ಕೃಷ್ಣೇ ಪ್ರಯಾತೇ ನಿಲಯಂ
ಪುರದ್ವಿಷೋ ರಾತ್ರೌ ಪೌಣ್ಡ್ರೋ ವಾಸುದೇವಃ ಸಮಾಗಾತ್ ।
ಸಹೈಕಲವ್ಯೇನ ನಿಜೇನ
ಮಾತುಃ ಪಿತ್ರಾ ತಥಾSಕ್ಷೋಹಿಣಿಕತ್ರಯೇಣ
॥೨೨.೨೦೧॥
ಶ್ರೀಕೃಷ್ಣ ಕೈಲಾಸಕ್ಕೆ ತಪಸ್ಸಿಗೆಂದು ಹೊರಟು ಹೋದಂಥ ಆ ಸಮಯ,
ಏಕಲವ್ಯ ಮತ್ತು ತನ್ನ ತಾತನೊಟ್ಟಿಗೆ ದಾಳಿಯಿಟ್ಟ ಪೌಂಡ್ರಕ ವಾಸುದೇವ.
ಪೌಂಡ್ರಕ ವಾಸುದೇವ ಕಾಯುತ್ತಿದ್ದ ಹೊರಹೋಗಲೆಂದು ಕೃಷ್ಣ,
ಮೂರು ಅಕ್ಷೋಹಿಣಿ ಸೈನ್ಯದೊಂದಿಗೆ ಸುತ್ತುವರೆದ ದ್ವಾರಕಾಪಟ್ಟಣ.
ಪುರೀಂ ಪ್ರಭಞ್ಜನ್ತಮಮುಂ
ವಿದಿತ್ವಾ ಸರಾಮಶೈನೇಯಯದುಪ್ರವೀರಾಃ ।
ಸಂಯೋಧಯಾಮಾಸುರಥಾಭ್ಯವರ್ಷಚ್ಛರೈರ್ನ್ನಿಷಾದಾಧಿಪ
ಏಕಲವ್ಯಃ ॥೨೨.೨೦೨॥
ಪೌಂಡ್ರಕ ವಾಸುದೇವ ಪಟ್ಟಣ ಹಾಳುಮಾಡುತ್ತಿದ್ದ ಸುದ್ದಿ ಕೇಳಿ,
ಬಲರಾಮ, ಸಾತ್ಯಕಿ ಯಾದವರಿಂದ ಪೌಂಡ್ರಕನ ಮೇಲೆ ದಾಳಿ,
ಜೋರಾಗಿತ್ತು :ಬೇಡರೊಡೆಯ ಏಕಲವ್ಯನ ಬಾಣಗಳ ಹಾವಳಿ.
ತದಸ್ತ್ರಶಸ್ತ್ರೈಃ ಸಹಸಾ
ವಿಷಣ್ಣಾ ಯದುಪ್ರವೀರಾ ವಿಹತಪ್ರದೀಪಾಃ ।
ಸಹೈವ ರಾಮೇಣ ಶಿನೇಶ್ಚ
ನಪ್ತ್ರಾ ಸಮಾವಿಶನ್ ಸ್ವಾಂ ಪುರಮೇವ ಸರ್ವೇ ॥೨೨.೨೦೩॥
ಅಸದಳವಾಗಿತ್ತು ರಾತ್ರಿಯ ಕತ್ತಲಲ್ಲಿ ವೀರ ಏಕಲವ್ಯನ ಬಾಣಗಳ ಸುರಿಮಳೆ,
ಬಲರಾಮ ಸಾತ್ಯಕಿಯ ಜೊತೆ ಯಾದವರು ಊರೊಳು ಹೊಕ್ಕರು ಇಲ್ಲದೇ ಬೆಳಕನೆಲೆ.
ಪುನಃ ಸಮಾದಾಯ
ತಥೋರುದೀಪಿಕಾ ಅಗ್ರೇ ಸಮಾಧಾಯ ಚ ರೌಹಿಣೇಯಮ್ ।
ವಿನಿಸ್ಸೃತಾ
ಆತ್ತಶಸ್ತ್ರಾಃ ಸ್ವಪುರ್ಯ್ಯಾಃ ಸಿಂಹಾ ಯಥಾ ಧರ್ಷಿತಾಃ ಸದ್ಗುಹಾಯಾಃ ॥೨೨.೨೦೪॥
ಮತ್ತೆ ದೊಡ್ಡ ದೊಡ್ಡ ದೀವಟಿಗೆಗಳೊಂದಿಗೆ,
ಯಾದವರು ಶಸ್ತ್ರಗಳು ಬಲರಾಮ ನೇತೃತ್ವದೊಂದಿಗೆ
ಗುಹೆಯಿಂದ ಹೊರಬಂದ ಸಿಂಹಗಳ ರೀತಿ,
ದ್ವಾರಕೆಯಿಂದ ಹೊರಬಂದ ಯಾದವರ ಸ್ಥಿತಿ.
ಅಥಾsಸಸಾದೈಕಲವ್ಯಂ ರಥೇನ ರಾಮಃ ಶೈನೇಯಃ ಪೌಣ್ಡ್ರಕಂ ವಾಸುದೇವಮ್ ।
ಅಯುದ್ಧ್ಯತಾಂ ತೌ
ಸಾತ್ಯಕಿಃ ಪೌಣ್ಡ್ರಕಶ್ಚ ತಥಾSನ್ಯೋನ್ಯಂ
ವಿರಥಂ ಚಕ್ರತುಶ್ಚ ॥೨೨.೨೦೫॥
ರಥಾರೂಢ ಬಲರಾಮ ಏಕಲವ್ಯನನ್ನು ಎದುರಿಸಿದ,
ವೀರ ಸಾತ್ಯಕಿ ಪೌಂಡ್ರಕ ವಾಸುದೇವನ ಎದುರಿಸಿದ.
ಪೌಂಡ್ರಕ ವಾಸುದೇವ ಹಾಗೂ ಸಾತ್ಯಕಿಯರದು ಘೋರ ಕಾದಾಟ,
ಸಮಬಲದ ಹೋರಾಟದಲ್ಲಿ ಇಬ್ಬರೂ ರಥಹೀನ ಆದಂಥ ನೋಟ.
ತತೋ ಗದಾಯುದ್ಧಮಭೂತ್
ತಯೋರ್ದ್ದ್ವಯೋಸ್ತಥಾ ರಾಮಶ್ಚೈಕಲವ್ಯಶ್ಚ ವೀರೌ ।
ಕೃತ್ವಾSನ್ಯೋನ್ಯಂ ವಿರಥಂ ಗದಾಭ್ಯಾಮಯುದ್ಧ್ಯತಾಂ ಜಾತದರ್ಪ್ಪೌ ಬಲಾಗ್ರ್ಯೌ
॥೨೨.೨೦೬॥
ರಥಹೀನರಾದವರ ಮಧ್ಯೆ ಪ್ರಾರಂಭವಾಯಿತು ಗದಾಯುದ್ಧ,
ಏಕಲವ್ಯ ಬಲರಾಮರೂ ರಥಹೀನರಾಗಿ ಶುರುವಿಟ್ಟರು ಗದಾಯುದ್ಧ.
ತಸ್ಮಿನ್ ಕಾಲೇ ಕೇಶವೋ
ವೈನತೇಯಮಾರುಹ್ಯಾSಯಾದ್ ಯತ್ರ ತೇ
ಯುದ್ಧಸಂಸ್ಥಾಃ ।
ದೃಷ್ಟ್ವಾ ಕೃಷ್ಣಂ
ಹರ್ಷಸಮ್ಪೂರಿತಾತ್ಮಾ ರಾಮೋ ಹನ್ತುಂ ಚೈಕಲವ್ಯಂ ಸಮೈಚ್ಛತ್ ॥೨೨.೨೦೭॥
ಹೀಗೇ ನಡೆಯುತ್ತಿರಲು ಕೆಲಕಾಲ ಭಾರೀ ಯುದ್ಧ,
ಗರುಡನೇರಿದ ಶ್ರೀಕೃಷ್ಣ ಶಂಖ ಊದುತ್ತ ಬಂದ.
ಯುದ್ಧದಲ್ಲಿದ್ದ ಯಾದವರೆಲ್ಲರದೂ ಶ್ರೀಕೃಷ್ಣನತ್ತ ನೆಟ್ಟ ನೋಟ,
ಕೃಷ್ಣನ ಕಂಡ ಬಲರಾಮ ಸಂಕಲ್ಪಿಸಿದ ಏಕಲವ್ಯನ ಕೊಲ್ಲುವ ಮಾತ.
ಉದ್ಯಮ್ಯ ದೋರ್ಭ್ಯಾಂ ಸ
ಗದಾಂ ಜವೇನೈವಾಭ್ಯಾಪತದ್ ರೌಹಿಣೇಯೋ ನಿಷಾದಮ್ ।
ಬಲಂ ಕೋಪಂ ಚಾಸ್ಯ ದೃಷ್ಟ್ವೈಕಲವ್ಯಃ
ಪರಾದ್ರವಜ್ಜೀವಿತೇಚ್ಛುಃ ಸುದೂರಮ್ ॥೨೨.೨೦೮॥
ಬಲರಾಮ ತನ್ನೆರಡೂ ಕೈಗಳಿಂದ ಗದೆಯ ಎತ್ತಿ ಹಿಡಿದ,
ಏಕಲವ್ಯನ ಕಡೆಗೆ ವೇಗವಾಗಿ ಓಡೋಡುತ್ತಾ ಬಂದ.
ಬಲರಾಮನ ಕೋಪ ಬಲವನ್ನು ಏಕಲವ್ಯ ಗಮನಿಸಿದ,
ಜೀವ ಉಳಿಸಿಕೊಳ್ಳಬಯಸಿ ಬಹುದೂರ ಓಡಿಹೋದ.
ವಿದ್ರಾವಯನ್ ರೌಹಿಣೇಯೋSನ್ವಯಾತ್ ತಂ ಭೀತೋSಪತಚ್ಚೈಕಲವ್ಯೋSಮ್ಬುಧೌ ಸಃ ।
ವೇಲಾನ್ತಂ ತಂ
ದ್ರಾವಯಿತ್ವಾSತ್ರ ತಸ್ಥೌ ರಾಮೋ
ಗದಾಪಾಣಿರದೀನಸತ್ತ್ವಃ ॥೨೨.೨೦೯॥
ಬಲರಾಮ ಏಕಲವ್ಯನ ಓಡಿಸುತ್ತಾ ಬೆನ್ನಟ್ಟಿದ,
ಓಡುತ್ತಿದ್ದ ಏಕಲವ್ಯ ಅಳುಕುತ್ತಾ ಸಾಗರದಿ ಬಿದ್ದ.
ಸಮುದ್ರತೀರದತನಕ ಬೆನ್ನಟ್ಟಿ ಹೋದ ಬಲಭದ್ರ,
ತನ್ನ ಗದೆ ನೆಲಕ್ಕೂರಿ ನಿಂತ ತೋರಿ ಗಾಂಭೀರ್ಯ.
ಸುಪಾಪೋSಸಾವೇಕಲವ್ಯಃ ಸುಭೀತೋ ರಾಮಂ ಮತ್ವೈವಾನುಯಾತಂ ಪುನಶ್ಚ ।
ಸಮುದ್ರೇSಶೀತಿಂ ಯೋಜನಾನಾಮತೀತ್ಯ ಪಶ್ಚಾದೈಕ್ಷದ್ ದ್ವೀಪಮೇವಾಧಿರುಹ್ಯ
॥೨೨.೨೧೦॥
ಮಹಾಪಾಪಿಷ್ಠ ಏಕಲವ್ಯ
ಬಹಳವಾಗಿ ಭಯಗೊಂಡಿದ್ದ,
ಬಲರಾಮ ತನ್ನ ಹಿಂಬಾಲಿಸುತ್ತಿದ್ದಾನೆಂದು ತಿಳಿದುಕೊಂಡಿದ್ದ.
ಸಮುದ್ರದಲ್ಲಿ ಎಂಬತ್ತು ಯೋಜನ ದಾಟಿ ಹೋದ,
ನಡುಗಡ್ಡೆಯೊಂದನೇರಿ ಮತ್ತೆ ಹಿಂತಿರುಗಿ ನೋಡಿದ.
No comments:
Post a Comment
ಗೋ-ಕುಲ Go-Kula