Sunday 11 December 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 22: 438-450

 

ಸಕುಣ್ಡಲಮ್ ಸಕವಚಮವದ್ಧ್ಯಂ ಸೂರ್ಯ್ಯನನ್ದನಮ್ ।

ಜ್ಞಾತ್ವೇನ್ದ್ರ ಉಭಯಂ ತಸ್ಮಾದೈಚ್ಛದಾದಾತುಮುತ್ತಮಮ್ ॥೨೨.೪೩೮॥

ಕವಚ ಕುಂಡಲಧಾರಿ ಸೂರ್ಯಪುತ್ರ ಕರ್ಣ ಅವಧ್ಯನೆಂದು ಇಂದ್ರ ತಿಳಿದ,

ಹಾಗಾಗಿ ಕರ್ಣನ ಕವಚ ಕುಂಡಲಗಳನ್ನು ಪಡೆದುಕೊಳ್ಳಲು ಬಯಸಿದ.

 

ತದ್ ವಿಜ್ಞಾಯ ರವಿಃ ಕರ್ಣ್ಣಂ ಸ್ವಪ್ನ ಉಕ್ತ್ವಾ ನ್ಯವಾರಯತ್ 

ಸರ್ವಥಾ ದಾಸ್ಯ ಇತ್ಯುಕ್ತೇ ಪ್ರಾಹಾSದೇಯಂ ವರಾಯುಧಮ್ ॥೨೨.೪೩೯॥

ಇಂದ್ರನ ಈ ಸಂಕಲ್ಪವನ್ನು ತಿಳಿದ ಸೂರ್ಯದೇವ ಕರ್ಣನಿಗೆ ತಿಳಿಸುತ್ತಾನೆ ವಿಷಯ,

ಖಂಡಿತಾ ಕೊಡುತ್ತೇನೆಂದ ಕರ್ಣಗೆ ಇಂದ್ರನಿಂದ ಉತ್ಕೃಷ್ಟ ಅಸ್ತ್ರ ಪಡೆಯೆಂದ ಸೂರ್ಯ.

 

ದದೌ ಚೋತ್ಕೃತ್ಯ ಕವಚಂ ಕುಣ್ಡಲೇ ಚ ಶಚೀಪತೇಃ ।

ಅಮೋಘಾಂ ಶಕ್ತಿಮಾದಾಯ ಜ್ಞಾತ್ವೈವ ದ್ವಿಜರೂಪಿಣಮ್ ॥೨೨.೪೪೦॥

ಬ್ರಾಹ್ಮಣವೇಷದಲ್ಲಿ ಬಂದವನನ್ನು ಇಂದ್ರನೆಂದು ಕರ್ಣ ತಿಳಿದಿದ್ದ,

ಅವನಿಂದ ಪಡಕೊಂಡ ಎಂದೂ ವ್ಯರ್ಥವಾಗದ ಶ್ಯಕ್ತ್ಯಾಯುಧ.

ತನ್ನ ಕವಚ ಕುಂಡಲ ದೇಹದಿಂದ ಕಿತ್ತು ಇಂದ್ರನಿಗೆ ದಾನ ಮಾಡಿದ.

 

ಋತೇSರ್ಜ್ಜುನಾದೇಕಮೇವ ವಧಿಷ್ಯಸ್ಯನಯೇತಿ ಸಃ ।

ದತ್ವಾ ಶಕ್ತಿಂ ಯಯೌ ಶಕ್ರಃ ಸಾರ್ದ್ದಂ ಕವಚಕುಣ್ಡಲೈಃ ॥೨೨.೪೪೧॥

ಅರ್ಜುನನನ್ನು ಬಿಟ್ಟು ಒಬ್ಬ ವೀರನ ಮಾತ್ರ ಸಂಹರಿಸುವುದೀ ಶಕ್ತ್ಯಾಯುಧ,

ಹೀಗೆ ಹೇಳಿದ ಇಂದ್ರದೇವ ತಾನು ಕವಚ ಕುಂಡಲದೊಂದಿಗೆ ಹಿಂದಿರುಗಿದ.

 

ಪಾರ್ತ್ಥ ವಿಮುಚ್ಯೈವ ಸುಯೋಧನಂ ತಂ ವನೇ ವಸನ್ತೋ ಮುದಿತಾಃ ಸದೈವ ।

ಸಹಾರಣೀಭಾಣ್ಡಮಥೋ ಮೃಗೇಣ ಹೃತಂ ದ್ವಿಜಸ್ಯಾSಶು ನಿಶಮ್ಯ ಚಾನ್ವಯುಃ ॥೨೨.೪೪೨॥

ಇತ್ತ ದುರ್ಯೋಧನನನ್ನು ಗಂಧರ್ವರಿಂದ ಬಿಡಿಸಿದ ಪಾಂಡವರು,

ಕಾಡಿನಲ್ಲಿ ವಾಸ ಮಾಡುತ್ತಾ ಬಹಳವಾದ ಸಂತೋಷದಿಂದಿದ್ದರು.

ಜಿಂಕೆಯಿಂದ ಬ್ರಾಹ್ಮಣನೊಬ್ಬನ ಅಗ್ನಿಮಥನ ಕಾಷ್ಠ ಪಾತ್ರೆಯ ಅಪಹರಣ,

ಅದಕ್ಕಾಗಿ ಜಿಂಕೆಯನ್ನು ಹಿಂಬಾಲಿಸಿ ಹೊರಡುತ್ತದೆ ಪಾಂಡವರ ಪ್ರಯಾಣ.

 

ತಸ್ಮಿನ್ನದೃಶ್ಯೇ ತೃಷಿತಾ ಏಕೈಕ ಉದಕಾರ್ತ್ಥಿನಃ ।

ಯಯುರ್ಯ್ಯುಧಿಷ್ಠಿರಮೃತೇ ಸುಪ್ತಾಸ್ತೇ ಧರ್ಮ್ಮಮಾಯಯಾ ॥೨೨.೪೪೩॥

 

ಅದೃಶ್ಯೇನೈವ ಧರ್ಮ್ಮೇಣ ವಾರಿತಾ ವಾರಿಪಾಯಿನಃ ।

ಕ್ಷತ್ರಧರ್ಮ್ಮಸ್ಯ ರಕ್ಷಾರ್ತ್ಥಂ ನ ತತ್ಪ್ರಶ್ನಾನ್ ವಿದಾಂ ವರಾಃ ॥೨೨.೪೪೪॥

 

ವ್ಯಾಚಕ್ರುಃ ಶಕ್ತಿಮನ್ತೋSಪಿ ಪಾನೀಯಾರ್ತ್ಥಮರಿನ್ದಮಾಃ ।

ನ ವಿಪ್ರಾಣಾಂ ಚ ಧರ್ಮ್ಮೋSಯಂ ವಿದ್ಯಾಯಾ ಉಪಜೀವನಮ್ ॥೨೨.೪೪೫॥

 

ಕ್ಷತ್ರಿಯಾಣಾಂ ತು ಕಿಮುತ ಪ್ರಸಭಂ ತೇನ ತೇ ಪಪುಃ ।

ದೇವಾ ಅಪಿ ಮನುಷ್ಯೇಷು ಜಾತಾಃ ಸುಬಲಿನೋSಪಿ ಹಿ ॥೨೨.೪೪೬॥

 

ಮಾನುಷೇಣೈವ ಭಾವೇನ ಯುಕ್ತಾಃ ಸ್ಯುಃ ಕೇಶವಾದೃತೇ ।

ಕಾರ್ಯ್ಯೇಷ್ವೇಷಾಂ ಕ್ರಮೇಣೈವ ವ್ಯಕ್ತಿಮಾಯಾನ್ತಿ  ಸದ್ಗುಣಾಃ ॥೨೨.೪೪೭॥

ಆ ಜಿಂಕೆ ಕಾಣದಾದಾಗ ಬಾಯಾರಿ ಬಳಲಿದರು ಪಾಂಡವರು,

ಧರ್ಮಜನ ಬಿಟ್ಟು ಪ್ರತ್ಯೇಕವಾಗಿ ನೀರನ್ನು ಅರಸಿ ಹೊರಟರು.

ಬಕರೂಪಿಯಾಗಿದ್ದು ಯಾರಿಗೂ ಕಾಣದಂತಿದ್ದ ಯಮಧರ್ಮನಿಂದ ಪ್ರಶ್ನೆ,

ಉತ್ತರ ಕೊಟ್ಟರೆ ಮಾತ್ರ ನೀರು ಕುಡಿಯಬಹುದು ಎಂಬುದು ಯಕ್ಷನ ಆಜ್ಞೆ.

ಆದರೂ ಪಾಂಡವರು ನೀರು ಕುಡಿದವರಾಗಿ ಆದರು ಯಮಶಕ್ತಿಯಿಂದ ನಿದ್ರಾವಶ,

ಅವರೆಲ್ಲಾ ಜ್ಞಾನಿಗಳಾಗಿದ್ದರೂ ಕಟ್ಟಿಹಾಕಿಸಿತ್ತು ಅವರ ಕ್ಷತ್ರಧರ್ಮ ರಕ್ಷಣದ ಪಾಶ.

ಬ್ರಾಹ್ಮಣರಿಗೆ ವಿದ್ಯೋಪಜೀವನ ಧರ್ಮವಲ್ಲ ಎನ್ನುತ್ತದೆ ಧರ್ಮಶಾಸ್ತ್ರ,

ಕ್ಷತ್ರಿಯರಿಗೂ ಧರ್ಮವಲ್ಲವೆಂದರಿತೇ ನೀರು ಕುಡಿದರು ಹೇಳದೇ ಉತ್ತರ.

ದೇವತೆಗಳು ಮನುಷ್ಯರಾಗಿ ಹುಟ್ಟಿದಾಗ ಅವರಾಗಿದ್ದರೂ ಬಲಿಷ್ಠ,

ಶ್ರೀಹರಿಯ ಬಿಟ್ಟು ಉಳಿದವರಲ್ಲಿರುತ್ತದೆ ಮಾನುಷಭಾವ ಕನಿಷ್ಠ.

ಕೆಲಸವಿದ್ದಾಗ ಮಾತ್ರ ಅವು ಅಭಿವ್ಯಕ್ತ,

ಅಲ್ಲಿಯವರೆಗೂ ಅವು ಇರುತ್ತವೆ ಸುಪ್ತ.

 

ಅತೋ ಭೀಮಾರ್ಜ್ಜುನೌ ಧರ್ಮ್ಮಾದತ್ಯುತ್ತಮಬಲಾವಪಿ ।

ದೇವಮಾಯಾಂ ಸಮಾಶ್ರಿತ್ಯ ಧರ್ಮ್ಮೇಣ ಸ್ವಾಪಿತೌ ಕ್ಷಣಾತ್ ॥೨೨.೪೪೮॥

ಯಮನಿಗಿಂತ ಭೀಮಾರ್ಜುನರದು ಎತ್ತರದ ಕಕ್ಷೆ,

ದೇವಮಾಯೆಯಿಂದ ಮಲಗಿದರದು ಯಮಶಿಕ್ಷೆ.

 

ಮುಹೂರ್ತ್ತಮೇವ ಸ  ಮಾಯಾ ತಯೋರಾಚ್ಛಾದನಕ್ಷಮಾ ।

ತತಃ ಪ್ರಬುದ್ಧಯೋರ್ದ್ಧರ್ಮ್ಮೋ ನೈವ ಶಕ್ತಿಶತಾಂಶಭಾಕ್ ॥೨೨.೪೪೯॥

ಮಾಯೆಯದು ಮುಹೂರ್ತ ಮಾತ್ರ ಸಮರ್ಥ ಭೀಮಾರ್ಜುನರು ಪ್ರಕಟಿಸದಂತೆ ಬಲ,

ಯಮಬಲ ಭೀಮಾರ್ಜುನರ ದೇವಮಾಯೆಯ ಬಲದ ನೂರನೇ ಒಂದಂಶವೂ ಅಲ್ಲ.

 

ಉಕ್ತಂ ಪಾದ್ಮಪುರಾಣೇ ಚ ತದೇತತ್ ಸರ್ವಮಞ್ಚಸಾ ।

ತಸ್ಮಾನ್ನಾಶಕ್ತಿರನಯೋಃ ಸಮ್ಭಾವ್ಯಾ ಭೀಮಪಾರ್ತ್ಥಯೋಃ ॥೨೨.೪೫೦॥

ಈ ಪ್ರಮೇಯಗಳೆಲ್ಲವನ್ನೂ ಬಿಡಿಸಿ ಹೇಳುತ್ತದೆ ಪದ್ಮಪುರಾಣ,

ದೃಢ ಮಾಡುತ್ತದೆ ಭೀಮಾರ್ಜುನರು ಅಸಮರ್ಥರಲ್ಲವೆಂಬ ಕಾರಣ.

No comments:

Post a Comment

ಗೋ-ಕುಲ Go-Kula