ಸ ಪಾಣ್ಡವೈರ್ಮ್ಮೋಚಿತಃ
ಸಾನುಜಶ್ಚ ಸಭಾರ್ಯ್ಯಕಃ ಕಿಞ್ಚಿದತೋSಪಗಮ್ಯ ।
ಸಮ್ಮೇಳನಾಯೋಪವಿಷ್ಟಶ್ಚ
ತತ್ರ ಸುಬ್ರೀಳಿತಃ ಸೂತಪುತ್ರಂ ದದರ್ಶ ॥೨೨.೪೨೧॥
ಪಾಂಡವರಿಂದ ಬಿಡುಗಡೆಯಾಗಿ ಬೀಳ್ಕೊಡಲ್ಪಟ್ಟ ದುರ್ಯೋಧನ,
ಅತ್ಯಂತ ಲಜ್ಜಿತನಾದವಗೆ ಕುದಿಯುತ್ತಿತ್ತು ಒಳಗೇ ಅವಮಾನ.
ತನ್ನ ತಮ್ಮಂದಿರು ಹೆಂಡಂದಿರೊಡನೆ ದ್ವೈತವನದ ಆಚೆಗೆ ಬಂದು ನಿಂದ,
ತನ್ನವರೆಲ್ಲಾ ಸೇರಲೆಂದು ಕಾದುಕುಳಿತವನು ಸೂತಪುತ್ರ ಕರ್ಣನ ನೋಡಿದ.
ಸ ಚಾSಹ ದಿಷ್ಟ್ಯಾ ಜಯಸಿ ರಾಜನ್ನಿತಿ ಸುಯೋಧನಮ್ ।
ಬ್ರೀಳಿತೋ ನೇತಿ ತಂ
ಚೋಕ್ತ್ವಾ ಯಥಾವೃತ್ತಂ ಸುಯೋಧನಃ ॥೨೨.೪೨೨॥
ಕರ್ಣನಾಗ ದುರ್ಯೋಧನನಿಗೆ 'ರಾಜಾ ದೇವರ ದಯೆದಿಂದ ಗಂಧರ್ವರ ಗೆದ್ದೆ 'ಎಂದ್ಹೇಳಿದ,
ನಾಚಿದ ದುರ್ಯೋಧನ ಇಲ್ಲವೆನ್ನುತ್ತಾ ನಡೆದ ವಿಷಯವನ್ನೆಲ್ಲಾ
ಯಥಾವತ್ತಾಗಿ ವಿವರಿಸಿದ.
ಉಕ್ತ್ವಾ ಪ್ರಾಯೋಪವೇಶಂ
ಚ ಚಕ್ರೇ ತತ್ರ ಸುದುಃಖಿತಃ ।
ಕರ್ಣ್ಣದುಃಶಾಸನಾಭ್ಯಾಂ
ಚ ಸೌಬಲೇನ ಚ ದೇವಿನಾ ॥೨೨.೪೨೩॥
ಅನ್ಯೈಶ್ಚಯಾಚ್ಯಮಾನೋSಪಿ ನೈವೋತ್ತಸ್ಥೌ ಸಯೋಧನಃ ।
ತತೋ ನಿಶಾಯಾಂ
ಪ್ರಾಪ್ತಾಯಾಂ ಸ್ವಪಕ್ಷೇ ಪ್ರವಿಷೀದತಿ ॥೨೨.೪೨೪॥
ಮನ್ತ್ರಯಿತ್ವಾSಸುರೈಃ ಕೃತ್ಯಾ ನಿರ್ಮ್ಮಿತಾ ಹೋಮಕರ್ಮ್ಮಣಾ ।
ಶುಕ್ರೇಣೋತ್ಪಾದಿತಾ
ಕೃತ್ಯಾ ಸಾ ಪ್ರಸುಪ್ತೇಷು ಮನ್ತ್ರಿಷು ॥೨೨.೪೨೫॥
ಧಾರ್ತ್ತರಾಷ್ಟ್ರಂ
ಸಮಾದಾಯ ಯಯೌ ಪಾತಾಳಮಾಶು ಚ ।
ಅಥ
ಸಮ್ಬೋಧಯಾಮಾಸುರ್ದ್ದೈತ್ಯಾ ದುರ್ಯ್ಯೋಧನಂ ನೃಪಮ್ ॥೨೨.೪೨೬॥
ಎಲ್ಲವನ್ನೂ ಕರ್ಣನಿಗೆ ವಿವರಿಸಿ ಬಹಳವಾಗಿ ದುಃಖಿತನಾಗಿದ್ದ ದುರ್ಯೋಧನ,
ಅಲ್ಲಿಯೇ ಆಗಲೇ ಸಂಕಲ್ಪಿಸಿ ಕುಳಿತುಬಿಡುತ್ತಾನೆ ಆಮರಣಾಂತ ನಿರಶನ.
ಕರ್ಣ, ದುಶ್ಯಾಸನ, ಶಕುನಿ ಎಲ್ಲರೂ ಬೇಡಿದರೂ ಏಳಲಿಲ್ಲ ದುರ್ಯೋಧನ.
ಆನಂತರ ರಾತ್ರಿಯಾಗುತ್ತಿರಲು ದೈತ್ಯಪಕ್ಷ ಕಳೆಗುಂದುತ್ತಿರುವುದನ್ನು
ನೋಡಿ,
ಹೋಮದಿಂದ ಕೃತ್ಯವ ಎಬ್ಬಿಸಿದರು ಅಸುರರು ಮಂತ್ರಾಲೋಚನೆ ಮಾಡಿ.
ಆ ಕೃತ್ಯವನ್ನು ಉತ್ಪಾದನೆ ಮಾಡಿದ್ದು ಅಸುರಗುರುವಾದ ಶುಕ್ರಾಚಾರ್ಯ,
ಎಲ್ಲ ಮಲಗಿರಲು ಅದು ಮಾಡಿತು ಕೌರವನ ಪಾತಾಳಕ್ಕೊಯ್ವ ಕಾರ್ಯ.
ಅಲ್ಲಿ ದೈತ್ಯರೆಲ್ಲರಿಂದ ದುರ್ಯೋಧನನಿಗೆ ಹರಿಯಿತು ಬೋಧನಾಧಾರ.
ತ್ವಂ ದಿವ್ಯಃ ಪುರುಷೋ
ವೀರಃ ಸೃಷ್ಟೋSಸ್ಮಾಭಿಃ ಪ್ರತೋಷಿತಾತ್
।
ತಪಸಾ ಶಙ್ಕರಾದ್
ವಜ್ರಕಾಯೋSವದ್ಧ್ಯಶ್ಚ ಸರ್ವದಾ
॥೨೨.೪೨೭॥
ದುರ್ಯೋಧನಾ, ನೀನು ಅಲೌಕಿಕ ಪುರುಷ; ಮಹಾವೀರ,
ನಿನ್ನನ್ನು ಸೃಷ್ಟಿಸಿದ್ದು ನಮ್ಮೆಲ್ಲರಿಂದ ಸಂತುಷ್ಟನಾದ ಶಂಕರ.
ನೀನು ವಜ್ರಕಾಯನಾದವ -ಅವಧ್ಯ,
ನಿನ್ನನ್ನು ಕೊಲ್ಲುವುದು ಅದು ಅಸಾಧ್ಯ.
ಅಸ್ಮಾಕಂ
ಪಕ್ಷಭೂತಸ್ತ್ವಂ ದೇವಾನಾಂ ಚೈವ ಪಾಣ್ಡವಾಃ ।
ಇದಾನೀಂ ಸರ್ವದೇವಾನಾಂ
ವರಾತ್ ತ್ವಂ ವಿಜಿತೋ ರಣೇ ॥೨೨.೪೨೮॥
ನೀನು ನಮ್ಮ ಪಕ್ಷ ;ಪಾಂಡವರು ದೇವತೆಗಳ
ಪಕ್ಷ,
ನಿನಗೆ ಸೋಲು ತಂದಿಹುದು ದೇವತಾವರಕಟಾಕ್ಷ.
ವಯಂ ತಥಾ ಕರಿಷ್ಯಾಮೋ
ಯಥಾ ಜ್ಯೇಷ್ಯಸಿ ಪಾಣ್ಡವಾನ್ ।
ಕೃಷ್ಣೇನ ನಿಹತಶ್ಚೈವ
ನರಕಃ ಕರ್ಣ್ಣ ಆಸ್ಥಿತಃ ॥೨೨.೪೨೯॥
ನೀನು ಪಾಂಡವರನ್ನು ಗೆಲ್ಲುವಂತೆ ಮಾಡುತ್ತೇವೆ ನಾವು,
ಕರ್ಣನೊಳಗಿದೆ ಕೃಷ್ಣನಿಂದ ಸತ್ತ ನರಕಾಸುರನ ತಾವು.
ಸ ಚ
ಕೃಷ್ಣಾರ್ಜ್ಜುನಾಭಾವಂ ಕರಿಷ್ಯತಿ ನ ಸಂಶಯಃ ।
ಭೀಷ್ಮಾದೀಂಶ್ಚ ವಯಂ
ಸರ್ವಾನಾವಿಶಾಮ ಜಯಾಯ ತೇ ॥೨೨.೪೩೦॥
ಅವನು ಕೃಷ್ಣಾರ್ಜುನರನ್ನು ಮುಗಿಸುತ್ತಾನೆ :ಇದಕ್ಕೆ ಬೇಡ ಸಂಶಯ,
ಭೀಷ್ಮಾದಿಗಳಲ್ಲೂ ನಾವು ಪ್ರವೇಶಿಸುತ್ತೇವೆ ತರಲು ನಿನಗೆ ವಿಜಯ.
ತಪಸಾ
ವರ್ದ್ಧಯಿಷ್ಯಾಮಸ್ತ್ವಾಂ ಕರ್ಣ್ಣಾದೀಂಶ್ಚ ಸರ್ವಶಃ ।
ತಸ್ಮಾದ್ ಗತ್ವಾ
ಪಾಲಯಸ್ವ ರಾಜ್ಯಂ ರಾಜನ್ನಪೇತಭೀಃ ॥೨೨.೪೩೧॥
ನಿನ್ನನ್ನು ಕರ್ಣನನ್ನು ಬಲಿಷ್ಠರನ್ನಾಗಿ ಮಾಡುವುದು ನಮ್ಮ ತಪಸ್ಸಿನ
ಕಾರ್ಯ,
ಹೀಗಾಗಿ ಅಳುಕದೇ ಹಿಂತಿರುಗಿ ಹೋಗಿ ಧೈರ್ಯದಿ ಮಾಡು ನಿನ್ನ ರಾಜ್ಯಭಾರ.
ಇದಂ ಕಸ್ಯಾಪಿ ನಾSಖ್ಯೇಯಂ ಸುಗುಪ್ತಂ ಭೂತಿವರ್ದ್ಧನಮ್ ।
ಇತ್ಯುಕ್ತ್ವಾ ಕೃತ್ಯಯಾ
ಭೂಯಃ ಸ್ವಸ್ಥಾನೇ ಸ್ಥಾಪಿತೋ ನೃಪಃ ॥೨೨.೪೩೨॥
ಇದು ಅತ್ಯಂತ ಗುಟ್ಟು, ಶ್ರೇಯೋಭಿವೃದ್ಧಿಯ ಪಟ್ಟು : ಬಲು ಜೋಪಾನ,
ಗೌಪ್ಯವಾದ ದೈತ್ಯ ಬೋಧನಾನಂತರ ಕೃತ್ಯ ಸೇರಿಸಿತವನ ಸ್ವಸ್ಥಾನ.
No comments:
Post a Comment
ಗೋ-ಕುಲ Go-Kula