Tuesday 26 October 2021

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 21: 06-11

ತಥೈವ ನನ್ದಗೋಪಕಃ ಸದಾರಗೋಪಗೋಪಿಕಃ ।

ಮುನೀಶ್ವರಾಶ್ಚ ಸರ್ವತಃ ಸಮೀಯುರತ್ರ ಚ ಪ್ರಜಾಃ ॥೨೧.೦೬॥

ನಂದಗೋಪ ಯಶೋದೆ ಮತ್ತು ಗೋಪ ಗೋಪಿಯರೊಂದಿಗೆ,

ಮುನಿಶ್ರೇಷ್ಠರೂ ಭಗವದ್ಭಕ್ತರೂ ಬಂದು ಸೇರಿದರು ಅಲ್ಲಿಗೆ.

 

ಪ್ರಿಯಾಶ್ಚ ಯೇ ರಮೇಶಿತುರ್ಹರಿಂ ತ್ರಿರೂಪಮೇತ್ಯ ತೇ ।

ವಸಿಷ್ಠವೃಷ್ಣಿನನ್ದನಂ ಭೃಗೂತ್ತಮಂ ತಥಾssರ್ಚ್ಚಯನ್ ॥೨೧.೦೭॥

ಪರಮಾತ್ಮನಿಗೆ ಪ್ರಿಯರಾಗಿದ್ದವರು,

ಯಾರೆಲ್ಲಾ ಇದ್ದರೋ ಭಗವದ್ಭಕ್ತರು,

ಮೂರು ರೂಪಗಳ ಹರಿಯ ಪೂಜಿಸಿದರು.

ಒಂದು ವಸಿಷ್ಠ ವಂಶದಿ ಬಂದ ವೇದವ್ಯಾಸರು,

ಯಾದವ ವಂಶದ ವಾಸುದೇವ ಶ್ರೀಕೃಷ್ಣದೇವರು, ಮೂರು :ಭ್ರುಗು ವಂಶದಿ ಬಂದ ಪರಶುರಾಮರು.

 

ಕೃತಾರ್ತ್ಥತಾಂ ಚ ತೇ ಯಯೂ ರಮೇಶಪಾದದರ್ಶನಾತ್ ।

ರವಿಗ್ರಹೇ ಸಮಾಪ್ಲುತಾ ಭೃಗೂದ್ವಹೋತ್ಥತೀರ್ತ್ಥಕೇ ॥೨೧.೦೮॥

ಪರಶುರಾಮದೇವರಿಂದ ನಿರ್ಮಿತವಾದಂಥ ಆ ದಿವ್ಯ ಪುಣ್ಯತೀರ್ಥ,

ಸಮಂತಪಂಚಕದಲ್ಲಿ ಮಿಂದು ದೇವಪಾದ ನೋಡಿದವರೆಲ್ಲಾ ಪುನೀತ.

 

ಅನುಗ್ರಹಂ ವಿಧಾಯ ಸಸ್ವಕೇಷು ಕೇಶವಸ್ತ್ರಿವೃತ್ ।

ಅಯಾಜಯಚ್ಚ ಶೂರಜಂ ಮಖೈಃ ಸಮಾಪ್ತದಕ್ಷಿಣೈಃ ॥೨೧.೦೯॥

ಆ ಕೇಶವ ತನ್ನ ಮೂರು ರೂಪಗಳಿಂದ,

ತನ್ನವರಿಗೆಲ್ಲಾ ಅನುಗ್ರಹವ ಮಾಡಿದ.

ಶೂರಸೇನನ ಮಗನಾದ ವಸುದೇವನು ತಾನು,

ತುಂಬು ದಕ್ಷಿಣೆಯ ಯಾಗಗಳಿಗೆ ಕಾರಣವಾದನು.

 

ಸಮಸ್ತಲೋಕಸಂಸ್ಥಿತಾತ್ಮಭಕ್ತಿಮಜ್ಜನಸ್ಯ ಸಃ ।

ಸುಕಾಲದರ್ಶನಾತ್ ಪರಂ ವ್ಯಧಾದನುಗ್ರಹಂ ಹರಿಃ ॥೨೧.೧೦॥

ಸಮಸ್ತ ಲೋಕದಲ್ಲಿರುವ ತನ್ನ ಭಕ್ತರಿಗೆಲ್ಲಾ ಭಗವಂತ,

ಆ ಪರ್ವಕಾಲದಿ ದರ್ಶನ ಮತ್ತು ವಿಶೇಷ ಅನುಗ್ರಹವನ್ನಿತ್ತ.

 

ತತೋ ಯಯೌ ಸ್ವಕಾಂ ಪುರೀಂ ಪೃಥಾಸುತೈಃ ಸಹಾಚ್ಯುತಃ ।

ಚಕಾರ ತತ್ರ ಚಾsಹ್ನಿಕಂ ಕ್ರತುಂ ಮಹಾಶ್ವಮೇಧಕಮ್ ॥೨೧.೧೧॥

ಆನಂತರ ಕುಂತೀಪುತ್ರರಾದ ಪಾಂಡವರ ಸಮೇತ,

ತನ್ನ ಪಟ್ಟಣಕೆ ತೆರಳಿದನು ವಾಸುದೇವಕೃಷ್ಣನಾತ.

ತನ್ನ ಪಟ್ಟಣದಲ್ಲಿ ಒಂದು ದಿನ,

ಮಾಡಿದ ಅಶ್ವಮೇಧ ಎಂಬ ಯಜ್ಞ.

[Contributed by Shri Govind Magal]

No comments:

Post a Comment

ಗೋ-ಕುಲ Go-Kula