Saturday 10 December 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 22: 181-187

 

ಅಭ್ಯೇತ್ಯ ಪಾದಯುಗಳಂ ಜಗದೇಕಭರ್ತ್ತುಃ ಕೃಷ್ಣಸ್ಯ ಭಕ್ತಿಭರಿತಃ ಶಿರಸಾ ನನಾಮ ।

ಚಕ್ರೇ ಸ್ತುತಿಂ ಚ ಪರಮಾಂ ಪರಮಸ್ಯ ಪೂರ್ಣ್ಣಷಾಡ್ಡ್ಗುಣ್ಯವಿಗ್ರಹವಿದೋಷಮಹಾವಿಭೂತೇಃ ॥೨೨.೧೮೧॥

ಪೂರ್ಣ ಜ್ಞಾನ ವೈರಾಗ್ಯ ಮುಂತಾದ ಗುಣಗಳೇ ಮೈವೆತ್ತಂಥ,

ದೋಷಗಳೇ ಇರದ ಮಹಾ ಶ್ರೇಷ್ಠತಮವಾದ ಐಶ್ವರ್ಯವಂತ,

ಜಗತ್ತಿಗೇ ಮುಖ್ಯ ಮೂಲ ಒಡೆಯನಾದ ಕೃಷ್ಣ ಜಗದ ಪಿತ.

ಪೂಜಿಸಿದ ಸದಾಶಿವ, ಅಂಥಾ ಕೃಷ್ಣ ಪಾದಗಳ ಸ್ತುತಿಯ ದ್ವಾರ,

ಭಕ್ತಿಯಿಂದ ಮಾಡಿದ ಭಗವಂತಗೆ ಸಾಷ್ಟಾಂಗ ನಮಸ್ಕಾರ.

 

ಕೃಷ್ಣೋsಪ್ಯಯೋಗ್ಯಜನಮೋಹನಮೇವ ವಾಂಞ್ಛಸ್ತುಷ್ಟಾವ ರುದ್ರಹೃದಿಗಂ ನಿಜಮೇವ ರೂಪಮ್ ।

ರೂದ್ರೋ ನಿಶಮ್ಯ ತದುವಾಚ ಸುರಾನ್ ಸಮಸ್ತಾನ್ ಸತ್ಯಂ ವದಾಮಿ ಶೃಣುತಾದ್ಯ ವಚೋ ಮದೀಯಮ್ ॥೨೨.೧೮೨॥

 

ವಿಷ್ಣುಃ ಸಮಸ್ತಸುಜನೈಃ ಪರಮೋ ಹ್ಯುಪೇಯಸ್ತತ್ಪ್ರಾಪ್ತಯೇsಹಮನಿಲೋsಥ ರಮಾsಭ್ಯುಪಾಯಾಃ ।

ಏಷ ಹ್ಯಶೇಷನಿಗಮಾರ್ತ್ಥವಿನಿರ್ಣ್ಣಯೋತ್ಥೋ ಯದ್ ವಿಷ್ಣುರೇವ ಪರಮೋ ಮಮ ಚಾಬ್ಜಯೋನೇಃ ॥೨೨.೧೮೩॥

 

ಅವ್ಯಕ್ತತಃ ಸಕಲಜೀವಗಣಾಚ್ಚ ನಿತ್ಯ ಇತ್ಯೇವ ನಿಶ್ಚಯ ಉತೈತದನುಸ್ಮರಧ್ವಮ್ ।

ಇತ್ಯುಕ್ತವತ್ಯಖಿಲದೇವಗಣಾ ಗಿರೇಶೇ ಕೃಷ್ಣಂ ಪ್ರಣೇಮುರತಿವೃದ್ಧರಮೇಶಭಕ್ತ್ಯಾ ॥೨೨.೧೮೪॥

ಕೃಷ್ಣ, ತತ್ವಜ್ಞಾನಕ್ಕೆ ಯೋಗ್ಯರಲ್ಲದವರ ಮೋಹನಾರ್ಥ,

ಮಾಡಿದ ರುದ್ರಾಂತರ್ಗತ ತನ್ನದೇ ಆದ ರೂಪದ ಸ್ತೋತ್ರ.

ಆಗ ರುದ್ರದೇವ ಎಲ್ಲಾ ದೇವತೆಗಳಿಗೆ ಹೀಗೆ ಹೇಳುತ್ತಾನೆ,

ನನ್ನ ಪ್ರಮುಖ ಮಾತನ್ನ ಕೇಳಿ -ನುಡಿಯುತ್ತಿರುವೆ ಸತ್ಯವನ್ನೆ.

ಎಲ್ಲಾ ಸಜ್ಜನರೂ ತಪ್ಪದೇ ಮಾಡಬೇಕು ನಾರಾಯಣನ ಧ್ಯಾನ,

ರುದ್ರನಾದ ನಾನು, ಪ್ರಾಣ, ಲಕ್ಷ್ಮಿಯರು ಅವನ ಸೇರುವ ಸಾಧನ.

ಇದು ವೇದಾಂತ ಶಾಸ್ತ್ರದ ಅಂತಿಮ ನಿರ್ಣಯ,

ನನಗೂ ಬ್ರಹ್ಮನಿಗೂ ನಾರಾಯಣನೇ ವಂದ್ಯದೈವ.

 

ಪ್ರಕೃತಿಗಿಂತಲೂ ಜೀವಗಣಗಳಿಗಿಂತಲೂ ನಾರಾಯಣ ಶ್ರೇಷ್ಠ,

ಅವನು ನಿತ್ಯ ಮತ್ತು ವೇದೋಕ್ತವಾಗಿ ನಿಶ್ಚಿತವಾದ ಉತ್ಕೃಷ್ಟ.

ಹೀಗೆ ಶಿವನಿಂದ ವಿಷ್ಣು ಸರ್ವೋತ್ತಮಮತ್ವದ ಸಾರ,

ದೇವತಾ ಸಮೂಹ ಬಾಗಿ ಮಾಡಿತು ಕೃಷ್ಣಗೆ ನಮಸ್ಕಾರ.

 

ಉಕ್ತೈರನೈಶ್ಚ ಗಿರಿಶವಾಕ್ಯೈಸ್ತತ್ವವಿನಿರ್ಣ್ಣಯೈಃ ।

ಕೃಷ್ಣಸ್ಯೈವ ಗುಣಾಖ್ಯಾನೈಃ ಪುನರಿನ್ದ್ರಾದಿದೇವತಾಃ                   ॥೨೨.೧೮೫॥

 

ಜ್ಞಾನಾಭಿವೃದ್ಧಿಮಗಮನ್ ಪುರಾsಪಿ ಜ್ಞಾನಿನೋsಧಿಕಮ್ ।

ಸರ್ವದೇವೋತ್ತಮಂ ತಂ ಹಿ ಜಾನನ್ತ್ಯೇವ ಸುರಾಃ ಸದಾ             ॥೨೨.೧೮೬॥

 

ತಥಾsಪಿ ತತ್ಪ್ರಮಾಣಾನಾಂ ಬಹುತ್ವಾದ್ ಯೇSತ್ರ ಸಂಶಯಾಃ ।

ಯುಕ್ತಿಮಾತ್ರೇ  ತೇsಪಿ ರುದ್ರವಾಕ್ಯಾದಪಗತಾಸ್ತದಾ ॥೨೨.೧೮೭॥

 

ಹೀಗೆ ಹೇಳಲ್ಪಟ್ಟ ಸದಾಶಿವನ ಮಾತುಗಳಿಂದ,

ಬೇರೆ ಮಾತುಗಳಿಂದ ಗಟ್ಟಿಗೊಂಡ ಆ ವಾದ,

ಕೃಷ್ಣಗುಣ ಪ್ರತಿಪಾದಿಸುವ ವೇದ ಮಂತ್ರಗಳಿಂದ,

ಇಂದ್ರಾದಿದೇವತೆಗಳಿಗಾಯ್ತು ಅರಿವಿನ ಆನಂದ.

ದೇವತೆಗಳಿಗಿದೆ ಭಗವಂತನ ಸರ್ವೋತ್ತಮತ್ವದ ಜ್ಞಾನ,

ಪಾಶುಪತಾದಿ ಆಗಮಗಳಿಂದ ಸಂಶಯಗಳ ಕಿರಣ,

ರುದ್ರನ ಮಾತಿನಿಂದ ದೇವತೆಗಳ ಸಂಶಯ ನಿವಾರಣ.

No comments:

Post a Comment

ಗೋ-ಕುಲ Go-Kula