Wednesday 15 April 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 17: 51 - 59

ಅಥಾsಹ ಭೀಷ್ಮಕಂ ಪ್ರಭುಃ ಸ್ವಯಂವರಃ ಕಿಲ ತ್ವಯಾ ।
ಅಭೀಪ್ಸಿತಃ ಸುತಾಕೃತೇ ಶುಭಾಯ ತೇ ಭವೇನ್ನ ಸಃ ॥೧೭.೫೧॥
ಕೃಷ್ಣ ಭೀಷ್ಮಕಗೆ ಹೇಳಿದ ಮಾತು ,
ಅವನ ಮಗಳ ಸ್ವಯಂವರ ಕುರಿತು,
ತರಲಾರದು ಮಂಗಳವ ಒಂದಿನಿತು .

ಇಯಂ ರಮಾ ತವಾsತ್ಮಜಾ ಬಭೂವ ತಾಂ ಹರೇರ್ನ್ನಚ ।
ದದಾತಿ ಚೇತ್ ತದಾ ಪಿತಾ ನಿರಿನ್ದಿರೋ ವ್ರಜೇದಧಃ ॥೧೭.೫೨॥
ನಿನ್ನ ಮಗಳು ಸಾಕ್ಷಾತ್ ಲಕ್ಷ್ಮಿಯ ಅವತಾರ ,
ಶ್ರೀಹರಿಗೆ ಕೊಡದಿದ್ದರೆ ಪರಿಣಾಮ ಭೀಕರ ,
ಲಕ್ಷ್ಮಿಯ ಕಳಕೊಂಡು ಕೆಳಬೀಳೋ ವ್ಯಾಪಾರ .

ಹಿತಾಯ ಚೈತದೀರಿತಂ ತವಾನ್ಯಥಾ ನ ಚಿನ್ತಯ ।
ನ ಯೋಷಿದಿಚ್ಛಯಾ ತ್ವಹಂ ಬ್ರವೀಮಿ ಪಶ್ಯ ಯಾದೃಶಃ ॥೧೭.೫೩॥
ಉದೀರ್ಯ್ಯ ಚೈವಮೀಶ್ವರಶ್ಚಕಾರ ಹಾsವಿರಾತ್ಮನಃ ।
ಸ ವಿಶ್ವರೂಪಮುತ್ತಮಂ ವಿಸಙ್ಖ್ಯಶೀರ್ಷಬಾಹುಕಮ್ ॥೧೭.೫೪॥
ಇದು ನಿನ್ನ ಹಿತಕ್ಕಾಗಿ ಹೇಳಿದ ವಚನ ,
ಬೇಕಿಲ್ಲ ಬೇರ್ಯಾವ ಸಮಾಲೋಚನ.
ಹೆಣ್ಣಿನ ಬಗ್ಗೆ ನನದಲ್ಲ ವ್ಯಾಮೋಹದ ಪಾಡು ,
ನನ್ನ ಸೇವಿಸುತ್ತಿರುವ ಹೆಣ್ಣುಗಳ ಪರಿ ನೋಡು .
ಇಂತೆಲ್ಲಾ ಹೇಳಿದ ಆ ಸರ್ವಜ್ಞ ಭಗವಂತ ,
ತನ್ನ ಅಮಿತ ಬಾಹು ತಲೆಗಳ ವಿಶ್ವರೂಪದಿ ನಿಂತ .

ಅನನ್ತತೇಜ ಆತತಂ ವಿಸಙ್ಖ್ಯರೂಪಸಂಯುತಮ್ ।
ವಿಚಿತ್ರಮೌಲಿಕುಣ್ಡಲಾಙ್ಗದೋರುಹಾರನೂಪುರಮ್ ॥೧೭.೫೫॥
ಜ್ವಲತ್ಸುಕೌಸ್ತುಭಪ್ರಭಾsಭಿಭಾಸಕಂ ಶುಭಾಮ್ಬರಮ್ ।
ಪ್ರಪಶ್ಯ ಯಾದೃಶಾಃ ಸ್ತ್ರಿಯೋ ಮಮೇತ್ಯದರ್ಶಯಚ್ಛ್ರಿಯಮ್ ॥೧೭.೫೬॥
ಅನನ್ತರೂಪಿಣೀಂ ಪರಾಂ ಮನುಷ್ಯದೃಷ್ಟಿತೋsಧಿಕಾಮ್ ।
ಸ್ವರುಗ್ಮಿಣೀತನೋರಪಿ ವ್ಯದರ್ಶಯಚ್ಚ ದೇವತಾಃ ॥೧೭.೫೭॥
ಸಾಟಿಯಿರದ ಬೆಳಕಿಂದ ಕೂಡಿದ್ದ ಅಸಂಖ್ಯ ರೂಪದ ಆ ನೋಟ ,
ಕುಂಡಲ , ತೋಳ್ಬಂದಿ , ಹಾರ , ಕಾಲ್ಗೆಜ್ಜೆ ವಿಶೇಷವಾದ ಚೆಲುಕಿರೀಟ .
ಕೌಸ್ತುಭಕ್ಕೇ ಹೊಳಪು ಕೊಟ್ಟು ನಿಂತ ಪೀತಾಂಬರಧಾರಿ,
ತನ್ನಲ್ಲಿದ್ದ ಸ್ತ್ರೀಯರ ತೋರುತ್ತ ಲಕ್ಷ್ಮಿಯ ತೋರಿನಿಂತ ಶೌರಿ .
ಕೃಷ್ಣ ತೋರಿದ ವಿಶ್ವರೂಪದಿ ತನ್ನ ಅನಂತ ರೂಪ ,
ಅದರಲ್ಲೇ ಶ್ರೇಷ್ಠ ಸೌಂದರ್ಯದ ರುಗ್ಮಿಣಿಯ ರೂಪ .
ಅಲ್ಲಿ ಕಂಡ ಲಕ್ಷ್ಮೀ ರುಗ್ಮಿಣಿಯರು ಆಗಿದ್ದರೂ ಒಂದು,
ಲಕ್ಷ್ಮೀ ಚೆಲುವಾಗಿ ಕಂಡದ್ದು ಮಾನುಷ ದೃಷ್ಟಿ ಕುಂದು .
ಹೀಗೆ ಕೃಷ್ಣ ತನ್ನವಳೇ ಆದ ರುಗ್ಮಿಣಿಗಿಂತಲೂ ಅಧಿಕವಾಗಿ ತೋರಿದ 'ಅವಳು',
ದೇವತೆಗಳನೇಕರಿಗೆ ಆಶ್ರಯವಾಗಿದ್ದ ಅಂಗಾಂಗ ಮತ್ತವನ ಕೈ -ಕಾಲು .

ತದದ್ಭುತಂ ಸಮೀಕ್ಷ್ಯ ತು ಪ್ರಭೀತ ಆಶು ಭೀಷ್ಮಕಃ ।
ಪಪಾತ ಪಾದಯೋರ್ವಿಭೋಃ ಕರೋಮಿ ತತ್ ತಥೇತಿ ಚ ॥೧೭.೫೮॥
ಈ ಅದ್ಭುತ ನೋಡಿದ ಭೀಷ್ಮಕ ಹೆದರಿ ದೈವಪಾದಕ್ಕೆ ಬಿದ್ದ ,
ಆಗಲಿ ನೀನು ಹೇಳಿದಂತೇ ಮಾಡುತ್ತೇನೆ ಸ್ವಾಮೀ ಎಂದ .

ಪುನಶ್ಚ ವಿಶ್ವರೂಪತಾಂ ಪಿಧಾಯ ಪದ್ಮಲೋಚನಃ ।
ಜಗಾಮ ಪಕ್ಷಿವಾಹನಃ ಪುರೀಂ ಸ್ವಬಾಹುಪಾಲಿತಾಮ್ ॥೧೭.೫೯॥
ನಂತರ ಕಮಲಾಕ್ಷನಾದ ಭಗವಂತ ವಿಶ್ವರೂಪ ಮರೆಮಾಡಿದ ,
ಗರುಡನ ಹೆಗಲೇರಿ ತನ್ನ ತೋಳ್ಬಲದಿ ರಕ್ಷಿತ ಮಧುರೆಗೆ ಹೋದ.
ಅಥಾsಹ ಭೀಷ್ಮಕಂ ಪ್ರಭುಃ ಸ್ವಯಂವರಃ ಕಿಲ ತ್ವಯಾ ।
[Contributed by Shri Govind Magal]

No comments:

Post a Comment

ಗೋ-ಕುಲ Go-Kula