ಅಯಂ ಹಿ ದತ್ತಪುತ್ರಕೋ ಮ
ಔರಸಾದ್ ವಿಶಿಷ್ಯತೇ ।
ಅತೋ ನಿವೇಶ್ಯ ಏಷ ಮೇ
ಸುರೂಪಿಣೀ ಚ ರುಗ್ಮಿಣೀ ॥೧೭.೭೦॥
ಜರಾಸಂಧ ಹೇಳುವ-ಶಿಶುಪಾಲ ನನ್ನ ಸಾಕುಮಗ ಸ್ವಂತ ಮಗನಿಗಿಂತಲೂ ಅಧಿಕ
ಪ್ರಧಾನ ,
ಆ ಕಾರಣದಿಂದ ಸುರೂಪಿಯಾದ ರುಗ್ಮಿಣಿಯೊಡನೆ ಇವನದು ನಡೆಯಲೇಬೇಕು
ಕಲ್ಯಾಣ .
ಶಿವಾಗಮೇಷು ಶಿಷ್ಯಕಾಃ
ಸರುಗ್ಮಿಸಾಲ್ವಪೌಣ್ಡ್ರಕಾಃ ।
ಮಮಾಖಿಲಾ ನೃಪಾಸ್ತತಃ
ಕುರುಧ್ವಮೇತದೇವ ಮೇ ॥೧೭.೭೧॥
ರುಗ್ಮಿ ಸಾಲ್ವ ಪೌಂಡ್ರ ಸಮಸ್ತ ರಾಜರೂ ಶೈವಾಗಮದಲ್ಲಿ ನನ್ನ
ಶಿಷ್ಯವೃಂದ ,
ಹಾಗಾಗಿ ಗುರುದಕ್ಷಿಣೆಯಾಗಿ ಈ ಕಾರ್ಯ ಪೂರೈಸಿ ನನಗೀಯಬೇಕು ಆನಂದ .
ಇತೀರಿತೇ ತು ಸೌಭರಾಡ್
ಜಗಾದ ರುಗ್ಮಿಸಂವಿದಾ ।
ಸ್ವಯಂವರೋ ನಿವರ್ತ್ತಿತಃ
ಸ್ವಸಾರಮೇಷ ದಾಸ್ಯತಿ ॥೧೭.೭೨॥
ಜರಾಸಂಧ ಇಂತು ಹೇಳಲು ರುಗ್ಮಿ ಅನುಮತಿಯಂತೆ ಸಾಲ್ವ ನುಡಿದ ,
ಸ್ವಯಂವರ ಬಿಟ್ಟಾಗಿದೆ-ರುಗ್ಮಿ ತಂಗಿಯ ಶಿಶುಪಾಲಗೆ ಕೊಡುವ ಎಂದ .
ನಚಾತಿವರ್ತ್ತಿತುಂ
ಕ್ಷಮಃ ಪಿತಾsಸ್ಯ
ಚೇದಿಪಾಯ ತಾಮ್ ।
ಪ್ರದಾತುಕಾಮಮಾತ್ಮಜಂ
ವಯೋಗತಸ್ತಥಾsಬಲಃ
॥೧೭.೭೩॥
ತಂಗಿಗೆ ಅನುರೂಪನೆಂದು ರುಗ್ಮಿಣಿಯ ಆಯ್ಕೆ ಆಗಿರುವಾಗ ಶಿಶುಪಾಲ ,
ವಯಸ್ಸಾದ ದುರ್ಬಲನಾದ ಭೀಷ್ಮಕರಾಜ ಅದನ್ನು ಮೀರಲು ಆಗುವುದಿಲ್ಲ .
ಸ್ವಯಂ ತು ಕೃಷ್ಣ ಏತ್ಯ
ನೋ ವಿಜಿತ್ಯ ಕನ್ಯಕಾಂ ಹರೇತ್ ।
ತತೋsಸ್ಯ ಪೂರ್ವಮೇವ ನೋ ಹ್ಯಭಾವತಾ ಕೃತಾ ಶುಭಾ ॥೧೭.೭೪॥
ಆದರೆ ಕೃಷ್ಣ ತಾನೇ ಬಂದು ನಮ್ಮನ್ನು ಸೋಲಿಸಿ ,
ಕನ್ಯೆಯನ್ನೇ ಕರೆದೊಯ್ಯಬಹುದು ಅಪಹರಿಸಿ .
ಈ ಕಾರಣದಿಂದ ಅದಕ್ಕೂ ಮೊದಲು ,
ಕೃಷ್ಣನ ಮುಗಿಸಿಬಿಡುವುದು ಮಿಗಿಲು .
ಉಪಾಯ ಏಷ ಚಿನ್ತಿತೋ ಮಯಾsತ್ರ ಮಾಗಧೇಶ್ವರ ।
ಮುನಿಂ ಹಿ ಗರ್ಗ್ಗನಾಮಕಂ
ಹ್ಯಮುಷ್ಯ ಸಾಲ ಆಕ್ಷಿಪತ್ ॥೧೭.೭೫॥
ಮಗಧಾಧಿಪತಿಯೇ ,ನನ್ನಲ್ಲಿದೆ ಒಂದು
ಉಪಾಯದ ಚಿಂತನೆ ,
ಹಿಂದೊಮ್ಮೆ ಗರ್ಗಗೆ ಕೃಷ್ಣನ ಹೆಂಡತಿ ತಮ್ಮ ಮಾಡಿದ್ದ ನಿಂದನೆ .
ಯದಾsಸ್ಯ ಷಣ್ಡತೋದಿತಾ ಮುನೇಃ ಪುರೋಹಿತಸ್ಯ ಚ ।
ಪರೇಣ ವೃಷ್ಣಯೋsಹಸಂಶ್ಚುಕೋಪ ಗರ್ಗ್ಗ ಏಷು ಹ ॥೧೭.೭೬॥
ಯಾವಾಗ ಅವನು ಗರ್ಗನ ಷಂಡನೆಂದು ಬೈಯ್ದ ,
ಕೃಷ್ಣಸೇರಿ ಯಾದವರೆಲ್ಲ ನಕ್ಕಾಗ ಗರ್ಗ ಕುಪಿತನಾದ.
ಚಕಾರ ಚ ಪ್ರತಿಶ್ರವಂ
ಸಮಾರ್ಜ್ಜಯೇ ಸುತಂ ದ್ರುತಮ್ ।
ಅಕೃಷ್ಣತಾಂ ಯ ಆನಯೇದ್
ಭುವೋsಪಿ ವೃಷ್ಣಿನಾಶಕಃ
॥೧೭.೭೭॥
ಕುಪಿತನಾದ ಗರ್ಗ ಆಗ ಪ್ರತಿಜ್ಞೆ ಮಾಡುತ್ತಾನೆ ,
ಶೀಘ್ರದಲ್ಲೇ ಒಬ್ಬ ಮಗನನ್ನು ಪಡೆಯುತ್ತೇನೆ ,
ಅವನು ಕೃಷ್ಣ ಸೇರಿದಂತೆ ಯಾದವರ ಮುಗಿಸುತ್ತಾನೆ.[Contributed by Shri Govind Magal]
No comments:
Post a Comment
ಗೋ-ಕುಲ Go-Kula