Wednesday 29 April 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 17: 117 - 123

ಸಮಸ್ತಮಾಧುರಾನ್ ಪ್ರಭುಃ ಕುಶಸ್ಥಲೀಸ್ಥಿತಾನ್ ಕ್ಷಣಾತ್ ।
ವಿಧಾಯ ಬಾಹುಯೋಧಕಃ ಸ ಯಾವನಂ ಸಮಭ್ಯಯಾತ್ ॥೧೭.೧೧೭॥
ಸರ್ವಶಕ್ತ ಕೃಷ್ಣ ಮಧುರೆಯ ಎಲ್ಲ ನಾಗರೀಕರನ್ನು ದ್ವಾರಕೆಯಲ್ಲಿರಿಸಿದ ,
ಬಾಹುಯುದ್ಧ ಮಾಡಲು ಶ್ರೀಕೃಷ್ಣ ಕಾಲಯವನಗೆ ಎದುರಾಗಿ ಹೋದ .

ಅನನ್ತಶಕ್ತಿರಪ್ಯಜಃ ಸುನೀತಿದೃಷ್ಟಯೇ ನೃಣಾಮ್ ।
ವ್ಯವಾಸಯನ್ನಿಜಾನ್ ಜನಾನ್ ಸ ಲೀಲಯೈವ ಕೇವಲಮ್ ॥೧೭.೧೧೮॥
ಹುಟ್ಟೇ ಇರದ ಅಪರಿಮಿತ ಬಲದ ಭಗವಂತ ,
ಆಪತ್ಕಾಲದ ಯುದ್ಧ ರಾಜನೀತಿ ತೋರಿದನಾತ ,
ಲೀಲೆಯಿಂದಲೇ ಪ್ರಜಾಸ್ಥಳಾಂತರ ಮಾಡಿದನಾತ .

ಅನಾದ್ಯನನ್ತಕಾಲಕಂ ಸಮಸ್ತಲೋಕಮಣ್ಡಲಮ್ ।
ಯದೀಕ್ಷಯೈವ ರಕ್ಷ್ಯತೇ ಕಿಮಸ್ಯ ವೃಷ್ಣಿರಕ್ಷಣಮ್ ॥೧೭.೧೧೯॥
ಅನಾದಿಯಿಂದ ಅನಂತಕಾಲದವರೆಗೆ ಲೋಕ ರಕ್ಷಿಸಬಲ್ಲ ಆ ನೋಟ ,
ಅಂಥಾ ಸರ್ವಶಕ್ತಗೆ ಯಾದವರ ರಕ್ಷಣೆ ಯಾವ ಲೆಕ್ಕದ ಮೋಜಿನಾಟ .

ನಿರಾಯುಧಂ ಚ ಮಾಮಯಂ ವರಾಚ್ಛಿವಸ್ಯ ನ ಕ್ಷಮಃ ।
ಸಮಸ್ತಸೇನಯಾ ಯುತೋsಪಿ ಯೋದ್ಧುಮಿತ್ಯದರ್ಶಯತ್ ॥೧೭.೧೨೦॥
ಕಾಲಯವನನಾಗಿದ್ದರೂ ಅಪಾರ ಸೇನೆ ಶಿವವರಬಲಯುಕ್ತ ,
ತೋರಿದ ಕೃಷ್ಣ-ನಿರಾಯುಧ ತನ್ನೊಡನೆ ಕಾದಾಡಲಸಮರ್ಥ .

ಸ ಕೃಷ್ಣಪನ್ನಗಂ ಘಟೇ ನಿಧಾಯ ಕೇಶವೋsರ್ಪ್ಪಯತ್ ।
ನಿರಾಯುಧೋsಪ್ಯಹಂ ಕ್ಷಮೋ ನಿಹನ್ತುಮಪ್ರಿಯಾನಿತಿ ॥೧೭.೧೨೧॥
ಕೃಷ್ಣ ಕಾಲಯವನಗೆ ಕಳಿಸಿದ ಮಡಕೆಯಲಿಟ್ಟ ಕರಿಹಾವು ,
ನಿರಾಯುಧ ಏಕಾಂಗಿ ಶತ್ರುಗಳ ಕೊಲ್ಲಲು ಶಕ್ತ ಎಂಬ ಸುಳಿವು .

ಘಟಂ ಪಿಪೀಲಿಕಾಗಣೈಃ ಪ್ರಪೂರ್ಯ್ಯ ಯಾವನೋsಸ್ಯ ಚ ।
ಬಹುತ್ವತೋ ವಿಜೇಷ್ಯ ಇತ್ಯಹಿಂ ಮೃತಂ ವ್ಯದರ್ಶಯತ್ ॥೧೭.೧೨೨॥
ಕಾಲಯವನ ಕಳಿಸಿದ ಇರುವೆಗಳ ತುಂಬಿದ ಸತ್ತ ಹಾವಿನ ಗಡಿಗೆ ,
ಅಪಾರ ಸೈನ್ಯವಿರುವ ತಾನೇ ಗೆಲ್ಲುವವನೆಂದು ತೋರಿಸಿದ ಬಗೆ .

ಕಿಮತ್ರ ಸತ್ಯಮಿತ್ಯಹಂ ಪ್ರದರ್ಶಯಿಷ್ಯ ಇತ್ಯಜಃ ।
ಉದೀರ್ಯ ದೂತಮಭ್ಯಯಾತ್ ಸ ಯಾವನಂ ಪ್ರಬಾಧಿತುಮ್ ॥೧೭.೧೨೩॥
ಯಾವುದು ನಿಜವಾಗುವುದು ಮಾಡಿ ತೋರಿಸುವೆ ಎಂದ ,
ದೂತಗೆ ಹೇಳಿದ ಕೃಷ್ಣ ಕಾಲಯವನ ಹಣಿಯಲು ಹೋದ .

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 17: 112 -116

ಸ ಭೌವನಃ ಸಮಾಗತಃ ಕುಶಸ್ಥಲೀಂ ವಿನಿರ್ಮ್ಮಮೇ । 
ನಿರಮ್ಬುಕೇ ತು ಸಾಗರೇ ಜನಾರ್ದ್ದನಾಜ್ಞಯಾ ಕೃತೇ ॥೧೭.೧೧೨॥
ಭುವನಋಷಿಯ ಮಗನಾದ ವಿಶ್ವಕರ್ಮ ತಾನು  ಬಂದ ,
ನೀರಿಲ್ಲದ ಜಾಗದಿ ದ್ವಾರಕಾ ನಿರ್ಮಿಸಿದ ಹರಿಯಿಚ್ಛೆಯಿಂದ .

ಮಹೋದಕಸ್ಯ ಮದ್ಧ್ಯತಶ್ಚಕಾರ ತಾಂ ಪುರೀಂ ಶುಭಾಮ್ ।
ದ್ವಿಷಟ್ಕಯೋಜನಾಯತಾಂ ಪಯೋಬ್ಧಿಮದ್ಧ್ಯಗೋಪಮಾಮ್ ॥೧೭.೧೧೩॥
ಭಗವದಾಜ್ಞೆಯಂತೆ ಜಲಸಮೂಹದ ಮಧ್ಯ ,
ಹನ್ನೆರಡು ಯೋಜನೆಯ ದ್ವಾರಕೆಯಾಯ್ತು ಸಿದ್ಧ .
ಕ್ಷೀರಸಾಗರದ ಮಧ್ಯದ ಶ್ವೇತದ್ವೀಪದಂತೆ ,
ಶ್ರೇಷ್ಠ ಪಟ್ಟಣವ ವಿಶ್ವಕರ್ಮ ನಿರ್ಮಿಸಿದನಂತೆ .

ಚಕಾರ ಲಾವಣೋದಕಂ ಜನಾರ್ದ್ದನೋsಮೃತೋಪಮಮ್ ।
ಸಭಾಂ ಸುದರ್ಮ್ಮನಾಮಕಾಂ ದದೌ ಸಮೀರಣೋsಸ್ಯ ಚ ॥೧೧.೧೧೪॥
ಜನಾರ್ದನನ ಸಂಕಲ್ಪಮಾತ್ರದಿಂದ ಉಪ್ಪು ನೀರಾಯಿತು ಅಮೃತಮಯ ,
ದೇವಲೋಕದ ಸುಧರ್ಮಸಭೆ ನಿರ್ಮಿತವಾದುದು ಮುಖ್ಯಪ್ರಾಣನ ದಯ .

ಶತಕ್ರತೋಃ ಸಭಾಂ ತು ತಾಂ ಪ್ರದಾಯ ಕೇಶವಾಯ ಸಃ ।
ನಿಧೀನ್ ಸಮರ್ಪ್ಯ ಸರ್ವಶೋ ಯಯೌ ಪ್ರಣಮ್ಯ ತಂ ಪ್ರಭುಮ್ ॥೧೭.೧೧೫॥
ಇಂದ್ರಸಭೆಯನ್ನು ಕೇಶವಗಾಗಿ ತಂದಿಟ್ಟ ಮುಖ್ಯಪ್ರಾಣ ,
ತಂದಿಟ್ಟ ಬೇರೆಲೋಕಗಳಲ್ಲಿದ್ದ ಅಪೂರ್ವ ನಿಧಿಖಜಾನ .
ಭಗವತ್ಸೇವೆ ಮಾಡಿದ ವಾಯು ಹರಿಗೆ ಸಲ್ಲಿಸಿದ ನಮನ .

ಸಮಸ್ತದೇವತಾಗಣಾಃ ಸ್ವಕೀಯಮರ್ಪ್ಪಯನ್ ಹರೌ ।
ವಿಮುಚ್ಯ ಪಕ್ಷಿಪುಙ್ಗವಂ ಸ ಯೋದ್ಧುಮೈಚ್ಛದಚ್ಯುತಃ ॥೧೭.೧೧೬॥
ಹೀಗೆ ಉತ್ತಮ ವಸ್ತುಗಳ ಸಮರ್ಪಿಸಿತು ದೇವತಾವೃಂದ ,
ಗರುಡನ ಕಳಿಸಿದ ಕೃಷ್ಣ ಕಾಲಯವನ ಯುದ್ಧಕ್ಕೆ ಸಿದ್ಧನಾದ.


Monday 27 April 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 17: 107 - 111

ಹರಿಶ್ಚ ವೈನತೇಯಯುಗ್ ವಿಚಾರ್ಯ್ಯ ರಾಮಸಂಯುತಃ ।
ಸದಾsತಿಪೂರ್ಣ್ಣಸಂವಿದಪ್ಯಜೋsಥ ಲೀಲಯಾsಸ್ಮರತ್ ॥೧೭.೧೦೭॥
ಆಗಿದ್ದರೂ ಸರ್ವಕಾಲದಲ್ಲೂ ಸರ್ವವಿಷಯದಲ್ಲೂ ಸರ್ವಜ್ಞ ,
ಬಲರಾಮ ಗರುಡರೊಡಗೂಡಿ ತೋರಿದ ಆದಂತೆ ಧ್ಯಾನಮಗ್ನ .

ಯುಯುತ್ಸುರೇಷ ಯಾವನಃ ಸಮೀಪಮಾಗತೋsದ್ಯ ನಃ ।
ಯುಯುತ್ಸತಾಮನೇನ ನೋ ಜರಾಸುತೋsಭಿಯಾಸ್ಯತಿ ॥೧೭.೧೦೮॥
ಕಾಲಯವನ ಯುದ್ಧಕ್ಕೆಂದು ನಮ್ಮ ಬಳಿ ಬಂದಿದ್ದಾನೆ ,
ಜರಾಸಂಧನೂ ಇನ್ನೊಂದು ದಿಕ್ಕಿನಿಂದ ಬರುತ್ತಿದ್ದಾನೆ .

ಸ ಯಾದವಾನ್ ಹನಿಷ್ಯತಿ ಪ್ರಭಙ್ಗತಸ್ತು ಕೋಪಿತಃ ।
ಪುರಾ ಜಯಾಶಯಾ ಹಿ ನೌ ಯದೂನ್ ನ ಜಘ್ನಿವಾನಸೌ ॥೧೭.೧೦೯॥

ಹಿಂದಾದ ಸೋಲಿಂದ ಸಿಟ್ಟಾಗಿ ಯಾದವರನ್ನು ಕೊಲ್ಲುವ ,
ನಮ್ಮನ್ನಷ್ಟೇ ಗೆಲ್ಲಬೇಕೆಂದು ಹಿಂದೆ ಯಾದವರ ಬಿಟ್ಟವ .

ನಿರಾಶಕೋsದ್ಯ ಯಾದವಾನಪಿ ಸ್ಮ ಪೀಡಯಿಷ್ಯತಿ ।
ಅತಃ ಸಮುದ್ರಮದ್ಧ್ಯಗಾಪುರೀವಿಧಾನಮದ್ಯ ಮೇ ॥೧೭.೧೧೦॥
ಹೀಗೆ ಹತಾಶನಾದ ಜರಾಸಂಧ ಖಂಡಿತ ಯಾದವರ ಪೀಡಿಸುವ ,
ಸಮುದ್ರಮಧ್ಯದಲ್ಲೊಂದು ಪಟ್ಟಣನಿರ್ಮಾಣ ನನ್ನ ಮನದ ಭಾವ .

ಪ್ರರೋಚತೇ ನಿಧಾನಮಪ್ಯಮುತ್ರ ಸರ್ವಸಾತ್ತ್ವತಾಮ್ ।
ಉದೀರ್ಯ ಚೈವಮೀಶ್ವರೋsಸ್ಮರತ್ ಸುರೇಶವರ್ದ್ಧಕಿಮ್ ॥೧೭.೧೧೧॥
ಆ ಪಟ್ಟಣದಲ್ಲೇ ಮಾಡಬೇಕು ಎಲ್ಲಾ ಯಾದವರೂ ವಾಸ,
ಎಂದು ಹೇಳುತ್ತಾ ವಿಶ್ವಕರ್ಮನ ಸ್ಮರಿಸಿದ ಶ್ರೀನಿವಾಸ.


Thursday 23 April 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 17: 101 -106

ಇತೀರಿತೇsಪ್ಯತೃಪ್ತವತ್ ಸ್ಥಿತೇ ತು ಬಾರ್ಹದ್ರಥೇ ।
ಜಗಾಮ ಸೌಭಮಾಸ್ಥಿತಃ ಸ ಸೌಭರಾಟ್ ಚ ಯಾವನಮ್ ॥೧೭.೧೦೧॥
ಸಾಲ್ವ ಇಷ್ಟೆಲ್ಲ ಹೇಳಿದಮೇಲೂ ಜರಾಸಂಧನಾಗಿದ್ದ ಅತೃಪ್ತ ,
ಸಾಲ್ವ ಹೊರಟ ಸೌಭವಿಮಾನವೇರಿ ಕಾಲಯವನನ ದೇಶದತ್ತ .

ಸ ಕಾಲಯಾವನೋsಥ ತಂ ಜರಾಸುತಾನ್ತಿಕಾಗತಮ್ ।
ನಿಶಮ್ಯ ಭಕ್ತಿಪೂರ್ವಕಂ ಪ್ರಣಮ್ಯ ಚಾsರ್ಚ್ಚಯದ್ ದೃತಮ್ ॥೧೭.೧೦೨॥
ಸಾಲ್ವನ ಕಂಡು ಸಂಧಿಸಿದ ಆ ಕಾಲಯವನ ,
ಜರಾಸಂಧನ ಕಡೆಯವನೆಂದು ಮಾಡಿದ ನಮನ .

ಜರಾಸುತೋ ಹಿ ದೈವತಂ ಸಮಸ್ತಕೇಶವದ್ವಿಷಾಮ್ ।
ಇತಿ ಪ್ರಣಮ್ಯ ತಾಂ ದಿಶಂ ತದೀಯಮಾಶ್ವಪೂಜಯತ್ ॥೧೭.೧೦೩॥
ಜರಾಸಂಧನಲ್ಲವೇ ವಿಷ್ಣುದ್ವೇಷಿಗಳಿಗೆಲ್ಲಾ ದೇವತೆಯಂತೆ ,
ಅವನಿರುವ ದಿಕ್ಕಿಗೆ ಕಾಲಯವನ ಗೌರವದಿ ನಮಸ್ಕರಿಸಿದನಂತೆ .

ತದೀರಿತಂ ನಿಶಮ್ಯ ಚ ದ್ರುತಂ ತ್ರಿಕೋಟಿಸಙ್ಖ್ಯಯಾ ।
ಅಕ್ಷೋಹಿಣೀಕಯಾ ಯುತಃ ಸ್ವಸೇನಯಾ ನಿರಾಕ್ರಮತ್ ॥೧೭.೧೦೪॥
ಸಾಲ್ವನ ಸಂದೇಶವ ಕೇಳಿದಮೇಲೆ ಕಾಲಯವನ ,
ಅಣಿಮಾಡಿ ಹೊರಟ ತನ್ನ ಮುಕ್ಕೋಟಿ ಬಲಸೇನ.

ತದಶ್ವಮೂತ್ರವಿಷ್ಠಯಾ ಬಭೂವ ನಾಮತಃ ಶಕೃತ್ ।
ನದೀ ಸುವೇಗಗಾಮಿನೀ ಕಲೌ ಚ ಯಾ ವಹೇದ್ ದ್ರುತಮ್ ॥೧೭.೧೦೫॥
ಅವನ ಸೈನ್ಯದ ಕುದುರೆಗಳ ಮಲಮೂತ್ರದಿಂದ ,
ನದಿಯಾಗಿ ಹರಿಯಿತು ಶಕೃತ್ ನಾಮದಿಂದ .
ಯಾವುದು ಕಲಿಯುಗದಿ ಹರಿವುದೋ ವೇಗದಿಂದ .

ಪುನಃಪುನರ್ನ್ನದೀಭವಂ ನಿಶಾಮ್ಯ ದೇಶಸಙ್ಕ್ಷಯಮ್ ।
ತದನ್ಯದೇಶಮೂತ್ರಿತಂ ವ್ಯಶೋಷಯದ್ಧಿ ಮಾರುತಃ ॥೧೭.೧೦೬॥

ಗಮನಿಸಿ ಶಕೃತ್ ನದಿಯಿಂದ ಉಂಟಾಗತಕ್ಕ ಪರಿಸರ ಮತ್ತು ದೇಶನಾಶ ,
ವಾಯುದೇವ ಮಾಡಿಬಿಟ್ಟನಂತೆ ಅದನ್ನು ಬತ್ತಿಸುತ್ತ ಒಣಗಿಸುತ್ತ ನಿಶ್ಯೇಷ .

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 17: 91 -100

ಇತೀರಿತೋ ಜರಾಸುತೋ ಬಭೂವ ದುರ್ಮ್ಮನಾ ಭೃಶಮ್ ।
ಕಿರೀಟಮಣ್ಡಿತಂ ಶಿರಶ್ಚಕಾರ ಚಾsಶ್ವವಾಗ್ ಭೃಷಮ್ ॥೧೭.೯೧॥
ಸಾಲ್ವ ಇಂತ್ಹೇಳಿದೊಡನೆ ಮನ ಕಲಕಿದವನಾದ ಜರಾಸಂಧ ,
ಕಿರೀಟದಿಂದ ಅಲಂಕೃತವಾದ ತನ್ನ ತಲೆಯನ್ನು ತಗ್ಗಿಸಿದ .

ಕರಂ ಕರೇಣ ಪೀಡಯನ್ ನಿಶಾಮ್ಯ ಚಾsತ್ಮನೋ ಭುಜೌ ।
ಜಗಾದ ಕಾರ್ಯ್ಯಸಿದ್ಧಯೇ ಕಥಂ ಪ್ರಯಾಚಯೇ ಪರಮ್ ॥೧೭.೯೨॥
ಕೈ ಹಿಸುಕಿಕೊಳ್ಳುತ್ತಾ ಭುಜ ನೋಡುತ್ತಾ ಜರಾಸಂಧ ಹೇಳುತ್ತಾನೆ ,
ನನ್ನ ಕಾರ್ಯಸಿದ್ಧಿಗಾಗಿ ಇನ್ನೊಬ್ಬನ ಹೇಗೆ ಮಾಡಲಿ ನಾ ಯಾಚನೆ .

ಸುದುರ್ಗ್ಗಕಾರ್ಯ್ಯಸನ್ತತಿಂ ಹ್ಯಗುಃ ಸ್ಮ ಮದ್ಭುಜಾಶ್ರಯಾಃ ।
ಸಮಸ್ತಭೂತಳೇ ನೃಪಾಃ ಸ ಚಾಹಮೇಷ ಮಾಗಧಃ ॥೧೭.೯೩॥
ಪಡೆದುಕೊಂಡು ನನ್ನ ಆಶ್ರಯ ,
ರಾಜರನೇಕ ಪಡೆದಿದ್ದಾರೆ ಜಯ .
ಇದು ಜರಾಸಂಧನ ಮನೋಭಾವ .

ಕದಾsಪ್ಯಚೀರ್ಣ್ಣಮದ್ಯ ತತ್ ಕಥಂ ಕರೋಮಿ ಕೇವಲಮ್ ।
ಗಿರೀಶಪಾದಸಂಶ್ರಯಃ ಪ್ರಭುಃ ಸಮಸ್ತಭೂಭೃತಾಮ್ ॥೧೭.೯೪॥
ಯಾವತ್ತೂ ಯಾರಿಂದಲೂ ಪಡೆದಿಲ್ಲ ಸಹಾಯ ,
ಪಡೆದಿದ್ದೇನೆ ಕೇವಲ ಸದಾಶಿವನ ಪಾದಾಶ್ರಯ .
ಎಲ್ಲಾ ರಾಜರ ಒಡೆಯ ನಾನೇ ,
ಹೇಗೆ ಮಾಡಲಿ ನಾನು ಯಾಚನೆ.

ಇತೀರಿತಃ ಸ ಸೌಭರಾಡ್ ಜಗಾದ ವಾಕ್ಯಮುತ್ತರಮ್ ।
ಭವಾನಪಿ ಸ್ಮ ಮುಹ್ಯತೇ ಕಿಮಸ್ಮದಾದಯಃ ಪ್ರಭೋ ॥೧೭.೯೫॥
ಮೇಲಿನಂತೆ ಹೇಳುತ್ತಾನೆ ಜರಾಸಂಧ ,
ಅದಕ್ಕೆ ಉತ್ತರವಾಗಿ ಸಾಲ್ವ ಇಂತೆಂದ .
ಮೋಹಕ್ಕೊಳಗಾದರೆ ನಿನ್ನಂಥವನ ಮತಿ ,
ಉಳಿದ ನಮ್ಮಗಳದು ಏನಾದೀತು ಗತಿ .

ಸ್ವಶಿಷ್ಯಕೈಃ ಕೃತಂ ತು ಯತ್ ಕಿಮನ್ಯಸಾಧಿತಂ ಭವೇತ್ ।
ಸ್ವಶಿಷ್ಯದಾಸವರ್ಗ್ಗಕೈಃ ಸಮರ್ತ್ಥಯನ್ತಿ ಭೂಭುಜಃ ॥೧೭.೯೬॥
ನಿನ್ನ ಶಿಷ್ಯರಿಂದಾದರೆ ಕಾರ್ಯಸಾಧನೆ ,
ಅದು ಅನ್ಯರಿಂದ ಎಂದೇಕೆ ನಿನ್ನ ವೇದನೆ .
ರಾಜರು ತಮ್ಮ ದಾಸರಿಂದ ಸಾಧಿಸುವುದಿದೆ ತಾನೇ .

ಅಪಿ ಸ್ಮ ತೇ ಬಲಾಶ್ರಯಪ್ರವೃತ್ತಯೋsಸ್ಮದಾದಯಃ । 
ಪುಮಾನ್ ಕುಠಾರಸಙ್ಗ್ರಹಾದಶಕ್ತ ಈರ್ಯತೇ ಹಿ ಕಿಮ್  ॥೧೭.೯೭॥
ನಾವೆಲ್ಲಾ ನಿನ್ನ ಬಲ ಆಶ್ರಯಯುಕ್ತ ,
ಕೊಡಲಿಪಾಣಿಯಾದವ ಹೇಗೆ ಅಶಕ್ತ .

ಕುಠಾರಸಮ್ಮಿತೋ ಹ್ಯಸೌ ತವೈವ ಯಾವನೇಶ್ವರಃ ।
ವಿನಾ ಭವದ್ಬಲಂ ಕ್ವಚಿತ್ ಪ್ರವರ್ತ್ತಿತುಂ ನಹಿ ಕ್ಷಮಃ ॥೧೭.೯೮॥
ಕಾಲಯವನ ನಿನ್ನ ಕೈಯಲ್ಲಿನ ಕೊಡಲಿಯ ಹಾಗೆ ,
ನಿನ್ನ ಬಲವಿರದೇ ಅವ ಮುಂದುವರೆದಾನು ಹೇಗೆ .

ವರೋ ಹಿ ಕೃಷ್ಮಮರ್ದ್ದನೇ ವೃತೋsಸ್ಯ ಕೇವಲಃ ಶಿವಾತ್ ।
ತದನ್ಯಶತ್ರುಪೀಡನಾತ್ ತ್ವಮೇವ ತಸ್ಯ ರಕ್ಷಕಃ ॥೧೭.೯೯॥
ಕೃಷ್ಣನ ಕೊಲ್ಲಲು ಅವನಿಗಿದೆ ಶಿವನ ವರಭಿಕ್ಷೆ ,
ಆದರೆ ಬೇರೆಯವರಿಂದ ನೀನೇ ಅವನಿಗೆ ರಕ್ಷೆ .

ತವಾಖಿಲೈರಜೇಯತಾ ಶಿವಪ್ರಸಾದತೋsಸ್ತಿ ಹಿ ।
ವಿಶೇಷತೋ ಹರೇರ್ಜ್ಜಯೇ ವರಾದಯಂ ವಿಮಾರ್ಗ್ಯತೇ ॥೧೭.೧೦೦॥
ಶಿವನ ಅನುಗ್ರಹದಿಂದ ನಿನಗೆ ಇದ್ದೇ ಇದೆ ಅಜೇಯತ್ವ ,
ಕೃಷ್ಣನ ಜಯಿಸಲು ಕಾಲಯವನಗಿದೆ ವಿಶೇಷ ವರಸತ್ವ.

Wednesday 22 April 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 17: 84 - 90

ಸ ಆಶ್ರಮಾಚ್ಚ ನೈಷ್ಠಿಕಾದ್ ವಿದೂಷಿತಃ ಪ್ರತೀಪಕೃತ್ ।
ಹರೇಶ್ಚ ತಾಪಮೇಯಿವಾನ್ ಜಗರ್ಹ ಚಾsತ್ಮಶೇಮುಷೀಮ್ ॥೧೭.೮೪॥
ನೈಷ್ಠಿಕ ಬ್ರಹ್ಮಚರ್ಯಾಶ್ರಮದಿಂದ ಭ್ರಷ್ಟನಾದ ಗರ್ಗಾಚಾರ್ಯ ,
ತನ್ನ ದೈವವಿರೋಧಿ ಕೃತ್ಯಕ್ಕೆ ಪಶ್ಚಾತ್ತಾಪಪಟ್ಟುಕೊಂಡ ಆರ್ಯ .

ಜಗಾಮ ಚಾರಣಂ ಹರಿಂ ಪ್ರಪಾಹಿ ಮಾಂ ಸುಪಾಪಿನಮ್ ।
ಇತಿ ಸ್ಮ ವಿಷ್ಣ್ವನುಜ್ಞಯಾ ಚಕಾರ ವೈಷ್ಣವಂ ತಪಃ ॥೧೭.೮೫॥
ಗರ್ಗಾಚಾರ್ಯರು ಶರಣಾಗಿ ನುಡಿದರು -ಅತಿಪಾಪಿಯಾದ ನನ್ನ ರಕ್ಷಿಸು ,
ವೈಷ್ಣವಾಜ್ಞೆಯಿಂದ ಮಾಡಿದರು ವಿಷ್ಣು ಕುರಿತಾದಂಥದೇ ಆದ ತಪಸ್ಸು .
(ಈರೀತಿಯಾಗಿ ಯವನಪುತ್ರನ ಹಿನ್ನೆಲೆಯನ್ನು ಜರಾಸಂಧನಿಗೆ ಹೇಳುತ್ತಿರುವ  ಸಾಲ್ವ, ಮುಂದುವರಿದು ಹೇಳುತ್ತಾನೆ:)

ಕುತೋ ಹಿ ಭಾಗ್ಯಮಾಪತೇನ್ಮುನೇಃ ಶಿವಾರ್ಚ್ಚನೇ ಸದಾ ।
ಭವಾದೃಶಾ ಹಿ ದಾನವಾಃ ಸ್ಥಿರಾಃ ಶಿವಾರ್ಚ್ಚನೇ ಸದಾ ॥೧೭.೮೬॥
ಆ ಮುನಿಗೆಲ್ಲಿಂದ ಬರಬೇಕು ಶಿವಾರ್ಚನೆಯ ಭಾಗ್ಯ,
ನಿನ್ನಂತಹ ನಿಷ್ಠ ದಾನವರು ಶಿವಾರ್ಚನೆಗೆ ಯೋಗ್ಯ .

ಸುತೋsಸ್ಯ ಕಾಲನಾಮಕೋ ಬಭೂವ ಕೃಷ್ಣಮರ್ದ್ದಿತುಮ್ ।
ಸದೈವ ಕಾಲಕಾಙ್ಕ್ಷಣಾತ್ ಸ ಯಾವನಾಭಿಷೇಚಿತಃ ॥೧೭.೮೭॥
ಗರ್ಗರಿಂದ ಹುಟ್ಟಿದ ಯವನರಾಜಪುತ್ರನಾದ-ಕಾಲನಾಮಕ ,
ಕೃಷ್ಣನ ತುಳಿಯಲು ಕಾಲ ಕಾಯುವುದೇ ಆಗಿತ್ತವನ ಕಾಯಕ .
ಅಂಥ ಕಾಲಯವನನಿಗೆ ಯವನರಾಜ ಮಾಡಿದ ಅಭಿಷೇಕ .

ತವೈವ ಶಿಷ್ಯ ಏಷ ಚಾತಿಭಕ್ತಿಮಾನ್ ಹಿ ಶಙ್ಕರೇ ।
ಪ್ರಭೂತಸೇನಯಾ ಯುತೋ ಬಲೋದ್ಧತಶ್ಚ ಸರ್ವದಾ ॥೧೭.೮೮॥
ಓ ಜರಾಸಂಧಾ , ಶಿವಭಕ್ತನಾದ ಈ ಕಾಲಯವನ ನಿನ್ನ ಶಿಷ್ಯ ,
ದೊಡ್ಡ ಸೇನೆಯಿರುವ ಅವನು ಬಲದರ್ಪಿತನಿರುವುದು ವಿಶೇಷ.

ತಮೇಶ ಯಾಮಿ ಶಾಸನಾತ್ ತವೋಪನೀಯ ಸತ್ವರಮ್ ।
ವಿಕೃಷ್ಣಕಂ ಕ್ಷಿತೇಸ್ಥಳಂ ವಿಧಾಯ ಸಂರಮಾಮ ಹಾ ॥೧೭.೮೯॥
ನಿನ್ನ ಆಜ್ಞೆಯಿಂದ ನಾನು ಕಾಲಯವನನಲ್ಲಿಗೆ ಹೋಗುವೆ ,
ಅವನನ್ನು ನಿನ್ನ ಬಳಿಗೆ ಕರೆದುತಂದು ನಿನಗೇ ಒಪ್ಪಿಸುವೆ .
ಅವನಿಂದ ಭುವಿ ಕೃಷ್ಣರಹಿತವಾಗಿ ನಮಗೆಲ್ಲಾ ಆನಂದವೆ .

ತತಶ್ಚ ರುಗ್ಮಿಣೀಂ ವಯಂ ಪ್ರದಾಪಯಾಮ ಚೇದಿಪೇ ।
ವಿನಾಶ್ಯ ದೇವಪಕ್ಷಿಣೋ ಯಥೇಷ್ಟಮಾಸ್ಮ ಸರ್ವದಾ ॥೧೭.೯೦॥
ನಂತರ ನಾವೆಲ್ಲಾ ಸೇರಿ ರುಗ್ಮಿಣಿಯ ಶಿಶುಪಾಲಗೆ ಕೊಡಿಸೋಣ,
ದೇವತೆಗಳ ನಾಶಪಡಿಸಿ ನಮಗೆ ಇಷ್ಟಬಂದಂತೆಯೇ ಇರೋಣ.


Tuesday 21 April 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 17: 78 - 83

ಯತೋ ಹಿ ಕೃಷ್ಣಸಂಶ್ರಯಾದ್ ಬತಾಪಹಾಸಿತಾ ವಯಮ್ ।
ಇತಿ ಬ್ರುವನ್ ವನಂ ಯಯೌ ತಪಶ್ಚ ಶೈವಮಾಚರತ್ ॥೧೭.೭೮॥
ಕೃಷ್ಣ ಮತ್ತವನ ಕುಲ ನಾಶದ ಶಪಥಗೈದ ಗರ್ಗಾಚಾರ್ಯ ,
ಕೃಷ್ಣನಾಶ್ರಯದ ಬಲದಿಂದಲೇ ಆಯ್ತು ಅಪಹಾಸ್ಯಕಾರ್ಯ,
ಅಂತ್ಹೇಳುತ್ತಾ ಕಾಡಿಗ್ಹೊರಟ ಆಚರಿಸಲು ಶಿವತಪಶ್ಚರ್ಯ .

ಸ ಚೂರ್ಣ್ಣಮಾಯಸಂ ತ್ವದನ್ ದದರ್ಶ ಚಾಬ್ದತಃ ಶಿವಮ್ ।
ವರಂ ತತೋsಭಿಪೇದಿವಾನ್ ಸುತಂ ಹರೇರಭಾವದಮ್ ॥೧೮.೭೯॥
ಗರ್ಗ ಸ್ವೀಕರಿಸುತ್ತಾ ಲೋಹಪುಡಿಯನ್ನಾಗಿ ಆಹಾರ ,
ತಪಗೈದ -ವರ್ಷಾನಂತರವಾಯ್ತು ಶಿವ ಸಾಕ್ಷಾತ್ಕಾರ ,
ಶಿವನಿಂದ ಪಡೆದ ಕೃಷ್ಣಾಭಾವ ಮಾಡುವ ಆ ವರ .

ಸ ವಿಷ್ಣುದೈವತೋsಪಿ ಸನ್ ಪ್ರವಿಷ್ಟ ಉಲ್ಬಣಾಸುರೈಃ ।
ವ್ಯಧಾದ್ಧರೇಃ ಪ್ರತೀಪಕಂ ವ್ರತಂ ಚ ನೈಷ್ಠಿಕಂ ಜಹೌ ॥೧೭.೮೦॥
ಗರ್ಗಮುನಿ ಆಗಿದ್ದರೂ ವಿಷ್ಣುಭಕ್ತ ,
ಆಗಿದ್ದ ಕ್ರೂರ ಅಸುರಾವೇಶಯುಕ್ತ .
ಅವನಿಂದಾಯಿತು ಕೃಷ್ಣ ವಿರೋಧ ,
ತನ್ನ ನೈಷ್ಠಿಕ ವ್ರತವನ್ನೂ ತೊರೆದ .

ತಮಾರ ಚಾsಸುರಾಪ್ಸರಾ ಬಲಿಷ್ಠಪುತ್ರಕಾಮ್ಯಯಾ ।
ಪ್ರವಿಶ್ಯ ಗೋಪಿಕಾಙ್ಗನಾಸಮೂಹಮದ್ಧ್ಯಮುಲ್ಬಣಾ ॥೧೭.೮೧॥
ಗೋಪಿಕೆಯರ ಗುಂಪಲ್ಲಿ ಕ್ರೂರ ಅಸುರ ಜಾತಿಯ ಅಪ್ಸರೆಯೊಬ್ಬಳು ,
ಬಲಿಷ್ಠ ಮಗನ ಬಯಕೆಯಿಂದ ಗರ್ಗಮುನಿಯನ್ನು ಹೊಂದಿದಳು .

ಸ ಯಾವನೇನ ಭೂಭೃತಾ ಹಿ ಗೋಪಿಕಾಭಿರರ್ಚ್ಚಿತಃ ।
ಅಪುತ್ರಕೇಣ ಜಾನತಾ ಮುನೇರ್ಮ್ಮನೋsನುಚಿನ್ತಿತಮ್ ॥೧೭.೮೨॥
ಗರ್ಗರ ಮನದ ಚಿಂತನೆ ಅರಿತ ಯವನರಾಜನಿಂದ ,
ಮತ್ತೆ ಗೋಪಿಯರಿಂದ ಗರ್ಗಮುನಿ ಪೂಜಿತನಾದ .

ಸ ಚಾಪ್ಸರಸ್ತನೌ ಸುತಂ ನಿಷಿಚ್ಯ ಯಾವನಾಯ ಚ ।
ದದೌ ವಿಮೋಹಿತಃ ಕ್ರುಧಾ ಕಿಮೇತದೀಶ ವೈರಿಣಃ ॥೧೭.೮೩॥
ಅಸುರ ಅಪ್ಸರೆಯ ಕೂಡಿದ ಗರ್ಗಾಚಾರ್ಯ,
ಪಡೆದ ಮಗುವನ್ನು ಯವನನಿಗೆ ಕೊಟ್ಟ ಕಾರ್ಯ,
ಅಸುರಾವೇಶದ ಕೃಷ್ಣದ್ವೇಷಿ ಮಾಡಿದ್ದೇನಾಶ್ಚರ್ಯ.


Friday 17 April 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 17: 70 - 77

ಅಯಂ ಹಿ ದತ್ತಪುತ್ರಕೋ ಮ ಔರಸಾದ್ ವಿಶಿಷ್ಯತೇ ।
ಅತೋ ನಿವೇಶ್ಯ ಏಷ ಮೇ ಸುರೂಪಿಣೀ ಚ ರುಗ್ಮಿಣೀ ॥೧೭.೭೦॥
ಜರಾಸಂಧ ಹೇಳುವ-ಶಿಶುಪಾಲ ನನ್ನ ಸಾಕುಮಗ ಸ್ವಂತ ಮಗನಿಗಿಂತಲೂ ಅಧಿಕ ಪ್ರಧಾನ ,
ಆ ಕಾರಣದಿಂದ ಸುರೂಪಿಯಾದ ರುಗ್ಮಿಣಿಯೊಡನೆ ಇವನದು ನಡೆಯಲೇಬೇಕು ಕಲ್ಯಾಣ .

ಶಿವಾಗಮೇಷು ಶಿಷ್ಯಕಾಃ ಸರುಗ್ಮಿಸಾಲ್ವಪೌಣ್ಡ್ರಕಾಃ ।
ಮಮಾಖಿಲಾ ನೃಪಾಸ್ತತಃ ಕುರುಧ್ವಮೇತದೇವ ಮೇ ॥೧೭.೭೧॥
ರುಗ್ಮಿ ಸಾಲ್ವ ಪೌಂಡ್ರ ಸಮಸ್ತ ರಾಜರೂ ಶೈವಾಗಮದಲ್ಲಿ ನನ್ನ ಶಿಷ್ಯವೃಂದ ,
ಹಾಗಾಗಿ ಗುರುದಕ್ಷಿಣೆಯಾಗಿ ಈ ಕಾರ್ಯ ಪೂರೈಸಿ ನನಗೀಯಬೇಕು ಆನಂದ .

ಇತೀರಿತೇ ತು ಸೌಭರಾಡ್ ಜಗಾದ ರುಗ್ಮಿಸಂವಿದಾ ।
ಸ್ವಯಂವರೋ ನಿವರ್ತ್ತಿತಃ ಸ್ವಸಾರಮೇಷ ದಾಸ್ಯತಿ ॥೧೭.೭೨॥
ಜರಾಸಂಧ ಇಂತು ಹೇಳಲು ರುಗ್ಮಿ ಅನುಮತಿಯಂತೆ ಸಾಲ್ವ ನುಡಿದ ,
ಸ್ವಯಂವರ ಬಿಟ್ಟಾಗಿದೆ-ರುಗ್ಮಿ ತಂಗಿಯ ಶಿಶುಪಾಲಗೆ ಕೊಡುವ ಎಂದ .

ನಚಾತಿವರ್ತ್ತಿತುಂ ಕ್ಷಮಃ ಪಿತಾsಸ್ಯ ಚೇದಿಪಾಯ ತಾಮ್ ।
ಪ್ರದಾತುಕಾಮಮಾತ್ಮಜಂ ವಯೋಗತಸ್ತಥಾsಬಲಃ ॥೧೭.೭೩॥
ತಂಗಿಗೆ ಅನುರೂಪನೆಂದು ರುಗ್ಮಿಣಿಯ ಆಯ್ಕೆ ಆಗಿರುವಾಗ ಶಿಶುಪಾಲ ,
ವಯಸ್ಸಾದ ದುರ್ಬಲನಾದ ಭೀಷ್ಮಕರಾಜ ಅದನ್ನು ಮೀರಲು ಆಗುವುದಿಲ್ಲ .

ಸ್ವಯಂ ತು ಕೃಷ್ಣ ಏತ್ಯ ನೋ ವಿಜಿತ್ಯ ಕನ್ಯಕಾಂ ಹರೇತ್ ।
ತತೋsಸ್ಯ ಪೂರ್ವಮೇವ ನೋ ಹ್ಯಭಾವತಾ ಕೃತಾ ಶುಭಾ ॥೧೭.೭೪॥
ಆದರೆ ಕೃಷ್ಣ ತಾನೇ ಬಂದು ನಮ್ಮನ್ನು ಸೋಲಿಸಿ ,
ಕನ್ಯೆಯನ್ನೇ ಕರೆದೊಯ್ಯಬಹುದು ಅಪಹರಿಸಿ .
ಈ ಕಾರಣದಿಂದ ಅದಕ್ಕೂ ಮೊದಲು ,
ಕೃಷ್ಣನ ಮುಗಿಸಿಬಿಡುವುದು ಮಿಗಿಲು .

ಉಪಾಯ ಏಷ ಚಿನ್ತಿತೋ ಮಯಾsತ್ರ ಮಾಗಧೇಶ್ವರ ।
ಮುನಿಂ ಹಿ ಗರ್ಗ್ಗನಾಮಕಂ ಹ್ಯಮುಷ್ಯ ಸಾಲ ಆಕ್ಷಿಪತ್ ॥೧೭.೭೫॥
ಮಗಧಾಧಿಪತಿಯೇ ,ನನ್ನಲ್ಲಿದೆ ಒಂದು ಉಪಾಯದ ಚಿಂತನೆ ,
ಹಿಂದೊಮ್ಮೆ ಗರ್ಗಗೆ ಕೃಷ್ಣನ ಹೆಂಡತಿ ತಮ್ಮ ಮಾಡಿದ್ದ ನಿಂದನೆ .

ಯದಾsಸ್ಯ ಷಣ್ಡತೋದಿತಾ ಮುನೇಃ ಪುರೋಹಿತಸ್ಯ ಚ ।
ಪರೇಣ ವೃಷ್ಣಯೋsಹಸಂಶ್ಚುಕೋಪ ಗರ್ಗ್ಗ ಏಷು ಹ ॥೧೭.೭೬॥
ಯಾವಾಗ ಅವನು ಗರ್ಗನ ಷಂಡನೆಂದು ಬೈಯ್ದ ,
ಕೃಷ್ಣಸೇರಿ ಯಾದವರೆಲ್ಲ ನಕ್ಕಾಗ ಗರ್ಗ ಕುಪಿತನಾದ.

ಚಕಾರ ಚ ಪ್ರತಿಶ್ರವಂ ಸಮಾರ್ಜ್ಜಯೇ ಸುತಂ ದ್ರುತಮ್ ।
ಅಕೃಷ್ಣತಾಂ ಯ ಆನಯೇದ್ ಭುವೋsಪಿ ವೃಷ್ಣಿನಾಶಕಃ ॥೧೭.೭೭॥
ಕುಪಿತನಾದ ಗರ್ಗ ಆಗ ಪ್ರತಿಜ್ಞೆ ಮಾಡುತ್ತಾನೆ ,
ಶೀಘ್ರದಲ್ಲೇ ಒಬ್ಬ ಮಗನನ್ನು ಪಡೆಯುತ್ತೇನೆ ,
ಅವನು ಕೃಷ್ಣ ಸೇರಿದಂತೆ ಯಾದವರ ಮುಗಿಸುತ್ತಾನೆ.
[Contributed by Shri Govind Magal]