ತದ್ರೂಪವೃದ್ಧಿಂ
ಭೀಮಸೇನೋsಥ ದೃಷ್ಟ್ವಾ ಶ್ರುತ್ವಾ ಹನೂಮನ್ಮುಖತಃ ಕಥಾಶ್ಚ ।
ರಾಮಸ್ಯ
ತಚ್ಚಾತುರಾತ್ಮ್ಯಂ ಚ ದಿವ್ಯಂ ಚಾತುರ್ಯ್ಯುಗಂ ಧರ್ಮ್ಮಮಪ್ಯಗ್ರ್ಯಮೇವ ॥೨೨.೨೯೪॥
ದ್ವಜಾದ್
ಬೀಭತ್ಸೋರ್ಗ್ಗರ್ಜ್ಜನೇನೈವ ಶತ್ರುಪರಾಭವೇ ತೇನ ದತ್ತೇsರ್ಜ್ಜುನಸ್ಯ ।
ಯಯೌ ಪ್ರಣಮ್ಯೈನಮಾಶ್ವೇವ
ಭೀಮಃ ಸೌಗನ್ಧಿಕಂ ವನಮತ್ಯಗ್ರ್ಯರೂಪಮ್ ॥೨೨.೨೯೫॥
ಭೀಮಸೇನ ಹನುಮಂತನ ಆಕಾರವೃದ್ಧಿಯನ್ನು ಕಣ್ಣಾರೆ ಕಂಡ,
ಹನುಮಂತ ಹೇಳಿದ ರಾಮಾಯಣದ ಕಥೆಗಳ ಕೇಳಿ ಮನಗಂಡ.
ಶ್ರೀರಾಮಚಂದ್ರನ ನಾಲ್ಕು ಯುಗಗಳಲ್ಲಿನ ನಿಯಾಮಕತ್ವ,
ಚತುರ್ಯುಗ ವಿಹಿತವಾದ ಭಗವದ್ಧರ್ಮದ ಆ ಅಲೌಕಿಕತ್ವ.
ಕೇಳಿಸಿಕೊಂಡ ಭೀಮನಿಗೆ ಹನುಮಂತನಿಂದ ಅರ್ಜುನನ ಧ್ವಜದಲ್ಲಿ ನಿಲ್ಲುವ
ವರ,
ಹುಂಕಾರದಿಂದಲೇ ಶತ್ರುಗಳ ಸೋಲಿಸುವ ವರ ಪಡೆದ ಭೀಮನಾದ ವಾಯುಕುಮಾರ.
ಭೀಮಸೇನ ಸಲ್ಲಿಸಿದ ಹನುಮಂತಗೆ ನಮಸ್ಕಾರ,
ಶ್ರೇಷ್ಠ ಸೌಗಂಧಿಕ ವನಕ್ಕೆ ಹೊರಟ ಕಾಡಿನ ದ್ವಾರ.
ನರಾಗಮ್ಯಾಂ ನಳಿನೀಮೇತ್ಯ
ತತ್ರ ದೃಷ್ಟ್ವಾ ಪದ್ಮಾನ್ಯದ್ಭುತಾಕಾರವನ್ತಿ ।
ಹೈಮಾನಿ
ದಿವ್ಯಾನ್ಯತಿಗನ್ಧವನ್ತಿ ಸಮಾಸದದ್ ವಾರ್ಯ್ಯಮಾಣೋ ನರಾಶೈಃ ॥೨೨.೨೯೬॥
ಮನುಷ್ಯಮಾತ್ರರು ಹೋಗಲಾಗದಂಥ ಆ ದಿವ್ಯ ಸರೋವರ,
ಆಗಿತ್ತದು ಅಲೌಕಿಕ ಸುಗಂಧಿತ ಸ್ವರ್ಣಸದೃಶ ತಾವರೆಗಳಾಗರ.
ಆಗ ಬಂತು ಭೀಮಸೇನಗೆ ರಾಕ್ಷಸರಿಂದ ತಡೆ,
ಆದರೂ ಸರೋವರಕ್ಕಿಳಿದ ಭೀಮಗ್ಯಾರು ಎಡೆ.
ತೇ
ಭೀಮಮಾತ್ತಾಯುಧಮುಗ್ರರೂಪಂ ಮಹಾಬಲಂ ರೂಪನವಾವತಾರಮ್ ।
ನ್ಯವಾರಯನ್ ಕ್ರೋಧವಶಾಃ
ಸಮೇತಾಃ ಶತಂ ಸಹಸ್ರಾಣ್ಯಜಿತಾನಿ ಸಙ್ಖೇ ॥೨೨.೨೯೭॥
ಲಕ್ಷ ಲಕ್ಷ ಸಂಖ್ಯೆಯ ಸೋಲರಿಯದ ಕ್ರೋಧಾಧೀನರ ಪಡೆ,
ಬಲಿಷ್ಠ ಚೆಲುವನಾದ ಆಯುಧಪಾಣಿ ಭೀಮಗೊಡ್ಡಿತು ತಡೆ.
ವರಾಚ್ಛಿವಸ್ಯೈವ
ಪರೈರಜೇಯಾಃ ಶಸ್ತ್ರಾಸ್ತ್ರವೃಷ್ಟಿಂ ಮುಮುಚುಃ ಸುಭೀಮಾಮ್ ।
ಭೀಮೇsಖಿಲಜ್ಞೇ ತಪಸಾಂ ನಿಧಾನೇ ಬಲೋದಧೌ ಶೈವಶಾಸ್ತ್ರಂ ವದನ್ತಃ ॥೨೨.೨೯೮॥
ಶಿವನ ವರಬಲದಿಂದ
ಅಜೇಯರಾದ ಕ್ರೋಧಾಧೀನ ದೈತ್ಯರ ಸಮೂಹ,
ತಪಸ್ಸಿನ ಖನಿ ಬಲದ ಗಣಿ ಸರ್ವಜ್ಞ ಭೀಮನ ಮೇಲೆ ಮಾಡಿತ್ತು
ಶಸ್ತ್ರಾಸ್ತ್ರ ಪ್ರವಾಹ.
ತಾನ್ ವೈಷ್ಣವೈರೇವ
ಶಾಸ್ತ್ರೈಃ ಸ ಭೀಮೋ ವಿಜಿತ್ಯ ಪೂರ್ವಂ ವಾಙ್ಮಯೇ ಸಙ್ಗರೇ ತು ।
ಶಸ್ತ್ರಾಸ್ತ್ರವರ್ಷಸ್ಯ
ಕುರ್ವನ್ ಪ್ರತೀಪಂ ಜಘ್ನೇsಖಿಲಾನ್
ಗದಯಾ ತೇಷು ವೀರಾನ್ ॥೨೨.೨೯೯॥
ಭೀಮ ಮೊದಲವರನ್ನು ವಿಷ್ಣುಶಾಸ್ತ್ರದ ವಾಙ್ಮಯ ಯುದ್ಧದಲ್ಲಿ ಸೋಲಿಸಿದ,
ಶಸ್ತ್ರದೊಂದಿಗೆ ಎದುರಾದ ದೈತ್ಯರೆಲ್ಲರನ್ನೂ ತನ್ನ ಗದೆಯಿಂದ
ಸಂಹರಿಸಿದ.
No comments:
Post a Comment
ಗೋ-ಕುಲ Go-Kula