ನಿಹತ್ಯ ತೌ ಕೇಶವೋ
ರೌಗ್ಮಿಣೇಯಂ ಪುನರ್ವೈದರ್ಭ್ಯಾಂ ಜನಯಾಮಾಸ ಸದ್ಯಃ ।
ಸ ಚೈಕಲವ್ಯೋ ರಾಮಜಿತಃ
ಶಿವಾಯ ಚಕ್ರೇ ತಪೋSಜೇಯತಾಂ ಚಾSಪ ತಸ್ಮಾತ್ ॥೨೨.೨೧೯॥
ಶ್ರೀಕೃಷ್ಣ : ಪೌಂಡ್ರಕ ವಾಸುದೇವ ಮತ್ತು ಕಾಶೀರಾಜನನ್ನು ಸೋಲಿಸಿ
ಕೊಂದ,
ಆನಂತರದಲ್ಲಿ ರುಗ್ಮಿಣಿಯಲ್ಲಿ ಮಗನಾದ ಪ್ರದ್ಯುಮ್ನನನ್ನು ಹುಟ್ಟಿಸಿದ.
ಇತ್ತ ಬಲರಾಮನಿಂದ ಸೋತುಹೋದ ನಂತರ ಏಕಲವ್ಯ,
ಶಿವನ ಕುರಿತು ತಪಸ್ಸಾಚರಿಸಿ ಪಡೆದ ಅಜೇಯತ್ವದ ವರ.
ಸ ಶರ್ವದತ್ತೇನ ವರೇಣ
ದೃಪ್ತಃ ಪುನರ್ಯೋದ್ಧುಂ ಕೃಷ್ಣಮೇವಾSಸಸಾದ ।
ತಸ್ಯಾಸ್ತ್ರಶಸ್ತ್ರಾಣಿ
ನಿವಾರ್ಯ್ಯ ಕೇಶವಶ್ಚಕ್ರೇಣ ಚಕ್ರೇ ತಮಪಾಸ್ತಕನ್ಧರಮ್ ॥೨೨.೨೨೦॥
ರುದ್ರ ಕೊಟ್ಟ ವರದಿಂದಲಾದ ಏಕಲವ್ಯ ದರ್ಪಿತ,
ಮತ್ತೆ ಯುದ್ಧ ಮಾಡೆಲೆಂದು ಬಂದ ಶ್ರೀಕೃಷ್ಣನತ್ತ.
ಶ್ರೀಕೃಷ್ಣ ಅವನ ಶಸ್ತ್ರಾಸ್ತ್ರಗಳ ನಿಗ್ರಹಿಸಿದ,
ಚಕ್ರದಿಂದ ಮಾಡಿದ ಏಕಲವ್ಯನ ಶಿರಚ್ಛೇದ.
ಸ ಚಾSಪ ಪಾಪಸ್ತಮ ಏವ ಘೋರಂ ಕೃಷ್ಣದ್ವೇಷಾನ್ನಿತ್ಯದುಃಖಾತ್ಮಕಂ ತತ್ ।
ಏವಂ ಯದೂನಾಮೃಷಭೇಣ
ಸೂದಿತೇ ಪೌಣ್ಡ್ರೇ ತಥಾ ಕಾಶಿನೃಪೇ ಚ ಪಾಪೇ
॥೨೨.೨೨೧॥
ಕಾಶೀಶಪುತ್ರಸ್ತು
ಸುದಕ್ಷಿಣಾಖ್ಯಸ್ತಪೋSಚರಚ್ಛಙ್ಕರಾಯೋರುಭಕ್ತ್ಯಾ
।
ಪ್ರತ್ಯಕ್ಷಗಂ ತಂ ಶಿವಂ
ಪಾಪಬುದ್ಧಿಃ ಕೃಷ್ಣಾಭಾವಂ ಯಾಚತೇ ದುಷ್ಟಚೇತಾಃ ॥೨೨.೨೨೨॥
ದುಷ್ಟ ಏಕಲವ್ಯನದು ಕೃಷ್ಣನನ್ನು ದ್ವೇಷಿಸಿದ ಪಾಪಿಷ್ಠ ಮನಸ್ಸು,
ಅದರ ಫಲವಾಗಿ ಹೊಂದಿದ ನಿತ್ಯ ದುಃಖವಾದ ಅಂಧಂತಮಸ್ಸು.
ಈ ರೀತಿಯಲ್ಲಿ ಯಾದವಶ್ರೇಷ್ಠನಾದ ಶ್ರೀಕೃಷ್ಣ,
ಪೌಂಡ್ರಕ, ಪಾಪಿಷ್ಠ ಕಾಶೀರಾಜಗಿತ್ತ ಮರಣ.
ಶಿವನ ಕುರಿತು ಭಾರೀ ತಪಸ್ಸು ಮಾಡಿದ್ದ ಕಾಶೀರಾಜನ ಮಗ ಸುದಕ್ಷಿಣ,
ಪ್ರತ್ಯಕ್ಷನಾದ ಶಿವನಲ್ಲಿ ಪಾಪಿ ಕೇಳಿದ್ದು : ನಾಶವಾಗಬೇಕೆಂದು
ಶ್ರೀಕೃಷ್ಣ.
ಕೃತ್ಯಾಮಸ್ಮೈ
ದಕ್ಷಿಣಾಗ್ನೌ ಶಿವೋSಪಿ
ದೈತ್ಯಾವೇಶಾದದದಾದಾವೃತಾತ್ಮಾ ।
ಸ
ದಕ್ಷಿಣಾಗ್ನಿಶ್ಚಾಸುರಾವೇಶಯುಕ್ತಃ ಸಮ್ಪೂಜಿತಃ ಕಾಶಿರಾಜಾತ್ಮಜೇನ ॥೨೨.೨೨೩॥
ವರಾದುಮೇಶಸ್ಯ ವಿವೃದ್ಧಶಕ್ತಿರ್ಯ್ಯಯೌ
ಕೃಷ್ಣೋ ಯತ್ರ ಸಮ್ಪೂರ್ಣ್ಣಶಕ್ತಿಃ ।
ಕೃಷ್ಣಸ್ತಸ್ಯ
ಪ್ರತಿಘಾತಾರ್ತ್ಥಮುಗ್ರಂ ಸಮಾದಿಶಚ್ಛಕ್ರಮನನ್ತವೀರ್ಯ್ಯಃ ॥೨೨.೨೨೪॥
ಸುದಕ್ಷಿಣಗೆ ವರವಿತ್ತ ಶಿವನೊಳಗಾಗಿಬಿಟ್ಟಿದ್ದ ದೈತ್ಯಾವೇಶ,
ಆಗಲೇ ದಕ್ಷಿಣಾಗ್ನಿಯ ಕೃತ್ಯಾದೇವತೆಯನ್ನು ಕೊಟ್ಟ ವಿಶೇಷ.
ಕೃತ್ಯಾದೇವತೆ ದಕ್ಷಿಣಾಗ್ನಿಗೆ ಅಭಿಮಾನಿ ಆಗಿದ್ದ,
ಅಸುರಾವೇಶದಿಂದ ಕೃಷ್ಣನ ಕೊಲ್ಲಲು ಬಂದಿದ್ದ.
ಸದಾಶಿವನ ವರಬಲದ ಆ ಕೃತ್ಯಾಗ್ನಿಯು ಆಗ,
ಅರಸಿಕೊಂಡು ಹೊರಟಿತು ಕೃಷ್ಣನಿದ್ದ ಜಾಗ.
ಶ್ರೀಕೃಷ್ಣನು ಬಯಸಿ ಅದರ ನಾಶ,
ಸುದರ್ಶನ ಚಕ್ರಕ್ಕೆ ಕೊಟ್ಟ ಆದೇಶ.
ಜಾಜ್ವಲ್ಯಮಾನಂ
ತದಮೋಘವೀರ್ಯ್ಯಂ ವ್ಯದ್ರಾವಯದ್ ವಹ್ನಿಮಿಮಂ ಸುದೂರಮ್ ।
ಕೃತ್ಯಾತ್ಮಕೋ ವಹ್ನಿರಸೌ
ಪ್ರಧಾನವಹ್ನೇಃ ಪುತ್ರಶ್ಚಕ್ರವಿದ್ರಾವಿತೋSಥ
॥೨೨.೨೨೫॥
ಸಹಾನುಬನ್ಧಂ ಚ
ಸುದಕ್ಷಿಣಂ ತಂ ಭಸ್ಮೀಚಕಾರಾSಶು ಸಪುತ್ರಭಾರ್ಯ್ಯಮ್
।
ದಗ್ಧ್ವಾ ಪುರೀಂ
ವಾರಣಸೀಂ ಸುದರ್ಶನಃ ಪುನಃ ಪಾರ್ಶ್ವಂ ವಾಸುದೇವಸ್ಯ ಚಾSಗಾತ್ ।
ಸುದಕ್ಷಿಣೋSಸೌ ತಮ ಏವ ಜಗ್ಮಿವಾನ್ ಕೃಷ್ಣದ್ವೇಷಾತ್ ಸಾನುಬನ್ಧಃ ಸುಪಾಪಃ
॥೨೨.೨೨೬॥
ಪ್ರಜ್ವಲಿಪ ವ್ಯರ್ಥವಾಗದಂಥ ಪೌರುಷದ ಸುದರ್ಶನ,
ದಕ್ಷಿಣಾಗ್ನಿಗೆ ಮಾಡಿಸಿತು ಬಲುದೂರಕ್ಕೆ ಪಲಾಯನ.
ಆ ಕೃತ್ಯಾಗ್ನಿಯಾಗಿದ್ದ ಪ್ರಧಾನಾಗ್ನಿಯ ಒಬ್ಬ ಪುತ್ರ,
ಅವನಿಗೊದಗಿತ್ತು ಕೃಷ್ಣನಾಶ ಮಾಡುವ ಪಾತ್ರ.
ಸುದರ್ಶನ ಚಕ್ರ ಆ ಕೃತ್ಯಾಗ್ನಿಯ ಬೆನ್ನಟ್ಟಿತ್ತು,
ಸುದಕ್ಷಿಣನನ್ನು ಸಂಸಾರಸಮೇತ ಸುಟ್ಟುಹಾಕಿತ್ತು.
ಕೃತ್ಯಾಗ್ನಿಯನ್ನು ಬೆನ್ನಟ್ಟಿ ಬಂದಿದ್ದ ಸುದರ್ಶನ ಚಕ್ರ,
ವಾರಣಾಸಿಯ ಸುಟ್ಟು ಮರಳಿತ್ತು ಕೃಷ್ಣನ ಹತ್ತಿರ.
ಈರೀತಿಯಾಗಿ ಭಗವದ್ವೇಷಿಯಾದ ಸುದಕ್ಷಿಣ ತಾನು,
ಬಂಧು ಬಾಂಧವರೊಡನೆ ಅಂಧಂತಮಸ್ಸು ಸೇರಿದನು.
No comments:
Post a Comment
ಗೋ-ಕುಲ Go-Kula