Wednesday 22 April 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 17: 84 - 90

ಸ ಆಶ್ರಮಾಚ್ಚ ನೈಷ್ಠಿಕಾದ್ ವಿದೂಷಿತಃ ಪ್ರತೀಪಕೃತ್ ।
ಹರೇಶ್ಚ ತಾಪಮೇಯಿವಾನ್ ಜಗರ್ಹ ಚಾsತ್ಮಶೇಮುಷೀಮ್ ॥೧೭.೮೪॥
ನೈಷ್ಠಿಕ ಬ್ರಹ್ಮಚರ್ಯಾಶ್ರಮದಿಂದ ಭ್ರಷ್ಟನಾದ ಗರ್ಗಾಚಾರ್ಯ ,
ತನ್ನ ದೈವವಿರೋಧಿ ಕೃತ್ಯಕ್ಕೆ ಪಶ್ಚಾತ್ತಾಪಪಟ್ಟುಕೊಂಡ ಆರ್ಯ .

ಜಗಾಮ ಚಾರಣಂ ಹರಿಂ ಪ್ರಪಾಹಿ ಮಾಂ ಸುಪಾಪಿನಮ್ ।
ಇತಿ ಸ್ಮ ವಿಷ್ಣ್ವನುಜ್ಞಯಾ ಚಕಾರ ವೈಷ್ಣವಂ ತಪಃ ॥೧೭.೮೫॥
ಗರ್ಗಾಚಾರ್ಯರು ಶರಣಾಗಿ ನುಡಿದರು -ಅತಿಪಾಪಿಯಾದ ನನ್ನ ರಕ್ಷಿಸು ,
ವೈಷ್ಣವಾಜ್ಞೆಯಿಂದ ಮಾಡಿದರು ವಿಷ್ಣು ಕುರಿತಾದಂಥದೇ ಆದ ತಪಸ್ಸು .
(ಈರೀತಿಯಾಗಿ ಯವನಪುತ್ರನ ಹಿನ್ನೆಲೆಯನ್ನು ಜರಾಸಂಧನಿಗೆ ಹೇಳುತ್ತಿರುವ  ಸಾಲ್ವ, ಮುಂದುವರಿದು ಹೇಳುತ್ತಾನೆ:)

ಕುತೋ ಹಿ ಭಾಗ್ಯಮಾಪತೇನ್ಮುನೇಃ ಶಿವಾರ್ಚ್ಚನೇ ಸದಾ ।
ಭವಾದೃಶಾ ಹಿ ದಾನವಾಃ ಸ್ಥಿರಾಃ ಶಿವಾರ್ಚ್ಚನೇ ಸದಾ ॥೧೭.೮೬॥
ಆ ಮುನಿಗೆಲ್ಲಿಂದ ಬರಬೇಕು ಶಿವಾರ್ಚನೆಯ ಭಾಗ್ಯ,
ನಿನ್ನಂತಹ ನಿಷ್ಠ ದಾನವರು ಶಿವಾರ್ಚನೆಗೆ ಯೋಗ್ಯ .

ಸುತೋsಸ್ಯ ಕಾಲನಾಮಕೋ ಬಭೂವ ಕೃಷ್ಣಮರ್ದ್ದಿತುಮ್ ।
ಸದೈವ ಕಾಲಕಾಙ್ಕ್ಷಣಾತ್ ಸ ಯಾವನಾಭಿಷೇಚಿತಃ ॥೧೭.೮೭॥
ಗರ್ಗರಿಂದ ಹುಟ್ಟಿದ ಯವನರಾಜಪುತ್ರನಾದ-ಕಾಲನಾಮಕ ,
ಕೃಷ್ಣನ ತುಳಿಯಲು ಕಾಲ ಕಾಯುವುದೇ ಆಗಿತ್ತವನ ಕಾಯಕ .
ಅಂಥ ಕಾಲಯವನನಿಗೆ ಯವನರಾಜ ಮಾಡಿದ ಅಭಿಷೇಕ .

ತವೈವ ಶಿಷ್ಯ ಏಷ ಚಾತಿಭಕ್ತಿಮಾನ್ ಹಿ ಶಙ್ಕರೇ ।
ಪ್ರಭೂತಸೇನಯಾ ಯುತೋ ಬಲೋದ್ಧತಶ್ಚ ಸರ್ವದಾ ॥೧೭.೮೮॥
ಓ ಜರಾಸಂಧಾ , ಶಿವಭಕ್ತನಾದ ಈ ಕಾಲಯವನ ನಿನ್ನ ಶಿಷ್ಯ ,
ದೊಡ್ಡ ಸೇನೆಯಿರುವ ಅವನು ಬಲದರ್ಪಿತನಿರುವುದು ವಿಶೇಷ.

ತಮೇಶ ಯಾಮಿ ಶಾಸನಾತ್ ತವೋಪನೀಯ ಸತ್ವರಮ್ ।
ವಿಕೃಷ್ಣಕಂ ಕ್ಷಿತೇಸ್ಥಳಂ ವಿಧಾಯ ಸಂರಮಾಮ ಹಾ ॥೧೭.೮೯॥
ನಿನ್ನ ಆಜ್ಞೆಯಿಂದ ನಾನು ಕಾಲಯವನನಲ್ಲಿಗೆ ಹೋಗುವೆ ,
ಅವನನ್ನು ನಿನ್ನ ಬಳಿಗೆ ಕರೆದುತಂದು ನಿನಗೇ ಒಪ್ಪಿಸುವೆ .
ಅವನಿಂದ ಭುವಿ ಕೃಷ್ಣರಹಿತವಾಗಿ ನಮಗೆಲ್ಲಾ ಆನಂದವೆ .

ತತಶ್ಚ ರುಗ್ಮಿಣೀಂ ವಯಂ ಪ್ರದಾಪಯಾಮ ಚೇದಿಪೇ ।
ವಿನಾಶ್ಯ ದೇವಪಕ್ಷಿಣೋ ಯಥೇಷ್ಟಮಾಸ್ಮ ಸರ್ವದಾ ॥೧೭.೯೦॥
ನಂತರ ನಾವೆಲ್ಲಾ ಸೇರಿ ರುಗ್ಮಿಣಿಯ ಶಿಶುಪಾಲಗೆ ಕೊಡಿಸೋಣ,
ದೇವತೆಗಳ ನಾಶಪಡಿಸಿ ನಮಗೆ ಇಷ್ಟಬಂದಂತೆಯೇ ಇರೋಣ.


No comments:

Post a Comment

ಗೋ-ಕುಲ Go-Kula