Thursday, 23 April 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 17: 101 -106

ಇತೀರಿತೇsಪ್ಯತೃಪ್ತವತ್ ಸ್ಥಿತೇ ತು ಬಾರ್ಹದ್ರಥೇ ।
ಜಗಾಮ ಸೌಭಮಾಸ್ಥಿತಃ ಸ ಸೌಭರಾಟ್ ಚ ಯಾವನಮ್ ॥೧೭.೧೦೧॥
ಸಾಲ್ವ ಇಷ್ಟೆಲ್ಲ ಹೇಳಿದಮೇಲೂ ಜರಾಸಂಧನಾಗಿದ್ದ ಅತೃಪ್ತ ,
ಸಾಲ್ವ ಹೊರಟ ಸೌಭವಿಮಾನವೇರಿ ಕಾಲಯವನನ ದೇಶದತ್ತ .

ಸ ಕಾಲಯಾವನೋsಥ ತಂ ಜರಾಸುತಾನ್ತಿಕಾಗತಮ್ ।
ನಿಶಮ್ಯ ಭಕ್ತಿಪೂರ್ವಕಂ ಪ್ರಣಮ್ಯ ಚಾsರ್ಚ್ಚಯದ್ ದೃತಮ್ ॥೧೭.೧೦೨॥
ಸಾಲ್ವನ ಕಂಡು ಸಂಧಿಸಿದ ಆ ಕಾಲಯವನ ,
ಜರಾಸಂಧನ ಕಡೆಯವನೆಂದು ಮಾಡಿದ ನಮನ .

ಜರಾಸುತೋ ಹಿ ದೈವತಂ ಸಮಸ್ತಕೇಶವದ್ವಿಷಾಮ್ ।
ಇತಿ ಪ್ರಣಮ್ಯ ತಾಂ ದಿಶಂ ತದೀಯಮಾಶ್ವಪೂಜಯತ್ ॥೧೭.೧೦೩॥
ಜರಾಸಂಧನಲ್ಲವೇ ವಿಷ್ಣುದ್ವೇಷಿಗಳಿಗೆಲ್ಲಾ ದೇವತೆಯಂತೆ ,
ಅವನಿರುವ ದಿಕ್ಕಿಗೆ ಕಾಲಯವನ ಗೌರವದಿ ನಮಸ್ಕರಿಸಿದನಂತೆ .

ತದೀರಿತಂ ನಿಶಮ್ಯ ಚ ದ್ರುತಂ ತ್ರಿಕೋಟಿಸಙ್ಖ್ಯಯಾ ।
ಅಕ್ಷೋಹಿಣೀಕಯಾ ಯುತಃ ಸ್ವಸೇನಯಾ ನಿರಾಕ್ರಮತ್ ॥೧೭.೧೦೪॥
ಸಾಲ್ವನ ಸಂದೇಶವ ಕೇಳಿದಮೇಲೆ ಕಾಲಯವನ ,
ಅಣಿಮಾಡಿ ಹೊರಟ ತನ್ನ ಮುಕ್ಕೋಟಿ ಬಲಸೇನ.

ತದಶ್ವಮೂತ್ರವಿಷ್ಠಯಾ ಬಭೂವ ನಾಮತಃ ಶಕೃತ್ ।
ನದೀ ಸುವೇಗಗಾಮಿನೀ ಕಲೌ ಚ ಯಾ ವಹೇದ್ ದ್ರುತಮ್ ॥೧೭.೧೦೫॥
ಅವನ ಸೈನ್ಯದ ಕುದುರೆಗಳ ಮಲಮೂತ್ರದಿಂದ ,
ನದಿಯಾಗಿ ಹರಿಯಿತು ಶಕೃತ್ ನಾಮದಿಂದ .
ಯಾವುದು ಕಲಿಯುಗದಿ ಹರಿವುದೋ ವೇಗದಿಂದ .

ಪುನಃಪುನರ್ನ್ನದೀಭವಂ ನಿಶಾಮ್ಯ ದೇಶಸಙ್ಕ್ಷಯಮ್ ।
ತದನ್ಯದೇಶಮೂತ್ರಿತಂ ವ್ಯಶೋಷಯದ್ಧಿ ಮಾರುತಃ ॥೧೭.೧೦೬॥

ಗಮನಿಸಿ ಶಕೃತ್ ನದಿಯಿಂದ ಉಂಟಾಗತಕ್ಕ ಪರಿಸರ ಮತ್ತು ದೇಶನಾಶ ,
ವಾಯುದೇವ ಮಾಡಿಬಿಟ್ಟನಂತೆ ಅದನ್ನು ಬತ್ತಿಸುತ್ತ ಒಣಗಿಸುತ್ತ ನಿಶ್ಯೇಷ .

No comments:

Post a Comment

ಗೋ-ಕುಲ Go-Kula