ಅಪಾಮ್ಪತಿಶ್ಚ ಮೈಥಿಲಃ
ಸ್ವಯಂವರಙ್ಕೃತಾವಪಿ ।
ಹರಿಂ ವಿನಿಶ್ಚಯಾದಿಯಂ
ವ್ರಜೇದಿತಿ ಸ್ಮ ಚಕ್ರತುಃ ॥೧೭.೬೦॥
ಕ್ಷೀರಸಾಗರ ಮಥನ ಕಾಲದಿ ಸಮುದ್ರರಾಜ ,
ಸೀತಾಸ್ವಯಂವರ ಕಾಲದಿ ಜನಕರಾಜ ,
ಇಬ್ಬರೂ ಏರ್ಪಡಿಸಿದ್ದರು ಆಗ ಸ್ವಯಂವರ ,
ಇಬ್ಬರಿಗೂ ಇತ್ತು ಮಗಳ ಹರಿಗೆ ಸೇರಿಸೋ ನಿರ್ಧಾರ .
ಸ್ವಯಂವರಃ
ಕ್ಷಿತೇರ್ಭುಜಾಂ ಸ್ವಧರ್ಮ್ಮ ಇತ್ಯತೋ ದ್ವಯೋಃ ।
ನ ದೋಷ ಆಸ ಭೀಷ್ಮಕೋ ನ
ಕೇಶವಾರ್ತ್ಥಮೈಚ್ಛತ ॥೧೭.೬೧॥
ಕ್ಷತ್ರಿಯರಿಗೆ ಸ್ವಧರ್ಮವದು ಸ್ವಯಂವರ ,
ಇಬ್ಬರು ರಾಜರಿಗೂ ಅದು ದೋಷದೂರ ,
ದಾರಿ ತಪ್ಪಿತ್ತದು ಭೀಷ್ಮಕನ ವ್ಯವಹಾರ .
ಅತೋ ಹರೌ ಪ್ರಬೋದ್ಧ್ಯ ತಂ ಗತೇ ಕೃಪಾಲುಸತ್ತಮೇ ।
ವಶೀಕೃತೇ ಚ ಭೀಷ್ಮಕೇ
ನೃಪಾಸ್ತ್ವಮನ್ತ್ರಯನ್ ಪುನಃ ॥೧೭.೬೨॥
ಆದಮೇಲೆ ಪರಮಕೃಪಾಳು ಕೃಷ್ಣ ಭೀಷ್ಮಕನ ಎಚ್ಚರಿಸಿ ಹೋದ ಘಟನೆ ,
ಭೀಷ್ಮಕ ಕೃಷ್ಣವಶವಾಗಲು ಮತ್ತೆ ನಡೆಸಿದರು ರಾಜರೆಲ್ಲ ಮಂತ್ರಾಲೋಚನೆ.
ಯಶಶ್ಚ ಧರ್ಮ್ಮಮುತ್ತಮಂ
ವಿಧಿತ್ಸತಾ ವೃಕೋದರೇ ।
ನ ಕೇಶವೇನ ಸೂದಿತೋ
ಜರಾಸುತೋ ಹಿ ಮನ್ಯತೇ ॥ ೧೭.೬೩ll
ಭೀಮನಿಗೆ ತಂದುಕೊಡಲು ಪುಣ್ಯ ಮತ್ತು ಕೀರ್ತಿಯ ಹೆಸರು ,
ಶ್ರೀಕೃಷ್ಣ ಇರಬಿಟ್ಟಿದ್ದ ಜರಾಸಂಧನ ಕಳೆಯದೇ ಅವನ ಉಸಿರು ,
ಆದರೆ ಜರಾಸಂಧನ ತಿಳುವಳಿಕೆಯಲ್ಲಿದ್ದದ್ದು ಕೇವಲ ತಿಮಿರು .
ವರಾಚ್ಛಿವಸ್ಯ ಮಾಮಯಂ ನ
ಹನ್ತುಮೀಷ್ಟ ಉತ್ತಮಾತ್ ।
ಅತಃ ಶಿವಪ್ರಸಾದತೋ ಜಿತೋsಪಿ ಜೇಷ್ಯ ಉತ್ತರಮ್ ॥೧೭.೬೪॥
ಶಿವನ ವರಬಲದಿಂದ ನಾನಾಗಿದ್ದೇನೆ ಶಕ್ತ ,
ನನ್ನ ಕೊಲ್ಲಲು ಕೃಷ್ಣನಾಗಿಲ್ಲನವ ಸಮರ್ಥ ,
ಸೋಲ ನಂತರ ಶಿವಾನುಗ್ರಹವೆನಗೆ ಗೆಲುವಿನತ್ತ.
ಮೃಧೇಮೃಧೇ ಜಿತೋsಪಿ ಸನ್ ದೃಢಾಶಯಾ ಪುನಃಪುನಃ ।
ಸಮೀಹತೇ ಯುಧೇ ಶಿವಂ
ನಚಾವಮನ್ಯತೇ ಕ್ವಚಿತ್ ॥೧೭.೬೫॥
ಹೀಗೆ ಸಾಗಿತ್ತು ಜರಾಸಂಧನ ಯುದ್ಧಗಳ ಸಾಲು ,
ಪ್ರತಿ ಯುದ್ಧದಲ್ಲೂ ಎದುರಾಗುತ್ತಿತ್ತದು ಸೋಲು .
ಗೆಲುವಿನಾಸೆಯಿಂದ ಪ್ರಯತ್ನಿಸುತ್ತಿದ್ದ ಮತಿಹೀನ ಜರಾಸಂಧ ,
ದೈವತಾರತಮ್ಯದಿ ಶಿವನ ಸ್ಥಾನವರಿಯದ ಅಹಂಕಾರೀ ಅಂಧ .
ಅತಃ ಪುನಶ್ಚ
ಭೂಮಿಪಾನುವಾಚ ಬಾರ್ಹದ್ರಥಃ ।
ಧಿಗೇವ ಪೌರುಷಂ ಹಿ ನೋ
ಯದೇಷ ನೋsಜಯತ್ ಸದಾ ॥೧೭.೬೬॥
ಜರಾಸಂಧ ರಾಜರಿಗೆ ಹೇಳಿದ ನಮ್ಮ ಪೌರುಷಕ್ಕೆ ಧಿಕ್ಕಾರ ,
ಕೃಷ್ಣ ಧರಿಸುತ್ತಿದ್ದಾನೆ ಪ್ರತಿ ಯುದ್ಧದಲ್ಲೂ ಗೆಲುವಿನ ಹಾರ .
ಅಭೂಪತೇರ್ನ್ನಚಾsಸನಂ ಪ್ರದೇಯಮಿತ್ಯುದಾಹೃತಮ್ ।
ಅಮುಷ್ಯ ನಸ್ತದನ್ಯಥಾ
ಬಭೂವ ಚಿನ್ತಿತಂ ನೃಪಾಃ ॥೧೭.೬೭॥
ನಾವಂದುಕೊಂಡೆವು-ರಾಜನಲ್ಲದವಗೆ ಆಸನ ಕೊಡಬಾರದೆಂದು,
ಆದರೆ ಶ್ರೀಕೃಷ್ಣನ ವಿಷಯದಲ್ಲಿ ನಡೆದು ಆದದ್ದೇ ಬೇರೊಂದು .
ಅಯಂ ನೃಪೋತ್ತಮಾಙ್ಗಣೇ
ಮಹೇನ್ದ್ರಪೀಠಮಾರುಹತ್ ।
ಸಮಸ್ತರಾಜರಾಜತಾಮವಾಪ ನೋsಪ್ಯನಿಚ್ಛತಾಮ್ ॥೧೭.೬೮॥
ರಾಜರು ನೋಡುತ್ತಿರುವಂತೆಯೇ ಕೃಷ್ಣ ಏರಿದ ಇಂದ್ರನ ಪೀಠ,
ನಮ್ಮಿಚ್ಛೆಯಲ್ಲದ ಅವನು ಚಕ್ರವರ್ತಿಯಾಗಿ ಮೆರೆದ ಆ ನೋಟ .
ಅಥಃ ಪುನಃ ಕಥಂ ಹರಿಂ
ವಯಂ ಜಯೇಮ ಚಿನ್ತ್ಯತಾಮ್ ।
ಯಥಾ ಚ
ಭೀಷ್ಮಕಾತ್ಮಜಾಮವಾಪ್ನುಯಾಚ್ಚ ಚೇದಿರಾಟ್ ॥೧೭.೬೯॥
ನಾವುಗಳು ಕೃಷ್ಣನನ್ನು ಗೆಲ್ಲೋದು ಹೇಗೆ ,
ಯಾವುದು ಶಿಶುಪಾಲ ರುಗ್ಮಿಣಿ ಸೇರಿಸೋ ಬಗೆ .
ಆಗಬೇಕಾಗಿದೆ ಇದರ ಬಗ್ಗೆ ವಿಚಾರ ,
ಇದು ಜರಾಸಂಧನ ಯೋಚನಾಧಾರ[Contributed by Shri Govind Magal].
No comments:
Post a Comment
ಗೋ-ಕುಲ Go-Kula