ಅಥಾsಗಮಚ್ಛತಕ್ರತೋರ್ವಚಃ ಪ್ರಗೃಹ್ಯ ಭೂಭುಜಃ ।
ಜರಾಸುತಾದಿಕಾನ್
ಪುಮಾನುವಾಚ ಚಾರ್ತ್ಥವದ್ ವಚಃ ॥೧೭.೩೨॥
ಆಗೊಬ್ಬ ದೇವದೂತ ಇಂದ್ರಸಂದೇಶ ಹೊತ್ತುಬಂದ,
ಜರಾಸಂಧಾದಿ ರಾಜರ ಕುರಿತು ಅರ್ಥವತ್ತಾಗಿ ಇಂತೆಂದ.
ಅಹಂ ಪ್ರಿಯಃ ಶಚೀಪತೇಃ
ಸದಾsಸ್ಯ ಚಾಕ್ಷಿಗೋಚರಃ ।
ಸುರೇನ್ದ್ರ ಆಜ್ಞಯಾsವದನ್ನೃಪಾನ್ ವ ಈಶ್ವರೋ ಹಿ ಸಃ ॥೧೭.೩೩॥
ಇಂದ್ರನಿಗೆ ಪ್ರಿಯನಾದವನು ನಾನು ,
ಸದಾ ಇಂದ್ರನ ಕಣ್ಣೆದುರು ಇರುವವನು.
ನಿಮ್ಮೊಡೆಯನೂ ಆದವನ ಆಜ್ಞೆ ತಂದಿರುವೆನು.
ಸಮಸ್ತರಾಜಸತ್ಪತಿರ್ಹರಿರ್ನ್ನಚಾನ್ಯ
ಇತ್ಯಪಿ ।
ವರಾಭಿಷೇಕಮೀಶಿತುಃ
ಕುರುಧ್ವಮಾಶ್ವಸಂಶಯಮ್ ॥೧೭.೩೪॥
ಎಲ್ಲಾ ರಾಜರುಗಳಿಗೂ ನಾರಾಯಣನೇ ನಾಯಕ ,
ಸಂಶಯಪಡದೆ ಇವನಿಗೆ ಮಾಡಿ ಉತ್ತಮ ಅಭಿಷೇಕ.
ಅತೋsನ್ಯಥಾ ಶಿರಸ್ಯಹಂ ನಿಪಾತಯಾಮಿ ವೋsಶನಿಮ್ ।
ಇತೀದಮಿನ್ದ್ರಶಾಸನಂ
ಕುರುಧ್ವಮಿತ್ಯಸೌ ಯಯೌ ॥೧೭.೩೫॥
ಹಾಗೆ ಮಾಡದಿರೆ ನಿಮ್ಮ ತಲೆಯ ಮೇಲೆ ಹಾಕುವೆ ವಜ್ರಾಯುಧ ,
ಇದು ಇಂದ್ರಾಜ್ಞೆ ಪಾಲಿಸಿ ಎಂದವನೇ ತಾನು ಹೊರಟು ಹೋದ .
ತದೀರಿತಂ ನಿಶಮ್ಯ ತೇ
ಪುನಃ ಸುತಪ್ತಚೇತಸಃ ।
ಬಭೂವುರೂಚಿರೇ ವಚಃ
ಸುಗರ್ವಿತೋ ಹಿ ವಾಸವಃ ॥೧೭.೩೬॥
ದೂತನ ಮಾತ ಕೇಳಿದ ರಾಜರು ಸಂತಪ್ತಚಿತ್ತರಾದರು,
ಇಂದ್ರನಿಗೆ ಬಹಳ ಗರ್ವ ಬಂದಿದೆ ಎಂದುಕೊಂಡರು .
ಪುರಾ ಬಿಭೇತಿ ನಃ ಸದಾ
ಪ್ರತಿಪ್ರತಿ ಸ್ಮ ವಾಸವಃ ।
ಉತಾದ್ಯ
ಕೃಷ್ಣಸಂಶ್ರಯಾದ್ ದೃಢಂ ವಿಭೀಷಯತ್ಯಸೌ ॥೧೭.೩೭॥
ಹಿಂದೆ ಇಂದ್ರನಿಗಿತ್ತು ನಮ್ಮ ವಿಷಯದಲ್ಲಿ ಭಯ ಭೀತಿ,
ಕೃಷ್ಣನಾಶ್ರಯದಿಂದ ಈಗ ನಮ್ಮನ್ನೇ ಹೆದರಿಸುವ ನೀತಿ .
ಅದೃಶ್ಯ ಏವ ದೇವರಾಡ್
ಯದಿ ಸ್ಮ ವಜ್ರಮುತ್ಸೃಜೇತ್ ।
ಭವೇಮ ಪೀಡಿತಾ ವಯಂ
ವರಾದಮೃತ್ಯವೋsಪಿ ಹಿ
॥೧೭.೩೮॥
ಅದೃಶ್ಯನಾಗಿದ್ದೇ ಇಂದ್ರ ಮಾಡಿದರೆ ವಜ್ರಾಯುಧದ ಎಸೆತ ,
ಸಾಯದಿದ್ದರೂ ನಾವೆಲ್ಲಾ ಸಂಕಟದಿಂದಾಗುತ್ತೇವೆ ಪೀಡಿತ .
ಪುರಾ ದಿವಿಸ್ಥಿತಸ್ಯ ಚ
ಪ್ರಮರ್ದ್ದನೇ ವಯಂ ಕ್ಷಮಾಃ ।
ಉತಾದ್ಯ ಯದ್ಯಮುಂ ವಯಂ
ವ್ರಜೇಮ ಕೃಷ್ಣ ಏಷ್ಯತಿ ॥೧೭.೩೯॥
ಹಿಂದವನು ಸ್ವರ್ಗದಲ್ಲಿದ್ದರೂ ಅವನ ಮರ್ದಿಸಲು ಆಗಿದ್ದೆವು ಸಮರ್ಥ ,
ಈಗ ಹಾಗೆ ದಾಳಿಗೆ ಹೋದರೆ ಕೃಷ್ಣ ಬಂದುಬಿಡುತ್ತಾನೆ ಅವನತ್ತ .
ಅತೋsಭಿಷೇಚನಾದ್ ಯದೀಹ ಶಾರ್ಙ್ಗಿಣಃ ಶಚೀಪತಿಃ
ನ ವಜ್ರಮುತ್ಸೃಜೇತ್ ತದಾsಭಿಷೇಚಯಾಮ ತಂ ವಯಮ್ ॥೧೭.೪೦॥
ಶಾರ್ಙ್ಗಧಾರಿ ಶ್ರೀಕೃಷ್ಣನಿಗೆ ಮಾಡಿದರೆ ಅಭಿಷೇಕ ,
ಇರುವುದಿಲ್ಲ ಇಂದ್ರನ ವಜ್ರಾಯುಧದ ಆತಂಕ .
ಕೃಷ್ಣಗಭಿಷೇಕ ಮಾಡುವುದೇ ಈಗ ಸಮರ್ಪಕ .
ಅತೋsನ್ಯಥಾ ದನುರ್ಯ್ಯಥಾ ವರಾದಮೃತ್ಯುಕೋsಪಿ ಸನ್ ।
ಸುರೇನ್ದ್ರವಜ್ರತಾಡಿತೋ
ಬಭೂವ ಕುಕ್ಷಿಗಾಸ್ಯಯುಕ್ ॥೧೭.೪೧॥
ತಥೈವ ಕೃಷ್ಣಸಂಶ್ರಯಾತ್
ಸ ನಃ ಶಚೀಪತಿರ್ನ್ನಯೇತ್ ।
ಇತಿ ಸ್ಮ ನಿಶ್ಚಿತಾ
ನೃಪಾನಯಾತಯನ್ತ ಶೌರಯೇ ॥೧೭.೪೨॥
ದನು ಎಂಬ ದೈತ್ಯ ವರದಿಂದ ಗೆದ್ದಿದ್ದ ಸಾವು ,
ಆದರೂ ಅನುಭವಿಸಿದ ವಜ್ರಪ್ರಹಾರದ ನೋವು .
ಹೊಟ್ಟೆಯೊಳಗೆ ಸೇರಿಹೋಗಿತ್ತವನ ಮುಖ ,
ನಮಗೆಂಥ ದುರ್ದೆಶೆಯೋ ಮಾಡದಿರೆ ಅಭಿಷೇಕ .
ಹೀಗೆ ನಿರ್ಧರಿಸಿದ ಜರಾಸಂಧಾದಿ ರಾಜರು ,
ಕೃಷ್ಣನಭಿಷೇಕಕ್ಕೆ ರಾಜರುಗಳ ಕಳುಹಿಸಿದರು .
No comments:
Post a Comment
ಗೋ-ಕುಲ Go-Kula