Thursday 23 April 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 17: 91 -100

ಇತೀರಿತೋ ಜರಾಸುತೋ ಬಭೂವ ದುರ್ಮ್ಮನಾ ಭೃಶಮ್ ।
ಕಿರೀಟಮಣ್ಡಿತಂ ಶಿರಶ್ಚಕಾರ ಚಾsಶ್ವವಾಗ್ ಭೃಷಮ್ ॥೧೭.೯೧॥
ಸಾಲ್ವ ಇಂತ್ಹೇಳಿದೊಡನೆ ಮನ ಕಲಕಿದವನಾದ ಜರಾಸಂಧ ,
ಕಿರೀಟದಿಂದ ಅಲಂಕೃತವಾದ ತನ್ನ ತಲೆಯನ್ನು ತಗ್ಗಿಸಿದ .

ಕರಂ ಕರೇಣ ಪೀಡಯನ್ ನಿಶಾಮ್ಯ ಚಾsತ್ಮನೋ ಭುಜೌ ।
ಜಗಾದ ಕಾರ್ಯ್ಯಸಿದ್ಧಯೇ ಕಥಂ ಪ್ರಯಾಚಯೇ ಪರಮ್ ॥೧೭.೯೨॥
ಕೈ ಹಿಸುಕಿಕೊಳ್ಳುತ್ತಾ ಭುಜ ನೋಡುತ್ತಾ ಜರಾಸಂಧ ಹೇಳುತ್ತಾನೆ ,
ನನ್ನ ಕಾರ್ಯಸಿದ್ಧಿಗಾಗಿ ಇನ್ನೊಬ್ಬನ ಹೇಗೆ ಮಾಡಲಿ ನಾ ಯಾಚನೆ .

ಸುದುರ್ಗ್ಗಕಾರ್ಯ್ಯಸನ್ತತಿಂ ಹ್ಯಗುಃ ಸ್ಮ ಮದ್ಭುಜಾಶ್ರಯಾಃ ।
ಸಮಸ್ತಭೂತಳೇ ನೃಪಾಃ ಸ ಚಾಹಮೇಷ ಮಾಗಧಃ ॥೧೭.೯೩॥
ಪಡೆದುಕೊಂಡು ನನ್ನ ಆಶ್ರಯ ,
ರಾಜರನೇಕ ಪಡೆದಿದ್ದಾರೆ ಜಯ .
ಇದು ಜರಾಸಂಧನ ಮನೋಭಾವ .

ಕದಾsಪ್ಯಚೀರ್ಣ್ಣಮದ್ಯ ತತ್ ಕಥಂ ಕರೋಮಿ ಕೇವಲಮ್ ।
ಗಿರೀಶಪಾದಸಂಶ್ರಯಃ ಪ್ರಭುಃ ಸಮಸ್ತಭೂಭೃತಾಮ್ ॥೧೭.೯೪॥
ಯಾವತ್ತೂ ಯಾರಿಂದಲೂ ಪಡೆದಿಲ್ಲ ಸಹಾಯ ,
ಪಡೆದಿದ್ದೇನೆ ಕೇವಲ ಸದಾಶಿವನ ಪಾದಾಶ್ರಯ .
ಎಲ್ಲಾ ರಾಜರ ಒಡೆಯ ನಾನೇ ,
ಹೇಗೆ ಮಾಡಲಿ ನಾನು ಯಾಚನೆ.

ಇತೀರಿತಃ ಸ ಸೌಭರಾಡ್ ಜಗಾದ ವಾಕ್ಯಮುತ್ತರಮ್ ।
ಭವಾನಪಿ ಸ್ಮ ಮುಹ್ಯತೇ ಕಿಮಸ್ಮದಾದಯಃ ಪ್ರಭೋ ॥೧೭.೯೫॥
ಮೇಲಿನಂತೆ ಹೇಳುತ್ತಾನೆ ಜರಾಸಂಧ ,
ಅದಕ್ಕೆ ಉತ್ತರವಾಗಿ ಸಾಲ್ವ ಇಂತೆಂದ .
ಮೋಹಕ್ಕೊಳಗಾದರೆ ನಿನ್ನಂಥವನ ಮತಿ ,
ಉಳಿದ ನಮ್ಮಗಳದು ಏನಾದೀತು ಗತಿ .

ಸ್ವಶಿಷ್ಯಕೈಃ ಕೃತಂ ತು ಯತ್ ಕಿಮನ್ಯಸಾಧಿತಂ ಭವೇತ್ ।
ಸ್ವಶಿಷ್ಯದಾಸವರ್ಗ್ಗಕೈಃ ಸಮರ್ತ್ಥಯನ್ತಿ ಭೂಭುಜಃ ॥೧೭.೯೬॥
ನಿನ್ನ ಶಿಷ್ಯರಿಂದಾದರೆ ಕಾರ್ಯಸಾಧನೆ ,
ಅದು ಅನ್ಯರಿಂದ ಎಂದೇಕೆ ನಿನ್ನ ವೇದನೆ .
ರಾಜರು ತಮ್ಮ ದಾಸರಿಂದ ಸಾಧಿಸುವುದಿದೆ ತಾನೇ .

ಅಪಿ ಸ್ಮ ತೇ ಬಲಾಶ್ರಯಪ್ರವೃತ್ತಯೋsಸ್ಮದಾದಯಃ । 
ಪುಮಾನ್ ಕುಠಾರಸಙ್ಗ್ರಹಾದಶಕ್ತ ಈರ್ಯತೇ ಹಿ ಕಿಮ್  ॥೧೭.೯೭॥
ನಾವೆಲ್ಲಾ ನಿನ್ನ ಬಲ ಆಶ್ರಯಯುಕ್ತ ,
ಕೊಡಲಿಪಾಣಿಯಾದವ ಹೇಗೆ ಅಶಕ್ತ .

ಕುಠಾರಸಮ್ಮಿತೋ ಹ್ಯಸೌ ತವೈವ ಯಾವನೇಶ್ವರಃ ।
ವಿನಾ ಭವದ್ಬಲಂ ಕ್ವಚಿತ್ ಪ್ರವರ್ತ್ತಿತುಂ ನಹಿ ಕ್ಷಮಃ ॥೧೭.೯೮॥
ಕಾಲಯವನ ನಿನ್ನ ಕೈಯಲ್ಲಿನ ಕೊಡಲಿಯ ಹಾಗೆ ,
ನಿನ್ನ ಬಲವಿರದೇ ಅವ ಮುಂದುವರೆದಾನು ಹೇಗೆ .

ವರೋ ಹಿ ಕೃಷ್ಮಮರ್ದ್ದನೇ ವೃತೋsಸ್ಯ ಕೇವಲಃ ಶಿವಾತ್ ।
ತದನ್ಯಶತ್ರುಪೀಡನಾತ್ ತ್ವಮೇವ ತಸ್ಯ ರಕ್ಷಕಃ ॥೧೭.೯೯॥
ಕೃಷ್ಣನ ಕೊಲ್ಲಲು ಅವನಿಗಿದೆ ಶಿವನ ವರಭಿಕ್ಷೆ ,
ಆದರೆ ಬೇರೆಯವರಿಂದ ನೀನೇ ಅವನಿಗೆ ರಕ್ಷೆ .

ತವಾಖಿಲೈರಜೇಯತಾ ಶಿವಪ್ರಸಾದತೋsಸ್ತಿ ಹಿ ।
ವಿಶೇಷತೋ ಹರೇರ್ಜ್ಜಯೇ ವರಾದಯಂ ವಿಮಾರ್ಗ್ಯತೇ ॥೧೭.೧೦೦॥
ಶಿವನ ಅನುಗ್ರಹದಿಂದ ನಿನಗೆ ಇದ್ದೇ ಇದೆ ಅಜೇಯತ್ವ ,
ಕೃಷ್ಣನ ಜಯಿಸಲು ಕಾಲಯವನಗಿದೆ ವಿಶೇಷ ವರಸತ್ವ.

No comments:

Post a Comment

ಗೋ-ಕುಲ Go-Kula