Wednesday 29 April 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 17: 112 -116

ಸ ಭೌವನಃ ಸಮಾಗತಃ ಕುಶಸ್ಥಲೀಂ ವಿನಿರ್ಮ್ಮಮೇ । 
ನಿರಮ್ಬುಕೇ ತು ಸಾಗರೇ ಜನಾರ್ದ್ದನಾಜ್ಞಯಾ ಕೃತೇ ॥೧೭.೧೧೨॥
ಭುವನಋಷಿಯ ಮಗನಾದ ವಿಶ್ವಕರ್ಮ ತಾನು  ಬಂದ ,
ನೀರಿಲ್ಲದ ಜಾಗದಿ ದ್ವಾರಕಾ ನಿರ್ಮಿಸಿದ ಹರಿಯಿಚ್ಛೆಯಿಂದ .

ಮಹೋದಕಸ್ಯ ಮದ್ಧ್ಯತಶ್ಚಕಾರ ತಾಂ ಪುರೀಂ ಶುಭಾಮ್ ।
ದ್ವಿಷಟ್ಕಯೋಜನಾಯತಾಂ ಪಯೋಬ್ಧಿಮದ್ಧ್ಯಗೋಪಮಾಮ್ ॥೧೭.೧೧೩॥
ಭಗವದಾಜ್ಞೆಯಂತೆ ಜಲಸಮೂಹದ ಮಧ್ಯ ,
ಹನ್ನೆರಡು ಯೋಜನೆಯ ದ್ವಾರಕೆಯಾಯ್ತು ಸಿದ್ಧ .
ಕ್ಷೀರಸಾಗರದ ಮಧ್ಯದ ಶ್ವೇತದ್ವೀಪದಂತೆ ,
ಶ್ರೇಷ್ಠ ಪಟ್ಟಣವ ವಿಶ್ವಕರ್ಮ ನಿರ್ಮಿಸಿದನಂತೆ .

ಚಕಾರ ಲಾವಣೋದಕಂ ಜನಾರ್ದ್ದನೋsಮೃತೋಪಮಮ್ ।
ಸಭಾಂ ಸುದರ್ಮ್ಮನಾಮಕಾಂ ದದೌ ಸಮೀರಣೋsಸ್ಯ ಚ ॥೧೧.೧೧೪॥
ಜನಾರ್ದನನ ಸಂಕಲ್ಪಮಾತ್ರದಿಂದ ಉಪ್ಪು ನೀರಾಯಿತು ಅಮೃತಮಯ ,
ದೇವಲೋಕದ ಸುಧರ್ಮಸಭೆ ನಿರ್ಮಿತವಾದುದು ಮುಖ್ಯಪ್ರಾಣನ ದಯ .

ಶತಕ್ರತೋಃ ಸಭಾಂ ತು ತಾಂ ಪ್ರದಾಯ ಕೇಶವಾಯ ಸಃ ।
ನಿಧೀನ್ ಸಮರ್ಪ್ಯ ಸರ್ವಶೋ ಯಯೌ ಪ್ರಣಮ್ಯ ತಂ ಪ್ರಭುಮ್ ॥೧೭.೧೧೫॥
ಇಂದ್ರಸಭೆಯನ್ನು ಕೇಶವಗಾಗಿ ತಂದಿಟ್ಟ ಮುಖ್ಯಪ್ರಾಣ ,
ತಂದಿಟ್ಟ ಬೇರೆಲೋಕಗಳಲ್ಲಿದ್ದ ಅಪೂರ್ವ ನಿಧಿಖಜಾನ .
ಭಗವತ್ಸೇವೆ ಮಾಡಿದ ವಾಯು ಹರಿಗೆ ಸಲ್ಲಿಸಿದ ನಮನ .

ಸಮಸ್ತದೇವತಾಗಣಾಃ ಸ್ವಕೀಯಮರ್ಪ್ಪಯನ್ ಹರೌ ।
ವಿಮುಚ್ಯ ಪಕ್ಷಿಪುಙ್ಗವಂ ಸ ಯೋದ್ಧುಮೈಚ್ಛದಚ್ಯುತಃ ॥೧೭.೧೧೬॥
ಹೀಗೆ ಉತ್ತಮ ವಸ್ತುಗಳ ಸಮರ್ಪಿಸಿತು ದೇವತಾವೃಂದ ,
ಗರುಡನ ಕಳಿಸಿದ ಕೃಷ್ಣ ಕಾಲಯವನ ಯುದ್ಧಕ್ಕೆ ಸಿದ್ಧನಾದ.


No comments:

Post a Comment

ಗೋ-ಕುಲ Go-Kula