ಅಥ ಪ್ರಹಸ್ಯ ಸೌಭರಾಡ್
ವಚೋ ಜಗಾದ ಮಾಗಧಮ್ ।
ವಿನಿನ್ದ್ಯ ತೌ ಕ್ರುಧಾ
ಸ್ಫುರನ್ ಕ್ರುಧಾ ಸ್ಫುರನ್ತಮೀಕ್ಷ್ಯ ಚ ॥೧೭.೧೬॥
ಆನಂತರ ಸಾಲ್ವ ತಾನು ಸಿಟ್ಟಿನ ಕಂಪನದಿಂದ ,
ಶಿಶುಪಾಲ ದಂತವಕ್ರರನ್ನು ಚೆನ್ನಾಗಿ ನಿಂದಿಸಿದ .
ಸಿಟ್ಟಿನಿಂದ ಕಂಪಿಸುವ ಜರಾಸಂಧನ ನೋಡಿದ ,
ಜರಾಸಂಧನ ಕುರಿತು ಕೆಳಗಿನಂತವನು ಹೇಳಿದ .
ನ ತನ್ಮೃಷಾ ಹರಿಃ ಸ್ವಯಂ
ಜನಾರ್ದ್ದನೋ ವಧಾಯ ನಃ ।
ಪ್ರಜಾತ ಏಷ ಯಾದವೋ ವಯಂ
ಚ ದಾನವೇಶ್ವರಾಃ ॥೧೭.೧೭॥
ಇವರ್ಹೇಳಿರುವುದರಲ್ಲಿ ಒಂದಿದೆ ಸತ್ಯ ,
ಕೃಷ್ಣ ನಾರಾಯಣ ಎಂಬುದಲ್ಲ ಮಿಥ್ಯ .
ನಮ್ಮದು ಬಲು ಶ್ರೇಷ್ಠವಾದ ದಾನವರ ವಂಶ ,
ಯಾದವನಾಗಿ ಹುಟ್ಟಿರುವ ಮಾಡಲು ನಮ್ಮ ನಾಶ .
ಸ್ವಧರ್ಮ್ಮ ಏಷ ನಃ ಸದಾ
ದೃಢಪ್ರತೀಪತಾ ಹರೌ ।
ಸ್ವಧರ್ಮ್ಮಿಣೋ ಹತಾ ಅಪಿ
ಪ್ರಯಾಮ ಸದ್ಗತಿಂ ಧ್ರುವಮ್ ॥೧೭.೧೮॥
ನಾರಾಯಣ ದ್ವೇಷವೇ ನಮ್ಮ ಸ್ವಧರ್ಮ ,
ಸತ್ತರೂ ಅದರಲ್ಲಿದೆ ಸದ್ಗತಿ ಹೊಂದುವ ನೇಮ.
ಶಿವಶ್ಚ ನಃ ಪರಾ
ಗತಿರ್ಗ್ಗುರುರ್ಭವಾನರಿರ್ಹರೇಃ ।
ಇತೀರಿತಃ ಸ ಮಾಗಧೋ ಜಗಾದ
ಸಾಧುಸಾಧ್ವಿತಿ ॥೧೭.೧೯॥
ಜರಾಸಂಧಾ, ಶಿವನೇ ನಮ್ಮ
ಪರದೇವತೆ ,
ಕೃಷ್ಣಶತ್ರು ನೀನೇ ನಮ್ಮ ಗುರುವಿನಂತೆ .
ಈ ರೀತಿ ಮಾತು ಬಂತು ಸಾಲ್ವನಿಂದ ,
ಹೌದು ಹೌದು ಎಂದನವ ಜರಾಸಂಧ .
ತಥೈವ ರುಗ್ಮಿಪೂರ್ವಕಾಃ
ಕರೂಶಚೇದಿಪೌ ಚ ತೌ ।
ವಿನಿಶ್ಚಯಂ ಕುಬುದ್ಧಯೋ
ಯುಧೇ ಚ ಚಕ್ರುರೂರ್ಜ್ಜಿತಮ್ ॥೧೭.೨೦॥
ಸಾಲ್ವ ರುಗ್ಮಿ ಶಿಶುಪಾಲ ದಂತವಕ್ರ ಮುಂತಾದವರೆಲ್ಲ ಸೇರಿ ,
ನಿರ್ಧರಿಸಿದರು ಹರಿದ್ವೇಷವೇ ಗುರಿ ನಾರಾಯಣನವ ವೈರಿ .
ಸದಾ ಪ್ರತೀಪಕಾರಿಣೌ
ಭವಾವ ಕೃಷ್ಣ ಇತ್ಯಪಿ ।
ಗುರೋಃ
ಪ್ರಸಾದಮಾಪ್ನುತಾಂ ಕರೂಶಚೇದಿಭೂಭೃತೌ ॥೧೭.೨೧॥
ಯಾವಾಗ ಆಯಿತೋ ಶಿಶುಪಾಲ ದಂತವಕ್ರರಿಂದ ಕೃಷ್ಣವೈರದ ನಿಶ್ಚಯ ,
ಪಡೆದುಕೊಂಡರಿಬ್ಬರೂ ತಮ್ಮ ಗುರು ಜರಾಸಂಧನ ಪರಮಾನುಗ್ರಹ .
No comments:
Post a Comment
ಗೋ-ಕುಲ Go-Kula