Saturday 16 October 2021

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 20: 233 - 237

ಅಸ್ತ್ರೈಸ್ತು ವೃಷ್ಟಿಂ ವಿನಿವಾರ್ಯ್ಯ ಕೃಷ್ಣಃ  ಪಾರ್ತ್ಥಶ್ಚ ಶಕ್ರಂ ಸುರಪೂಗಯುಕ್ತಮ್ ।

ಅಯುದ್ಧ್ಯತಾಂ ಸೋsಪಿ ಪರಾಜಿತೋsಭೂತ್ ಪ್ರೀತಶ್ಚ ದೃಷ್ಟ್ವಾ ಬಲಮಾತ್ಮನಸ್ತತ್ ॥೨೦.೨೩೩॥

ಕೃಷ್ಣ ಅರ್ಜುನರು ಕೂಡಾ ಅಸ್ತ್ರಗಳಿಂದ ಮಳೆಯ ತಡೆದರು,

ದೇವತೆಗಳೊಂದಿಗಿದ್ದ ಇಂದ್ರನೊಡನೆ ಯುದ್ಧವ ಮಾಡಿದರು.

ಆ ಯುದ್ಧದಲ್ಲಿ ಇಂದ್ರದೇವ ಸೋತ,

ತನ್ನ ಮಗನ ಬಲ ಕಂಡಾದ ಸಂಪ್ರೀತ.

 

[ಮಹಾಭಾರತದಲ್ಲಿ ‘ಇಂದ್ರ ತನ್ನ ಬಲವನ್ನು ಕಂಡು ಸಂತೋಷಪಟ್ಟ’ ಎಂದಿದೆ. ಆ ಶ್ಲೋಕವನ್ನು ಹೇಗೆ ವ್ಯಾಖ್ಯಾನ ಮಾಡಬೇಕು ಎನ್ನುವುದು ಆಚಾರ್ಯರ ಈ ವಿವರಣೆಯಿಂದ ಸ್ಪಷ್ಟವಾಗುತ್ತದೆ]

ಸ್ನೇಹಂ ಚ ಕೃಷ್ಣಸ್ಯ ತದಾsರ್ಜ್ಜುನೇ ಧೃತಂ ವಿಲೋಕ್ಯ ಪಾರ್ತ್ಥಸ್ಯ ಬಲಂ ಚ ತಾದೃಶಮ್ ।

ನಿವರ್ತ್ತ್ಯ ಮೇಘಾನತಿತುಷ್ಟಚಿತ್ತಃ ಪ್ರಣಮ್ಯ ಕೃಷ್ಣಂ ತನಯಂ ಸಮಾಶ್ಲಿಷತ್ ॥೨೦.೨೩೪॥

ಅರ್ಜುನನಲ್ಲಿ ಶ್ರೀಕೃಷ್ಣನಿಟ್ಟಿದ್ದ ಆ ಪ್ರೀತಿ,

ಅರ್ಜುನ ತೋರಿಸಿದ ತನ್ನ ಬಲದ ರೀತಿ,

ಕಂಡಂಥಾ ಇಂದ್ರನಿಗದು ಬಲು ಸಂತಸದ ಕ್ಷಣ,

ಮೋಡಗಳ ಹಿಂದೆಕಳಿಸಿ ಕೃಷ್ಣಗೆ ಸಲ್ಲಿಸಿದ ನಮನ.

ಪ್ರೀತಿಯಿಂದ ಮಗ ಅರ್ಜುನಗೆ ಕೊಟ್ಟ ಆಲಿಂಗನ.

 

ವಿಷ್ಣುಶ್ಚ ಶಕ್ರೇಣ ಸಹೇತ್ಯ ಕೇಶವಂ ಸಮಾಶ್ಲಿಷನ್ನಿರ್ವಿಶೇಷೋsಪ್ಯನನ್ತಮ್ ।

ಸ ಕೇವಲಂ ಕ್ರೀಡಮಾನಃ ಸಶಕ್ರಃ ಸ್ಥಿತೋ ಹಿ ಪೂರ್ವಂ ಯುಯುಧೇ ನ ಕಿಞ್ಚಿತ್ ॥೨೦.೨೩೫॥

ಸ್ವರ್ಗದಲ್ಲಿರುವ (ವಿಷ್ಣು) ಉಪೇಂದ್ರರೂಪಿ ಭಗವಂತ,

ಇಂದ್ರನೊಂದಿಗೆ ಬಂದು ಕೇಶವಗೆ ಆಲಿಂಗನವ ಇತ್ತ.

ಶ್ರೀವಿಷ್ಣು ಮತ್ತು ಶ್ರೀಕೃಷ್ಣನ ಮಧ್ಯೆ ಯಾವ ವ್ಯತ್ಯಾಸವಿಲ್ಲ,

ಈ ತೆರನಾದ ಕ್ರಿಯೆಗಳೆಲ್ಲಾ ಅವನಾಡುವ ಕ್ರೀಡಾಜಾಲ.

ಇಂದ್ರ ಯುದ್ಧ ಮಾಡುವಾಗ ಉಪೇಂದ್ರ ಮಾಡಲಿಲ್ಲ ಕದನ,

ಆ ನಂತರದ ಘಟನಾವಳಿಗಳಲ್ಲಿ ಬಂದು ಕೊಟ್ಟ ಆಲಿಂಗನ.

 

ಬ್ರಹ್ಮಾ ಚ ಶರ್ವಶ್ಚ ಸಮೇತ್ಯ ಕೃಷ್ಣಂ ಪ್ರಣಮ್ಯ ಪಾರ್ತ್ಥಸ್ಯ ಚ ಕೃಷ್ಣನಾಮ ।

ಸಞ್ಚಕ್ರತುಶ್ಚಾಪಿ ಶಿಕ್ಷಾಪ್ರಕರ್ಷಾಚ್ಚಕ್ರುಶ್ಚ ಸರ್ವೇ ಸ್ವಾಸ್ತ್ರದಾನೇ ಪ್ರತಿಜ್ಞಾಮ್ ॥೨೦.೨೩೬॥

ಬ್ರಹ್ಮ ರುದ್ರರು ಕೂಡಾ ಕೃಷ್ಣನ ಬಳಿಸಾರಿ ಬಂದು ಮಾಡಿದರು ನಮಸ್ಕಾರ,

ಅರ್ಜುನಗೆ ವಿಶೇಷತಃ ಕೃಷ್ಣ ಎಂದು ನಾಮಕರಣ ಮಾಡಿದ ವ್ಯಾಪಾರ.

ಅರ್ಜುನನ ಶ್ರೇಷ್ಠ ಬಿಲ್ಗಾರಿಕೆಗೆ ಅವನಿಗೆ ಆ ಹೆಸರನ್ನು ಇಟ್ಟರು,

ಮುಂದೆ ಕಾಡಿಗೆ ಬಂದಾಗ ಅಸ್ತ್ರಗಳ ಕೊಡುವ ಮಾತನ್ನು ಕೊಟ್ಟರು.

 

ಅನುಜ್ಞಾತಾಸ್ತೇ ಪ್ರಯಯುಃ  ಕೇಶವೇನ ಕ್ರೀಡಾರ್ತ್ಥಮಿನ್ದ್ರೋ ಯಯುಧೇ ಹಿ ತತ್ರ ।

ಪ್ರೀತ್ಯಾ ಕೀರ್ತ್ತಿಂ ದಾತುಮಪ್ಯರ್ಜ್ಜುನಸ್ಯ ತತಸ್ತುಷ್ಟಃ ಸಹ ದೇವೈಸ್ತಯೋಃ ಸಃ ॥೨೦.೨೩೭॥

ಬ್ರಹ್ಮಾದಿಗಳು ಕೃಷ್ಣಾಜ್ಞೆ ಪಡೆದು ಹಿಂತಿರುಗಿದಂಥ ಆ ಆಟ,

ಇಂದ್ರನ ಯುದ್ಧ ಅರ್ಜುನ ಕೀರ್ತಿಗಾಗಿ ಆಡಿದ ಕ್ರೀಡಾಕೂಟ,

ನಂತರ ಸಂಪ್ರೀತ ಇಂದ್ರ ದೇವತೆಗಳೊಡನೆ ಸ್ವರ್ಗಕೆ ಹೊರಟ.

[Contributed by Shri Govind Magal]

No comments:

Post a Comment

ಗೋ-ಕುಲ Go-Kula