Sunday 11 December 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 22: 372-378

 

ಗತೇ ಭೀಮೇ ನಿಮಿತ್ತಾನಿ ದೃಷ್ಟ್ವಾ ರಾಜಾ ಯುಧಿಷ್ಠಿರಃ ।

ಪಪ್ರಚ್ಛ ಕ್ವ ಗತೋ ಭೀಮ ಇತಿ ಕೃಷ್ಣಾಂ ಚಲನ್ಮನಾಃ ॥೨೨.೩೭೨॥

ಇತ್ತ ಭೀಮಸೇನ ಕಾಡೊಳಗೆ ಹೊರಟ ನಂತರ,

ನಿಮಿತ್ತಗಳ ಕಂಡು ಕಳವಳಗೊಂಡ ಯುಧಿಷ್ಠಿರ.

ಕಲಕಿದ ಮನದ ಧರ್ಮಜ ದ್ರೌಪದಿಗೆ ಕೇಳುತ್ತಾನೆ,

ಹೇಳು -- ಭೀಮಸೇನ ಎಲ್ಲಿಗೆ ಹೋಗಿದ್ದಾನೆ?.

 

ಯಾತಂ ಮೃಗಾರ್ತ್ಥಂ ಸ ನಿಶಮ್ಯ ತಸ್ಯಾಸ್ತದೂರುವೇಗಾತ್ ಪತಿತಾನ್ ನಗೇನ್ದ್ರಾನ್ ।

ದೃಷ್ಟ್ವಾ ಪಥಾ ತೇನ ಯಯೌ ಸ ತತ್ರ ದೃಷ್ಟ್ವಾ ಚ ಸರ್ಪ್ಪಾವೃತಮನ್ವಪೃಚ್ಛತ್ ॥೨೨.೩೭೩॥

 

ಸ ಕಾರಣಂ ನಹುಷಾತ್ ಸರ್ವಮೇವ ಶುಶ್ರಾವ ತತ್ಪ್ರಶ್ನಮಶೇಷತಶ್ಚ ।

ಭ್ರಾತೃಸ್ನೇಹಾದ್ ವ್ಯಾಕರೋದ್ ಧರ್ಮ್ಮಸೂನುಸ್ತದೈವ ಸೋSಪ್ಯಾರುಹತ್ ಸ್ವರ್ಗ್ಗಲೋಕಮ್ ॥೨೨.೩೭೪॥

ಬೇಟೆಗಾಗಿ ಹೋಗಿದ್ದಾನೆಂದು ದ್ರೌಪದಿಯಿಂದ ಬಂದ ಉತ್ತರ,

ದಾರಿ ತೋರುತ್ತಿದ್ದವು ಭೀಮನಡಿಗೆ ರಭಸಕ್ಕೆ ಬಿದ್ದಂಥಾ ಮರ.

ಆ ಸೂಚಿತ ದಾರಿಯಲ್ಲಿ ಧರ್ಮರಾಯ ಹುಡುಕುತ್ತಾ ಹೊರಟ,

ದಾರಿಯಲ್ಲಿ ಭೀಮ ಹೆಬ್ಬಾವಿಂದ (ನಹುಷ) ಸುತ್ತಲ್ಪಟ್ಟ ನೋಟ.

ನಹುಷನ ಕೇಳಿ ಧರ್ಮರಾಜ ತಿಳಿದುಕೊಂಡ ಸಂಬಂಧಿತ ಕಾರಣ,

ಸೋದರಪ್ರೀತಿಯಿಂದ ನಹುಷಪ್ರಶ್ನೆಗೆ ಕೊಟ್ಟ ಉತ್ತರದ ಹೂರಣ.

ಆಗ ನಹುಷ ಶಾಪಮುಕ್ತನಾದ,

ಆಕ್ಷಣ ಸ್ವರ್ಗಲೋಕವನ್ನೇರಿದ.

 

ದಿವ್ಯಾಮ್ಬರೇ ಕುಣ್ಡಲಿನಿ ಸ್ವಪೂರ್ವೇ ಗತೇ ವಿಮಾನೇನ ಸ ಧರ್ಮ್ಮರಾಜಃ ।

ಭೀಮಶ್ಚಾSಯಾತ್ ಸ್ವಾಶ್ರಮಾಯೈವ ಸರ್ವಂ ಯುಧಿಷ್ಠಿರಃ ಕಥಯಾಮಾಸ ತತ್ರ ॥೨೨.೩೭೫॥

ತನ್ನ ವಂಶದ ಮೂಲ ಪುರುಷನಾದ ನಹುಷನು ಆಗ,

ದಿವ್ಯ ವಸ್ತ್ರ ಕುಂಡಲಧಾರಿಯಾಗಿ ಹಿಡಿದ ಸ್ವರ್ಗಮಾರ್ಗ.

ಆಕಾಶರಥದಲ್ಲಿ ಅವನು ಸ್ವರ್ಗಕ್ಕೆ ತೆರಳುವಾಗ,

ಧರ್ಮಜ ಭೀಮ ತಮ್ಮ ಆಶ್ರಮಕ್ಕೆ ಬಂದರಾಗ. ಯುಧಿಷ್ಠಿರ ಎಲ್ಲರಿಗೂ ಹೇಳಿದ ನಡೆದ ಕಥಾಭಾಗ.

 

ಶ್ರುತ್ವಾ ಕೃಷ್ಣಾ ಭ್ರಾತರಶ್ಚಾಸ್ಯ ಸರ್ವೇ ಸರ್ವೇ ಮುನೀನ್ದ್ರಾ ಭೀಮಸೇನೇSತಿಭಕ್ತಾಃ ।

ವ್ರೀಳಾಂ ಯಯುರ್ಭೀಮಸೇನಗ್ರಹೇಣ ತಥಾSಬ್ರುವನ್ ಸ್ನೇಹತೋ ಭೀಮಸೇನಮ್ ॥೨೨.೩೭೬॥

ಭೀಮಸೇನನಲ್ಲಿ ಅತ್ಯಂತ ಭಕ್ತಿಯಿರುವ ದ್ರೌಪದಿ ಮತ್ತು ಸೋದರವರ್ಗ,

ಮುನಿಗಳಿಗೂ ಕೂಡಾ ನಹುಷನ ಕೈಲಿ ಭೀಮನಿದ್ದ ಎಂಬುದು ನಾಚಿಕೆ ಪ್ರಸಂಗ.

ಭೀಮಸೇನನ ಮೇಲಿನ ಗಾಢ ಭಕ್ತಿ ಪ್ರೀತಿಯಿಂದ ಎಲ್ಲರೂ ಹೇಳುತ್ತಾರೆ ಆಗ.

 

ನೈತಾದೃಶಂ ಸಾಹಸಂ ತೇSನುರೂಪಂ  ಶಕ್ತೋSಪಿ ಯತ್ ಸ್ವಾತ್ಮನೋ ಮೋಕ್ಷಣಾಯ ।

ನೈವಾSಚರೋ ಯತ್ನಮತೋ ನಿಜಾನಾಂ ಮಹದ್ ದುಃಖಂ ಹೃದಯೇ ಪ್ರಾರ್ಪ್ಪಯಸ್ತ್ವಮ್ ॥೨೨.೩೭೭॥

ಈ ತೆರನಾದ ಸಾಹಸವು ನಿನಗೆ ಯೋಗ್ಯವಲ್ಲ,

ಬಿಡಿಸಿಕೊಳ್ಳಲು ನೀನು ಸಮರ್ಥನಾಗಿದ್ದೆಯಲ್ಲ.

ನೀನು ಬಿಡುಗಡೆಗೆ ಪ್ರಯತ್ನ ಮಾಡದಿರುವುದು,

ನಿನ್ನವರ ಹೃದಯಕ್ಕೆ ಮಹಾದುಃಖವಾಗಿರುವುದು.

 

ಮೈವಂ ಪುನಃ ಕಾರ್ಯ್ಯಮಿತಿ ಬ್ರುವನ್ತಃ ಸಮಾಶ್ಲಿಷನ್ ಸರ್ವ ಏವೈತ್ಯ ಭೀಮಮ್ ।

ತತೋSಹೋಭಿಃ ಕೈಶ್ಚಿದಾಪುಃ ಕುರೂಣಾಂ ರಾಷ್ಟ್ರಂ ಪಾರ್ತ್ಥಾ ಮುನಿಮುಖ್ಯೈಃ ಸಮೇತಾಃ ॥೨೨.೩೭೮॥

ಹೀಗೆ ಮತ್ತೆ ಮಾಡಬೇಡ ಎನ್ನುತ್ತಾ ಭೀಮಸೇನಗೆ ಕೊಟ್ಟರು ಆಲಿಂಗನ,

ಕೆಲದಿನಾನಂತರ ಪಾಂಡವರದು ಹಸ್ತಿನಾವತಿಯ ಹತ್ತಿರದ ಕಾಡಿನತ್ತ ಪಯಣ.

No comments:

Post a Comment

ಗೋ-ಕುಲ Go-Kula