Monday, 13 April 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 17: 43 - 50


(ಜರಾಸಂಧ ಏಕೆ ಶ್ರೀಕೃಷ್ಣನಿಗೆ ಅಭಿಷೇಕ ಮಾಡಲು ಹೋಗಲಿಲ್ಲ? ಜರಾಸಂಧ ಹೋಗದೇ ಇದ್ದರೂ  ಕೂಡಾ  ಇಂದ್ರನೇಕೆ ಕೋಪಿಸಿಕೊಳ್ಳಲಿಲ್ಲ  ಎಂದರೆ: )
ಸಮಸ್ತಶೋ ಜರಾಸುತಾದಿಭಿಃ ಕೃತೇsಭಿಷೇಚನೇ ।
ಅತೀವ ಭಗ್ನಮಾನಕಾನ್ ನಚಾನುಯಾತಿ ಕಶ್ಚನ ॥೧೭.೪೩॥
ಒಂದುವೇಳೆ ಜರಾಸಂಧಾದಿಗಳು ಕೃಷ್ಣಗೆ ಮಾಡಿದರೆ ಅಭಿಷೇಕ ,
ದುರಭಿಮಾನ ಕಳೆದರೆ ಆಗುವುದೆಂತು ಪಾಪಗಳ ಪೂರ್ಣಪಾಕ .
ಅನುಸರಿಸಬೇಕಿದೆ ಅವರುಗಳ ದುರ್ಮಾರ್ಗ ದುಷ್ಟ ದುರುಳರನೇಕ .

ಸಮಾಶ್ರಯಂ ಚ ಕೇಶವಂ ತದೈವ ಜೀವನಾರ್ತ್ಥಿನಃ ।
ಪ್ರಕುರ್ಯ್ಯುರಾಸುರಾ ಅಪೀತಿ ದೇವಕಾರ್ಯ್ಯಸಙ್ಕ್ಷಯಃ ॥೧೭.೪೪॥
ಬದುಕ ಬಯಸುವ ಅಸುರರು ಪಡೆಯುತ್ತಾರೆ ಕೃಷ್ಣನಾಶ್ರಯ ,
ನಾಶವಾಗಿಬಿಡುತ್ತದೆ ದೇವತಾಕಾರ್ಯದ ಮೂಲ ಮುಖ್ಯ ಆಶಯ .

ಇತೀಕ್ಷ್ಯ ಪಾಕಶಾಸನೋsವದಜ್ಜರಾಸುತಾದಿಕಾನ್ ।
ಸರುಗ್ಮಿಚೇದಿಸಾಲ್ವಪೋ ನ ಯಾತು ಮಾಗಧೋ ಹರಿಮ್ ॥೧೭.೪೫॥
ಹೀಗೆ ಹೊರಟಿತ್ತು ಅದು ಇಂದ್ರನ ಆಲೋಚನೆ ,
ಪಾಲಿಸಲು ಭೂಭಾರಹರಣದ ದೈವೀಚ್ಛೆ ಪಾಲನೆ .
ರುಗ್ಮಿ , ಶಿಶುಪಾಲ , ಸಾಲ್ವ ಮತ್ತು ಜರಾಸಂಧ ,
ಭಗವಂತನ ಬಳಿ ಹೋಗುವುದು ಬೇಡವೆಂದ .

ತತಸ್ತು ತಾನ್ ವಿನಾsಪರೇsಧಿರಾಜರಾಜ ಇತ್ಯಮುಮ್ ।
ತದಾsಭಿಷೇಕ್ತುಮುದ್ಯತಾ ನೃಪಾಃ ಸುರೇಶಶಾಸನಾತ್ ॥೧೭.೪೬॥
ಇಂದ್ರನಾಜ್ಞೆಯಂತೆ ಜರಾಸಂಧಾದಿ ನಾಲ್ವರನ್ನು ಬಿಟ್ಟು,
ಕೃಷ್ಣಗಭಿಷೇಕ ಮಾಡಲು ಉಳಿದ ರಾಜರಾದರು ಒಟ್ಟು .

ಅತಃ ಶಚೀಪತಿರ್ನ್ನಿಜಂ ವರಾಸನಂ ಹರೇರದಾತ್ ।
ವಿವೇಶ ತತ್ರ ಕೇಶವೋ ನಭಸ್ತಳಾವತಾರಿತೇ ॥೧೭.೪೭॥
ಆನಂತರ ಇಂದ್ರ ಕಳಿಸಿಕೊಟ್ಟ ಕೃಷ್ಣಗೆ ಶ್ರೇಷ್ಠ ಆಸನ ,
ಆಕಾಶದಿಂದಿಳಿದ ಆಸನದಲ್ಲಿ ಕೃಷ್ಣನಾದ ಆಸೀನ .

ಕರೇ ಪ್ರಗೃಹ್ಯ ಕೇಶವೋ ನ್ಯವೇಶಯತ್ ಸಹಾsಸನೇ ।
ಪತತ್ರಿಪುಙ್ಗವಂ ಚ ತೌ ಸ ಭೀಷ್ಮಕಾನುಜೌ ಪ್ರಭುಃ ॥೧೭.೪೮॥
ಭೀಷ್ಮಕನ ತಮ್ಮಂದಿರಾದ ಕ್ರಥ  -ಕೈಶಿಕರು ,
ಕೃಷ್ಣ-ಗರುಡನ ಕೈಹಿಡಿದು ಶ್ರೇಷ್ಠಾಸನದಿ ಕೂಡಿಸಿದರು.

ಅಥಾಖಿಲಾ ನರೇಶ್ವರಾ ಮುನೀನ್ದ್ರಸಂಯುತಾ ಹರಿಮ್ ।
ಸುಶಾತಕೌಮ್ಭಕುಮ್ಭಕೈಃ ಪ್ರಚಕ್ರುರಾಭಿಷೇಕಿಣಮ್ ॥೧೭.೪೯॥
ಆನಂತರ ರಾಜರುಗಳ ಮುನಿಗಳ ವೃಂದ ,
ಕೃಷ್ಣಗಭಿಷೇಕ ಮಾಡಿದರು ಸ್ವರ್ಣಕಲಶ ಜಲದಿಂದ .

ವಿರಿಞ್ಚಶರ್ವಪೂರ್ವಕೈರಭಿಷ್ಟುತಃ ಸುರಾದಿಭಿಃ ।
ಸಮಸ್ತದೇವಗಾಯಕೈಃ ಪ್ರಗೀತ ಆಸ ಕೇಶವಃ ॥೧೭.೫೦॥
ಬ್ರಹ್ಮ-ರುದ್ರಾದಿ ದೇವತೆಗಳು ಗಂಧರ್ವರಿಂದ,
ಸ್ತುತಿಸಲ್ಪಟ್ಟ ಶ್ರೀಕೃಷ್ಣ ವೈಭವದಿಂದ ಕುಳಿತಿದ್ದ.

No comments:

Post a Comment

ಗೋ-ಕುಲ Go-Kula