಮಾತ್ಮನ ವಿಶೇಷ ಗುಣಗಾನದಿಂದ,

ದೈವಪೂಜೆ ಮಾಡುವ ವಿಷ್ಣುಭಕ್ತರ ಜೀವನ ಸಾಗಿತ್ತು ಆನಂದದಿಂದ.

No comments:

Post a Comment

ಗೋ-ಕುಲ Go-Kula