Saturday 10 December 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 22: 266-272

 

ಮೋಚಯಿತ್ವಾSನಿರುದ್ಧಂ ಚ ಯಯೌ ಬಾಣೇನ ಪೂಜಿತಃ ।

ಏವಮಗ್ನೀನಙ್ಗಿರಸಂ ಜ್ವರಂ ಸ್ಕನ್ದಮುಮಾಪತಿಮ್             ॥೨೨.೨೬೬॥

 

ಬಾಣಂ ಚಾಯತ್ನತೋ  ಜಿತ್ವಾ ಪ್ರಾಯಾದ್ ದ್ವಾರವತೀಂ ಪುನಃ ।

ಯೇನಾಯತ್ನೇನ ವಿಜಿತಃ ಸರ್ವಲೋಕಹರೋ ಹರಃ                 ॥೨೨.೨೬೭॥

 

ಕಿಂ ಜ್ವರಾದಿಜಯೋ ವಿಷ್ಣೋಸ್ತಸ್ಯಾನನ್ತಸ್ಯ ಕತ್ಥ್ಯತೇ ।

ಈದೃಶಾನನ್ತಸಙ್ಖ್ಯಾನಾಮ್ ಶಿವಾನಾಂ ಬ್ರಹ್ಮಣಾಮಪಿ             ॥೨೨.೨೬೮॥

 

ರಮಾಯಾ ಅಪಿ ಯದ್ವೀಕ್ಷಾಂ ವಿನಾ ನ ಚಲಿತುಂ ಬಲಮ್ ।

ನಚ ಜ್ಞಾನಾದಯೋ ಭಾವಾ ನಚಾಸ್ತಿತ್ವಮಪಿ ಕ್ವಚಿತ್                 ॥೨೨.೨೬೯॥

 

ಅನನ್ತಶಕ್ತೇಃ ಕೃಷ್ಣಸ್ಯ ನ ಚಿತ್ರಃ ಶೂಲಿನೋ ಜಯಃ ।

ಚಿತ್ರಲೇಖಾಸಮೇತೋಷಾನ್ವಿತಪೌತ್ರಸಮನ್ವಿತಃ                     ॥೨೨.೨೭೦॥

 

 ಸರಾಮಃ ಸಸುತೋ ವೀನ್ದ್ರಮಾರು̐ಹ್ಯ ದ್ವಾರಕಾಂ ಗತಃ ।

ರೇಮೇ ತತ್ರ ಚಿರಂ ಕೃಷ್ಣೋ ನಿತ್ಯಾನನ್ದೋ ನಿಜೇಚ್ಛಯಾ             ॥೨೨.೨೭೧॥

ಶ್ರೀಕೃಷ್ಣ ಅನಿರುದ್ಧನನ್ನು ಮಾಡಿದ ಬಂಧನದಿಂದ ಬಿಡುಗಡೆ,

ಬಾಣನಿಂದ ಸತ್ಕಾರಗೊಂಡು ತೆರಳಿದ ದ್ವಾರಕೆಯ ಕಡೆ.

ಹೀಗೆ ಶ್ರೀಕೃಷ್ಣ ಅಗ್ನಿಗಳನ್ನು ರುದ್ರಭ್ರತ್ಯ ಅಂಗಿರಸನನ್ನು,

ಜ್ವರ, ಷಣ್ಮುಖ, ಸದಾಶಿವ, ಬಾಣಾಸುರ ಎದುರಾದೆಲ್ಲರನ್ನು,

ಅಪ್ರಯತ್ನದಿಂದಲೇ ಎಲ್ಲರ ಗೆದ್ದ,

ತನ್ನ ಪಟ್ಟಣ ದ್ವಾರಕೆಗೆ ತೆರಳಿದ.

 

ಯಾವ ಭಗವಂತ ಪ್ರಳಯಕಾಲದಲ್ಲಿ ಮಾಡುತ್ತಾನೆ ಎಲ್ಲದರ ನಾಶ,

ಆ ಹರಿಗೆ ಸದಾಶಿವ ಜ್ವರಾದಿಗಳ ಗೆಲ್ಲುವುದರಲ್ಲಿಲ್ಲ ಆಶ್ಚರ್ಯ ಲವಲೇಶ.

ಅನಂತಕಾಲದಲ್ಲಿ ಅನಂತ ಸಂಖ್ಯೆಯ ಬ್ರಹ್ಮ ರುದ್ರಾದಿಗಳಿಗೆ,

ಲಕ್ಷ್ಮೀಗೂ ಅವನ ಕಟಾಕ್ಷವಿರದೇ ಅಸ್ತಿತ್ವ ಇರದ ದೈವೀಬಗೆ.

ಅಂತಹ ಭಗವಂತನದು ಕೊನೆ ಮೊದಲಿರದ ಬಲ ವೀರ್ಯ,

ಸರ್ವಶಕ್ತಸ್ವತಂತ್ರ ಹರಿಗೆ ಸದಾಶಿವನ ಗೆಲ್ಲುವುದು ಏನಾಶ್ಚರ್ಯ.

ಹೀಗೆ ಕೃಷ್ಣ ಚಿತ್ರಲೇಖೆಯೊಂದಿಗಿದ್ದ ಉಷೆಯಿಂದ ಕೂಡಿ,

ಮೊಮ್ಮಗ ಅನಿರುದ್ಧ, ಬಲರಾಮ, ಪ್ರದ್ಯುಮ್ನರ ಒಡಗೂಡಿ,

ಗರುಡವಾಹನನಾಗಿ ದ್ವಾರಕೆಗೆ ತೆರಳಿದ,

ನಿತ್ಯಾನಂದ ಹೊಂದಿದ ತನ್ನದೇ ಕ್ರೀಡಾನಂದ.

 

ಏವಂವಿಧಾನ್ಯಗಣಿತಾನಿ ಯದೂತ್ತಮಸ್ಯ ಕರ್ಮ್ಮಾಣ್ಯಗಣ್ಯಮಹಿಮಸ್ಯ ಮಹೋತ್ಸವಸ್ಯ ।

ನಿತ್ಯಂ ರಮಾಕಮಲಜನ್ಮಗಿರೀಶಶಕ್ರಸೂರ್ಯ್ಯಾದಿಭಿಃ ಪರಿನುತಾನಿ ವಿಮುಕ್ತಿದಾನಿ ॥೨೨.೨೭೨॥

ಮಿತಿಯಿರದ ಮಹಿಮೆಯ ಪೂರ್ಣಾನಂದ ಅವನು ನಾರಾಯಣ,

ಸ್ತುತಿಸುವರವನ ಲಕ್ಷ್ಮೀ ಬ್ರಹ್ಮ ರುದ್ರ ಇಂದ್ರ ಸೂರ್ಯಾದಿ ದೇವಗಣ.

ಅವರೆಲ್ಲರ ಸ್ತೋತ್ರ ಮತ್ತು ಗುಣಗಾನ,

ಆಗುತ್ತದವರಿಗೆ ಮುಕುತಿಗೆ ಸೋಪಾನ.

No comments:

Post a Comment

ಗೋ-ಕುಲ Go-Kula