Sunday 11 December 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 22: 308-315

 

ವಸತ್ಸು ತತ್ರ ಪಾರ್ತ್ಥೇಷು ಪುನಃ ಕತಿಪಯೈರ್ದ್ದಿನೈಃ ।

ಉವಾಚ ಭೀಮಸೇನಸ್ಯ ಯಶೋಧರ್ಮ್ಮಾಭಿವೃದ್ಧಯೇ ॥೨೨.೩೦೮॥

 

ಪಞ್ಚವರ್ಣ್ಣಾನಿ ಪುಷ್ಪಾಣಿ ಕೃಷ್ಣಾ ವೀಕ್ಷ್ಯಾsಹೃತಾನಿ ತು ।

ಮಾರುತೇನ ಕುಬೇರಸ್ಯ ಗೃಹಾನ್ನೃಭಿರಗಮ್ಯತಃ ॥೨೨.೩೦೯॥

ಪಾಂಡವರು ಆ ಪರ್ವತದ ಆಸುಪಾಸಿನಲ್ಲಿ ವಾಸ ಮಾಡುತ್ತಿದ್ದಾಗ,

ಭೀಮನ ಯಶಸ್ಸು ಪುಣ್ಯವೃದ್ಧಿಗೆಂದು ದ್ರೌಪದಿ ಹೇಳುವಳಾಗ.

ಕುಬೇರನ ಮನೆಯಿಂದ ಹಾರಿಬಂದ ಪಂಚವರ್ಣ ತಾವರೆ ಕಂಡಾಗ.

 

ಅಗಮ್ಯೋsಯಂ ಗಿರಿಃ ಸರ್ವೈಃ ಕುಬೇರೇಣಾಭಿಪಾಲಿತಃ ।

ಅದ್ಯ ತ್ವಯೈವ ಗನ್ತವ್ಯೋ ವಿಧೂಯಾಖಿಲರಾಕ್ಷಸಾನ್ ॥೨೨.೩೧೦॥

ಕುಬೇರನಿಂದ ರಕ್ಷಿತವಾದ ಈ ಪರ್ವತವು ಮನುಷ್ಯರಿಗೆ ಅಭೇದ್ಯ,

ಅಲ್ಲಿನ ರಾಕ್ಷಸರೆದುರಿಸಿ ಅಲ್ಲಿಗೆ ಹೋಗಲು ನಿನಗೊಬ್ಬನಿಗೇ ಸಾಧ್ಯ.

 

ಇತ್ಯುಕ್ತ ಆಶು ಸಗದಃ ಸಧನುಃ ಸಬಾಣೋ ಭೀಮೋ ಗಿರೀನ್ದ್ರಮಜಿತೋರುಬಲೋ ವಿಗಾಹೇ ।

ಪ್ರಾಪ್ತಂ ನಿಶಾಮ್ಯ ಬಲದೈವತಸೂನುಮತ್ರ ಪದ್ಮತ್ರಯಂ ನ್ಯರುಣದುದ್ಧತರಾಕ್ಷಸಾನಾಮ್ ॥೨೨.೩೧೧॥

ಇದೆಲ್ಲವನ್ನೂ ಕೇಳಿಸಿಕೊಂಡವನಾದ ಭೀಮಸೇನ,

ಅವನ್ಯಾರಿಗೂ ಮಣಿಯದ ಅಗಾಧ ಬಲದ ತಾಣ.

ಗದೆ ಬಿಲ್ಲು ಬಾಣಗಳ ಸಮೇತ,

ಭೀಮ ಹೊರಟ ಆ ಪರ್ವತದತ್ತ.

ಬಲಕ್ಕೆ ಅಧಿದೇವತೆ ಅವನು ಮುಖ್ಯಪ್ರಾಣ,

ಅವನ ಮಗನಾಗಿ ಬಂದವನೇ ಭೀಮಸೇನ.

ಭೀಮನ ಕಂಡ ಕೋಟ್ಯಂತರ ರಕ್ಕಸರ ಪಡೆ,

ಭೀಮಸೇನಗೆ ಹಾಕಲೆತ್ನಿಸಿದರು ಅಡೆ -ತಡೆ.

 

ಅಗ್ರೇ ನಿಧಾಯ ಮಣಿಮನ್ತಮಜೇಯಮುಗ್ರಂ ಶಮ್ಭೋರ್ವರಾದ್ ವಿವಿಧಶಸ್ತ್ರಮಹಾಭಿವೃಷ್ಟ್ಯಾ ।

ತಾನ್ ಸರ್ವರಾಕ್ಷಸಗಣಾನ್ ಮಣಿಮತ್ಸಮೇತಾನ್ ಭೀಮೋ ಜಘಾನ ಸಪದಿ ಪ್ರವರೈಃ ಶರೌಘೈಃ ॥೨೨.೩೧೨॥

ರುದ್ರದೇವರದಿಂದ ಅಜೇಯನಾದವನು ಭಯಂಕರ ಮಣಿಮಂತ,

ಮುಂದಿಟ್ಟುಕೊಂಡು ಬಂತು ರಕ್ಕಸಪಡೆ ಭೀಮಗೆ ಆಯುಧ ಎಸೆಯುತ್ತ.

ಮಣಿಮಂತನಿಂದ ಕೂಡಿದ ರಕ್ಕಸರ ಪಡೆ ಅಪಾರ,

ತನ್ನ ಶ್ರೇಷ್ಠ ಬಾಣಗಳಿಂದ ಭೀಮ ಮಾಡಿದ ಸಂಹಾರ.

 

ಅವದ್ಧ್ಯಾಂಸ್ತಾನ್ ಕ್ಷಣೇನೈವ ಹತ್ವಾ ಭೀಮೋ ಮಹಾಬಲಃ ।

ರಣೇ ಕ್ರೋಧವಶಾನ್ ಸರ್ವಾನತಿಷ್ಠದ್ ಗಿರಿಮೂರ್ದ್ಧನಿ ॥೨೨.೩೧೩॥

ಮಹಾಪರಾಕ್ರಮಿಯಾದವನು ಭೀಮಸೇನ,

ಸಂಹಾರ ಮಾಡಿದ ಅಜೇಯ ಕ್ರೋಧವಶರನ್ನ.

ಕ್ಷಣಮಾತ್ರದಲ್ಲಿ ಅವರೆಲ್ಲರನ್ನೂ ಕೊಂದ,

ಆಗಲೇ ಆ ಬೆಟ್ಟದ ಮೇಲೇರಿ ನಿಂದ.

 

ತೇ ಹತಾ ಭೀಮಸೇನೇನ ಪ್ರಾಪುರನ್ಧನ್ತಮೋsಖಿಲಾಃ ।

ಹತಾಃ ಸೌಗನ್ಧಿಕವನೇ ಮಣಿಮಾಂಶ್ಚ ಪುನಃ ಕಲೌ                     ॥೨೨.೩೧೪॥

 

ಜಾತೋ ಮಿಥ್ಯಾಮತಿಂ ಸಮ್ಯಗಾಸ್ತೀರ್ಯ್ಯಾsಪುಸ್ತಮೋsಧಿಕಮ್ ।

ತತೋ ವೈಶ್ರವಣೋ ರಾಜಾ ಮಹಾಪದ್ಮತ್ರಯೇ ಹತೇ             ॥೨೨.೩೧೫॥

ಭೀಮನಿಂದ ಹತರಾದ ಎಲ್ಲಾ ದೈತ್ಯರು,

ಅಂಧಂತಮಸ್ಸನ್ನು ಸೇರಿದವರಾದರು.

ಕಲಿಯುಗದಲ್ಲಿ ಮತ್ತದೇ ಮಣಿಮಂತ,

ಎಲ್ಲವೂ ಸುಳ್ಳೆನ್ನುತ್ತಾ ಬಂದು ನಿಂತ.

ಭಗವಂತ ಸ್ವತಂತ್ರವಾದ ಗುಣವಿಲ್ಲದವನು ಎಂದ,

ಮಿಥ್ಯಾಜ್ಞಾನ ಪಸರಿಸಿ ಅಂಧಂತಮಸ್ಸನ್ನು ಸೇರಿದ.

No comments:

Post a Comment

ಗೋ-ಕುಲ Go-Kula