ಇತ್ಯಾದಿಕರ್ಮ್ಮಾಣಿ
ಮಹಾನ್ತಿ ರಾಮಸ್ಯಾSಸಞ್ಛೇಷಸ್ಯಾಚ್ಯುತಾವೇಶಿನೋSಲಮ್ ।
ಯಸ್ಯಾಚ್ಯುತಾವೇಶವಿಶೇಷಕಾಲಂ
ಜ್ಞಾತ್ವಾ ಭೀಮೋSಪ್ಯಸ್ಯ ನೋದೇತಿ ಯುದ್ಧೇ
॥೨೨.೨೪೫॥
ಶೇಷಾವತಾರಿ ಬಲರಾಮನಲ್ಲಿತ್ತು ಭಗವಂತನ ವಿಶೇಷ ಆವೇಶ,
ಹಾಗಾಗಿಯೇ ಅವನಿಂದ ಆಗಿದ್ದವು ಕೆಲ ಮಹಾ ಮಹಾ ಕೆಲಸ.
ಅದನ್ನರಿತ ಭೀಮ ಕೂಡಾ ಮಾಡುತ್ತಿರಲಿಲ್ಲವನ ಮಣಿಸುವ ಸಾಹಸ.
ಕ್ರೀಡಾಯುದ್ಧೇ ಬಹುಶೋ
ರೌಹಿಣೇಯೇ ವ್ಯಕ್ತಿಂ ವಿಷ್ಣೋರ್ಭೀಮಸೇನೋ ವಿದಿತ್ವಾ ।
ತಾತ್ಕಾಲಿಕೀಂ
ಕ್ರೀಡಮಾನೋSಪಿ ತೇನ ನೈವೋದ್ಯಮಂ
ಕುರುತೇ ವಿಷ್ಣುಭಕ್ತ್ಯಾ ॥೨೨.೨೪೬॥
ತದಾ ಜಯೀ ಪ್ರಭವತ್ಯೇಷ
ರಾಮೋ ನಾತಿವ್ಯಕ್ತಸ್ತತ್ರ ಯದಾ ಜನಾರ್ದ್ದನಃ ।
ತದಾ ಭೀಮೋ ವಿಜಯೀ
ಸ್ಯಾತ್ ಸದೈವ ವಿಷ್ಣೋಃ ಕೇಶಾವೇಶವಾನ್ ಯತ್ ಸ ರಾಮಃ ॥೨೨.೨೪೭॥
ಗದಾಯುದ್ಧ ವಿದ್ಯೆಯಲ್ಲಿ ಭೀಮಸೇನ ಬಲರಾಮನ ಶಿಷ್ಯ,
ಕಲಿಕೆಯ ನಂತರವೂ ನಡೆಯುತ್ತಿತ್ತದು ಕ್ರೀಡಾಯುದ್ಧಾಭ್ಯಾಸ.
ಅಂತಹಾ ಕ್ರೀಡಾಯುದ್ಧದಲ್ಲಿ ಒಮ್ಮೊಮ್ಮೆ ಇರುತ್ತಿತ್ತು ಬಲರಾಮನಲ್ಲಿ
ಹರಿಯ ಅಭಿವ್ಯಕ್ತಿ,
ಆಗೆಲ್ಲಾ ಭೀಮ ಪ್ರತಿರೋಧಿಸದೇ ಹೊಡೆತ ತಿನ್ನುತ್ತಿದ್ದ ತೋರುತ್ತಾ
ಭಗವಂತನಲ್ಲಿ ಭಕ್ತಿ.
ಅಂತಹಾ ಸಂದರ್ಭಗಳಲ್ಲೆಲ್ಲಾ ಬಲರಾಮನದೇ ಗೆಲುವು,
ಜನಾರ್ದನನ ಆವೇಶವಿರದಾಗ ಗೆಲ್ಲುತ್ತಿದ್ದದ್ದು ಭೀಮಬಲವು.
ಆ ಬಲರಾಮ ನಾರಾಯಣನ ಶುಕ್ಲಕೇಶ,
ಸಂಕರ್ಷಣರೂಪಿ ಭಗವಂತನದೇ ಆವೇಶ.
ಏತಾದೃಶೇನೈವ ರಾಮೇಣ
ಯುಕ್ತೇ ಕೃಷ್ಣೇ ದ್ವಾರ್ವತ್ಯಾಂ ನಿವಸತ್ಯಭ್ಜನಾಭೇ ।
ಸ್ವಪ್ನೇSನಿರುದ್ಧೇನ ರತಾ ಕದಾಚಿದ್ ಬಾಣಾತ್ಮಜೋಷಾ ಚಿತ್ರಲೇಖಾಮುವಾಚ ॥೨೨.೨೪೮॥
ಹೀಗೆ ಸಾಗಿತ್ತು ಕೃಷ್ಣ ಬಲರಾಮರದು ದ್ವಾರಕೆಯಲ್ಲಿನ ವಾಸ,
ಅನಿರುದ್ಧನೊಡನೆ ಸೇರಿದ ಕನಸು ಕಂಡಳು ಬಾಣಾಸುರಪುತ್ರಿ ಉಷಾ.
ಅದನ್ನೆಲ್ಲಾ ತನ್ನಾಪ್ತಸಖಿ ಚಿತ್ರಲೇಖಳಿಗೆ ಹೇಳಿಸಿತ್ತು ವಿಧಿಯ ಪಾಶ.
ತಮಾನಯೇತ್ಯಥ ಸಾ
ಚಿತ್ರವಸ್ತ್ರೇ ಪ್ರದರ್ಶ್ಯ ಲೋಕಾನ್ ಸಮದರ್ಶಯತ್ ತಮ್ ।
ಪೌತ್ರಂ ವಿದಿತ್ವಾ
ವಚನಾಚ್ಚ ತಸ್ಯಾಃ ಕೃಷ್ಣಸ್ಯ ತಂ ಚಾSನಯತ್
ತತ್ರ ರಾತ್ರೌ ॥೨೨.೨೪೯॥
ಉಷಾ ತಾನು ಕನಸಲಿ ಕಂಡ ಯುವಕನ ಕರೆತರುವಂತೆ ಹೇಳುತ್ತಾಳೆ,
ಚಿತ್ರಲೇಖ ಎಲ್ಲಾ ಸುರಸುಂದರಾಂಗರ ಚಿತ್ರ ಬರೆದು ಉಷೆಗೆ ತೋರುತ್ತಾಳೆ.
ಅವುಗಳಲ್ಲಿ ಅನಿರುದ್ಧನ ಚಿತ್ರವನ್ನೂ ತೋರಿಸುತ್ತಾಳೆ,
ಅವನು ಕೃಷ್ಣನ ಮೊಮ್ಮಗನೆಂದರಿತೂ ಕರೆದುತಾ ಅಂತಾಳೆ.
ಚಿತ್ರಲೇಖೆ ಯಾರಿಗೂ ತಿಳಿಯದಂತಹ ಮಾಯೆಯಿಂದ,
ಬಾಣನ ಶೋಣಪಟ್ಟಣಕ್ಕೆ ತರಲ್ಪಟ್ಟವನಾದ ಅನಿರುದ್ಧ.
ಅನಿರುದ್ಧಂ
ಗುಣೋದಾರಮಾನೀತಂ ಚಿತ್ರಲೇಖಯಾ ।
ಪ್ರಾಪ್ಯ ರೇಮೇ ಬಾಣಸುತಾ
ದಿವಸಾನ್ ಸುಬಹೂನಪಿ ॥೨೨.೨೫೦॥
ಚಿತ್ರಲೇಖೆಯಿಂದ ತರಲ್ಪಟ್ಟಿದ್ದ ಶ್ರೇಷ್ಠಗುಣದ ಅನಿರುದ್ಧ,
ಬಾಣಪುತ್ರಿ ಉಷೆ ಅವನ ವರಿಸಿದಳು ಗಂಧರ್ವ ವಿಧಿಯಿಂದ.
ಅವನೊಂದಿಗೆ ಬಹಳ ದಿನ ಬಾಳಿದಳು ಬಲು ಆನಂದದಿಂದ.
No comments:
Post a Comment
ಗೋ-ಕುಲ Go-Kula