Sunday 11 December 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 22: 322-331

 

ತತ್ರೈವ ತೇಷಾಂ ವಸತಾಂ ಮಹಾತ್ಮನಾಮಾನನ್ದಿನಾಮಬ್ದಚತುಷ್ಟಯೇ ಗತೇ ।

ಪಞ್ಚಾಬ್ದಮದ್ಧ್ಯಾಪ್ಯ ಮಹಾನ್ತಿ ಚಾಸ್ತ್ರಾಣೀನ್ದ್ರೋ ಗುರ್ವರ್ತ್ಥಂ ಫಲ್ಗುನೇನಾರ್ತ್ಥಿತೋSಭೂತ್ ॥೨೨.೩೨೨॥

ಆ ಹಿಮವತ್ಪರ್ವತದ ತಪ್ಪಲಿನಲ್ಲಿ ಪಾಂಡವರದು ನಾಕು ವರ್ಷಗಳ ಆನಂದದ ವಾಸ,

ಅರ್ಜುನ ಇಂದ್ರನ ಗುರುದಕ್ಷಿಣೆ ಬಗ್ಗೆ ಪ್ರಾರ್ಥಿಸಿದ ತಾನು ಕಲಿತ ಅಸ್ತ್ರವಿದ್ಯೆ ಐದು ವರುಷ.

 

ವಧಂ ವವ್ರೇ ಸ್ವಶತ್ರೂಣಾಮಿನ್ದ್ರಃ ಪಾರ್ತ್ಥಾತ್ ಸ್ವರೂಪತಃ ।

ನಿವಾತಕವಚಾಖ್ಯಾನಾಂ ಯೇಷಾಂ ಬ್ರಹ್ಮಾ ದದೌ ವರಮ್ ॥೨೨.೩೨೩॥

ಇಂದ್ರ ತನ್ನದೇ ಅವತಾರವಾಗಿರುವ ಅರ್ಜುನನಿಗೆ ಹೀಗೆ ಹೇಳುತ್ತಾನೆ-

ನಿವಾತಕವಚರೆಂಬ ರಕ್ಕಸರಿಗಿದೆ ಬ್ರಹ್ಮವರದಿಂದ ಅವಧ್ಯತ್ವದ ರಕ್ಷಣೆ,

ಅವರನ್ನು ನೀನು ಸಂಹಾರ ಮಾಡುವುದೇ ನನಗೆ ಕೊಡುವ ಗುರುದಕ್ಷಿಣೆ.

 

ಅವದ್ಧ್ಯತ್ವಂ ಸುರೈರ್ದ್ದೈತ್ಯೈರ್ಗ್ಗನ್ಧರ್ವೈಃ ಪಕ್ಷಿರಾಕ್ಷಸೈಃ ।

ಪುನರಿನ್ದ್ರೇಣಾರ್ತ್ಥಿತೋSದಾಜ್ಜಹೀಮಾನ್ ನರದೇಹವಾನ್ ॥೨೨.೩೨೪॥

ದೇವತೆ, ದೈತ್ಯ, ಗಂಧರ್ವ, ಯಕ್ಷ, ರಾಕ್ಷಸರಿಂದ,

ಅವಧ್ಯತ್ವದ ವರವಿತ್ತವರಿಗೆ ಬ್ರಹ್ಮದೇವನಿಂದ.

ಆನಂತರ ಇಂದ್ರನಿಂದ ಬ್ರಹ್ಮದೇವನಲ್ಲಿ ಪ್ರಾರ್ಥನೆ,

ಬ್ರಹ್ಮನೆಂದ-ಮನುಷ್ಯರೂಪದಿಂದವರ ಕೊಲ್ಲುವವ ನೀನೇ.

 

ಇತಿ ತೇನಾರ್ಜ್ಜುನಂ ಶಕ್ರಃ ಸ್ವಾತ್ಮಾನಂ ನರದೇಹಗಮ್ ।

ಜಗಾದ ತಾನ್ ಜಹೀತ್ಯೇವ ಕಿರೀಟಂ ಸ್ವಂ ನಿಬದ್ಧ್ಯ ಚ ॥೨೨.೩೨೫॥

ಇಂದ್ರನೆಂದ-ಅರ್ಜುನಾ ಮನುಷ್ಯರೂಪದಿಂದ ನೀನು ಮಾಡವರ ಸಂಹಾರ,

ತನ್ನ ಕಿರೀಟ ಅವನ ತಲೆಗಿಟ್ಟು ಹೇಳಿದ ನೀನೇ ಇಂದ್ರನೆಂಬುದಲ್ಲವೇ ಸತ್ಯ ವಿಚಾರ.

 

ಐನ್ದ್ರಂ ಸ್ಯನ್ದನಮಾರುಹ್ಯ ಪಾರ್ತ್ಥೋ ಮಾತಲಿಸಂಯುತಃ ।

ಗಾಣ್ಡೀವಂ ಧನುರಾದಾಯ ಯಯೌ ಹನ್ತುಂ ಮಹಾಸುರಾನ್ ॥೨೨.೩೨೬॥

ಅರ್ಜುನ ಇಂದ್ರ ಸಾರಥಿಯಾದ ಮಾತಲಿಯೊಂದಿಗೆ,

ಇಂದ್ರ ಕೊಟ್ಟ ರಥದಲ್ಲಿ ಹೊರಟ ತನ್ನ ಗಾಂಡೀವದೊಂದಿಗೆ.

ಹೀಗಿತ್ತು ದೇವತೆಗಳು ಹೆಣೆದ ನಿವಾತಕವಚರ ಸಂಹಾರದ ಬಗೆ.

 

ಶಙ್ಖಂ ದದುಸ್ತಸ್ಯ ದೇವಾ ದೇವದತ್ತಃ ಸ ಶಙ್ಖರಾಟ್ ।

ನಾದಯನ್ ಶಙ್ಖಘೋಷೇಣ ಧನುರ್ವಿಷ್ಫಾರಯನ್ ಮಹತ್ ॥೨೨.೩೨೭॥

 

ದಧಾನಃ ಕುಣ್ಡಲೇ ದಿವ್ಯೇ ಶಕ್ರದತ್ತೇ ಸುಭಾಸ್ವರೇ ।

ಆಸಸಾದ ಪುರಂ ದಿವ್ಯಂ ದೈತ್ಯಾನಾಮಿನ್ದ್ರನನ್ದನಃ ॥೨೨.೩೨೮॥

ಅರ್ಜುನನಿಗೆ ದೇವತೆಗಳೆಲ್ಲರೂ ಕೊಟ್ಟಂಥ ಆ ಅಪೂರ್ವ ಶಂಖವೇ ದೇವದತ್ತ,

ಇಂದ್ರನಿತ್ತ ಕುಂಡಲ ಧರಿಸಿ ಅರ್ಜುನ ಹೊರಟ ಯುದ್ಧನಾದದೊಂದಿಗೆ ದೈತ್ಯನಗರಿಯತ್ತ.

 

ತಸ್ಯ ಶಙ್ಖಧ್ವನಿಂ ಶ್ರುತ್ವಾ ಗಾಣ್ಡೀವಸ್ಯ ಚ ನಿಸ್ಸ್ವನಮ್ ।

ಅಭಿಸಸ್ರುರ್ಮ್ಮಹಾವೀರ್ಯ್ಯಾ ನಿವಾತಕವಚಾಸುರಾಃ ॥೨೨.೩೨೯॥

ಅರ್ಜುನನ ಶಂಖನಾದ, ಗಾಂಡೀವ ಧನುಸ್ಸಿನ ಹೆದೆ ಮೀಟಿದ ಸದ್ದು,

ಕೇಳಿದ ಮಹಾವೀರ ನಿವಾತಕವಚರು ಅರ್ಜುನಗೆ ಎದುರಾದದ್ದು.

 

ತಿಸ್ರಃ ಕೋಟ್ಯೋ ದಾನವಾನಾಂ ಸ್ವಯಮ್ಭುವರಗರ್ವಿತಾಃ ।

ನಾನಾಯುಧೈ ರಣೇ ಪಾರ್ತ್ಥಮಭ್ಯವರ್ಷನ್ ಸುಸಂಹತಾಃ ॥೨೨.೩೩೦॥

ಬ್ರಹ್ಮವರದಿಂದ ದರ್ಪಿತವಾದ ಆ ಮೂರು ಕೋಟಿ ದಾನವರ ಹಿಂಡು,

ಒಟ್ಟಾಗಿ ಅರ್ಜುನನ ಮೇಲೆರಗಿತು ಆಯುಧಗಳ ಹಿಡಿದುಕೊಂಡು.

 

ತೇಷಾಂ ಸ ಶಸ್ತ್ರಾಣಿ ಕಿರೀಟಮಾಲೀ ನಿವಾರ್ಯ್ಯ ಗಾಣ್ಡೀವಧನುಪ್ರಮುಕ್ತೈಃ ।

ಶರೈಃ ಶಿರಾಂಸಿ ಪ್ರಚಕರ್ತ್ತ ವೀರೋ ಮಹಾಸ್ತ್ರಶಿಕ್ಷಾಬಲಸಮ್ಪ್ರಯುಕ್ತೈಃ ॥೨೨.೩೩೧॥

ಮಹಾವೀರ ಕಿರೀಟ ಮಾಲಾಧಾರಿ ಅರ್ಜುನ ತನ್ನ ಅಸ್ತ್ರಬಲದಿಂದ,

ತನ್ನ ಅಭ್ಯಾಸಬಲದಿಂದ ರಕ್ಕಸರ ಶಸ್ತ್ರಗಳನ್ನು ಅರ್ಜುನ ತಡೆದ,

ಗಾಂಡೀವದಿಂದ ಬಾಣಗಳ ಮಳೆಗರೆದು ಅವರ ತಲೆಗಳನ್ನು ತರಿದ.

No comments:

Post a Comment

ಗೋ-ಕುಲ Go-Kula