Sunday 12 April 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 17: 27 - 31

ಅತೋ ನ ದೇಯಮಸ್ಯ ನಃ ಸುಭೂಭುಜಾಂ ಸಮಾಗಮೇ ।
ಕ್ವಚಿತ್ ಕದಾಚಿದಾಸನಂ ನಚಾರ್ಘ್ಯಪೂರ್ವಕೋ ವಿಧಿಃ ॥೧೭.೨೭॥
ಹೇರಲು ಸ್ವಯಂವರಕ್ಕೆ ಕೃಷ್ಣಸಂಗಮದಿಂದ ನಿರ್ಬಂಧನ ,
ಆಗುತ್ತಿರಲು ಅಲ್ಲಿ ದೊಡ್ಡ ದೊಡ್ಡ ರಾಜರುಗಳ ಆಗಮನ ,
ಕೃಷ್ಣಗೆ ಕೊಡಬಾರದು ಅರ್ಘ್ಯ ಮತ್ತ್ಯಾವುದೇ ಆಸನ .

ನಚಾsಸ್ಯತಿ ಕ್ಷಿತೌ ಕ್ವಚಿದ್ ವಿಮಾನಿತಃ ಪುರೋ ಹಿ ನಃ ।
ವರಾಸನಸ್ಥಭೂಭುಜಾಂ ಸ ಮಾನಿತೋ ಹಿ ದೈವತೈಃ ॥೧೭.೨೮॥
ಸ ದರ್ಪಮಾನಸಂಯುತಃ ಕ್ರುಧಾ ಪ್ರಯಾಸ್ಯತಿ ದ್ಧ್ರುವಮ್।
ಪುರೀಂ ಸ್ವಕಾಂ ತತೋ ವಯಂ ವಿಧೇಮ ಚ ಸ್ವಯಮ್ಬರಮ್ ॥೧೭.೨೯॥
ನಮ್ಮೆದುರು ಅವನಿಗಾಗುತ್ತದೆ ಅವಮಾನ ,
ನೆಲದ ಮೇಲೆ ಕೂಡಲೊಪ್ಪದವನ ಮನ .
ನಾವೆಲ್ಲಾ ಆಗಿರುತ್ತೇವೆ ದೊಡ್ಡ ದೊಡ್ಡ ಪೀಠಗಳಲ್ಲಿ ಆಸೀನ ,
ಕೋಪದಿಂದ ಕುದ್ದು ಕುಂದಾಗುತ್ತದೆ ಆಗ ಅವನ ಮಾನ .
ಆರಂಭಿಸುತ್ತಾನೆ ಆಗವನು ತನ್ನೂರಿನೆಡೆಗೆ ಪ್ರಯಾಣ ,
ನಂತರ ನಾವೆಲ್ಲಾ ಕೂಡಿಕೊಂಡು ಸ್ವಯಂವರ ಮಾಡೋಣ .

ಇತಿ ಸ್ಮ ಸರ್ವಭೂಭೃತಾಂ ವಿನಿಶ್ಚಯಂ ಸಕೈಶಿಕಃ ।
ಕ್ರಥೋsವಗಮ್ಯ ಭೀಷ್ಮಕಾನುಜೋsಭ್ಯಯಾದ್ಧರಿಂ ಧ್ರುತಮ್ ॥೧೭.೩೦॥
ಭೀಷ್ಮಕನ ತಮ್ಮ ಕೈಶಿಕ ಕೃಥನೊಡಗೂಡಿ ತಿಳಿದ ಈ ತೀರ್ಮಾನ ,
ಬೆಳೆಸಿದ ಕುಂಡಿನ ಪಟ್ಟಣದ ಹೊರಗಿದ್ದ ಕೃಷ್ಣನೆಡೆಗೆ ಪ್ರಯಾಣ .

ಪ್ರಣಮ್ಯ ಪಾದಪದ್ಮಯೋರ್ನ್ನಿಜಂ ಗೃಹಂ ಪ್ರವೇಶ್ಯ ಚ ।
ಮಹಾಸನಂ ಪ್ರದಾಯ ತೌ ಪ್ರಚಕ್ರತುರ್ವರಾರ್ಚ್ಚನಮ್ ॥೧೭.೩೧॥
ಕೃಥ ಕೈಶಿಕರು ಕೃಷ್ಣನ ಪಾದಗಳಿಗೆ ಮಾಡಿದರು ನಮಸ್ಕಾರ ,
ಅವನನ್ನು ತಮ್ಮ ಮನೆಗೊಯ್ದು ಮಾಡಿದರು ಪೂಜೆ ಸತ್ಕಾರ .


No comments:

Post a Comment

ಗೋ-ಕುಲ Go-Kula