Saturday 16 October 2021

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 20: 221 - 227

ನರಾವೇಶಾದನ್ನದಾನಪ್ರತಿಶ್ರವಾತ್ ಸ್ವಸ್ಯಾಪಿ ಶಕ್ರಸ್ಯ ವಿರೋಧಮೈಚ್ಛತ್ ।

ಪಾರ್ತ್ಥಃ ಕೃಷ್ಣಸ್ಯ ಪ್ರೇರಣಾಚ್ಚೈವ ವಹ್ನಿಃ ಪಾರ್ತ್ಥಂ ಯಯಾಚೇ ಶಕ್ರವಿರೋಧಶಾನ್ತ್ಯೈಃ ॥೨೦.೨೨೧॥

ನರನೆಂಬ ಶೇಷಾವೇಶ ಅರ್ಜುನನಲ್ಲಿ ಇದ್ದುದರಿಂದ,

ನಾನು ನಿನಗೆ ಅನ್ನ ಕೊಡುತ್ತೇನೆಂಬ ಪ್ರತಿಜ್ಞೆ ಮಾಡಿದ್ದರಿಂದ,

ಒಳಗೆ ಆತ್ಮಸಖನಾದ ಹೊರಗೆ ಸಖನಾದ ಕೃಷ್ಣ ಪ್ರೇರಣೆಯಿಂದ,

ತಾನೇ ಇಂದ್ರನಾಗಿದ್ದರೂ ಅರ್ಜುನ,

ವಿರೋಧಿಸಿ ನಿಲ್ಲುತ್ತಾನೆ ಇಂದ್ರನನ್ನ.

ಅಗ್ನಿಯೂ ಪರಿಹಾರ ಬೇಡಿದ್ದ ಅರ್ಜುನನನ್ನ.

 

ನಹಿ ಸ್ವದತ್ತಸ್ಯ ಪುನಃ ಸ ವೈರಂ ಶಕ್ರಃ ಕುರ್ಯ್ಯಾತ್ ಸ್ವಯಮಿನ್ದ್ರೋ ಹಿ ಪಾರ್ತ್ಥಃ ।

ನಾಪ್ರೇರಿತೋ ವಿಷ್ಣುನಾ ತಸ್ಯ ರೋಧಂ ಪಾರ್ತ್ಥಃ ಕುರ್ಯ್ಯಾದಿತಿ ಕೃಷ್ಣಂ ಯಯಾಚೇ ॥೨೦.೨೨೨॥

ಇಂದ್ರ ತಾನೇ ಕೊಟ್ಟಿದ್ದಕ್ಕೆ ಮತ್ತೆ ವಿರೋಧ ಮಾಡಲಾರ,

ಅರ್ಜುನನಾದ ಇಂದ್ರ ಸ್ವಯಂ ಅಗ್ನಿ ಶತೃತ್ವ ಮಾಡಲಾರ.

ಎಲ್ಲರಿಗೂ ಎಲ್ಲದಕೂ ಬೇಕು ಅಂತರ್ಯಾಮಿ ಪ್ರೇರಣ,

ಕೃಷ್ಣನ ಬೇಡಿದ ಅಗ್ನಿ -ಅವನೇ ಅಲ್ಲವೇ ನಾರಾಯಣ.

 

ನಚಾಯುಕ್ತಃ ಕೇಶವೇನೈಷ ಶಕ್ತ ಇತಿ ಕೃಷ್ಣಾದಾಪ ಭೂಯೋsಪ್ಯನುಜ್ಞಾಮ್ ।

ಯಯೌ ಸಮೀಪಂ ಚ ಹರೇರ್ಬದರ್ಯ್ಯಾಮಾದಾಯ ಚಕ್ರಂ ಚಾಮುತಃ  ಕೇಶವೇsದಾತ್ ॥೨೦.೨೨೩॥

ಕೇಶವನೊಡಗೂಡದಿದ್ದರೆ ಕೇವಲ ಅರ್ಜುನಗೆಲ್ಲಿ ಶಕ್ತಿ,

ಹಾಗೆಂದೇ ಅಗ್ನಿಯಿಂದ ಕೃಷ್ಣನಲ್ಲಿ ಆಣತಿ ಪಡೆದ ಯುಕ್ತಿ.

ಇಷ್ಟೆಲ್ಲಾ ಯೋಚನೆಗಳಿಂದ ಪ್ರೇರಿತನಾಗಿ ಅಗ್ನಿ ಕೃಷ್ಣಾಜ್ಞೆ ಪಡೆದ,

ಬದರಿನಾರಾಯಣನಿಂದ ತಂದಂಥ ಚಕ್ರವ ಕೃಷ್ಣಗೆ ಕೊಡಮಾಡಿದ.

 

ಚಕ್ರಂ ಗೋಮನ್ತೇ ಕೃಷ್ಣಮಾಪಾಪಿ ಪೂರ್ವಂ ಭಕ್ತ್ಯಾ ವಹ್ನಿಃ ಕೇಶವೇsದಾತ್ ಪುನಸ್ತತ್ ।

ಚಕ್ರಂ ಚ ವಿಷ್ಣೋರ್ಬಹುಧಾ ವ್ಯವಸ್ಥಿತಂ ತದಗ್ನಿದತ್ತಂ ಪ್ರಾಕ್ತನಂ ಚೈಕಧಾssಸೀತ್ ॥೨೦.೨೨೪॥

ಗೋಮಂತಪರ್ವತದಲ್ಲಿ ಚಕ್ರವು ಕೃಷ್ಣನ ಬಳಿ ಬಂದಿತ್ತು,

ಅಗ್ನಿ, ನಾರಾಯಣನ ಬೇಡಿತಂದು ಕೇಶವಗೆ ಕೊಡಲ್ಪಟ್ಟಿತ್ತು.

ಬಹುರೂಪಗಳ ಹೊಂದಿರುವಂಥ ಭಗವಂತನ ಚಕ್ರ,

ಅಗ್ನಿ ಕೊಟ್ಟದ್ದು, ಮೊದಲಿದ್ದದ್ದು ಒಂದೇ ಎಂಬ ತಾತ್ಪರ್ಯ.

 

ಧನುಶ್ಚ ಗಾಣ್ಡೀವಮಥಾಬ್ಜಜಸ್ಯ ಕರೋತಿ ಯೇನಾಖಿಲಸಂಹೃತಿಂ ಸಃ ।

ಅಂಶೇನ ದತ್ತಂ ತದುಮಾಪತೇಶ್ಚ ಶಕ್ರಸ್ಯ ಸೋಮಸ್ಯ ಜಲೇಶಿತುಶ್ಚ ॥೨೦.೨೨೫॥

ಆನಂತರದಲ್ಲಿ ಯಾವುದರಿಂದ ಬ್ರಹ್ಮದೇವ ಮಾಡುತ್ತಾನೋ ಎಲ್ಲರ ಸಂಹಾರ,

ಅಂತಹಾ ಬ್ರಹ್ಮಗೆ ಸೇರಿದ ಗಾಂಡೀವವನ್ನು ತಂದು

ಅರ್ಜುನಗೆ ಕೊಟ್ಟ ವ್ಯಾಪಾರ.

ಆ ಗಾಂಡೀವವು ಅಂಶಅಂಶವಾಗಿ ಈ ಕೆಳಗಿನವರಿಗೆ ಕೊಡಲ್ಪಟ್ಟಿತ್ತು,

ಆಂಶಿಕವಾಗಿ ಶಿವನಲ್ಲಿ -ಇಂದ್ರನಲ್ಲಿ -ಚಂದ್ರನಲ್ಲಿ -

ಮತ್ತು ವರುಣನಲ್ಲಿತ್ತು.

 

ತೇನೈವ ತೇ ಜಿಗ್ಯುರಥೋ ಜಗತ್ ತ್ರಯಂ ಪ್ರಸಾದತಸ್ತೇ ಕ್ರಮಶೋsಬ್ಜಯೋನೇಃ ।

ಅನನ್ಯಧಾರ್ಯ್ಯಂ ವಿಜಯಾವಹಂ ಚ ಭಾರೇಣ ಲಕ್ಷಸ್ಯ ಸಮಂ ಶುಭಾವಹಮ್ ॥೨೦.೨೨೬ ॥

ಹೊಂದಿರುವುದರಿಂದಲೇ ಆ ಧನುಸ್ಸು ವಿಶೇಷ ಬಲ,

ರುದ್ರಾದಿಗಳು ಕ್ರಮವಾಗಿ ಗೆದ್ದರು ಮೂರ್ಲೋಕಗಳ.

ಬೇರಾರಿಗೂ ಧರಿಸಲು ಅಸಾಧ್ಯವಾದ , ಸಾಧ್ಯವಾಗಿತ್ತವರಿಗೆ ಬ್ರಹ್ಮಾನುಗ್ರಹದಿಂದ.

ವಿಜಯಪ್ರದವಾದ ಇಪ್ಪತ್ತು ಲಕ್ಷ ತೊಲೆಗೆ ಸಮವಾದ ತೂಕದ ಆ ಧನುಸ್ಸು,

ಧರಿಸಿ ಅದನ್ನು ಗೆದ್ದರು -ಹೊಂದಿದರು -ಮಂಗಳಕರವಾದಂಥ ಯಶಸ್ಸು.

 

ರಥಂ ಚ ಶುಭ್ರಾಶ್ವಯುತಂ ಜಯಾವಹಂ ತೂಣೌ ತಥಾ ಚಾಕ್ಷಯಸಾಯಕೌ ಶುಭೌ ।

ಧ್ವಜಂ ಚ ರಾಮಸ್ಯ ಹನೂಮದಙ್ಕಮಾದಾಯ ಸರ್ವಂ ವರುಣಾದರ್ಜ್ಜುನೇsದಾತ್ ॥೨೦.೨೨೭॥

ಬಿಳಿ ಕುದುರೆಗಳುಳ್ಳ ಜಯ ತರುವಂಥ ಆ ರಥ,

ಅಕ್ಷಯ ಬಾಣಗಳುಳ್ಳ ಮಂಗಳ ಬತ್ತಳಿಕೆಸಮೇತ, ಹನುಮಂತನ ಚಿಹ್ನೆಯುಳ್ಳ ಶ್ರೀರಾಮಚಂದ್ರನ ಪತಾಕೆಯನ್ನು,

ಅಗ್ನಿ, ವರುಣನಿಂದ ತಂದು ಅರ್ಜುನಗೆ ಕೊಟ್ಟ ಇಷ್ಟೆಲ್ಲವನ್ನು.

[Contributed by Shri Govind Magal]

No comments:

Post a Comment

ಗೋ-ಕುಲ Go-Kula