Sunday, 11 December 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 23: 11-18

 

ಅಥಾSಜಗಾಮ ಮಲ್ಲಕಃ ಸಮಸ್ತಭೂಮಿಮಣ್ಡಲೇ ।

ವರೇಣ ಯೋSಜಿತೋ ಜಯೀ ಶಿವಸ್ಯ ಸಙ್ಜಗರ್ಜ್ಜ ಚ ॥೨೩.೧೧॥

ಒಂದು ಸಲ ಭೂಮಿಯಲ್ಲಿನ ಎಲ್ಲಾ ಮಲ್ಲರನ್ನು ಗೆದ್ದ,

ಯಾರೂ ಸೋಲಿಸಲಾಗದಂತೆ ರುದ್ರದೇವನ ವರವಿದ್ದ,

ಮಲ್ಲನೊಬ್ಬ ವಿರಾಟನಗರಕ್ಕೆ ಬಂದ,

ಪಂಥಾವ್ಹಾನ ಕೊಡುತ್ತಾ ಗರ್ಜಿಸಿದ.

 

ತಮೀಕ್ಷ್ಯ ಸರ್ವಮಲ್ಲಕಾ ವಿರಾಟರಾಜಸಂಶ್ರಯಾಃ ।

ಪ್ರದುರ್ದ್ರುವುರ್ಭಯಾರ್ದ್ದಿತಾಸ್ತದಾSವದದ್ ಯುಧಿಷ್ಠಿರಃ ॥೨೩.೧೨ ॥

ವಿರಾಟನಾಶ್ರಯಿಸಿದ ಮಲ್ಲರೆಲ್ಲರಿಂದ ಭಯದ ಓಟ,

ಯುಧಿಷ್ಠಿರನಾಗ ವಿರಾಟರಾಜನಿಗೆ ಹೇಳುವ ಈ ಮಾತ.

 

ಯ ಏಷ ಸೂದ ಆಶು ತಂ ನಿಹತ್ಯ ಮಲ್ಲಮೋಜಸಾ ।

ಯಶಸ್ತವಾಭಿವರ್ದ್ಧಯೇತ್ ಸಮಾಹ್ವಯಾದ್ಯ ತಂ ನೃಪ ॥೨೩.೧೩॥

ರಾಜನೇ, ನಿನ್ನ ಆಸ್ಥಾನದಲ್ಲಿರುವ ಅಡಿಗೆಯವನು,

ಈ ಮಲ್ಲನ ಕೊಂದು ನಿನ್ನ ಕೀರ್ತಿಯ ಬೆಳೆಸಿಯಾನು.

ಆ ಕಾರಣದಿಂದಾಗಿ ಈ ಕೂಡಲೇ ಕರೆಸು ಅವನನ್ನು.

 

ಇತೀರಿತೇ ಸಮಾಹುತೋ ಜಗಾದ ಮಾರುತಿರ್ವಚಃ ।

ಪ್ರಸಾದತೋ ಹರೇರಹಂ ನಿಸೂದಯೇSದ್ಯ ಮಲ್ಲಕಮ್ ॥೨೩.೧೪॥

ಈ ರೀತಿಯಾಗಿ ಯುಧಿಷ್ಠಿರ ಹೇಳಿದಾಗ,

ಕರೆಯಲ್ಪಟ್ಟ ಭೀಮಸೇನ ಬರುತ್ತಾನಾಗ.

ಬಂದ ಭೀಮಸೇನ ಹೀಗೆ ಹೇಳುತ್ತಾನೆ,

ಹರಿದಯದಿಂದ ನಾನವನ ಕೊಲ್ಲುತ್ತೇನೆ.

 

ಸಮಸ್ತದೇವವೃನ್ದತೋ ಮಹಾನ್ ಯ ಏವ ಕೇಶವಃ ।

ಸಮಸ್ತದೇವನಾಮವಾಂಸ್ತದೀಯಭಕ್ತಿತೋ ಬಲಮ್ ॥೨೩.೧೫॥

ಎಲ್ಲಾ ದೇವತೆಗಳ ಸಮೂಹದಲ್ಲವನು ಶ್ರೇಷ್ಠ,

ಎಲ್ಲಾ ದೇವತಾನಾಮ ಗುಣಗಳಿಂದ ಉತ್ಕೃಷ್ಟ.

ಆ ನಾರಾಯಣನ ಭಕ್ತಿಯಿಂದಲೇ ಎನ್ನ ಬಲ ಸ್ಪಷ್ಟ.

 

ಯ ಏವ ದೇವನಾಮಧಾ ಇತಿ ಶ್ರುತಿರ್ಜ್ಜಗಾದ ಹಿ ।

ಮಹಾಂಶ್ಚ ದೇವ ಏಷ ತತ್ ಸ ಮೇ ಜಯಂ ವಿಧಾಸ್ಯತಿ ॥೨೩.೧೬॥

ಯಾರು ಎಲ್ಲಾ ದೇವತೆಗಳ ನಾಮಧಾರ,

ಶೃತಿ ಹೇಳಿವೆ ಆ ನಾರಾಯಣಗೆ ನಮಸ್ಕಾರ.

ಅವನು ಮಹಾನ್ -ದೇವನೆನಿಸಿದವನು,

ಅವನೇ ನನಗೆ ಜಯ ತಂದು ಕೊಡುವವನು.

 

ಯುಧಿಷ್ಠಿರಾಭಿಧಶ್ಚ ಯೋ ಯುಧಿಷ್ಠಿರೇ ಸ್ಥಿತಃ ಸದಾ ।

ತ್ವಯಿ ಸ್ಥಿತಸ್ತ್ವಮಿತ್ಯಸೌ ಸದಾSಭಿಧೀಯತೇ ಹರಿಃ ॥೨೩.೧೭॥

ಯುಧಿಷ್ಠಿರನ ಒಳಗಿರುವ ಹರಿ 'ಯುಧಿಷ್ಠಿರ' ನಾಮಕ,

ನಿನ್ನೊಳಗೆ ಇರುವ ಹರಿಯವನು 'ತ್ವಮ್ ' ನಾಮಕ.

ಭಗವಂತ ಸರ್ವನಾಮ ಪ್ರತಿಪಾದ್ಯ,

ಭಗವಂತನವ ಸರ್ವಶಬ್ದ ಪ್ರತಿಪಾದ್ಯ.

 

ಇತಿ ಬ್ರುವಾಣೋ ಮಲ್ಲಂ ತಮಭಿಯಾತೋ ವೃಕೋದರಃ ।

ಅನಯನ್ಮೃತ್ಯುಲೋಕಾಯ ಬಲಾಢ್ಯೈರಪಿ ದುರ್ಜ್ಜಯಮ್ ॥೨೩.೧೮॥

ಹೀಗೆ ಹೇಳುತ್ತಾ ಭೀಮಸೇನ ಆ ಮಲ್ಲನ ಬಳಿಗೆ ಬಂದ,

ಗಟ್ಟಿಗರು ಗೆಲ್ಲಲಾಗದಾವನನ್ನು ಮೃತ್ಯುಲೋಕಕ್ಕೆ ಅಟ್ಟಿದ.

No comments:

Post a Comment

ಗೋ-ಕುಲ Go-Kula