Tuesday 26 October 2021

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 21: 06-11

ತಥೈವ ನನ್ದಗೋಪಕಃ ಸದಾರಗೋಪಗೋಪಿಕಃ ।

ಮುನೀಶ್ವರಾಶ್ಚ ಸರ್ವತಃ ಸಮೀಯುರತ್ರ ಚ ಪ್ರಜಾಃ ॥೨೧.೦೬॥

ನಂದಗೋಪ ಯಶೋದೆ ಮತ್ತು ಗೋಪ ಗೋಪಿಯರೊಂದಿಗೆ,

ಮುನಿಶ್ರೇಷ್ಠರೂ ಭಗವದ್ಭಕ್ತರೂ ಬಂದು ಸೇರಿದರು ಅಲ್ಲಿಗೆ.

 

ಪ್ರಿಯಾಶ್ಚ ಯೇ ರಮೇಶಿತುರ್ಹರಿಂ ತ್ರಿರೂಪಮೇತ್ಯ ತೇ ।

ವಸಿಷ್ಠವೃಷ್ಣಿನನ್ದನಂ ಭೃಗೂತ್ತಮಂ ತಥಾssರ್ಚ್ಚಯನ್ ॥೨೧.೦೭॥

ಪರಮಾತ್ಮನಿಗೆ ಪ್ರಿಯರಾಗಿದ್ದವರು,

ಯಾರೆಲ್ಲಾ ಇದ್ದರೋ ಭಗವದ್ಭಕ್ತರು,

ಮೂರು ರೂಪಗಳ ಹರಿಯ ಪೂಜಿಸಿದರು.

ಒಂದು ವಸಿಷ್ಠ ವಂಶದಿ ಬಂದ ವೇದವ್ಯಾಸರು,

ಯಾದವ ವಂಶದ ವಾಸುದೇವ ಶ್ರೀಕೃಷ್ಣದೇವರು, ಮೂರು :ಭ್ರುಗು ವಂಶದಿ ಬಂದ ಪರಶುರಾಮರು.

 

ಕೃತಾರ್ತ್ಥತಾಂ ಚ ತೇ ಯಯೂ ರಮೇಶಪಾದದರ್ಶನಾತ್ ।

ರವಿಗ್ರಹೇ ಸಮಾಪ್ಲುತಾ ಭೃಗೂದ್ವಹೋತ್ಥತೀರ್ತ್ಥಕೇ ॥೨೧.೦೮॥

ಪರಶುರಾಮದೇವರಿಂದ ನಿರ್ಮಿತವಾದಂಥ ಆ ದಿವ್ಯ ಪುಣ್ಯತೀರ್ಥ,

ಸಮಂತಪಂಚಕದಲ್ಲಿ ಮಿಂದು ದೇವಪಾದ ನೋಡಿದವರೆಲ್ಲಾ ಪುನೀತ.

 

ಅನುಗ್ರಹಂ ವಿಧಾಯ ಸಸ್ವಕೇಷು ಕೇಶವಸ್ತ್ರಿವೃತ್ ।

ಅಯಾಜಯಚ್ಚ ಶೂರಜಂ ಮಖೈಃ ಸಮಾಪ್ತದಕ್ಷಿಣೈಃ ॥೨೧.೦೯॥

ಆ ಕೇಶವ ತನ್ನ ಮೂರು ರೂಪಗಳಿಂದ,

ತನ್ನವರಿಗೆಲ್ಲಾ ಅನುಗ್ರಹವ ಮಾಡಿದ.

ಶೂರಸೇನನ ಮಗನಾದ ವಸುದೇವನು ತಾನು,

ತುಂಬು ದಕ್ಷಿಣೆಯ ಯಾಗಗಳಿಗೆ ಕಾರಣವಾದನು.

 

ಸಮಸ್ತಲೋಕಸಂಸ್ಥಿತಾತ್ಮಭಕ್ತಿಮಜ್ಜನಸ್ಯ ಸಃ ।

ಸುಕಾಲದರ್ಶನಾತ್ ಪರಂ ವ್ಯಧಾದನುಗ್ರಹಂ ಹರಿಃ ॥೨೧.೧೦॥

ಸಮಸ್ತ ಲೋಕದಲ್ಲಿರುವ ತನ್ನ ಭಕ್ತರಿಗೆಲ್ಲಾ ಭಗವಂತ,

ಆ ಪರ್ವಕಾಲದಿ ದರ್ಶನ ಮತ್ತು ವಿಶೇಷ ಅನುಗ್ರಹವನ್ನಿತ್ತ.

 

ತತೋ ಯಯೌ ಸ್ವಕಾಂ ಪುರೀಂ ಪೃಥಾಸುತೈಃ ಸಹಾಚ್ಯುತಃ ।

ಚಕಾರ ತತ್ರ ಚಾsಹ್ನಿಕಂ ಕ್ರತುಂ ಮಹಾಶ್ವಮೇಧಕಮ್ ॥೨೧.೧೧॥

ಆನಂತರ ಕುಂತೀಪುತ್ರರಾದ ಪಾಂಡವರ ಸಮೇತ,

ತನ್ನ ಪಟ್ಟಣಕೆ ತೆರಳಿದನು ವಾಸುದೇವಕೃಷ್ಣನಾತ.

ತನ್ನ ಪಟ್ಟಣದಲ್ಲಿ ಒಂದು ದಿನ,

ಮಾಡಿದ ಅಶ್ವಮೇಧ ಎಂಬ ಯಜ್ಞ.

[Contributed by Shri Govind Magal]

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 21: 01-05

 ॥ ಓಂ ॥

                           ಮಹಾಭಾರತ ತಾತ್ಪರ್ಯ ನಿರ್ಣಯ- ಏಕವಿಂಶೋsಧ್ಯಾಯಃ ಪಾಣ್ಡವರಾಜ್ಯಲಾಭಃ]

                                                       ಪಾಣ್ಡವವನಪ್ರವೇಶಃ

ಜನಾರ್ದ್ದನಾಜ್ಞಯಾ ಮಯಃ ಸಮಸ್ತಕೌತುಕೋತ್ತರಾಮ್ ।

ಸಭಾಂ ವಿಧಾಯ ಭೂಭೃತೇ ದದೌ ಗದಾಂ ವೃಕೋದರೇ ॥೨೧.೦೧॥

ಶ್ರೀಕೃಷ್ಣನ ಆಜ್ಞೆಯನ್ನು ಸ್ವೀಕರಿಸಿದವನಾದ ಮಯಾಸುರ,

ಮಾಡಿದ ಸಭಾಭವನವಾಗಿತ್ತು ಅಚ್ಚರಿ ಉತ್ತಮತೆಗಳ ಆಗರ.

ಅಂತಹಾ ಅಪೂರ್ವ ಸಭಾಭವನವನ್ನು ಧರ್ಮರಾಜಗೆ ಕೊಟ್ಟ,

ಹಾಗೆಯೇ ಭೀಮಸೇನನಿಗಾಗಿ ಒಂದು ಗದೆಯನ್ನೂ ತಂದಿಟ್ಟ.

 

ಸ ವಾಯುಧಾರಿತಾಂ ಗದಾಂ ಹಿ ಯೌವನಾಶ್ವಭೂಭೃತಾ ।

ಪ್ರಸಾದತೋsಸ್ಯ ಲಮ್ಭಿತಾಮವಾಪ್ಯ ಮೋದಮಾಪ ಹ ॥೨೧.೦೨॥

ಮುಖ್ಯಪ್ರಾಣನ ದಯದಿಂದ ಆ ಗದೆಯ ಧರಿಸಿದ್ದ ಮುಚುಕುಂದ,

ಮಯನ ಮೂಲಕ ಮತ್ತೆ ಅದನ ಪಡೆದ ಭೀಮಗೆ ಆಯಿತು ಆನಂದ.

 

ಪುನಶ್ಚ ವತ್ಸರದ್ವಯಂ ಸಮುಷ್ಯ ಕೇಶವೋ ಯಯೌ ।

ಸಮರ್ಚ್ಚಿತಶ್ಚ ಪಾಣ್ಡವೈರ್ವಿಯೋಜನೇsಸ್ಯ ಚಾಕ್ಷಮೈಃ ॥೨೧.೦೩॥

ಖಾಂಡವವನ ದಹನದ ನಂತರದ ಎರಡು ವರುಷ,

ಶ್ರೀಕೃಷ್ಣ ಮಾಡಿಕೊಂಡಿದ್ದ ಇಂದ್ರಪ್ರಸ್ತದಲ್ಲಿಯೇ ವಾಸ.

ಕೃಷ್ಣ ವಿಯೋಗವನ್ನು ಸಹಿಸುವಲ್ಲಿ ಪಾಂಡವರು ಆಗಿದ್ದರೂ  ಅಸಮರ್ಥ,

ಅವರಿಂದ ಉತ್ತಮ ಪೂಜೆಗೊಂಡು ದ್ವಾರಕೆಗೆ ಹೊರಟ ಸರ್ವಸಮರ್ಥ.

 

ತತೋ ವಸನ್ ಸ್ವಪುರ್ಯ್ಯಜಃ ಕ್ವಚಿದ್ ರವಿಗ್ರಹೇ ಹರಿಃ ।

ಸದಾರಪುತ್ರಬಾನ್ಧವಃ ಸಮನ್ತಪಞ್ಚಕಂ ಯಯೌ ॥೨೧.೦೪॥

ಹುಟ್ಟೇ ಇರದ ಶ್ರೀಕೃಷ್ಣ ದ್ವಾರಕೆಯಲ್ಲಿದ್ದಾಗ ಒಂದು ಸೂರ್ಯಗ್ರಹಣದ ಸಮಯ,

ತನ್ನ ಅನೇಕ ಬಾಂಧವರು ಪತ್ನೀ ಪುತ್ರರೊಂದಿಗೆ ಕುರುಕ್ಷೇತ್ರಕ್ಕೆ ಬಂದ ಚಿನ್ಮಯ.

 

ಪೃಥಾಸುತಾಶ್ಚ ಸರ್ವಶಃ ಸದಾರಪುತ್ರಮಾತೃಕಾಃ ।

ಕ್ಷಿತೀಶ್ವರಾಶ್ಚ ಸರ್ವಶಃ ಪ್ರಿಯಾಪ್ರಿಯಾ ಹರೇಶ್ಚ ಯೇ ॥೨೧.೦೫॥

ಪೃಥೆಯ ಪುತ್ರರಾದ ಪಾಂಡವರೆಲ್ಲರೂ,

ಸಂಸಾರ ಸಮೇತರಾಗಿ ಅಲ್ಲಿಗೆ ಬಂದರು.

ಭಗವಂತನಿಗೆ ಪ್ರಿಯರು -ಅಪ್ರಿಯರು,

ಮತ್ತೆಲ್ಲಾ ರಾಜರುಗಳು ಅಲ್ಲಿಗೆ ಬಂದರು.

[Contributed by Shri Govind Magal]

Saturday 16 October 2021

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 20: 238 - 245

ದೈತ್ಯಾಶ್ಚ ನಾಗಾಶ್ಚ ಪಿಶಾಚಯಕ್ಷಾ ಹತಾಃ ಸರ್ವೇ ತದ್ವನಸ್ಥಾ ಹಿ ತಾಭ್ಯಾಮ್ ।

ಋತೇ ಚತುಷ್ಪಕ್ಷಿಣಶ್ಚಾಶ್ವಸೇನಂ ಮಯಂ ಚ ನಾನ್ಯತ್ ಕಿಞ್ಚಿದಾಸಾತ್ರ ಮುಕ್ತಮ್ ॥೨೦.೨೩೮॥

ಖಾಂಡವವನ ದಹನದಲ್ಲಿ ಅಲ್ಲಿದ್ದವರೆಲ್ಲಾ ಸುಟ್ಟುಹೋದರು,

ದೈತ್ಯ,ನಾಗ,ಪಿಶಾಚ,ಯಕ್ಷರೆಲ್ಲ ಕೃಷ್ಣಾರ್ಜುನರಿಂದ ಹತರಾದರು.

ನಾಕು ಪಕ್ಷಿಗಳು,ತಕ್ಷಕನ ಮಗ ಅಶ್ವಸೇನ, ದೈತ್ಯಶಿಲ್ಪಿ ಮಯ,

ಇವರನ್ನು ಬಿಟ್ಟು ಮಿಕ್ಕೆಲ್ಲರ ನುಂಗಿತ್ತು ಅಗ್ನಿಜ್ವಾಲೆಯ ದಾಹ.

  

ಅಯಮಗ್ನೇ ಜರಿತೇತ್ಯಾದಿಮನ್ತ್ರೈಃ ಸ್ತುತ್ವಾ ವಹ್ನಿಂ ಪಕ್ಷಿಣೋ ನೋಪದಗ್ಧಾಃ ।

ಅಶ್ವಸೇನಃ ಪುತ್ರಕಸ್ತಕ್ಷಕಸ್ಯ ಮಾತ್ರಾ ಗ್ರಸ್ತಃ ಪ್ರಾತಿಲೋಮ್ಯೇನ ಕಣ್ಠೇ ॥೨೦.೨೩೯॥

‘ಅಯಮಗ್ನೇ ಜರಿತಾ’ ಇತ್ಯಾದಿ ಮಂತ್ರಗಳ  ನಾರಾಯಣ ಜಪದಿಂದ,

ನಾಕು ಪಕ್ಷಿಗಳು ಉಳಿದುಕೊಂಡವು ಪಾರಾಗಿ ಅಗ್ನಿಯ ಜ್ವಾಲೆಯಿಂದ.

ತಕ್ಷಕಪುತ್ರ ಅಶ್ವಸೇನನನ್ನು ತಾಯಿ ಹಿಂದುಮುಂದಾಗಿ ನುಂಗಿದ್ದಳು,

ಬಾಲ ತುಂಡಾಗಿ ಉಳಿದ ಅಶ್ವಸೇನ ಅರ್ಜುನ ಅವಳ ತಲೆ ಕತ್ತರಿಸಲು.

 

ಛಿನ್ನೇsರ್ಜ್ಜುನೇನಾನ್ತರಿಕ್ಷೇ ಪತನ್ತ್ಯಾಸ್ತಸ್ಯಾಃ ಶಕ್ರೇಣಾವಿತಶ್ಛಿನ್ನಪುಚ್ಛಃ ।

ವಧಾನ್ಮಾತುಃ ಪುಚ್ಛಭಙ್ಗಾಚ್ಚ ರೋಷಾದ್ಧನ್ತುಂ ಪಾರ್ತ್ಥಂ ಕರ್ಣ್ಣತೂಣೀರಗೋsಭೂತ್ ॥೨೦.೨೪೦॥

ಆಕಾಶದಲ್ಲಿ ಹಾರುತ್ತಿದ್ದ ತಕ್ಷಕನ ಹೆಂಡತಿಯ ತಲೆ ಕತ್ತರಿಸಲ್ಪಟ್ಟಿತ್ತು,

ಇಂದ್ರರಕ್ಷಿತನಾಗಿ ಬಾಲಹೀನನಾಗಿ ಉಳಿದ ಅಶ್ವಸೇನನಲ್ಲಿ ಸೇಡಿತ್ತು,

ತನ್ನ ತಾಯಿಯ ಸಾವು, ಬಾಲ ಹೋದ ನೋವು ಅರ್ಜುನನ ಕೊಲ್ಲಲು ಕಾದಿತ್ತು,

ಈ ಹಿನ್ನೆಲೆಯ ದ್ವೇಷವು ಅಶ್ವಸೇನನನ್ನು ಕರ್ಣನ ಬತ್ತಳಿಕೆಯಲ್ಲಿ ಸೇರಿಸಿತ್ತು.

 

[ಮಯನ ಕುರಿತು ಹೇಳುತ್ತಾರೆ:]

ಮಯಃ ಕೃಷ್ಣೇನಾsತ್ತಚಕ್ರೇಣ ದೃಷ್ಟೋ ಯಯೌ ಪಾರ್ತ್ಥಂ ಶರಣಂ ಜೀವನಾರ್ಥೀ ।

ಪಾರ್ತ್ಥಾರ್ತ್ಥಮೇನಂ ನ ಜಘಾನ ಕೃಷ್ಣಃ ಸ್ವಭಕ್ತಶ್ಚೇತ್ಯತಿಮಾಯಂ ಪರೇಶಃ ॥೨೦.೨೪೧॥

ಚಕ್ರಧಾರಿ ಶ್ರೀಕೃಷ್ಣ ಮಯನನ್ನು ನೋಡಿದ,

ಮಯ ಅರ್ಜುನನಲ್ಲಿ ಜೀವಭಿಕ್ಷೆ ಬೇಡಿದ.

ಸರ್ವಸಮರ್ಥನಾದ ಶ್ರೀಕೃಷ್ಣ ಅರ್ಜುನನಿಗೋಸ್ಕರ,

ಮತ್ತೆ ಭಕ್ತನೂ ಆದ ಮಯನನ್ನು ಮಾಡಲಿಲ್ಲ ಸಂಹಾರ.

 

[ಮಯ ನೇರವಾಗಿ  ಕೃಷ್ಣನಲ್ಲಿ ಶರಣುಹೊಂದಬಹುದಿತ್ತು. ಅರ್ಜುನನನ್ನು ಶರಣುಹೊಂದಿ, ಅರ್ಜುನನ ಮೂಲಕ ಕೃಷ್ಣನಿಂದ ಏಕೆ ಜೀವ ಉಳಿಸಿಕೊಂಡ ಎನ್ನುವುದನ್ನು ವಿವರಿಸುತ್ತಾರೆ:]

ದೇವಾರಿರಿತ್ಯೇವ ಮಯಿ ಪ್ರಕೋಪಃ ಕೃಷ್ಣಸ್ಯ ತೇನಾಹಮಿಮಂ ಪುರನ್ದರಮ್ ।

ಪಾರ್ತ್ಥಾತ್ಮಕಂ ಶರಣಂ ಯಾಮಿ ತೇನ ಕೃಷ್ಣಪ್ರಿಯಃ ಸ್ಯಾಮಿತಿ ತಸ್ಯ ಬುದ್ಧಿಃ ॥ ೨೦.೨೪೨॥

ದೇವತೆಗಳ ವೈರಿಯಾದ ನನ್ನಲ್ಲಿ ಕೃಷ್ಣನಿಗೆ ಕೋಪವಿದೆ,

ಅರ್ಜುನರೂಪದ ಇಂದ್ರನ ಮೊರೆಹೋದರೆ ರಕ್ಷಣೆಯಿದೆ.

ಹಾಗೆ ಮಾಡುವುದರಿಂದ ಕೃಷ್ಣಪರಮಾತ್ಮನಿಗೂ ಪ್ರಿಯ,

ಹೀಗೆಂದುಕೊಂಡು ಅರ್ಜುನನ ಮೊರೆಹೋದ ಮಯ.

 

ಪ್ರಾಣೋಪಕೃತ್  ಪ್ರತ್ಯುಪಕಾರಮಾಶು ಕಿಂ ತೇ ಕರೋಮೀತಿ ಸ ಪಾರ್ತ್ಥಮಾಹ ।

ಕೃಷ್ಣಪ್ರಸಾದಾದ್ಧಿ ಭವಾನ್ ವಿಮುಕ್ತಸ್ತಸ್ಮೈ ಕರೋತ್ವಿತ್ಯವದತ್ ಸ ಪಾರ್ತ್ಥಃ ॥೨೦.೨೪೩॥

ಪ್ರಾಣ ಉಳಿಸಿದ ಅರ್ಜುನನೇ ನಿನಗೇನು ಪ್ರತ್ಯುಪಕಾರ ಮಾಡಲಿ ಎಂದ ಮಯ,

ಅರ್ಜುನನೆಂದ -ಕೃಷ್ಣಪ್ರೀತಿಗಾಗಿ ಏನಾದರೂ ಮಾಡು ನಿನ್ನುಳಿಸಿದ್ದು ಅವನ ದಯ.

 

ಕೃಷ್ಣೋsಪಿ ರಾಜ್ಞೋsತಿವಿಚಿತ್ರರೂಪಸಭಾಕೃತಾವದಿಶತ್ ತಾಂ ಸ ಚಕ್ರೇ ।

ಅನಿರ್ಗ್ಗಮಂ ಪ್ರಾಣಿನಾಮರ್ತ್ಥಿತೌ ತೌ ಹುತಾಶನೇನಾಥ ವಿಧಾಯ ಜಗ್ಮತುಃ ॥೨೦.೨೪೪॥

ಕೃಷ್ಣ -ಯುಧಿಷ್ಠಿರನಿಗಾಗಿ ಮಾಡು ವಿಶೇಷ ಸಭಾಭವನ ನಿರ್ಮಾಣ,

ಮಯ ಅದರಂತೇ ಮಾಡಿದ ಅನುಸರಿಸಿ  ಶ್ರೀಕೃಷ್ಣನ ಆಜ್ಞೆಯನ್ನ.

ಅಗ್ನಿ ಪ್ರಾರ್ಥಿಸಿದ-ಉಳಿದ ಪ್ರಾಣಿಗಳಾವವೂ ಹೊರಹೋಗಬಾರದು,

ಹಾಗೆಯೇ ಅನುಗ್ರಹಿಸಿದ ಮೇಲೆಯೇ ಕೃಷ್ಣ ಅರ್ಜುನರು ಹೊರಟದ್ದು.

 

ದೃಷ್ಟ್ವಾ ಚ ತೌ ಪಾಣ್ಡವಾಃ ಸರ್ವ ಏವ ಮಹಾಮುದಂ ಪ್ರಾಪುರೇತನ್ನಿಶಮ್ಯ ।

ಕೃಷ್ಣೋsಪಿ ಪಾರ್ತ್ಥೈರ್ಮ್ಮುಮುದೇsನನ್ತಶಕ್ತಿಸುಖಜ್ಞಾನಪ್ರಾಭವೌದಾರ್ಯ್ಯವೀರ್ಯ್ಯಃ ॥೨೦.೨೪೫॥

ಹೀಗೆ ಇಂದ್ರನ ಗೆದ್ದ, ಖಾಂಡವವನ ಸುಟ್ಟ ಮಯಾದಿಗಳನ್ನ ಉಳಿಸಿದ ವಿಷಯ,

ಕೇಳಿಸಿಕೊಂಡ ಎಲ್ಲ ಪಾಂಡವರಿಗದು ಅತ್ಯಂತ ಸಂತೋಷದ ಸಮಯ.

ಮಿತಿಯಿರದ ಶಕ್ತಿ, ಸುಖ, ಜ್ಞಾನ, ಒಡೆತನ, ಔದಾರ್ಯ, ವೀರ್ಯಗಳ ಆಗರ,

ಪಾಂಡವರೊಂದಿಗಿದ್ದು ಸಂತೋಷ ಪಟ್ಟನಂತೆ ಕೃಷ್ಣನೆಂಬ ಕರುಣಾಸಾಗರ.

 

 

ಇತಿ ಶ್ರೀಮದಾನನ್ದತೀರ್ಥಭಗವತ್ಪಾದವಿರಚಿತೇ ಶ್ರಿಮನ್ಮಹಾಭಾರತತಾತ್ಪರ್ಯ್ಯನಿರ್ಣ್ಣಯೇ

ಖಾಣ್ಡವದಾಹೋ ನಾಮ    ವಿಂಶೋsಧ್ಯಾಯಃ ॥

 

ಹೀಗೆ ಶ್ರೀಮದಾನಂದತೀರ್ಥರಿಂದ ರಚಿತವಾದ,

ಶ್ರೀಮನ್ಮಹಾಭಾರತತಾತ್ಪರ್ಯನಿರ್ಣಯಾನುವಾದ,

ಖಾಂಡವದಹನ ನಾಮಾಂಕಿತ ಇಪ್ಪತ್ತನೇ ಅಧ್ಯಾಯ,

ಅಂತರ್ಯಾಮಿ ಶ್ರೀಕೃಷ್ಣಗೆ ಅರ್ಪಿಸಿದ ಧನ್ಯತಾ ಭಾವ.

 

**************


[Contributed by Shri Govind Magal]

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 20: 233 - 237

ಅಸ್ತ್ರೈಸ್ತು ವೃಷ್ಟಿಂ ವಿನಿವಾರ್ಯ್ಯ ಕೃಷ್ಣಃ  ಪಾರ್ತ್ಥಶ್ಚ ಶಕ್ರಂ ಸುರಪೂಗಯುಕ್ತಮ್ ।

ಅಯುದ್ಧ್ಯತಾಂ ಸೋsಪಿ ಪರಾಜಿತೋsಭೂತ್ ಪ್ರೀತಶ್ಚ ದೃಷ್ಟ್ವಾ ಬಲಮಾತ್ಮನಸ್ತತ್ ॥೨೦.೨೩೩॥

ಕೃಷ್ಣ ಅರ್ಜುನರು ಕೂಡಾ ಅಸ್ತ್ರಗಳಿಂದ ಮಳೆಯ ತಡೆದರು,

ದೇವತೆಗಳೊಂದಿಗಿದ್ದ ಇಂದ್ರನೊಡನೆ ಯುದ್ಧವ ಮಾಡಿದರು.

ಆ ಯುದ್ಧದಲ್ಲಿ ಇಂದ್ರದೇವ ಸೋತ,

ತನ್ನ ಮಗನ ಬಲ ಕಂಡಾದ ಸಂಪ್ರೀತ.

 

[ಮಹಾಭಾರತದಲ್ಲಿ ‘ಇಂದ್ರ ತನ್ನ ಬಲವನ್ನು ಕಂಡು ಸಂತೋಷಪಟ್ಟ’ ಎಂದಿದೆ. ಆ ಶ್ಲೋಕವನ್ನು ಹೇಗೆ ವ್ಯಾಖ್ಯಾನ ಮಾಡಬೇಕು ಎನ್ನುವುದು ಆಚಾರ್ಯರ ಈ ವಿವರಣೆಯಿಂದ ಸ್ಪಷ್ಟವಾಗುತ್ತದೆ]

ಸ್ನೇಹಂ ಚ ಕೃಷ್ಣಸ್ಯ ತದಾsರ್ಜ್ಜುನೇ ಧೃತಂ ವಿಲೋಕ್ಯ ಪಾರ್ತ್ಥಸ್ಯ ಬಲಂ ಚ ತಾದೃಶಮ್ ।

ನಿವರ್ತ್ತ್ಯ ಮೇಘಾನತಿತುಷ್ಟಚಿತ್ತಃ ಪ್ರಣಮ್ಯ ಕೃಷ್ಣಂ ತನಯಂ ಸಮಾಶ್ಲಿಷತ್ ॥೨೦.೨೩೪॥

ಅರ್ಜುನನಲ್ಲಿ ಶ್ರೀಕೃಷ್ಣನಿಟ್ಟಿದ್ದ ಆ ಪ್ರೀತಿ,

ಅರ್ಜುನ ತೋರಿಸಿದ ತನ್ನ ಬಲದ ರೀತಿ,

ಕಂಡಂಥಾ ಇಂದ್ರನಿಗದು ಬಲು ಸಂತಸದ ಕ್ಷಣ,

ಮೋಡಗಳ ಹಿಂದೆಕಳಿಸಿ ಕೃಷ್ಣಗೆ ಸಲ್ಲಿಸಿದ ನಮನ.

ಪ್ರೀತಿಯಿಂದ ಮಗ ಅರ್ಜುನಗೆ ಕೊಟ್ಟ ಆಲಿಂಗನ.

 

ವಿಷ್ಣುಶ್ಚ ಶಕ್ರೇಣ ಸಹೇತ್ಯ ಕೇಶವಂ ಸಮಾಶ್ಲಿಷನ್ನಿರ್ವಿಶೇಷೋsಪ್ಯನನ್ತಮ್ ।

ಸ ಕೇವಲಂ ಕ್ರೀಡಮಾನಃ ಸಶಕ್ರಃ ಸ್ಥಿತೋ ಹಿ ಪೂರ್ವಂ ಯುಯುಧೇ ನ ಕಿಞ್ಚಿತ್ ॥೨೦.೨೩೫॥

ಸ್ವರ್ಗದಲ್ಲಿರುವ (ವಿಷ್ಣು) ಉಪೇಂದ್ರರೂಪಿ ಭಗವಂತ,

ಇಂದ್ರನೊಂದಿಗೆ ಬಂದು ಕೇಶವಗೆ ಆಲಿಂಗನವ ಇತ್ತ.

ಶ್ರೀವಿಷ್ಣು ಮತ್ತು ಶ್ರೀಕೃಷ್ಣನ ಮಧ್ಯೆ ಯಾವ ವ್ಯತ್ಯಾಸವಿಲ್ಲ,

ಈ ತೆರನಾದ ಕ್ರಿಯೆಗಳೆಲ್ಲಾ ಅವನಾಡುವ ಕ್ರೀಡಾಜಾಲ.

ಇಂದ್ರ ಯುದ್ಧ ಮಾಡುವಾಗ ಉಪೇಂದ್ರ ಮಾಡಲಿಲ್ಲ ಕದನ,

ಆ ನಂತರದ ಘಟನಾವಳಿಗಳಲ್ಲಿ ಬಂದು ಕೊಟ್ಟ ಆಲಿಂಗನ.

 

ಬ್ರಹ್ಮಾ ಚ ಶರ್ವಶ್ಚ ಸಮೇತ್ಯ ಕೃಷ್ಣಂ ಪ್ರಣಮ್ಯ ಪಾರ್ತ್ಥಸ್ಯ ಚ ಕೃಷ್ಣನಾಮ ।

ಸಞ್ಚಕ್ರತುಶ್ಚಾಪಿ ಶಿಕ್ಷಾಪ್ರಕರ್ಷಾಚ್ಚಕ್ರುಶ್ಚ ಸರ್ವೇ ಸ್ವಾಸ್ತ್ರದಾನೇ ಪ್ರತಿಜ್ಞಾಮ್ ॥೨೦.೨೩೬॥

ಬ್ರಹ್ಮ ರುದ್ರರು ಕೂಡಾ ಕೃಷ್ಣನ ಬಳಿಸಾರಿ ಬಂದು ಮಾಡಿದರು ನಮಸ್ಕಾರ,

ಅರ್ಜುನಗೆ ವಿಶೇಷತಃ ಕೃಷ್ಣ ಎಂದು ನಾಮಕರಣ ಮಾಡಿದ ವ್ಯಾಪಾರ.

ಅರ್ಜುನನ ಶ್ರೇಷ್ಠ ಬಿಲ್ಗಾರಿಕೆಗೆ ಅವನಿಗೆ ಆ ಹೆಸರನ್ನು ಇಟ್ಟರು,

ಮುಂದೆ ಕಾಡಿಗೆ ಬಂದಾಗ ಅಸ್ತ್ರಗಳ ಕೊಡುವ ಮಾತನ್ನು ಕೊಟ್ಟರು.

 

ಅನುಜ್ಞಾತಾಸ್ತೇ ಪ್ರಯಯುಃ  ಕೇಶವೇನ ಕ್ರೀಡಾರ್ತ್ಥಮಿನ್ದ್ರೋ ಯಯುಧೇ ಹಿ ತತ್ರ ।

ಪ್ರೀತ್ಯಾ ಕೀರ್ತ್ತಿಂ ದಾತುಮಪ್ಯರ್ಜ್ಜುನಸ್ಯ ತತಸ್ತುಷ್ಟಃ ಸಹ ದೇವೈಸ್ತಯೋಃ ಸಃ ॥೨೦.೨೩೭॥

ಬ್ರಹ್ಮಾದಿಗಳು ಕೃಷ್ಣಾಜ್ಞೆ ಪಡೆದು ಹಿಂತಿರುಗಿದಂಥ ಆ ಆಟ,

ಇಂದ್ರನ ಯುದ್ಧ ಅರ್ಜುನ ಕೀರ್ತಿಗಾಗಿ ಆಡಿದ ಕ್ರೀಡಾಕೂಟ,

ನಂತರ ಸಂಪ್ರೀತ ಇಂದ್ರ ದೇವತೆಗಳೊಡನೆ ಸ್ವರ್ಗಕೆ ಹೊರಟ.

[Contributed by Shri Govind Magal]

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 20: 228 - 232

ವಿಶೇಷತೋ ಧ್ವಜಸಂಸ್ಥೇ ಹನೂಮತ್ಯಜೇಯತಾ ಸ್ಯಾಜ್ಜಯರೂಪೋ ಯತೋsಸೌ ।

ಸರ್ವಂ ಚ ತದ್ ದಿವ್ಯಮಭೇದ್ಯಮೇವ ವಿದ್ಯುತ್ಪ್ರಭಾ ಜ್ಯಾ ಚ ಗಾಣ್ಡೀವಸಂಸ್ಥಾ ॥೨೦.೨೨೮॥

ಯಾವ ಕಾರಣದಿಂದ ಎಲ್ಲರನ್ನೂ ಗೆದೆಯಬಲ್ಲ ಮುಖ್ಯಪ್ರಾಣ- ಜಯರೂಪ,

ಅಂಥ ಹನುಮ ಧ್ವಜದಲ್ಲಿರಲು ರಥಿಕ ಅನ್ಯರಿಂದ ಜಯಿಸಲಾಗದ ಭೂಪ.

ಮಿಂಚಿನಂಥಾ ಕಾಂತಿಯುಳ್ಳ ಹೆದೆಯಿದ್ದ ಗಾಂಡೀವವದು,

ಸಮಸ್ತವೂ ಅಲೌಕಿಕವಾಗಿದ್ದುದ್ದಲ್ಲದೆ ಅಭೇದ್ಯವಾದುದು.

 

ಗಾಣ್ಡೀವಮಪ್ಯಾಸ ಕೃಷ್ಣಪ್ರಸಾದಾಚ್ಛಕ್ಯಂ ಧರ್ತ್ತುಂ ಪಾಣ್ಡವಸ್ಯಾಪ್ಯಧಾರ್ಯ್ಯಮ್ ।

ದೇವೈಶ್ಚ ತೈರ್ಬ್ರಹ್ಮವರಾದ್ ಧೃತಂ ತದ್ ಬ್ರಹ್ಮೈವ ಸಾಕ್ಷಾತ್ ಪ್ರಭುರಸ್ಯ ಧಾರಣೇ ॥೨೦.೨೨೯॥

 ಬ್ರಹ್ಮನ ಬಿಟ್ಟರೆ ಉಳಿದವರಿಗೆ ಗಾಂಡೀವ ಧರಿಸಲು ಅಸಾಧ್ಯ,

ಆದರೆ ಕೃಷ್ಣನ ಅನುಗ್ರಹದಿಂದ ಅರ್ಜುನಗೆ ಆಗಿತ್ತದು ಸಾಧ್ಯ.

ಇತರೆ ದೇವತೆಗಳು ಬ್ರಹ್ಮವರದಿಂದ ಅದ  ಧರಿಸಲಾದರು ಬಾಧ್ಯ.

 

ಇನ್ದ್ರಸ್ಯ ದತ್ತಶ್ಚ ವರಃ ಸ್ವಯಮ್ಭುವಾ ತೇನಾಪಿ ಪಾರ್ತ್ಥಸ್ಯ ಬಭೂವ ಧಾರ್ಯ್ಯಮ್ ।

ಇನ್ದ್ರೋ ಹ್ಯಸೌ ಫಲ್ಗುನತ್ವೇನ ಜಾತಸ್ತತತಃ ಸೋsಸ್ತ್ರೈಃ ಶರಶಾಲಾಂ ಚಕಾರ ॥೨೦.೨೩೦॥

ಇತರ ದೇವತೆಗಳಂತೆ ಇಂದ್ರನಿಗೂ ಬ್ರಹ್ಮದೇವರು ಕೊಟ್ಟ ವರವಿತ್ತು,

ಹಾಗಾಗಿ ಅರ್ಜುನನಾದ ಇಂದ್ರನಿಗೂ ಗಾಂಡೀವ

ಧರಿಸುವ ಶಕ್ತಿಯಿತ್ತು.

ಆನಂತರ ಇಂದ್ರನೇ ಆದಂಥ ಅರ್ಜುನ,

ಖಾಂಡವವನಕ್ಕೆ ಮಾಡಿದ ಬಾಣದಾವರಣ.

 

ಸ ಯೋಜನದ್ವಾದಶಕಾಭಿವಿಸ್ತೃತಂ ಪುರಂ ಚಕಾರಾsಶು ಪುರನ್ದರಾತ್ಮಜಃ ।

ಹುತಾಶನೋsಪ್ಯಾಶು ವನಂ ಪ್ರಗೃಹ್ಯ ಪ್ರಭಕ್ಷಯಾಮಾಸ ಸಮುದ್ಧತಾರ್ಚ್ಚಿಃ ॥೨೦.೨೩೧॥

ಇಂದ್ರಪುತ್ರ ಅರ್ಜುನ ವನಕ್ಕೆ ನಿರ್ಮಿಸುತ್ತಿರಲು ಹನ್ನೆರಡು ಯೋಜನ ಶರಪಂಜರ,

ಅಗ್ನಿದೇವ ಖಾಂಡವವನವನ್ನು ಧಾವಂತದಿ ಸುಡುತ್ತಾ ಮಾಡಿಕೊಂಡ ತನಗೆ ಆಹಾರ.

 

ಪ್ರಭಕ್ಷ್ಯಮಾಣಂ ನಿಜಕಕ್ಷಮೀಕ್ಷ್ಯ ಸನ್ಧುಕ್ಷಯಾಮಾಸ ತದಾssಶುಶುಕ್ಷಣಿಮ್ ।

ಅಕ್ಷೋಪಮಾಭಿರ್ಬಹುಲೇಕ್ಷಣೋsಮ್ಭಸಾಂ ಧಾರಾಭಿರಾಕ್ಷುಬ್ಧಮನಾಃ ಕ್ಷಯಾಯ ॥೨೦.೨೩೨॥

ಇಂದ್ರ ತನ್ನ ವನ ಭಕ್ಷಿತವಾಗುತ್ತಿರುವುದನ್ನು ನೋಡಿದ,

ಅಗ್ನಿಯ ನಂದಿಸಲು ದೊಡ್ಡ ಧಾರೆಗಳ ಮಳೆ ಸುರಿಸಿದ.


[Contributed by Shri Govind Magal]